ಲ್ಯಾಪ್‌ಟಾಪ್‌ ಬ್ಯಾಟರಿ ರಹಸ್ಯಗಳು ನಿಮಗೆಷ್ಟು ಗೊತ್ತು?

Written By:

ಲ್ಯಾಪ್‌ಟಾಪ್‌ ಬಳಕೆದಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಅಲ್ಲದೇ ಹಲವರು ಈಗಾಗಲೇ ಕೊಂಡ ಲ್ಯಾಪ್‌ಟಾಪ್‌ ಅನ್ನು ಹಲವು ವರ್ಷಗಳಿಂದ ಬಳಸುತ್ತಿರಬಹುದು. ಲ್ಯಾಪ್‌ಟಾಪ್‌ ಹಲವು ವರ್ಷಗಳಿಂದ ಬಳಸುತ್ತಿರುವವರ ಒಂದು ಸಮಸ್ಯೆ ಅಂದ್ರೆ ಹೆಚ್ಚು ಕಾಲ ಬ್ಯಾಟರಿ ಪವರ್‌ ಉಳಿಯದಿರುವುದು. ಆದ್ದರಿಂದ ಹೊಸ ಬ್ಯಾಟರಿ ಖರೀದಿಸಲು ಹೋದರೆ ಯಾವುದನ್ನು ಕೊಳ್ಳುವುದು ಎಂಬ ಗೊಂದಲ. ಆದರೆ ಲ್ಯಾಪ್‌ಟಾಪ್‌ ಬ್ಯಾಟರಿ ಖರೀದಿಸುವ ಮುನ್ನ ನೀವು ಲ್ಯಾಪ್‌ಟಾಪ್‌ ಬ್ಯಾಟರಿಯ ಬಗ್ಗೆ ತಿಳಿಯಲೇ ಬೇಕಿರುವ, ಇದುವರೆಗೂ ತಿಳಿಯದ 7 ರಹಸ್ಯ ಮಾಹಿತಿಗಳಿವೆ. ಅವುಗಳು ಏನು ಎಂಬುದನ್ನು ಲೇಖನದಲ್ಲಿ ಓದಿ ತಿಳಿಯಿರಿ.

ಲ್ಯಾಪ್‌ಟಾಪ್‌ ಬ್ಯಾಟರಿ ಖರೀದಿಸುವ ಮುನ್ನ ನೀವು ಅರಿತಿರಲೇಬೇಕಾದ ರಹಸ್ಯ ಮಾಹಿತಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಪನಿಯು ದೇಶವ್ಯಾಪಿ ಉಪಸ್ಥಿತಿ

ಕಂಪನಿಯು ದೇಶವ್ಯಾಪಿ ಉಪಸ್ಥಿತಿ

ಕಂಪನಿಯು ದೇಶವ್ಯಾಪಿ ಉಪಸ್ಥಿತಿ

ನೀವು ಖರೀದಿಸಲು ಹೊರಟಿರುವ ಲ್ಯಾಪ್‌ಟಾಪ್ ಬ್ಯಾಟರಿಯ ಕಂಪನಿ ದೇಶವ್ಯಾಪಿ ಉಪಸ್ಥಿತಿಯಲ್ಲಿದೆಯೇ ಎಂದು ಪರೀಕ್ಷಿಸಿ. ಹಾಗೂ ಬ್ಯಾಟರಿಯನ್ನು ಬದಲಿಸಲು ಅವಕಾಶ ವಿರುವ ಬಗ್ಗೆ ಕೇಳಿ ತಿಳಿದುಕೊಳ್ಳಿ.

