Subscribe to Gizbot

ವಾಟ್ಸ್‌ಆಪ್ ಪೇಮೆಂಟ್‌ಗೆ ಸೆಡ್ಡು: ಗೂಗಲ್ ತೇಜ್‌ನಲ್ಲಿ ಹೊಸ ಕೊಡುಗೆ...!

Written By:

ಭಾರತೀಯ ಮಾರುಕಟ್ಟೆಯಲ್ಲಿ ಮೊಬೈಲ್ ಪೇಮೆಂಟ್ ಆಪ್ ಗಳ ವಹಿವಾಟು ಜೋರಾಗಿದ್ದು, ಬಳಕೆದಾರರಿಗೆ ಹೊಸ ಹೊಸ ಸೇವೆಗಳನ್ನು ನೀಡುವುದರೊಂದಿಗೆ ಹೆಚ್ಚಿನ ಕೊಡುಗೆಗಳನ್ನು ನೀಡುತ್ತಿವೆ. ಇದೇ ಮಾದರಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದ ಗೂಗಲ್ ತೇಜ್ ಗ್ರಾಹಕರಿಗೆ ಹೆಚ್ಚಿನ ಕ್ಯಾಷ್ ಬ್ಯಾಕ್ ಆಫರ್ ನೀಡುವ ಮೂಲಕ ಹೆಚ್ಚಿನ ಜನರನ್ನು ತನ್ನ ಬಳಿಗೆ ಸೆಳೆದುಕೊಂಡಿತ್ತು.

ವಾಟ್ಸ್‌ಆಪ್ ಪೇಮೆಂಟ್‌ಗೆ ಸೆಡ್ಡು: ಗೂಗಲ್ ತೇಜ್‌ನಲ್ಲಿ ಹೊಸ ಕೊಡುಗೆ...!

ಈಗ ಮಾರುಕಟ್ಟೆಯಲ್ಲಿ ಮತ್ತೊಂಮ್ಮೆ ಸ್ಪರ್ಧೆ ಹೆಚ್ಚಾಗಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಫೋನ್ ಪೇ, ಪೇಟಿಎಂ, ಮೊಬಿ ಕ್ವಿಕ್ ಆಪ್‌ಗಳು ತಮ್ಮ ಗ್ರಾಹಕರಿಗೆ ಮೊಬೈಲ್ ವ್ಯಾಲೆಟ್ ಸೇವೆಯೊಂದಿಗೆ ಹಲವು ಮಾದರಿಯ ಹೊಸ ಮಾದರಿಯ ಸೇವೆಯನ್ನು ನೀಡುವ ಕಾರ್ಯವನ್ನು ಮಾಡುತ್ತಿವೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಗೂಗಲ್ ಯನ್ನ ತೇಜ್ ಆಪ್ ಬಳಕೆದಾರರಿಗೆ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಲ್ ಪಾವತಿ ಮಾಡಬಹುದು

ಬಿಲ್ ಪಾವತಿ ಮಾಡಬಹುದು

ತೇಜ್ ಬಳಕೆದಾರರು ಇನ್ನು ಮುಂದೆ ತಮ್ಮ ಆಪ್ ನಿಂದಲೇ ಎಲ್ಲಾ ಮಾದರಿಯ ಬಿಲ್ ಗಳನ್ನು ಪಾವತಿ ಮಾಡಬಹುದಾಗಿದೆ. DTH, ಮೊಬೈಲ್ ರಿಚಾರ್ಜ್, ಮೊಬೈಲ್ ಬಿಲ್, ಎಲೆಕ್ಟ್ರಿಕ್ ಮತ್ತು ವಾಟರ್ ಬಿಲ್ ಪಾವತಿ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ಯಾವುದೇ ಹೆಚ್ಚುವರಿ ಶುಲ್ಕವಿಲ್ಲ:

ಯಾವುದೇ ಹೆಚ್ಚುವರಿ ಶುಲ್ಕವಿಲ್ಲ:

ಗೂಗಲ್ ತೇಜ್ ಆಪ್ ನಲ್ಲಿ ನೀವು ಬಿಲ್ ಗಳನ್ನು ಪಾವತಿ ಮಾಡಿದ ಸಂದರ್ಭದಲ್ಲಿ ಯಾವುದೇ ಮಾದರಿಯಲ್ಲಿ ಹೆಚ್ಚು ಹಣವನ್ನು ಪಾವತಿ ಮಾಡಬೇಕಾಗಿಲ್ಲ ಎನ್ನಲಾಗಿದೆ. ಉಚಿತವಾಗಿ ಮತ್ತು ತ್ವರಿತವಾಗಿ ನೀವು ಹಣವನ್ನು ಪಾವತಿ ಮಾಡುವ ಅವಕಾಶವನ್ನು ತೇಜ್ ನಿಮಗೆ ಮಾಡಿಕೊಡಲಿದೆ.

80 ಸ್ವೀಕೃತಿದಾರರು

80 ಸ್ವೀಕೃತಿದಾರರು

ತೇಜ್ ಒಟ್ಟು 80ಕ್ಕೂ ಹೆಚ್ಚು ಮಂದಿ ಸ್ವೀಕೃತಿದಾರರನ್ನು ಹೊಂದಿದ್ದು, ಇದರಲ್ಲಿ ಪ್ರೈವೇಟ್ ಮತ್ತು ಸರ್ಕಾರಿ ಸೇವೆಗಳು ಸೇರಿಕೊಂಡಿದೆ ಎನ್ನಲಾಗಿದೆ. ದೇಶದ ಎಲ್ಲಾ ಭಾಗದಲ್ಲಿಯೂ ತೇಜ್ ಈ ಬಿಲ್ ಪಾವತಿ ಸೇವೆಯನ್ನು ಚಾರಿಯಲ್ಲಿಟ್ಟಿದೆ.

ಸುಲಭ:

ಸುಲಭ:

ಇತರೆ ಆಪ್ ಗಳಿಗೆ ಹೊಲಿಕೆ ಮಾಡಿಕೊಂಡರೆ ತೇಜ್ ಬಳಕೆ ಸುಲಭವಾಗಿದೆ ಎನ್ನಬಹುದು. ಕಾರಣ ಇದರಲ್ಲಿ ಬಳಕೆದಾರರಿಗೆ ಕನ್‌ಪ್ಯೂಸ್ ಮಾಡುವ ಯಾವುದೇ ಅಂಶಗಳು ಇಲ್ಲ. ಅಲ್ಲದೇ ಸರಳವಾದ ಇಂಟರ್ಫೇಸ್ ಹೊಂದಿದೆ. ಈ ಹಿನ್ನಲೆಯಲ್ಲಿ ಇದರ ಬಳಕೆ ಸುಂದರ ಮತ್ತು ಸರಳವಾಗಿದೆ.

ವಾಟ್ಸ್‌ಆಪ್ ಗೆ ಸೆಡ್ಡು:

ವಾಟ್ಸ್‌ಆಪ್ ಗೆ ಸೆಡ್ಡು:

ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ವಾಟ್ಸ್‌ಆಪ್ ಪೇಮೆಂಟ್ ಸೇವೆಗೆ ಸೆಡ್ಡು ಹೊಡೆಯುವ ಸಲುವಾಗಿ ಗೂಗಲ್ ತನ್ನ ತೇಜ್ ಆಪ್‌ನಲ್ಲಿ ಹೊಸ ಹೊಸ ಸೇವೆಗಳನ್ನು ನೀಡಲು ಶುರು ಮಾಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಓದಿರಿ: ಜಿಯೋಗೆ ಸೆಡ್ಡು: ನೋಕಿಯಾ-ಏರ್‌ಟೆಲ್‌ ಒಪ್ಪಂದ: ಶಾಕಿಂಗ್ ಬೆಲೆಗೆ ನೋಕಿಯಾ 2 & ನೋಕಿಯಾ 3..!

English summary
You can now pay utility bills through Google Tez. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot