ವಿಶೇಷ ಗುಣಗಳಿರುವ 8 ವಿವಿಧ ವಿನ್ಯಾಸದ ಮೌಸ್‌ಗಳು

Posted By:

ತಂತ್ರ ಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿದೆ. ವೈಫೈ ಬದಲಿಗೆ ಲಿ ಫೈ ಬರುತ್ತಂತೆ. ಇನ್ನೂ ರಿಮೋಟ್‌ ಮೂಲಕ ನಿಯಂತ್ರಿಸಬಹುದಾದ ರೈಫಲ್‌‌ ಬರಲಿದೆಯಂತೆ. ರಾಕೆಟ್‌ನ್ನು ಉಡಾವಣೆ ಮಾಡಿದ್ದರೂ ಪುನಃ ಇಳಿಸಬಹುದಂತೆ. ಒಟ್ಟಿನಲ್ಲಿ ಈಗಾಗಲೇ ಈ ಎಲ್ಲಾ ತಂತ್ರಜ್ಞಾನಗಳು ಪ್ರಯೋಗದಲ್ಲಿ ಯಶಸ್ವಿಯಾಗಿದೆ.

ದೊಡ್ಡ ದೊಡ್ಡ ಸಂಶೋಧನೆಗಳು ನಡೆಯುತ್ತಿದ್ದರೂ ಇನ್ನೊಂದು ಕಡೆ ಸಣ್ಣ ಸಣ್ಣ ಸಾಧನಗಳ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಅದರಲ್ಲೂ ಮೌಸ್‌ನ ಬಗ್ಗೆ ವಿವಿಧ ಕಂಪೆನಿಗಳು ಸಂಶೋಧನೆ ನಡೆಸಿ ಹೊಸ ರೀತಿಯ ವಿನ್ಯಾಸದ ಮೌಸ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಹೇಗಿದೆ ಈ ಮೌಸ್‌ಗಳು? ಈ ಮೌಸ್‌ಗಳ ವಿಶೇಷತೆ ಏನು? ತಿಳಿದುಕೊಳ್ಳಲು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ವಿವಿಧ ವಿನ್ಯಾಸದ ಮೌಸ್‌‌ಗಳು


ಬೆಲಿಕಿನ್‌ ಕಂಪೆನಿ ಈ ಮೌಸ್‌ನ್ನು ತಯಾರಿಸಿದ್ದು,ನೀರಿನಲ್ಲಿ ಸೋಪು ಹಾಕಿ ತೊಳೆಯುವ ಮೂಲಕ ಮೌಸ್‌ನಲ್ಲಿದ್ದ ದೂಳು,ಕೊಳೆಗಳನ್ನು ಕ್ಲೀನ್ ಮಾಡಬಹುದು.

 ಉಂಗುರ ಮೌಸ್‌:

ವಿವಿಧ ವಿನ್ಯಾಸದ ಮೌಸ್‌‌ಗಳು


ನಮ್ಮ ಕೈ ಬೆರಳುಗಳಿಗೆ ಉಂಗುರಗಳನ್ನು ಹೇಗೆ ಧರಿಸುತ್ತೇವೋ ಅದೇ ರೀತಿಯಾಗಿ ಇಲ್ಲಿ ನಾವು ಈ ಮೌಸ್‌ನ್ನು ಧರಿಸಿ ಕೆಲಸ ಮಾಡಬಹುದು.ಇಂದು ನಾವು ಬಳಸುವ ಮೌಸ್‌ನಲ್ಲಿ ಹೇಗೆ ಬಲ, ಎಡ ಬಟನ್‌ ಮತ್ತು ಸ್ಕ್ರೋಲ್‌ ಮಾಡುತ್ತೇವೋ ಅದೇ ರೀತಿಯಾಗಿ ಈ ಬ್ಲೂಟೂತ್‌ ಮೌಸ್‌ನ್ನು ಬಳಸಬಹುದು.Mycestro ಕಂಪೆನಿ ಈ ಉಂಗುರ ಮೌಸ್‌‌ನ್ನು ಅಭಿವೃದ್ಧಿ ಪಡಿಸಿದ್ದಾರೆ.