 ಪ್ರಮುಖ ಕಂಪನಿಗಳ ಅಧಕ ಶುಲ್ಕ

ಪ್ರಮುಖ ಕಂಪನಿಗಳ ಅಧಕ ಶುಲ್ಕ

ಪ್ರಮುಖ ಕಂಪನಿಗಳ ಅಧಕ ಶುಲ್ಕ

ಕೆಲವು ಬ್ರ್ಯಾಂಡೆಡ್‌ ಕಂಪನಿಗಳಾದ ಎಚ್‌ಪಿ, ಡೆಲ್‌, ಆಕ್ಸೆರ್‌ ಕಂಪನಿಗಳು ಅವುಗಳ ಬ್ಯಾಟರಿಗಳಿಗೆ ಎರಡರಷ್ಟು ಹಣ ಪಡೆಯುತ್ತವೆ. ಆದ್ದರಿಂದ ಮಾರುಕಟ್ಟೆಗೆ ಅವುಗಳ ಪ್ರಾಡಕ್ಟ್‌ ಬಂದಮೇಲೆ ಖರೀದಿಸಿ.

ಬ್ಯಾಟರಿ ಕಾರ್ಯದಕ್ಷತೆ

ಬ್ಯಾಟರಿ ಕಾರ್ಯದಕ್ಷತೆ

ಬ್ಯಾಟರಿ ಕಾರ್ಯದಕ್ಷತೆ

ಬ್ಯಾಟರಿಯಲ್ಲಿ ಸರ್ಕ್ಯೂಟ್‌ ವಿನ್ಯಾಸ, ಬ್ಯಾಟರಿ ಕವಚ, ಬ್ಯಾಟರಿ ಬ್ಯಾಂಕ್‌ ಎಲ್ಲವೂ ಸಹ ಬ್ಯಾಟರಿ ಗುಣಮಟ್ಟ ಮತ್ತು ಕಾರ್ಯದಕ್ಷತೆಯನ್ನು ಸಮರ್ಥಿಸುತ್ತವೆ. ಈ ಹಿನ್ನೆಲೆಯಲ್ಲಿ ಸ್ಯಾಮ್‌ಸಂಗ್, ಎಲ್‌ಜಿ ಮತ್ತು ಟೆಕ್ಸಾಸ್‌ ಕಂಪನಿಗಳು ಉತ್ತಮ ಬ್ಯಾಟರಿ ಕಾರ್ಯದಕ್ಷತೆ ಹೊಂದಿವೆ.

ಬ್ಯಾಟರಿ ಜೀವಿತಾವಧಿ ಬ್ರ್ಯಾಂಡ್ ನಿಂದ ಬ್ರ್ಯಾಂಡ್‌ಗೆ ಬದಲಾಗುತ್ತದೆ

ಬ್ಯಾಟರಿ ಜೀವಿತಾವಧಿ ಬ್ರ್ಯಾಂಡ್ ನಿಂದ ಬ್ರ್ಯಾಂಡ್‌ಗೆ ಬದಲಾಗುತ್ತದೆ

ಬ್ಯಾಟರಿ ಜೀವಿತಾವಧಿ ಬ್ರ್ಯಾಂಡ್ ನಿಂದ ಬ್ರ್ಯಾಂಡ್‌ಗೆ ಬದಲಾಗುತ್ತದೆ

ಲ್ಯಾಪ್‌ಟಾಪ್‌ ಬ್ಯಾಟರಿಗಳು ಬ್ರ್ಯಾಂಡ್ ನಿಂದ ಬ್ರ್ಯಾಂಡ್‌ಗೆ ಬದಲಾಗುತ್ತದೆ. ಆದರೆ ಸಹಜವಾಗಿ ಹೇಳುವುದಾದರೆ ಲ್ಯಾಪ್‌ಟಾಪ್‌ನಲ್ಲೇ ಮೂಲವಾಗಿ ಬರುವ ಬ್ಯಾಟರಿಗಳು ಮಾತ್ರ ಉತ್ತಮ ಪ್ರದರ್ಶನ ನೀಡುತ್ತವೆ. ನೀವು ಮಾರುಕಟ್ಟೆಯಲ್ಲಿ ಕೊಳ್ಳವು ಬ್ಯಾಟರಿಗಳ ಜೀವಿತಾವಧಿ ಹೀಗಿದೆ ನೋಡಿ
* ಪ್ರಥಮ ಗುಣಮಟ್ಟ : 12-18 ತಿಂಗಳು
* ಮಧ್ಯಮ ಗುಣಮಟ್ಟ : 10-15 ತಿಂಗಳು
* ತೃತೀಯ ಗುಣಮಟ್ಟ : 5-10 ತಿಂಗಳು

