ಗೂಗಲ್‌ಗೂ ಬಿಟ್ಟಿಲ್ಲ ದುರಾದೃಷ್ಟ..! ಗೂಗಲ್‌ನ ಅತಿದೊಡ್ಡ ವಿಫಲತೆಗಳು ಯಾವುವು ಗೊತ್ತಾ..?

|

ಇತ್ತೀಚೆಗೆ ತಾನೇ ಗೂಗಲ್‌ ತನ್ನ ಸೋಷಿಯಲ್ ಮೀಡಿಯಾ ವೇದಿಕೆ ಗೂಗಲ್‌ ಪ್ಲಸ್‌ನ್ನು ಭದ್ರತಾ ಕಾರಣಗಳಿಂದ ಸ್ಥಗಿತಗೊಳಿಸುತ್ತೇವೆ ಎಂದು ಹೇಳಿದೆ. ಆದರೆ, ಗೂಗಲ್‌ ವಿಫಲವಾಗುತ್ತಿರುವುದು ಇದೇ ಮೊದಲಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಆನ್‌ಲೈನ್‌ ಯುಗದಲ್ಲಿ ಎಲ್ಲರೂ ಗೂಗಲ್‌ನ್ನು ಅವಲಂಭಿಸಿರುವುದು ಗೊತ್ತೆ ಇರುವ ವಿಷಯ. ಗೂಗಲ್ ಏನೇ ಮುಟ್ಟಿದರೂ ಚಿನ್ನ ಆಗುತ್ತೆ ಎಂದು ಎಲ್ಲರೂ ಅಂದುಕೊಂಡಿರುವುದು ಸತ್ಯವಲ್ಲ.

ಗೂಗಲ್‌ಗೂ ಬಿಟ್ಟಿಲ್ಲ ದುರಾದೃಷ್ಟ..! ಗೂಗಲ್‌ನ ಅತಿದೊಡ್ಡ ವಿಫಲತೆಗಳು..!

ಹೌದು, ಗೂಗಲ್‌ಗೂ ಅನೇಕ ಸಲ ಅದೃಷ್ಟ ಕೈ ಹಿಡಿದಿಲ್ಲ. ಎಲ್ಲಾ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲೂ ಸರ್ಚ್‌ ಇಂಜಿನ್‌, ಬ್ರೌಸರ್, ಮ್ಯಾಪ್ಸ್‌, ಒಎಸ್‌ ಹೀಗೆ ಎಲ್ಲಾ ಕಡೆಯಿಂದಲೂ ಗೂಗಲ್ ಸ್ಥಾನ ಪಡೆದುಕೊಂಡಿದೆ. ಆದರೂ, ಸರ್ಚ್ ಇಂಜಿನ್‌ ದೈತ್ಯ ಗೂಗಲ್‌ ಆರಂಭಿಸಿದ ಅನೇಕ ಉತ್ತಮ ಉತ್ಪನ್ನ ಹಾಗೂ ಸೇವೆಗಳು ಜನರನ್ನು ಸರಿಯಾಗಿ ತಲುಪದೆ ಸ್ಥಗಿತಗೊಂಡಿವೆ. ಆಗಿದ್ರೇ ಗೂಗಲ್‌ ಅನುಭವಿಸಿದ ಪ್ರಮುಖ ವಿಫಲತೆಗಳು ಯಾವುವು..? ಗೂಗಲ್‌ನ ಯಾವ ಸೇವೆ ಜನರನ್ನು ಸರಿಯಾಗಿ ತಲುಪಿಲ್ಲ..? ಎಂಬುದನ್ನು ಮುಂದೆ ನೋಡಿ.

ಗೂಗಲ್‌ ಪ್ಲಸ್‌

ಗೂಗಲ್‌ ಪ್ಲಸ್‌

ಗೂಗಲ್ 2011ರಲ್ಲಿ ಗೂಗಲ್ ಪ್ಲಸ್ ಎಂಬ ಸಾಮಾಜಿಕ ಜಾಲತಾಣವನ್ನು ಬಿಡುಗಡೆ ಮಾಡುತ್ತದೆ. ಆದರೆ, ಫೇಸ್‌ಬುಕ್‌ ಎದುರು ಗೂಗಲ್ ಪ್ಲಸ್‌ ಮಂಕಾಗಿರುವುದು ಎಲ್ಲರಿಗೂ ಗೊತ್ತಿದೆ. ಭದ್ರತಾ ಕಾರಣಗಳಿಂದ ಗೂಗಲ್‌ ಪ್ಲಸ್‌ ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಗೂಗಲ್ ಇತ್ತೀಚೆಗೆ ಹೇಳಿದೆ.

iGoogle

iGoogle

ಹೋಮ್‌ಪೇಜ್‌ನ್ನು ವಿಡ್ಜೆಟ್‌ಗಳಿಂದ ಬಳಕೆದಾರರು ತಮ್ಮ ಇಷ್ಟಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾದ ಆಯ್ಕೆಯನ್ನು ನೀಡಿದ್ದ iGoogle ಸೇವೆ 2005ರಲ್ಲಿ ಪ್ರಾರಂಭವಾಗಿತ್ತು. ಆದರೆ, 2013ರಲ್ಲಿ ಈ ಉತ್ತಮ ಸೇವೆಯನ್ನು ಗೂಗಲ್‌ ನಿಲ್ಲಿಸಿತು.

ಡಾಡ್ಜ್‌ಬಾಲ್‌

ಡಾಡ್ಜ್‌ಬಾಲ್‌

ಬಳಕೆದಾರರು ಸ್ಥಳಗಳಲ್ಲಿ ಚೆಕ್‌ಇನ್‌ ಆಗುವ ಸೇವೆಯಾದ ಡಾಡ್ಜ್‌ಬಾಲ್‌ನ್ನು ಗೂಗಲ್‌ 2005ರಲ್ಲಿ ಖರೀದಿಸಿತ್ತು. ಆದರೆ, 2007ರಲ್ಲಿ ಗೂಗಲ್‌ನ ನಿಯಮಗಳಿಂದ ಬೇಸರವಾಗಿ ಡಾಡ್ಜ್‌ಬಾಲ್‌ನ ಸಂಸ್ಥಾಪಕ ಡೆನ್ನಿಸ್‌ ಕ್ರೌಲಿ ಹೊರಬಂದು ಎರಡು ವರ್ಷಗಳ ನಂತರ ಫೋರ್‌ಸ್ಕ್ವೇರ್ ಎಂಬ ಡಾಡ್ಜ್‌ಬಾಲ್‌ ತರಹದ ಸೇವೆಯನ್ನು ಸ್ಥಾಪಿಸಿದ.

ಗೂಗಲ್‌ ಹ್ಯಾಂಗ್‌ಔಟ್ಸ್‌ ಆನ್‌ ಏರ್‌

ಗೂಗಲ್‌ ಹ್ಯಾಂಗ್‌ಔಟ್ಸ್‌ ಆನ್‌ ಏರ್‌

ಗೂಗಲ್‌ನ ಲೈವ್‌ ಸ್ಟ್ರೀಮಿಂಗ್ ಸೇವೆಯಾಗಿದ್ದ ಗೂಗಲ್‌ ಹ್ಯಾಂಗ್‌ಔಟ್ಸ್‌ ಆನ್‌ ಏರ್‌ ಎಂಬ ಸೇವೆಯನ್ನು 2016ರ ಸೆಪ್ಟೆಂಬರ್‌ನಲ್ಲಿ ಯೂಟ್ಯೂಬ್‌ ಲೈವ್‌ ಜತೆ ಸಮ್ಮಿಲನಗೊಳಿಸಲಾಯಿತು. ಇದನ್ನು 2012ರಲ್ಲಿ ಪ್ರಾರಂಭಿಸಲಾಯಿತು. ಆಗಿನ ಅಮೇರಿಕಾ ಅಧ್ಯಕ್ಷ ಬರಾಕ್‌ ಒಬಾಮಾ ಮತ್ತು ಪೋಪ್‌ ಪ್ರಾನ್ಸಿಸ್‌ ಈ ಸೇವೆಯನ್ನು ಬಳಸಿದದ ನಂತರ ಲೈವ್‌ ಸ್ಟ್ರೀಮಿಂಗ್‌ ಬಳಕೆ ಹೆಚ್ಚಾಯಿತು.

ಗೂಗಲ್‌ ಕ್ಯಾಟಲಾಗ್ಸ್‌

ಗೂಗಲ್‌ ಕ್ಯಾಟಲಾಗ್ಸ್‌

ಗೂಗಲ್‌ ಕ್ಯಾಟಲಾಗ್ಸ್‌ ಎಂಬುದು ಡಿಜಿಟಲೀಕರಣವಾದ ಕ್ಯಾಟಲಾಗ್‌ ಹೊಂದಿದ ಶಾಪಿಂಗ್‌ ಸೇವೆಯನ್ನು ನೀಡುತ್ತಿದ್ದ ತಾಣವಾಗಿತ್ತು. ಆದರೆ, ಗೂಗಲ್ ಕ್ಯಾಟಲಾಗ್ ಸೇವೆ 2015ರಲ್ಲಿ ಸ್ಥಗಿತಗೊಂಡಿತು. 2013ರಲ್ಲಿ ಮೊಬೈಲ್‌ ಆವೃತ್ತಿಯನ್ನು ನಿಲ್ಲಿಸಿದ್ದ ಗೂಗಲ್‌ ಎರಡು ವರ್ಷಗಳ ನಂತರ ಡೆಸ್ಕ್‌ಟಾಪ್‌ ಆವೃತ್ತಿಯನ್ನು ಕೂಡ ನಿಲ್ಲಿಸಿತು.

