ನಾಪತ್ತೆಯಾದವರ ಹುಡುಕಾಟಕ್ಕೆ ವಾಟ್ಸ್‌ಆಪ್ ನೆರವು..!

By Gizbot Bureau
|

ಫೇಸ್‌ಬುಕ್‌, ವಾಟ್ಸ್‌ಆಪ್‌ ನಮ್ಮ ಜೀವನದಲ್ಲಿ ಎಷ್ಟು ಬೆರೆತಿವೆ ಎಂದರೆ ನಮ್ಮ ಕ್ಷಣ ಕ್ಷಣದ ಇರುವಿಕೆಗೆ ಆಪ್‌ಗಳು ಸಾಕ್ಷಿಗಳಾಗಿ ಬಿಟ್ಟಿವೆ. ಸದ್ಯ ನಾಪತ್ತೆಯಾದವರನ್ನು ಹುಡುಕಲು ಈ ಆಪ್‌ಗಳು ನೆರವಾಗುತ್ತಿವೆ. ಫೇಸ್‌ಬುಕ್‌ ಒಡೆತನದ ಮೆಸೇಂಜಿಂಗ್ ಆಪ್‌ ವಾಟ್ಸ್‌ಆಪ್‌ ಆಸ್ಟ್ರೇಲಿಯಾದ ಪೊಲೀಸ್‌ ಇಲಾಖೆ ಜೊತೆ ಸೇರಿ ಕೆಲಸ ಮಾಡುತ್ತಿದೆ. ಹೌದು, ಮೇ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಾಪತ್ತೆಯಾದ ಬಲ್ಗೇಯಿನ್ ಬ್ಯಾಕ್‌ಪ್ಯಾಕರ್‌ ಹುಡುಕಾಟದಲ್ಲಿ ವಾಟ್ಸ್‌ಆಪ್‌ ನೆರವನ್ನು ನೀಡುತ್ತಿದೆ.

ನಾಪತ್ತೆಯಾದವರ ಹುಡುಕಾಟಕ್ಕೆ ವಾಟ್ಸ್‌ಆಪ್ ನೆರವು..!

18 ವರ್ಷದ ಥಿಯೋ ಹಯೇಜ್, ಮೇ 31ರ ರಾತ್ರಿ ನೈಟ್‌ ಕ್ಲಬ್‌ನಿಂದ ಬೈರೂನ್‌ ಬೇನಲ್ಲಿರುವ ತನ್ನ ಹಾಸ್ಟೆಲ್‌ಗೆ ತೆರಳುತ್ತಿರುವಾಗ ಮಿಸ್‌ ಆಗಿದ್ದ. ನಾಪತ್ತೆಯಾಗುವ ಒಂದು ಗಂಟೆ ಮುಂಚೆ ಥಿಯೋ ವಾಟ್ಸ್‌ಆಪ್‌ ಮೆಸೇಜ್‌ ಮಾಡಿರುವುದು ಖಚಿತವಾಗಿದೆ. ಆದರೆ, ಯುನಿವರ್ಸಿಟಿ ಆಫ್ ಸಿಡ್ನಿಯಲ್ಲಿನ ಮಾಹಿತಿ ತಂತ್ರಜ್ಞಾನದ ಪ್ರೊಪೆಸರ್ ಕೈ ರೀಮಿರ್ ಹೇಳುವಂತೆ, ವಾಟ್ಸ್‌ಆಪ್‌ ಕಂಪನಿಯು ಮೆಸೇಜ್‌ಗಳ ಅಕ್ಸೇಸ್‌ ಹೊಂದಿರುವುದಿಲ್ಲ. ಆದರೆ, ಖಂಡಿತ ವಾಟ್ಸ್‌ಆಪ್‌ ಮೆಟಾಡಾಟಾವನ್ನು ಹೊಂದಿರುತ್ತದೆಯಂತೆ. ಹೌದು, ವಾಟ್ಸ್‌ಆಪ್‌ ನೀಡುತ್ತಿರುವುದು ಎನ್‌ಕ್ರಿಪ್ಟೆಡ್‌ ಸೇವೆಯಾಗಿರುವುದರಿಂದ ನಮಗೆ ಬಳಕೆದಾರ ಕಳುಹಿಸಿದ ಮೆಸೇಜ್‌ ಸಿಗುವುದಿಲ್ಲ. ಆದರೆ, ಅವರು ಯಾರ ಜೊತೆ ಸಂವಹನ ನಡೆಸಿದ್ದಾರೆ, ಯಾವ ಸ್ಥಳದಿಂದ ಮೆಸೇಜ್‌ಗಳು ಹೋಗಿವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಲಾರೆಂಟ್‌ ಹಯೇಜ್‌ ತಮ್ಮ ಮಗ ಥಿಯೋ ಪತ್ತೆಗೆ ವಾಟ್ಸ್‌ಆಪ್ ನೆರವು ಕೋರುವಂತೆ ಆಸ್ಟ್ರೇಲಿಯಾ ಪೊಲೀಸರಿಗೆ ಒತ್ತಾಯಿಸಿದ್ದರು. ಇನ್ನು, ವರದಿಗಾರರ ಜೊತೆ ಮಾತನಾಡಿರುವ ಥಿಯೋ ತಂದೆ ನಾವು ಗೌಪ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ಅದನ್ನು ಗೌರವಿಸಬೇಕು, ಅಪಾಯದಲ್ಲಿರುವ ವ್ಯಕ್ತಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

ವಾಟ್ಸ್‌ಆಪ್‌ ಕೂಡ ನಾವು ಪೊಲೀಸರ ವಿಚಾರಣೆಗೆ ಸಹಾಯ ಮಾಡುತ್ತಿದ್ದೇವೆ ಎಂದಿದ್ದು, ನಾವೂ ಥಿಯೋ ಹಯೇಜ್‌ ಮತ್ತು ಅವರ ಕುಟುಂಬದ ಜೊತೆ ಇರುತ್ತೇವೆ ಎಂದು ಅಧಿಕೃತ ಹೇಳಿಕೆಯನ್ನು ನೀಡಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಕಾನೂನಿನ ಅಡಿಯಲ್ಲಿ ಏನೆಲ್ಲಾ ಸಹಾಯ ನೀಡಲು ಆಗುತ್ತದೆಯೋ ಅದನ್ನೇಲ್ಲಾ ನೀಡುತ್ತೇವೆ ಎಂದು ವಾಟ್ಸ್‌ಆಪ್ ಹೇಳಿದೆ.

Best Mobiles in India

English summary
WhatsApp Is Working On A New Feature To Help International Tourists

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X