ಬ್ಯಾಟರಿ ಪರೀಕ್ಷೆ

ಬ್ಯಾಟರಿ ಪರೀಕ್ಷೆ

ಬ್ಯಾಟರಿ ಪರೀಕ್ಷೆ

ಸ್ಯಾಮ್‌ಸಂಗ್, ಎಲ್‌ಜಿ, ಡೆಲ್‌ ನಂತಹ ಕಂಪನಿಗಳು ಮಾತ್ರ ಪ್ರತಿಯೊಂದು ಬ್ಯಾಟರಿಗಳನ್ನು ಲ್ಯಾಪ್‌ಟಾಪ್‌ಗೆ ಹೊಂದಿಸಲು ಸೂಕ್ತವೆ ಎಂದು ಪರೀಕ್ಷಿಸುತ್ತವೆ. ಆದ್ದರಿಂದ ನೀವು ಖರೀದಿಸುವ ಬ್ಯಾಟರಿಗಳು ನಿಮ್ಮ ಲ್ಯಾಪ್‌ಟಾಪ್‌ಗಳಿಗೆ ಸೂಕ್ತವೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.

 ವಾರಂಟಿ ವ್ಯಾಪ್ತಿ ಖರಾರು

ವಾರಂಟಿ ವ್ಯಾಪ್ತಿ ಖರಾರು

ವಾರಂಟಿ ವ್ಯಾಪ್ತಿ ಖರಾರು

ಹಲವು ಬಳಕೆದಾರರು ತಮ್ಮ ಬ್ಯಾಟರಿ ವಾರಂಟಿ ದಿನಾಂಕ ಮುಗಿಯುವ ಮುನ್ನವೇ ಬ್ಯಾಟರಿ ಕೆಟ್ಟರೆ ಅದರ ಬಗ್ಗೆ ಚಿಂತಿಸುವುದೇ ಇಲ್ಲ. ನೀವು ಹಾಗೇನಾದರೂ ವಾರಂಟಿ ದಿನಾಂಕ ಪರೀಕ್ಷಿಸಿಕೊಂಡರೆ ಉಚಿತವಾಗಿ ಇನ್ನೊಂದು ಹೊಸ ಬ್ಯಾಟರಿ ಪಡೆಯಬಹುದಾಗಿದೆ.

 ಬ್ಯಾಟರಿ ಸೆಲ್ಸ್‌(ಕೋಶಗಳು)

ಬ್ಯಾಟರಿ ಸೆಲ್ಸ್‌(ಕೋಶಗಳು)

ಬ್ಯಾಟರಿ ಸೆಲ್ಸ್‌(ಕೋಶಗಳು)

ಬ್ಯಾಟರಿಯ ಎಲ್ಲಾ ವಸ್ತುಗಳನ್ನು ಬದಲಿಸದೇ, ನಿಮ್ಮ ಲ್ಯಾಪ್‌ಟಾಪ್‌ ಬ್ಯಾಟರಿಯನ್ನು ನೀವೇ ಉತ್ತಮವಾಗಿ ಕಡಿಮೆ ಬೆಲೆಯಲ್ಲಿ ಹೊಂದಬಹುದಾಗಿದೆ. ಲ್ಯಾಪ್‌ಟಾಪ್‌ ಬ್ಯಾಟರಿಯನ್ನು ಸ್ಕಾಲ್‌ಪೆಲ್‌ ಸಹಾಯದಿಂದ ಓಪನ್‌ ಮಾಡಿ ಸ್ಯಾಮ್‌ಸಂಗ್‌ನ 18650 li-ion ಬ್ಯಾಟರಿಯನ್ನು ಬದಲಿಸಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
7 Laptop Battery Secrets That You Never Knew Before. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot