ವಾಟ್ಸ್‌ಆಪ್‌ನಲ್ಲಿ ಹೆಚ್ಚು ಚಾಟ್ ಮಾಡ್ತೀರಾ..? ನಿಮ್ಮ ಗಮನಕ್ಕೆ: ಬದಲಾಗುತ್ತಿದೆ ಉತ್ತಮ ಆಯ್ಕೆಗಳು...!

|

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ತನ್ನ ಒಡೆತನದ ವಾಟ್ಸ್‌ಆಪ್‌ನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಲು ಮುಂದಾಗಿದೆ. ಈಗಾಗಲೇ ನೀಡಿರುವ ಆಯ್ಕೆಗಳನ್ನು ಬದಲಾಯಿಸುವ ಕ್ರಮಕ್ಕೆ ಯೋಜನೆ ಸಿದ್ಧಪಡಿಸಿದ್ದು, ಇದರಿಂದಾಗಿ ವಾಟ್ಸ್ಆಪ್ ಬಳಕೆದಾರರು ಹೆಚ್ಚಿನ ಆಯ್ಕೆಗಳನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಆಪ್ ಶೀಘ್ರವೇ ಮತ್ತೊಂದು ಆಯ್ಕೆಯೊಂದಿಗೆ ಕಾಣಿಸಿಕೊಳ್ಳಲಿದೆ. ಇದು ಹೊಸ ಆಯ್ಕೆಯಲ್ಲದಿದ್ದರೂ ಹಳೇ ಆಯ್ಕೆಯನ್ನು ಇಷ್ಟು ಬದಲಾಯಿಸಿರುವುದಾಗಿದೆ. ಈಗಾಗಲೇ ವಾಟ್ಸ್‌ಆಪ್ ಬಳಕೆದಾರರು ಈ ಆಯ್ಕೆಗಳ ಲಾಭವನ್ನು ಪಡೆಯುತ್ತಿದ್ದಾರೆ ಆದರೆ ಮುಂದೆ ಇನ್ನಷ್ಟು ಹೊಸ ಲಾಭಗಳಿಗೆ ಪಾತ್ರರಾಗುತ್ತಾರೆ.

ಬದಲಾಗಿದೆ ಡಿಲೀಟ್ ಮೇಸೆಜ್ ಆಯ್ಕೆ:

ಬದಲಾಗಿದೆ ಡಿಲೀಟ್ ಮೇಸೆಜ್ ಆಯ್ಕೆ:

ಈಗಾಗಲೇ ವಾಟ್ಸ್‌ಆಪ್ ಬಳಕೆದಾರರಿಗೆ ಬಿಡುಗಡೆಯಾಗಿರುವ ಡೀಲಿಟ್ ಮೇಸೆಜ್ ಆಯ್ಕೆಯಲ್ಲಿ ಹೊಸ ಬದಲಾವಣೆಯನ್ನು ನೀಡಲು ಮಾಡಲು ಮುಂದಾಗಿದೆ. ಈಗ ಮೇಸೆಜ್ ಕಳುಹಿಸಿದ 7 ನಿಮಿಷಗಳ ಒಳಗೆ ಅದನ್ನು ಡಿಲೀಟ್ ಮಾಡಬೇಕಾಗಿದೆ. ಆದರೆ ಬದಲಾದ ಆಯ್ಕೆಯಲ್ಲಿ ಒಂದು ಗಂಟೆಯ ನಂತರವೂ ಡಿಲೀಟ್ ಆಗುವಂತೆ ವಾಟ್ಸ್‌ಆಪ್ ಮಾಡಿದೆ ಎನ್ನಲಾಗಿದೆ.

ದೀರ್ಘ ವಾಯ್ಸ್ ರೆಕಾರ್ಡಿಂಗ್:

ದೀರ್ಘ ವಾಯ್ಸ್ ರೆಕಾರ್ಡಿಂಗ್:

ಇದಲ್ಲದೇ ದೀರ್ಘಕಾಲ ವಾಯ್ಸ್ ರೆಕಾರ್ಡಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಡಲಿದೆ. ಇದರಿಂದಾಗಿ ಬಳಕೆದಾರರು ವಾಯ್ಸ್ ರೆಕಾರ್ಡಿಂಗ್ ಮಾಡಲು ಬಟನ್ ಒತ್ತಿ ಹಿಡಿದುಕೊಳ್ಳುವ ಅಗತ್ಯತೆ ಇಲ್ಲ ಎನ್ನಲಾಗಿದೆ. ಇದರ ಬದಲಿಗೆ ಒಮ್ಮೆ ಒತ್ತಿ ರೆಕಾರ್ಡಿಂಗ್ ಮಾಡಿ ನಂತರ ನಿಲ್ಲಿಸುವ ಆಯ್ಕೆಯನ್ನು ನೀಡಲಿದೆ.

ವಾಯ್ಸ್ ಮೇಸೆಜ್:

ವಾಯ್ಸ್ ಮೇಸೆಜ್:

ಸದ್ಯ ವಾಟ್ಸ್‌ಆಪ್‌ನಲ್ಲಿ ವೀಡಿಯೋ ಮತ್ತು ಇಮೇಜ್ ಕಳುಹಿಸುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಆದರೆ ವಾಯ್ಸ್ ರೆಕಾರ್ಡಿಂಗ್ ಕಳುಹಿಸುವವರ ಸಂಖ್ಯೆಯೂ ಇಳಿಕೆಯಾಗುತ್ತಿದೆ ಇದನ್ನು ಹೆಚ್ಚಿಸುವ ಸಲುವಾಗಿ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ.

How to save WhatsApp Status other than taking screenshots!! Kannada
ಡಿಲೀಟ್ ಮೇಸೆಜ್:

ಡಿಲೀಟ್ ಮೇಸೆಜ್:

ಈಗಾಗಲೇ ವಾಟ್ಸ್‌ಆಪ್ ನೀಡಿರುವ ಡಿಲೀಟ್ ಮೇಸೆಜ್ ಆಯ್ಕೆಯನ್ನು ಹೆಚ್ಚಿನ ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಡಿಲೀಟ್ ಎವರಿವನ್ ಆಯ್ಕೆಯನ್ನು ಇನಷ್ಟು ಉತ್ತಮವಾಗಿಸಲು ವಾಟ್ಸ್‌ಆಪ್ ಮುಂದಾಗಿದೆ.

ನಿಮ್ಮ ಡೇಟಾ ಕಬಳಿಸುವ ವಾಟ್ಸ್‌ಆಪ್..!

ನಿಮ್ಮ ಡೇಟಾ ಕಬಳಿಸುವ ವಾಟ್ಸ್‌ಆಪ್..!

ದೇಶದಲ್ಲಿ ಒಂದು ಅತ್ಯಂತ ಕಡಿಮೆ ಬೆಲೆಗೆ 4G ಡೇಟಾ ಬಳಕೆಗೆ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಬಳಕೆಯೂ ಅಧಿಕವಾಗುತ್ತಿದೆ. ಅದರಲ್ಲಿಯೂ ವಾಟ್ಸ್ಆಪ್ ನಲ್ಲಿ ಫೋಟೋ ಮತ್ತು ವೀಡಿಯೊಗಳು ಅಧಿಕ ಸಂಖ್ಯೆಯಲ್ಲಿ ವಿನಿಮಯವಾಗುತ್ತಿವೆ. ಈ ಹಿನ್ನಲೆಯಲ್ಲಿ ದಿನಕ್ಕೆ ಒಂದು GB ಡೇಟಾ ಬಳಕೆದಾರರಿಗೆ ಸಾಲುತ್ತಿಲ್ಲ. ಹಾಗಾಗಿ ನಿಮ್ಮ ಡೇಟಾವನ್ನು ಖಾಲಿ ಮಾಡುತ್ತಿರುವ ವಾಟ್ಸ್‌ಆಪ್‌ನಿಂದ ಡೇಟಾವನ್ನು ರಕ್ಷಿಸುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಉಳಿಸಿಕೊಳ್ಳುವುದು ಹೇಗೆ..?

ಉಳಿಸಿಕೊಳ್ಳುವುದು ಹೇಗೆ..?

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಹೊಂದಿರುವರೆಲ್ಲರೂ ವಾಟ್ಸ್‌ಆಪ್ ಬಳಕೆ ಮಾಡುವುದನ್ನು ನಾವು ಕಾಣಬಹುದು. ವಾಟ್ಸ್‌ಆಪ್ ಬಳಕೆದಾರರು ನೂರಾರು ಗ್ರೂಪ್‌ಗಳಲ್ಲಿ ಸದಸ್ಯರಾಗಿರುತ್ತಾರೆ. ಹೀಗಾಗಿ ದಿನವೊಂದಕ್ಕೆ ನೂರಾರು ಫೋಟೋಗಳು ಮತ್ತು ವೀಡಿಯೊಗಳು ವಾಟ್ಸ್‌ಆಪ್‌ಗೆ ಬಂದು ಸೇರಿರುತ್ತದೆ. ಇವುಗಳೇ ನಿಮ್ಮ ಫೋನಿನ ಡೇಟಾವನ್ನು ಕಬಳಿಸುತ್ತವೆ. ಈ ಹಿನ್ನಲೆಯಲ್ಲಿ ಡೇಟಾ ನಿಯಂತ್ರಣ ಮಾಡಲು ಸುಲಭ ವಿಧಾನಗಳು ಮುಂದಿವೆ.

ಕಾಲ್ ಸೆಟ್ಟಿಂಗ್:

ಕಾಲ್ ಸೆಟ್ಟಿಂಗ್:

ಇದಲ್ಲದೇ ವಾಟ್ಸ್ಆಪ್ ಸೆಟ್ಟಿಂಗ್ಸ್ ನಲ್ಲಿ ಡೇಟಾ ಅಂಡ್ ಸ್ಟೋರೇಜ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ಕೊನೆಯಲ್ಲಿ ಕಾಣಸಿಗುವ ಕಾಲ್ ಸೆಟ್ಟಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿ. ಈ ಸಂದರ್ಭದಲ್ಲಿ ನೀವು ವಾಟ್ಸ್‌ಆಪ್ ಕಾಲ್ ಮಾಡಿದರು ಕಡಿಮೆ ಡೇಟಾ ಬಳಕೆಯಾಗಲಿದೆ.

ಆಟೋ ಡೌನ್‌ಲೋಡ್ ಬೇಡ:

ಆಟೋ ಡೌನ್‌ಲೋಡ್ ಬೇಡ:

ವಾಟ್ಸ್ಆಪ್‌ನಲ್ಲಿ ಬಂದ ವೀಡಿಯೊ ಮತ್ತು ಫೋಟೊಗಳು ಆಟೋ ಡೌನ್‌ಲೋಡ್ ಆಗುವ ಹಿನ್ನಲೆಯಲ್ಲಿ ನಿಮ್ಮ ಮೊಬೈಲ್ ಡೇಟಾ ವೇಗವಾಗಿ ಖರ್ಚಾಗುತ್ತದೆ. ಈ ಹಿನ್ನಲೆಯಲ್ಲಿ ಆಟೋ ಡೌನ್‌ಲೋಡ್ ಆಯ್ಕೆಯನ್ನು ಸ್ಥಗಿತಗೊಳಿಸಿ. ಇದನ್ನು ಮಾಡುವುದು ಹೇಗೆ ಎಂಬುದನ್ನು ಮುಂದಿನಂತೆ ತಿಳಿದುಕೊಳ್ಳಿ.

ಹಂತ 01:

ಹಂತ 01:

ವಾಟ್ಸ್ಆಪ್ ಸೆಟ್ಟಿಂಗ್ಸ್ ನಲ್ಲಿ ಡೇಟಾ ಅಂಡ್ ಸ್ಟೋರೇಜ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 02:

ಹಂತ 02:

ಮೀಡಿಯಾ ಆಟೊ ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡಿದಲ್ಲಿ ಒಟ್ಟು ಮೂರು ಆಯ್ಕೆಗಳನ್ನು ಕಾಣಬಹುದಾಗಿದೆ.

ಹಂತ 03:

ಹಂತ 03:

When using mobile data ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ. ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅವುಗಳ ಮುಂದಿರುವ ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ, ನಂತರ ಓಕೆ ಪ್ರೆಸ್ ಮಾಡಿ. (ಚಾಟ್‌ನಲ್ಲಿ ನಿಮಗೆ ಬೇಕಾದ ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು)

ಹಂತ 04:

ಹಂತ 04:

When connected on Wi-Fi ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ. ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅವುಗಳ ಮುಂದಿರುವ ಚೆಕ್ ಬಾಕ್ಸ್ ಅನ್ನು ಇನ್ ಚೆಕ್ ಮಾಡಿ, ನಂತರ ಓಕೆ ಪ್ರೆಸ್ ಮಾಡಿ. (ವೈ-ಫೈನಲ್ಲಿ ಎಲ್ಲಾ ಬಗೆಯ ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಡೌನ್‌ಲೋಡ್ ಆಗಲಿದೆ. ಇದರಿಂದ ಮೊಬೈಲ್ ಡೇಟಾ ಉಳಿಯಲಿದೆ)

ಹಂತ 05:

ಹಂತ 05:

When roaming ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ. ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅವುಗಳ ಮುಂದಿರುವ ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ, ನಂತರ ಓಕೆ ಪ್ರೆಸ್ ಮಾಡಿ. (ರೋಮಿಂಗ್ ಸಂದರ್ಭದಲ್ಲಿ ನಿಮ್ಮ ಡೇಟಾ ಬೆಲೆಯೂ ದುಪ್ಪಟಾಗಲಿದ್ದು, ಇದರಿಂದ ನಿಮ್ಮ ಹಣವನ್ನು ಉಳಿಸಬಹುದಾಗಿದೆ)

Best Mobiles in India

English summary
WhatsApp may simplify voice messages in Android app, extends Delete for Everyone limit to 68 minutes. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X