 ಬ್ಯಾಟ್‌ ಮೌಸ್‌:

ವಿವಿಧ ವಿನ್ಯಾಸದ ಮೌಸ್‌‌ಗಳು


ಈ ಮೌಸ್‌ ಕೆಲಸ ಮಾಡುವ ಸಮಯದಲ್ಲಿ ಸಣ್ಣಗೆ ವೈಬ್ರೆಷನ್‌ ಆಗುವಂತೆ ವಿನ್ಯಾಸ ಮಾಡಲಾಗಿದೆ. ಕೈ ಮಣಿಕಟ್ಟಿಗೆ ನರ ರೋಗ ಬಾಧಿಸದಿರಲು ಈ ಮೌಸ್‌ನ್ನು ಬ್ಯಾಟ್‌ ಕಂಪೆನಿ ಅಭಿವೃದ್ಧಿ ಪಡಿಸಿದೆ.

 ಸ್ಪೀಡ್‌ ಮೌಸ್‌:

ವಿವಿಧ ವಿನ್ಯಾಸದ ಮೌಸ್‌‌ಗಳು


ಕಾರಿನ ವಿನ್ಯಾಸ ಮೌಸ್‌ ಬೇಕು ಎಂದು ಯೋಚಿಸಿದ್ದವರಿಗೆ Megalan ಕಂಪೆನಿ ಕಾರಿನ ವಿನ್ಯಾಸದ ಮೌಸ್‌ನ್ನು ತಯಾರಿಸಿದೆ.

ಎಲ್ಕಾನ್‌ ಮೊಟ್ಟೆ ಮೌಸ್‌:

ವಿವಿಧ ವಿನ್ಯಾಸದ ಮೌಸ್‌‌ಗಳು


ಕೈಯಲ್ಲಿ ಮೌಸ್‌ನ್ನು ಹಿಡಿದು ಸುಲಭವಾಗಿ ಕೆಲಸ ಮಾಡಲು ಎಲ್ಕಾನ್‌ ಕಂಪೆನಿ ಮೊಟ್ಟೆಯ ರೀತಿಯ ಮೌಸ್‌ನ್ನು ವಿನ್ಯಾಸ ಮಾಡಿದೆ.

 ಮೈಕ್ರೋಸಾಫ್ಟ್‌‌‌ ಕಮಾನು ಮೌಸ್‌:

ವಿವಿಧ ವಿನ್ಯಾಸದ ಮೌಸ್‌‌ಗಳು


ಮೈಕ್ರೋಸಾಫ್ಟ್‌ ಈ ಈ ಮೌಸ್‌ನ್ನು ತಯಾರಿಸಿದ್ದು ಕಮಾನು ರೀತಿಯಲ್ಲಿ ವಿನ್ಯಾಸ ಮಾಡಿದೆ.

 ಮರದ ಮೌಸ್‌:

ವಿವಿಧ ವಿನ್ಯಾಸದ ಮೌಸ್‌‌ಗಳು


ಇ-ವೇಸ್ಟ್‌ ಕಡಿಮೆ ಮಾಡಲು ಅಭಿವೃದ್ಧಿ ಪಡಿಸಿರುವ ಮೌಸ್‌‌. ಈ ಮೌಸ್‌ನಲ್ಲಿ ಜೀವನಪರ್ಯಂತ ಕೆಲಸ ಮಾಡಿದ್ದರೂ ಏನು ಆಗುದಿಲ್ವಂತೆ

 ಗುಡ್‌ಮೂಡ್‌ ಮೌಸ್‌‌

ವಿವಿಧ ವಿನ್ಯಾಸದ ಮೌಸ್‌‌ಗಳು


ಈ ಮೌಸ್‌ನಲ್ಲಿ ನಿರಂತರ ಒಂದು ಗಂಟೆಗಳ ಕಾಲ ಕೆಲಸ ಮಾಡಿದ್ದಲ್ಲಿ ಮೌಸ್‌ ಅಟೋಮ್ಯಾಟಿಕ್‌ ಆಗಿ ವೈಬ್ರೆಟ್‌ ಆಗಿ ಸ್ವಲ್ಪ ವಿರಾಮ ತೆಗೆದುಕೊಳ್ಳಿ ಎಂದು ಸಿಗ್ನಲ್‌‌ ಕಳುಹಿಸುವ ಮೂಲಕ ಬಳಕೆದಾರರನ್ನು ಎಚ್ಚರಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot