Subscribe to Gizbot

ವೈಫೈ ಬದಲಿಗೆ ಲಿಫೈ. ಚೀನಾ ಸಂಶೋಧನೆ

Posted By:

ಚೀನಾದ ಸಂಶೋಧಕರು ವೈಫೈ ಬದಲಿಗೆ ಇಂಟರ್‌ನೆಟ್‌ನ್ನು ಕಡಿಮೆ ದರದಲ್ಲಿ ಪಡೆಯುವ ಲಿಫೈ(Li-Fi)ಸಂಶೋಧನೆಯಲ್ಲಿ ಯಶಸ್ವಿಯಾಗಿದ್ದಾರೆ. ಇಂಟರ್‌ನೆಟ್‌ ಸಿಗ್ನಲ್‌ಗಳನ್ನು ರೇಡಿಯೋ ಫ್ರಿಕ್ವೆನ್ಸಿ ಬದಲಾಗಿ ಲೈಟ್‌ ಬಲ್ಬ್‌ಗಳಲ್ಲಿ ಕಳುಹಿಸಬಹುದು ಎಂಬುದನ್ನು ಸಾಧಿಸಿದ್ದಾರೆ.

ಒಂದು ವ್ಯಾಟ್‌‌ನ ಎಲ್‌ಇಡಿ ಬಲ್ಬ್‌ ಮೂಲಕ ನಾಲ್ಕು ಕಂಪ್ಯೂಟರ್‌‌ಗಳಿಗೆ ಲಿಫೈ ಇಂಟರ್‌ನೆಟ್‌ ಸಿಗ್ನಲ್‌ ಕಳುಹಿಸಬಹುದು ಎಂದು ಶಾಂಘಾಯ್ ನ Fudan ವಿಶ್ವವಿದ್ಯಾಲಯ ಪ್ರಾಧ್ಯಾಪಕ Chi Nan ಹೇಳಿದ್ದಾರೆ.

ಈ ಲಿಫೈ ಸಂಪರ್ಕ‌ದಲ್ಲಿ ಎಲ್‌ಇಡಿ ಬಲ್ಬ್‌ನೊಳಗಡೆ ಮೈಕ್ರೋಚಿಪ್‌‌ಗಳಿದ್ದು ಒಂದು ಸೆಕೆಂಡ್‌ನೊಳಗಡೆ 150 ಮೆಗಾಬೈಟ್ಸ್‌ ವೇಗದಲ್ಲಿ ದತ್ತಾಂಶಗಳನ್ನು ಕಳುಹಿಸುವ ಸಾಮರ್ಥ್ಯ ಈ ಎಲ್‌ಇಡಿ ಬಲ್ಬ್‌ಗಳಿಗೆ ಇದೆ. ಈ ಲಿಫೈ ಸಂಶೋಧಕರ ತಂಡ ಈಗಾಗಲೇ 10 ಲಿಫೈ ಕಿಟ್‌ಗಳನ್ನು ಅಭಿವೃದ್ಧಿ ಪಡಿಸಿದ್ದು ನವೆಂಬರ್‌ 5 ರಂದು ಶಾಂಘಾಯ್‌ನಲ್ಲಿ ನಡೆಯಲಿರುವ ಚೀನಾ ಅಂತರರಾಷ್ಟ್ರೀಯ ಕೈಗಾರಿಕಾ ಉತ್ಸವದಲ್ಲಿ ಪ್ರದರ್ಶ‌ನ ಮಾಡಲಿದ್ದಾರೆ.

ಸದ್ಯದ ವೈಫೈ ಸಿಗ್ನಲ್‌ ದುಬಾರಿಯಾಗಿದ್ದು ಲಿಫೈನಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ವೇಗದ ಇಂಟರ್‌ನೆಟ್‌ ಸಿಗ್ನಲ್‌ ಪಡೆಯಬಹುದು.ಮುಂದಿನ ದಿನದಲ್ಲಿ ಈ ಸಂಶೋಧನೆ ಇಂಟರ್‌ನೆಟ್‌ ಸೇವೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಿದೆ ಎಂದು Chi Nan ಹೇಳಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ ಗೊತ್ತಾ?

ಇದನ್ನೂ ಓದಿ: ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವೈಫೈ ಬದಲಿಗೆ ಲಿಫೈ. ಚೀನಾ ಸಂಶೋಧನೆ

ವೈಫೈ ಬದಲಿಗೆ ಲಿಫೈ. ಚೀನಾ ಸಂಶೋಧನೆ

ವೈಫೈ ಬದಲಿಗೆ ಲಿಫೈ

 ವೈಫೈ ಬದಲಿಗೆ ಲಿಫೈ. ಚೀನಾ ಸಂಶೋಧನೆ

ವೈಫೈ ಬದಲಿಗೆ ಲಿಫೈ. ಚೀನಾ ಸಂಶೋಧನೆ

ವೈಫೈ ಬದಲಿಗೆ ಲಿಫೈ

ವೈಫೈ ಬದಲಿಗೆ ಲಿಫೈ. ಚೀನಾ ಸಂಶೋಧನೆ

ವೈಫೈ ಬದಲಿಗೆ ಲಿಫೈ

ವೈಫೈ ಬದಲಿಗೆ ಲಿಫೈ. ಚೀನಾ ಸಂಶೋಧನೆ


ಇಂಗ್ಲೆಂಡ್‌‌ನ ಎಡಿನ್‌ ಬರ್ಗ್‌ ವಿಶ್ವವಿದ್ಯಾಲಯದ ಹರಾಲ್ಡ್ ಹಾಸ್(Harald Haas) ಪ್ರಪ್ರಥಮ ಬಾರಿಗೆ 2011ರಲ್ಲಿ ಎಲ್‌ಇಡಿ ಬಲ್ಬ್‌ ಮೂಲಕ ಇಂಟರ್‌ನೆಟ್‌ ಸಿಗ್ನಲ್‌ಗಳನ್ನು ಕಳುಹಿಸಬಹುದು ಎಂದು ಸಂಶೋಧಿಸಿದ್ದರು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot