Subscribe to Gizbot

ವಾಟ್ಸ್ ಪೇಮೆಂಟ್ ನಲ್ಲಿ ಹೊಸ ಆಯ್ಕೆ: ಹಣಕ್ಕಾಗಿ ರಿಕ್ವೇಸ್ಟ್ ಮಾಡಿ..!

Posted By: Lekhaka

ದೇಶಿಯ ಪೇಮೆಂಟ್ ವಿಭಾಗದಲ್ಲಿ ಹೊಸ ಭಾಷ್ಯವನ್ನು ಬರೆಯಲು ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ಮುಂದಾಗಿದ್ದು, ಇದಕ್ಕಾಗಿ ತನ್ನ ಬಳಕೆದಾರರಿಗೆ ಪೇಮೆಂಟ್ ಸೇವೆಯನ್ನು ನೀಡಲು ಸಿದ್ಧತೆ ನಡೆಸಿದೆ. ಈಗಾಗಲೇ ಬೀಟಾ ಬಳಕೆದಾರರಿಗೆ ಈ ಸೇವೆಯು ಲಭ್ಯವಿದ್ದು, ಸದ್ಯ ಹೊಸದೊಂದು ಆಯ್ಕೆಯು ಬಳಕೆದಾರರಿಗೆ ಸೇರಿಕೊಂಡಿದೆ. ವಾಟ್ಸ್ ಆಪ್ ನಲ್ಲಿ ಹಣವನ್ನು ಕಳುಹಿಸುವುದಲ್ಲದೇ, ಹಣವನ್ನು ಕಳುಹಿಸುವಂತೆ ರಿಕ್ವೇಸ್ಟ್ ಸಹ ಮಾಡಬಹುದಾಗಿದೆ.

ವಾಟ್ಸ್ ಪೇಮೆಂಟ್ ನಲ್ಲಿ ಹೊಸ ಆಯ್ಕೆ: ಹಣಕ್ಕಾಗಿ ರಿಕ್ವೇಸ್ಟ್ ಮಾಡಿ..!

ಈ ಹಿಂದೆ ಹಣವನ್ನು ಕ್ಯೂಆರ್ ಸ್ಕ್ಯಾನರ್ ಮೂಲಕ ಹಣವನ್ನು ಸೆಂಡ್ ಮಾಡುವ ಅವಕಾಶವನ್ನು ನೀಡಿತ್ತು. ಆದರೆ ಈಗ ಬಳಕೆದಾರರು ಹಣವನ್ನು ಕಳುಹಿಸುವಂತೆ ರಿಕ್ವೇಸ್ಟ್ ಮಾಡುವ ಅವಕಾಶವನ್ನು ಮಾಡಕೊಡಲು ಮುಂದಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಬೇರೆ ಆಪ್ ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ ಎನ್ನಲಾಗಿದೆ.

ಹಣಕ್ಕಾಗಿ ರಿಕ್ವೇಸ್ಟ್ ಕಳುಹಿಸುವುದು ಹೇಗೆ..?

ವಾಟ್ಸ್ಆಪ್ ನಲ್ಲಿ ಹಣಕಳುಹಿಸುವುದು ಹೇಗೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಹಂತ 01: ವಾಟ್ಸ್ಆಪ್ ಓಪನ್ ಮಾಡಿರಿ, ನಂತರ ಸೆಟ್ಟಿಂಗ್ಸ್ ಡಾಟ್ ಮೇಲೆ ಕ್ಲಿಕ್ ಮಾಡಿ.

ಹಂತ 02: ನಂತರ ಪೇಮೆಂಟ್ ಆಯ್ಕೆಯ ಮೇಲೇ ಕ್ಲಿಕ್ ಮಾಡಿ. ಅಲ್ಲಿ ಹೊಸ ಪೇಮೆಂಟ್ ಸೆಲೆಕ್ಟ್ ಮಾಡಿಕೊಳ್ಳಿ.

ಹಂತ 03: ಅಲ್ಲಿ ನಿಮಗೆ ಎರಡು ಆಯ್ಕೆಗಳು ಕಾಣಿಸಿಕೊಳ್ಳಲಿದೆ. ಅದರಲ್ಲಿ ಯುಪಿಐ ಐಡಿ ಮತ್ತು ಕ್ಯೂರ್ ಆರ್ ಕೋಡ್ ಇರಲಿದೆ.

ಹಂತ 04: ನಂತರ ಎರಡು ಆಯ್ಕೆಗಳು ಕಾಣಿಸಿಕೊಳ್ಳಲಿದೆ. ನೀವು ಅಲ್ಲಿ ಹಣವನ್ನು ಕಳುಹಿಸುವ ಮತ್ತು ಸ್ವೀಕರಿಸುವ ಆಯ್ಕೆಯೂ ಇರಲಿದೆ.

ಹಂತ 05: ಇಲ್ಲಿ ನೀವು ಹಣವನ್ನು ಸ್ವೀಕರಿಸಲು ರಿಕ್ವೇಸ್ಟ್ ಅನ್ನು ಕಳುಹಿಸಬಹುದಾಗಿದೆ. ಕಳುಹಿಸಿದ ರಿಕ್ಚೇಸ್ಟ್ ಗೆ ಸ್ವೀಕರಿಸಿದವರು ಪಾವತಿಯನ್ನು ಮಾಡಬಹುದಾಗಿದೆ.

ಈ ವಾಟ್ಸ್ ಆಪ್ ಪೇಮೆಂಟ್ ಆಯ್ಕೆಯಲ್ಲಿ ಹಣಕ್ಕಾಗಿ ಕಳುಹಿಸುವ ರಿಕ್ವೇಸ್ಟ್ 24 ಗಂಟೆಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಿಂದಾಗಿ ಒಂದು ದಿನದ ಒಳಗೆ ಹಣವನ್ನು ಕಳುಹಿಸಲು ಅವಕಾಶವಿರಲಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಬೆಂಗಳೂರಿಗರಿಗೆ 1 GBPS ವೇಗದಲ್ಲಿ ತಿಂಗಳಿಗೆ 2500 GB ಡೇಟಾ ಬಳಕೆಗೆ ನೀಡುತ್ತಿದೆ ಈ ಕಂಪನಿ..!

Source

Read more about:
English summary
WhatsApp Payments gets the new feature called Request Money. This new feature will let the users of the Android beta version of the app to request payment from the settings menu. The payment requests will be valid for a period of 24 hours and will expire after the time limit. So, you will have to send the payment request again if you have not received the payment.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot