Subscribe to Gizbot

ಡಿಜಿಫ್ಲಿಪ್ ಪ್ರೊ XT712 ಟ್ಯಾಬ್ಲೆಟ್ ಕಡಿಮೆ ಬೆಲೆಯ ಉತ್ತಮ ಡಿವೈಸ್

Posted By:

ತಮ್ಮ ಲಾಂಚಿಂಗ್‌ನಿಂದೀಚೆಗೆ, ಟ್ಯಾಬ್ಲೆಟ್ ಕಂಪ್ಯೂಟರ್‌ಗಳು ತಮ್ಮ ಸ್ವಭಾವದಲ್ಲಿ ಹೆಚ್ಚು ಉತ್ಪನ್ನಕಾರಿಯಾಗಿವೆ. ಅದರಲ್ಲೂ ಭಾರತದಲ್ಲಿ ಟ್ಯಾಬ್ಲೆಟ್ ಮಾಲೀಕತ್ವ ಒಂದು ಮೈಲಿಗಲ್ಲಿನಂತಾಗಿಬಿಟ್ಟಿದೆ. ದೇಶದಲ್ಲೂ ಹಲವಾರು ಟ್ಯಾಬ್ಲೆಟ್ ಮಾರಾಟಗಾರರು ಹೆಚ್ಚಿನ ಸಂಖ್ಯೆಯ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದರೂ, ನಿಮ್ಮ ಮುಂದಿನ ಟ್ಯಾಬ್ಲೆಟ್ ಅನ್ನು ರೀಟೈಲರ್‌ನಿಂದ ಖರೀದಿ ಮಾಡುವ ಬಯಕೆಯನ್ನು ನೀವು ಹೊಂದಿರುವಿರಾ?

ಭಾರತದ ಅತಿ ಪ್ರಖ್ಯಾತ ಆನ್‌ಲೈನ್ ರೀಟೈಲರ್ ಫ್ಲಿಪ್‌ಕಾರ್ಟ್ ತನ್ನ ಖಾಸಗಿ ಬ್ರ್ಯಾಂಡ್ ಆದ ಡಿಜಿಫ್ಲಿಪ್‌ಗೆ ಹೊಸ ಉತ್ಪನ್ನವನ್ನು ಸೇರಿಸಿಕೊಂಡಿದೆ. ಇದೊಂದು ಟ್ಯಾಬ್ಲೆಟ್ ಕಂಪ್ಯೂಟರ್ ಆಗಿದ್ದು, ಡಿಜಿಫ್ಲಿಪ್ ಪ್ರೊ XT712 ಇಂದಿನಿಂದ ಫ್ಲಿಪ್‌ಕಾರ್ಟ್. ಕಾಮ್‌ನಲ್ಲಿ ಲಭ್ಯವಾಗುತ್ತಿದೆ. ಇದರ ಬೆಲೆ ರೂ 9,999 ಆಗಿದ್ದು ಆಂಡ್ರಾಯ್ಡ್ ಪವರ್ ಉಳ್ಳ ಟ್ಯಾಬ್ಲೆಟ್ ಇದಾಗಿದೆ.

ಈ ಟ್ಯಾಬ್ಲೆಟ್ ಕುರಿತಾದ ಇನ್ನಷ್ಟು ಆಕರ್ಷಕ ಮಾಹಿತಿಗಳನ್ನು ಪಡೆದುಕೊಳ್ಳಲು ಕೆಳಗಿನ ಸ್ಲೈಡ್‌ಗಳತ್ತ ನಿಮ್ಮ ಗಮನ ಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಜಿಫ್ಲಿಪ್ ಪ್ರೊ XT712: ಡಿಸ್‌ಪ್ಲೇ ಮತ್ತು ಇತರ ಮಾಹಿತಿಗಳು

#1

ಇದೊಂದು 7 ಇಂಚಿನ ಟ್ಯಾಬ್ಲೆಟ್ ಡಿವೈಸ್ ಆಗಿದ್ದು ಕೆಲವೊಂದು ಗಂಭೀರ ಕೆಲಸಗಳಿಗಾಗಿ ಇದನ್ನು ನಿರ್ಮಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಕಡಿಮೆ ಬೆಲೆಯ ಟ್ಯಾಬ್ಲೆಟ್‌ಗಳಿಗೆ ಹೋಲಿಸಿದಾಗ ಡಿಜಿಫ್ಲಿಪ್ ಪ್ರೊ XT712 ಒಂದು ಉತ್ತಮವಾದ ಟ್ಯಾಬ್ಲೆಟ್ ಆಗಿದೆ. ಇದು 9.2 ಎಮ್‌ಎಮ್ ದಪ್ಪವನ್ನು ಹೊಂದಿದ್ದು ತೂಕ 300 ಗ್ರಾಮ್‌ಗಳಿಗಿಂತ ಕಡಿಮೆ ಇದೆ.

ಡಿಜಿಫ್ಲಿಪ್ ಪ್ರೊ XT712: ಕ್ಯಾಮೆರಾ ಗುಣಮಟ್ಟ

#2

ಇದು 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು 7 ಇಂಚಿನ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ. ಎಂದಿನಂತೆ ಇದರಲ್ಲಿ ಯಾವುದೇ ಹಾರ್ಡ್‌ವೇರ್ ಬಟನ್‌ಗಳಿಲ್ಲ. ಇದರ ಎಡಭಾಗದಲ್ಲಿ, ಪವರ್ ಬಟನ್ ಅನ್ನು ನಿಮಗೆ ಕಾಣಬಹುದಾಗಿದೆ. ಜೊತೆಗೆ ವಾಲ್ಯೂಮ್ ರಾಕರ್ ಬಟನ್ ಕೂಡ ಇದೆ. ಇದರ ಕೆಳಭಾಗದಲ್ಲಿರುವ ಮೈಕ್ರೋ ಯುಎಸ್‌ಬಿ ಪೋರ್ಟ್ ಅನ್ನು ಚಾರ್ಜಿಂಗ್‌ಗಾಗಿ ಬಳಸಲಾಗುತ್ತದೆ. ಇದು ಹಿಂಭಾಗದಲ್ಲಿ 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾದೊಂದಿಗೆ ಬಂದಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ.

ಡಿಜಿಫ್ಲಿಪ್ ಪ್ರೊ XT712: ವೈಶಿಷ್ಟ್ಯ

#3

ಈ ಟ್ಯಾಬ್ಲೆಟ್ ಹಿಂಭಾಗದಲ್ಲಿ ಡಿಜಿಫ್ಲಿಪ್ ಲೋಗೋವನ್ನು ಹೊಂದಿದ್ದು, ಡ್ಯುಯೆಲ್ ಸಿಮ್ ಮತ್ತು ವಿಸ್ತರಿಸಬಹುದಾದ ಮೈಕ್ರೋಸಿಮ್ ಸ್ಲಾಟ್‌ನೊಂದಿಗೆ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ನಿಮಗೆ ಇದರ ಹಿಂಭಾಗ ಕವರ್ ಅನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಇದರ ಬ್ಯಾಟರಿ ಸಾಮರ್ಥ್ಯ 3000mAh ಆಗಿದೆ.

ಡಿಜಿಫ್ಲಿಪ್ ಪ್ರೊ XT712: ಕೊನೆಯ ಮಾತು

#4

ಈ ಟ್ಯಾಬ್ಲೆಟ್ 7 ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು ಇತ್ತೀಚೆಗೆ ಲಾಂಚ್ ಆಗಿರುವ ಏಸಸ್ ಫೋನ್‌ಪ್ಯಾಡ್ 7 ಡ್ಯುಯೆಲ್‌ಗಿಂತ ಉತ್ತಮವಾಗಿದೆ. ಇದರಲ್ಲಿ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಚಾಲನೆಯಾಗುತ್ತಿದ್ದು ಫ್ಲಿಪ್‌ಕಾರ್ಟ್ ತನ್ನ ಶಾಪಿಂಗ್ ಅಪ್ಲಿಕೇಶನ್ ಅನ್ನು ಡಿವೈಸ್‌ನಲ್ಲಿ ಈಗಾಗಲೇ ಸೇರಿಸಿದೆ. ಆದರೆ ಅಮೆಝಾನ್ ಕಿಂಡಲ್ ಫೈರ್ ಟ್ಯಾಬ್ಲೆಟ್‌ನಂತೆ ಇದರಲ್ಲೂ ನಾವು ವಿಶೇಷವಾದುದನ್ನು ನಿರೀಕ್ಷಿಸಿದ್ದೆವು.

#5

ಡಿಜಿಫ್ಲಿಪ್ ಪ್ರೊ XT712 ಕುರಿತು ಇನ್ನಷ್ಟು ಮಾಹಿತಿ ಈ ವೀಡಿಯೋದಲ್ಲಿ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot