Subscribe to Gizbot

ಸ್ಮಾರ್ಟ್‌ಫೋನಿನಲ್ಲಿ "ಗೂಗಲ್ ಡಾಕ್ಸ್" ಆಪ್ ಇದ್ದರೆ ಏನೆಲ್ಲಾ ಲಾಭ ಗೊತ್ತಾ?

Written By:

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆಲ್ಲಾ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಇಮೇಲ್ ಚೆಕ್ ಮಾಡುವುದು, ರಿಪ್ಲೇ ಬರೆಯುವುದು ಎಲ್ಲವೂ ಸುಲಭ ಸಾಧ್ಯ. ಆದರೆ, ಇಮೇಲ್‌ಗಳ ಮೂಲಕ ಬರುವ ಡಾಕ್ಯುಮೆಂಟ್ ಫೈಲ್‌ಗಳನ್ನು ತೆರೆಯಲು ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಸಪೋರ್ಟಿಂಗ್ ರೀಡರ್ ಇನ್‌ವೋಲ್ಟ್ ಇರುವುದಿಲ್ಲ.!

ಹಾಗಾಗಿ, ಫೈಲ್ಗಳನ್ನು ತೆರೆಯಲು ಲ್ಯಾಪ್‌ಟಾಪ್ ಬಳಸುವುದು ಅನಿವಾರ್ಯವಾಗುತ್ತದೆ. ಬಹುತೇಕರು ಇಂತಹ ಫೈಲ್ ತೆರೆಯುವ ಸಲುವಾಗಿಯೇ ಪಿಸಿ ಮೊರೆ ಹೋಗುತ್ತಿದ್ದಾರೆ. ಆದರೆ, ಮೊಬೈಲ್‌ಗಳಲ್ಲಿ ಡಾಕ್ಯುಮೆಂಟ್ ಫೈಲ್ ತೆರೆಯುವಂತಹ ಆಪ್ ಇನ್‌ಸ್ಟಾಲ್ ಮಾಡಿಕೊಂಡರೆ ಇಂತಹ ಫೈಲ್ ತೆರೆಯುವ ಸಲುವಾಗಿಯೇ ಪಿಸಿ ಮೊರೆ ಹೋಗುವುದನ್ನು ತಪ್ಪಿಸಬಹುದು.

ಸ್ಮಾರ್ಟ್‌ಫೋನಿನಲ್ಲಿ

ಡಾಕ್ಯುಮೆಂಟ್ ಫೈಲ್‌ಗಳನ್ನು ತೆರೆಯಲು ಗೂಗಲ್ ಡಾಕ್ಸ್ ಆಪ್ ಸಹಕಾರಿ. ಬಹುತೇಕ ವರ್ಡ್ ಫೈಲ್‌ಗಳನ್ನು ತೆರೆಯಲು ಗೂಗಲ್ ಡಾಕ್ಸ್ ಸಪೋರ್ಟ್ ಮಾಡುತ್ತದೆ. ಡಾಕ್ಯುಮೆಂಟ್ ಫೈಲ್ ತೆರೆಯುವ ಜತೆಗೆ ಅದರಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂದರೆ ಅದನ್ನು ಎಡಿಟ್ ಮಾಡುವ ಅವಕಾಶವೂ ಗೂಗಲ್ ಡಾಕ್ಸ್‌ನಲ್ಲಿದೆ.

ಗೂಗಲ್ ಡಾಕ್ಸ್‌ನಲ್ಲಿ ಪ್ರಿಂಟ್ ಲೇಔಟ್ ನೋಡುವ ಆಯ್ಕೆಯೂ ಇರುವುದರಿಂದ ಡಾಕ್ಯುಮೆಂಟ್ ಫೈಲ್ ಪುಟ ಹೇಗೆ ಕಾಣುತ್ತದೆ ಎಂಬುದನ್ನು ಮೊಬೈಲ್‌ನಲ್ಲೇ ನೋಡಬಹುದು. ಅಲ್ಲದೆ ಡಾಕ್ಯುಮೆಂಟ್ ಫೈಲ್‌ನಲ್ಲಿ ಟೆಕ್ಸ್ಟ್‌ ಫಾಂಟ್ ಹಾಗೂ ಗಾತ್ರವನ್ನು ಬದಲಿಸಬಹುದು. ಫೈಲ್ ಅನ್ನು ಪಿಡಿಎಫ್ ಆಗಿ ಕೂಡ ಸೇವ್ ಮಾಡಿಕೊಳ್ಳಬಹುದು.

ಸ್ಮಾರ್ಟ್‌ಫೋನಿನಲ್ಲಿ

ಗೂಗಲ್ ಡಾಕ್ಸ್ ಆಪ್ ಮೂಲಕವೇ ಹೊಸ ವರ್ಡ್ ಫೈಲ್ ರಚಿಸಬಹುದು. ಮೊಬೈಲ್‌ನಲ್ಲಿ ರಚಿಸಿದ ಈ ಫೈಲ್‌ಗಳನ್ನು ಇಮೇಲ್ ಮೂಲಕ ಬೇಕೆಂದವರಿಗೆ ಕಳಿಸಬಹುದು. ನಿಮ್ಮ ಮೊಬೈಲ್ ಡಾಕ್ಯುಮೆಂಟ್ ಫೈಲ್‌ಗಳಿಗೆ ಸಪೋರ್ಟ್ ಮಾಡುತ್ತಿಲ್ಲವಾದರೆ ಗೂಗಲ್ ಸ್ಟೋರ್‌ಗೆ ಹೋಗಿ ಮರೆಯದೇ ಗೂಗಲ್ ಡಾಕ್ಸ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.!

Unboxing of Rs. 8,499 LED TV from Daiwa

ಒದಿರಿ: ಗೂಗಲ್ ಕಚೇರಿಗೂ ಸೆಡ್ಡುಹೊಡೆಯುವಂತಿದೆ ಬೆಂಗಳೂರಿನಲ್ಲಿನ 'ಫ್ಲಿಪ್‌ಕಾರ್ಟ್' ಹೊಸ ಕಚೇರಿ!!

English summary
If you have existing text documents, such as Microsoft® Word® or Adobe® PDF files, to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot