ಎಲ್ ಜಿಯಿಂದ ತೆಳ್ಳಗಿನ ಸಣ್ಣ ಲ್ಯಾಪ್ ಟಾಪ್

Posted By: Staff

ಎಲ್ ಜಿಯಿಂದ ತೆಳ್ಳಗಿನ ಸಣ್ಣ ಲ್ಯಾಪ್ ಟಾಪ್
ಎಲ್ ಜಿ ಹೊರತಂದ ಸಣ್ಣದಾದ ಮತ್ತು ತೆಳ್ಳಗಿನ ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸುವ ನಿರೀಕ್ಷೆಯಿದೆ. ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಎಲ್ ಜಿ ಜನಪ್ರಿಯ ಬ್ರಾಂಡ್. ಇದೀಗ ಹಗುರ, ಸಣ್ಣ ಮತ್ತು ತೆಳ್ಳಗಿನ ಕಂಪ್ಯೂಟರ್ ಹೊಸ ನಿರೀಕ್ಷೆಯನ್ನೇ ಸೃಷ್ಟಿಸಿದೆ.

ಕಂಪನಿಯು ಎರಡು ಲ್ಯಾಪ್ ಟಾಪ್ ಆವೃತ್ತಿಗಳನ್ನು ಹೊರತರಲಿದೆ. ಅದರ ಹೆಸರು ಎಲ್ ಜಿ ಪಿ430 ಮತ್ತು ಎಲ್ ಜಿ ಪಿ530 ಎಂದಾಗಿದೆ. ಇವೆರಡು ಹೈಎಂಡ್ ದಕ್ಷತೆಯೊಂದಿಗೆ ಸಣ್ಣಗಿನ ಲ್ಯಾಪ್ ಟಾಪ್ ಗಳಾಗಿವೆ. ಇದರ ದರವೆಷ್ಟು ಎಂಬುದನ್ನು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.

* ಇವೆರಡರ ಎಲ್ಇಡಿ ಎಲ್ ಸಿಡಿ ಡಿಸ್ ಪ್ಲೇ ಉಳಿದ ಲ್ಯಾಪ್ ಟಾಪ್ ಗಳಿಗಿಂತ ಶೇಕಡ 22ರಷ್ಟು ಸಣ್ಣದಾಗಿದೆ. ಇದರ ಬಾಡಿ ಗಾತ್ರ ಉಳಿದ ಲ್ಯಾಪ್ ಟಾಪ್ ಗಳಿಗಿಂತ ಶೇಕಡ 22ರಷ್ಟು ಚಿಕ್ಕದಾಗಿದೆ. ಇದರ ತೂಕ ಕೇವಲ 1.94 ಕೆಜಿ ಆಗಿದೆ.

* ಇವೆರಡು ಲ್ಯಾಪ್ ಟಾಪ್ ಗಳು ಡಿಜಿಟಲ್ ಲಿವಿಂಗ್ ನೆಟ್ ವರ್ಕ್ ಅಲಾಯೆನ್ಸ್ ಸೌಲಭ್ಯ ಹೊಂದಿವೆ. ವೈರ್ ಲೆಸ್ ಡಿಸ್ ಪ್ಲೇ ಇದರ ವಿಶೇಷತೆಯಾಗಿದೆ.

* ಈ ಲ್ಯಾಪ್ ಟಾಪ್ ಗಳಲ್ಲಿ ವಿಡಿಯೋ, ಮ್ಯೂಸಿಕ್ ಮತ್ತು ಫೋಟೊಗಳನ್ನು ಆನ್ ಲೈನ್ ಮೂಲಕ ಸಂಗ್ರಹಿಸಬಹುದು.

* ವೇಗವಾಗಿ ಇಂಟರ್ ನೆಟ್ ಆಕ್ಸೆಸ್ ಮಾಡಬಹುದು.

* ಇಂಟೆಲ್ ಕೋರ್ ಐ7 ಪ್ರೊಸೆಸರ್ ಹೊಂದಿವೆ.

"ನೂತನ ಹಗುರ, ಸಣ್ಣದಾದ ಈ ಲ್ಯಾಪ್ ಟಾಪ್ ಗಳು ಗ್ರಾಹಕರಿಗೆ ಹೊಸ ಅನುಭವ ನೀಡಲಿವೆ. ಇದರ ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ ವೃತ್ತಿಪರರಿಗೆ ಮತ್ತು ಇತರ ಗ್ರಾಹಕರಿಗೆ ಅನನ್ಯ ಸೇವೆ ನೀಡಲಿದೆ" ಎಂದು ಎಲ್ ಜಿ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಎಚ್ ಎಸ್ ಪೆಯಿಕ್ ಹೇಳಿದ್ದಾರೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot