ವಾಟ್ಸ್ ಆಪ್ ನಲ್ಲಿ ಆಡಿಯೋ ಫೈಲ್ಸ್ ಕಳಿಸುವುದು ಇನ್ನು ಮುಂದೆ ಸುಲಭ

|

ಫೇಸ್ ಬುಕ್ ಮಾಲೀಕತ್ವದ ಇನ್ಸೆಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ನಿರಂತರವಾಗಿ ಹೊಸ ಅಪ್ ಡೇಟ್ ಗಳನ್ನು ತನ್ನ ಫ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಗೊಳಿಸುತ್ತಿದ್ದು ಬಳಕೆದಾರರಿಗೆ ಅನುಕೂಲವಾಗುವ ಫೀಚರ್ ಗಳನ್ನು ನೀಡುತ್ತಿದೆ. ಇದೀಗ ಆಪ್ ನಲ್ಲಿ ಆಡಿಯೋ ಫೈಲ್ಸ್ ಗಳನ್ನು ಕಾಂಟ್ಯಾಕ್ಟ್ ಗಳಿಗೆ ಕಳುಹಿಸುವ ಆಯ್ಕೆಯನ್ನು ಪುನಃ ಡಿಸೈನ್ ಮಾಡಲಾಗಿದೆ.

ಬೇಟಾ ವರ್ಷನ್ ನಲ್ಲಿ ಲಭ್ಯ:

ಬೇಟಾ ವರ್ಷನ್ ನಲ್ಲಿ ಲಭ್ಯ:

ವಾಟ್ಸ್ ಆಪ್ ನ ಮುಂಬರುವ ಅಪ್ ಡೇಟ್ ಗಳ ಬಗ್ಗೆ ಟ್ರ್ಯಾಕ್ ಮಾಡುವ ವಾಬೇಟಾಇನ್ಫೋ ಮಾಹಿತಿಯ ಪ್ರಕಾರ ಈ ಹೊಸ ಎಡಿಷನ್ ಈಗಾಗಲೇ ವಾಟ್ಸ್ ಆಪ್ ನ ಆಡ್ರಾಂಯ್ಡ್ ಆಪ್ ವರ್ಷನ್ 2.19.1 ನಲ್ಲಿ ಲಭ್ಯವಿದೆ.

30 ಫೈಲ್ಸ್ ಗಳಿಗೆ ಅವಕಾಶ:

30 ಫೈಲ್ಸ್ ಗಳಿಗೆ ಅವಕಾಶ:

ವಾಬೇಟಾಇನ್ಫೋ ತಿಳಿಸಿರುವಂತೆ ವಾಟ್ಸ್ ಆಪ್ ನ ಈ ಸೆಕ್ಷನ್ ನಲ್ಲಿ ಬಳಕೆದಾರರು ಆಡಿಯೋ ಮತ್ತು ಇಮೇಜ್ ಎರಡನ್ನೂ ಪ್ರಿವ್ಯೂ ನೋಡುವುದಕ್ಕೆ ಅವಕಾಶವಿರುತ್ತದೆ.ಇದು ಗರಿಷ್ಠ 30 ಫೈಲ್ಸ್ ಗಳಿಗೆ ಬೆಂಬಲ ನೀಡುತ್ತದೆ.

ಬೇಟಾ ವರ್ಷನ್ ನಲ್ಲಿ ಲಭ್ಯ:

ಬೇಟಾ ವರ್ಷನ್ ನಲ್ಲಿ ಲಭ್ಯ:

ಸದ್ಯ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೂ ಇದು ಬಿಡುಗಡೆಗೊಂಡಿಲ್ಲವಾಗಿರುವುದರಿಂದಾಗಿ, ಈ ಸೌಲಭ್ಯ ನಿಮಗೆ ಸಿಗಬೇಕು ಎಂದರೆ ನೀವು ವಾಟ್ಸ್ ಆಪ್ ನ ಬೇಟಾ ಬಳಕೆದಾರರಾಗಿರಬೇಕಾಗುತ್ತದೆ. ಐಓಎಸ್ ಆಪರೇಟಿಂಗ್ ಸಿಸ್ಟಮ್ ಗೆ ಇದು ಬಿಡುಗಡೆಗೊಳ್ಳಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಿಲ್ಲ ಆದರೆ ಈ ಫೀಚರ್ ಬಿಡುಗಡೆಗೊಂಡ ನಂತರದ ದಿನಗಳಲ್ಲಿ ಖಂಡಿತ ನಿಧಾನವಾಗಿಯಾದರೂ ಐಓಎಸ್ ನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗುತ್ತಿದೆ.

ಪಿಐಪಿ ಮೋಡ್ ಬಿಡುಗಡೆ:

ಪಿಐಪಿ ಮೋಡ್ ಬಿಡುಗಡೆ:

ಸದ್ಯ ವಾಟ್ಸ್ ಆಪ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ಪಿಕ್ಚರ್ ಇನ್ ಪಿಕ್ಚರ್ ಮೋಡ್ ನ್ನು ವಾಟ್ಸ್ ಆಪ್ ನಲ್ಲಿ ಬಿಡುಗಡೆಗೊಳಿಸಿದೆ. ಇದನ್ನು ಬಳಸಿ ಬಳಕೆದಾರರು ಯುಟ್ಯೂಬ್ ,ಫೇಸ್ ಬುಕ್, ಇನ್ಸ್ಟಾಗ್ರಾಂ ನಲ್ಲಿ ವೀಡಿಯೋಗಳನ್ನು ವಾಟ್ಸ್ ಆಪ್ ನ ಒಳಗೆ ಚಾಟ್ ವಿಂಡೋ ವನ್ನು ಸ್ಕ್ರೋಲ್ ಮಾಡುವ ಮೂಲಕೇ ಸ್ಟ್ರೀಮ್ ಮಾಡಬಹುದು.ಈ ಫೀಚರ್ ನಿಮಗೆ ಬೇರೆ ವೀಡಿಯೋ ಸರ್ವೀಸ್ ನಿಂದ ಲಿಂಕ್ ಬಂದಾಗ ತಕ್ಷಣವೇ ಟ್ರಿಗ್ಗರ್ ಆಗುತ್ತದೆ. ವೀಡಿಯೋವನ್ನ ಟ್ಯಾಪ್ ಮಾಡಿದಾಗ ಈ ಪಿಐಪಿ ಮೋಡ್ ಸ್ವಯಂಚಾಲಿತವಾಗಿ ಆಕ್ಟಿವೇಟ್ ಆಗುತ್ತದೆ. ಉಳಿದೆಲ್ಲ ಚಾಟ್ ನ್ನು ನೇವಿಗೇಟ್ ಮಾಡುವುದಕ್ಕೆ ನೆರವಾಗುತ್ತದೆ.

ಪ್ರೈವೇಟ್ ರಿಪ್ಲೈ:

ಪ್ರೈವೇಟ್ ರಿಪ್ಲೈ:

ಪ್ರೈವೇಟ್ ರಿಪ್ಲೈ ಫೀಚರ್ ನ್ನು ಕೂಡ ಬಿಡುಗಡೆಗೊಳಿಸಲಾಗಿದೆ. ಈ ಫೀಚರ್ ಗ್ರೂಪ್ ಚಾಟ್ ನಲ್ಲಿ ಕೆಲಸ ನಿರ್ವಹಿಸುತ್ತದೆ.ಹೆಸರೇ ಸೂಚಿಸುವಂತೆ ಗ್ರೂಪಿನ ಯಾವುದೇ ಸದಸ್ಯರಿಗೆ ವಯಕ್ತಿಕವಾಗಿ ಗ್ರೂಪ್ ಚರ್ಚೆಯ ನಡುವೆಯೇ ಮೆಸೇಜ್ ಕಳಿಸುವುದಕ್ಕೆ ಇದು ನೆರವು ನೀಡುತ್ತದೆ.

Best Mobiles in India

Read more about:
English summary
WhatsApp is making it easier to send audio files for Android users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X