Subscribe to Gizbot

ಪ್ರೀಮಿಯಂ ಸ್ಮಾರ್ಟ್ಫೋನ್ಗಳಲ್ಲಿ HDR ಸಪೋರ್ಟ್ ನೀಡುತ್ತಿರುವ ಯೂಟ್ಯೂಬ್ ಮೊಬೈಲ್ ಆಪ್!

Posted By: Tejaswini P G

ಗೂಗಲ್ ತನ್ನ ಯೂಟ್ಯೂಬ್ ಸ್ಮಾರ್ಟ್ಫೋನ್ ಆಪ್ನಲ್ಲಿ ನೀಡುತ್ತಿದೆಯಂತೆ HDR ವೀಡಿಯೋಗಳನ್ನು ನೋಡುವ ಸಾಮರ್ಥ್ಯ. ಈ ಸುದ್ದಿ ಈಗಾಗಲೇ ಖಾತ್ರಿಯಾಗಿದ್ದು ಈ ಕುರಿತು ಹೆಚ್ಚಿನ ಮಾಹಿತಿ ಹೊರಬಿದ್ದಿದೆ. ಯೂಟ್ಯೂಬ್ ಆಪ್ನಲ್ಲಿ ನಾವು ನೋಡುವ ವೀಡಿಯೋಗಳ ಗುಣಮಟ್ಟವನ್ನು HDR ಗೆ ಬದಲಾಯಿಸುವ ಮೂಲಕ HDR ವೀಡಿಯೋಗಳನ್ನು ನಮ್ಮ ಸ್ಮಾರ್ಟ್ಫೋನ್ಗಳಲ್ಲಿ ನೋಡಬಹುದು.

ಪ್ರೀಮಿಯಂ ಸ್ಮಾರ್ಟ್ಫೋನ್ಗಳಲ್ಲಿ HDR ಸಪೋರ್ಟ್ ನೀಡುತ್ತಿರುವ ಯೂಟ್ಯೂಬ್

ಯೂಟ್ಯೂಬ್ ಆಪ್ ನೀಡಲಿದೆ 1080p ರೆಸೊಲ್ಯೂಶನ್ ಮತ್ತು 60fps ಗುಣಮಟ್ಟದ HDR ವೀಡಿಯೋಗಳನ್ನು. ಯೂಟ್ಯೂಬ್ ಈ ಅಪ್ಡೇಟ್ ಅನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದ್ದರೂ, ಮೊಬೈಲ್ ಆಸಕ್ತರ ದೃಷ್ಟಿ ಇದರತ್ತ ಹರಿದಿದೆ.

ಯೂಟ್ಯೂಬ್ ನಲ್ಲಿ HDR ಸಾಮರ್ಥ್ಯವನ್ನು ನವಂಬರ್ 2016ರಲ್ಲೇ ನೀಡಿದ್ದರೂ, HDR ಸ್ಕ್ರೀನ್ ಹೊಂದಿರುವ ಎಲ್ಲಾ ಸ್ಮಾರ್ಟ್ಫೋನ್ಗಳಿಗೆ ಈ ಸಾಮರ್ಥ್ಯವನ್ನು ಇನ್ನೂ ಒದಗಿಸಿಲ್ಲ. ಸಧ್ಯಕ್ಕೆ ಈ ಸಾಮರ್ಥ್ಯ ಕೇವಲ ಹೈ-ಎಂಡ್ ಪ್ರೀಮಿಯಂ ಸ್ಮಾರ್ಟ್ಫೋನ್ಗಳಿಗೆ ನೀಡಲಾಗಿದೆ. ಗ್ಯಾಲಕ್ಸಿ S8, ನೋಟ್ 8, ಗೂಗಲ್ ಪಿಕ್ಸೆಲ್, LG V30, ಎಕ್ಸ್ಪೀರಿಯಾ XZ ಪ್ರೀಮಿಯಂ ಮೊದಲಾದ ಮೊಬೈಲ್ಗಳಲ್ಲಿ ಈ ಸಾಮರ್ಥ್ಯ ನೀಡಲಾಗಿದೆ.

ಗೂಗಲ್ ಭವಿಷ್ಯದಲ್ಲಿ HDR ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಲಿರುವ ಮತ್ತಷ್ಟು ಸ್ಮಾರ್ಟ್ಫೋನ್ಗಳಲ್ಲಿ ಉತ್ತಮ ಗುಣಮಟ್ಟದ ವೀಡಿಯೋಗಳನ್ನು ನೋಡಲು ಅಗತ್ಯ ಬೆಂಬಲ ನೀಡಲಿದೆ.

ಜಿಯೋಗೆ ಮತ್ತೊಂದು ವಿಶ್ವ ಕಿರೀಟ!..ಏನಂತ ಗೊತ್ತಾದ್ರೆ ಖುಷಿಪಡ್ತಿರಾ!!

HDR ಸಪೋರ್ಟ್ ಹೊಂದಿರುವ ಸ್ಮಾರ್ಟ್ಫೋನ್ಗಳು ತಮ್ಮ ಡಿಸ್ಪ್ಲೇ ಯ ರೆಸೊಲ್ಯೂಶನ್ ನಲ್ಲಿ ಯಾವುದೇ ಹೆಚ್ಚಳವನ್ನು ಮಾಡುವುದಿಲ್ಲ. HDR ಅಂದರೆ ಹೈ ಡೈನಾಮಿಕ್ ರೇಂಜ್ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ಫೋನ್ ನಲ್ಲಿರುತ್ತದೆ ನಮ್ಮ ಕಣ್ಣಿಗೆ ಕಾಣಿಸುವಂಥ ಅತ್ಯಧಿಕ ಬಣ್ಣಗಳಿರುವ ಕಲರ್ ಸ್ಪೆಕ್ಟ್ರಮ್.

ಈ ಮೂಲಕ HDR ಡಿಸ್ಪ್ಲೇ ಹೊಂದಿರುವ ಮೊಬೈಲ್ಗಳು ಎಲ್ಲಾ ಬಣ್ಣಗಳನ್ನು ಹೆಚ್ಚಿನ ನಿಖರತೆಯೊಂದಿಗೆ ತೋರಿಸುವ ಸಾಮರ್ಥ್ಯವನ್ನು ಹೊಂದಿದ್ದು, ವೀಡಿಯೋ ಮತ್ತು ಫೋಟೋಗಳು ಹೆಚ್ಚು ನೈಜವಾಗಿ ಮತ್ತು ಜೀವಂತಿಕೆಯಿಂದ ಕೂಡಿದಂತೆ ಕಾಣಿಸುತ್ತವೆ.

English summary
YouTube has rolled out an update for its mobile app that will offer video playback support for smartphones with HDR displays.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot