ವಾಟ್ಸ್ಆಪ್ ಸ್ಟೋರಿಗಳನ್ನು ಸೇವ್ ಮಾಡಿಕೊಳ್ಳುವ ಮೂರು ಪ್ರಮುಖ ವಿಧಾನಗಳು..!

By Lekhaka
|

ಫೇಸ್ ಬುಕ್ ಒಡೆತನಕ್ಕೆ ಸೇರಿಕೊಂಡಿರುವ ವಾಟ್ಸ್ಆಪ್ ಹೊಸದಾಗಿ ನೀಡಿರುವ ಸ್ಟೇಟಸ್ಸ್ ಆಯ್ಕೆಯೂ ದಿನದಿಂದ ದಿನಕ್ಕೆ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಇದಲ್ಲದೇ ವಾಟ್ಸ್ ಆಪ್ ಸ್ಟೇಟಸ್ ಅನ್ನು ಇನ್ನಷ್ಟು ಸುಂದರಗೊಳಿಸುವ ಕಾರ್ಯವನ್ನು ವಾಟ್ಸ್ಆಪ್ ಹಂತ-ಹಂತವಾಗಿ ಮಾಡುತ್ತಿದೆ. ಬಹುತೇಕ ಎಲ್ಲಾ ವಾಟ್ಸ್ಆಪ್ ಬಳಕೆದಾರರು ಈ ಸ್ಟೇಟಸ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಸ್ಟೇಟಸ್ ಗಳನ್ನು ಸೇವ್ ಮಾಡಿಕೊಳ್ಳುವ ಅವಕಾಶವನ್ನು ವಾಟ್ಸ್ಆಪ್ ಮಾಡಿಕೊಟ್ಟಿಲ್ಲ.

ವಾಟ್ಸ್ಆಪ್ ಸ್ಟೋರಿಗಳನ್ನು ಸೇವ್ ಮಾಡಿಕೊಳ್ಳುವ ಮೂರು ಪ್ರಮುಖ ವಿಧಾನಗಳು..!

ಆದರೆ ನೀವು ನಿಮ್ಮ ಸ್ನೇಹಿತರು ಆಪ್ ಲೋಡ್ ಮಾಡುವ ಸ್ಟೇಟಸ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಸೇವ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ಆಪ್ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನಿಮ್ಮ ವಾಟ್ಸ್ಆಪ್ ನಲ್ಲಿ ಸ್ಟೇಟಸ್ ಗಳನ್ನು ಸೇವೆ ಮಾಡಿಕೊಳ್ಳುವುದನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ.

ವಿಧಾನ 1

ವಿಧಾನ 1

ಮೊದಲ ವಿಧಾನದ ಮೂಲಕ ನೀವು ವಾಟ್ಸ್ಆಪ್ ನಲ್ಲಿ ಸುಲಭವಾಗಿ ಸ್ಟೇಟಸ್ ಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ ಈ ಹಂತಗಳನ್ನು ಪಾಲಿಸಿ

ಹಂತ 01: ಮೈ ಫೈಲ್ಸ್ ಗೆ ಹೋಗಿ> ಡಿವೈಸ್ ಸ್ಟೋರೆಜ್> ವಾಟ್ಸ್ಆಪ್> ಮೀಡಿಯಾ> ಸ್ಟೇಟಸ್

ಹಂತ 02: ಫೋಲ್ಡರ್ ಆನ್ ಹೈಡ್ ಮಾಡಬೇಕಾಗಿದೆ ಇದಕ್ಕಾಗಿ ಮೋರ್> ಶೋ ಹೈಡನ್ ಫೈಲ್ಸ್

ಹಂತ 03: ನಂತರ ನೀವು ನಿಮ್ಮ ಸ್ಟೇಟಸ್ ಇಮೇಜ್ ಗಳನ್ನು ಗ್ಯಾಲರಿಗೆ ಸೇವ್ ಮಾಡಿಕೊಳ್ಳಬಹುದಾಗಿದೆ.

ವಿಧಾನ 2:

ವಿಧಾನ 2:

ಇದು ಅತ್ಯಂತ ಸುಲಭ ವಿಧಾನವಾಗಿದ್ದು, ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್ ಫೋನಿನಲ್ಲಿ ವಾಟ್ಸ್ಆಪ್ ಸ್ಟೇಟಸ್ ಅನ್ನು ಓಪನ್ ಮಾಡಿಕೊಳ್ಳಿ, ಮಾಡಿದ ನಂತರದಲ್ಲಿ ಫೋನಿನಲ್ಲಿ ಸ್ಕ್ರಿನ್ ಶಾಟ್ ತೆಗೆದುಕೊಳ್ಳಿ. ಈ ಮೂಲಕವು ನೀವು ವಾಟ್ಸ್ಆಪ್ ಸ್ಟೇಟಸ್ ಅನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.

ವಿಧಾನ 3:

ವಿಧಾನ 3:

ಈ ವಿಧಾನದಲ್ಲಿ ಸೇವ್ ಮಾಡಿಕೊಳ್ಳಲು ನೀವು ಆಪ್ ವೊಂದನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ.

ಹಂತ 1: ಪ್ಲೇ ಸ್ಟೋರಿನಿಂದ ಸ್ಟೋರ್ ಸೇವರ್ ಫಾರ್ ವಾಟ್ಸ್ಆಪ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗಿದೆ.

ಹಂತ 2: ನಂತರ ಆಪ್ ತೆಗೆದು ರಿಸೆಂಟ್ ಸ್ಟೋರಿಸ್ ಅನ್ನು ಓಪನ್ ಮಾಡಿ.

ಹಂತ 3: ನಂತರ ಡೌನ್ ಲೋಡ್ ಮಾಡಿಕೊಳ್ಳಬೇಕಾದ ವಿಡಿಯೋ/ಫೋಟೋ ಸೆಲೆಕ್ಟ್ ಮಾಡಿಕೊಳ್ಳಿ.

ಹಂತ 4: ಬಲಭಾಗದ ಮೂಲೆಯಲ್ಲಿರುವ ಡೌನ್ ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 5: ನಂತರ ನಿಮ್ಮ ಫೋನಿನ ಗ್ಯಾಲರಿಯಲ್ಲಿ ನೀವು ಪೋಟೋ ವಿಡಿಯೋವನ್ನು ನೋಡಬಹುದಾಗಿದೆ.

ವಾಟ್ಸ್ಆಪ್‌ನಲ್ಲಿ ಹೈ ರೆಸಲ್ಯೂಷನ್ ಮಲ್ಟಿಮೀಡಿಯಾ ಸೆಂಡ್ ಮಾಡುವ ಈ ಟ್ರಿಕ್ಸ್ ನಿಮಗೆ ಗೊತ್ತಿಲ್ಲಾ!!ವಾಟ್ಸ್ಆಪ್‌ನಲ್ಲಿ ಹೈ ರೆಸಲ್ಯೂಷನ್ ಮಲ್ಟಿಮೀಡಿಯಾ ಸೆಂಡ್ ಮಾಡುವ ಈ ಟ್ರಿಕ್ಸ್ ನಿಮಗೆ ಗೊತ್ತಿಲ್ಲಾ!!

Best Mobiles in India

English summary
Whatsapp has evolved so much in the past couple of years with so many features after the Facebook acquisition. This article is all about guiding you to save the video or photos on your device using three methods. This method works on both Android (Marshmallow/Nougat) and iOS (10/11).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X