ಗೂಗಲ್‌ ರೀಡರ್‌

ಗೂಗಲ್‌ ರೀಡರ್‌

ಗೂಗಲ್‌ ರೀಡರ್‌ ಒಂದು ನ್ಯೂಸ್‌ ರೀಡಿಂಗ್‌ ಆಪ್‌ ಆಗಿತ್ತು. ಬಳಕೆದಾರರು ತಮ್ಮ ನೆಚ್ಚಿನ ಬ್ಲಾಗ್‌ ಮತ್ತು ನ್ಯೂಸ್‌ ಸೈಟ್‌ಗಳಿಂದ ಆಯ್ದ ಬರಹ ಅಥವಾ ಸುದ್ದಿಗಳನ್ನು ಇಲ್ಲಿ ಓದಬಹುದಿತ್ತು. ಮಾರ್ಚ್‌ 2013ರಲ್ಲಿ ಗೂಗಲ್‌ ರೀಡರ್‌ ಸೇವೆಯನ್ನು ನಿಲ್ಲಿಸಲಾಗುತ್ತಿದೆ ಎಂದು ಗೂಗಲ್ ಘೋಷಿಸಿತು. 2013ರ ಜುಲೈನಲ್ಲಿ ಅಧಿಕೃತವಾಗಿ ಗೂಗಲ್ ರೀಡರ್ ಸ್ಥಗಿತಗೊಂಡಿತು.

ಗೂಗಲ್ ಹೆಲ್ತ್‌

ಗೂಗಲ್ ಹೆಲ್ತ್‌

ಜನರಿಗೆ ಆರೋಗ್ಯ ಮತ್ತು ಸ್ವಾಸ್ಥ್ಯದ ಕುರಿತು ಮಾಹಿತಿಯನ್ನು ನೀಡಲು ಗೂಗಲ್‌ ಹೆಲ್ತ್‌ ಎಂಬ ಸೇವೆಯನ್ನು ಆರಂಭಿಸಿತ್ತು. ಆದರೆ, ನಿರೀಕ್ಷಿತ ಮಟ್ಟದ ಪ್ರಭಾವ ಬೀರದೆ ಗೂಗಲ್‌ ಹೆಲ್ತ್‌ ಜನೇವರಿ 2012ರಲ್ಲಿ ಸ್ಥಗಿತಗೊಂಡಿತು.

ಗೂಗಲ್ ವಿಡಿಯೋ

ಗೂಗಲ್ ವಿಡಿಯೋ

ಗೂಗಲ್ ಒಡೆತನದ ವಿಡಿಯೋ ಸ್ಟ್ರೀಮಿಂಗ್‌ ಸೇವೆಯಾಗಿದ್ದ ಗೂಗಲ್‌ ವಿಡಿಯೋ 2012ರ ಆಗಸ್ಟ್‌ನಲ್ಲಿ ಸ್ಥಗಿತಗೊಂಡಿತು. ಈ ಸೇವೆಯನ್ನು ಯೂಟ್ಯೂಬ್‌ನ್ನು 2006ರಲ್ಲಿ ಖರೀದಿಸುವ ಮುಂಚೆ ಗೂಗಲ್‌ ಸ್ಥಾಪಿಸಿತ್ತು. 2009ರಲ್ಲಿ ಗೂಗಲ್‌ ವಿಡಿಯೋದಲ್ಲಿ ಹೊಸ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುವುದನ್ನು ನಿಲ್ಲಿಸಲಾಯಿತು. 2012ರವರೆಗೂ ಯೂಟ್ಯೂಬ್‌ ಜತೆಗಿದ್ದ ಗೂಗಲ್‌ ವಿಡಿಯೋ 2012ರಲ್ಲಿ ಸಂಪೂರ್ಣವಾಗಿ ಕಣ್ಮರೆಯಾಯಿತು.
ಗೂಗಲ್ ಒಡೆತನದ ವಿಡಿಯೋ ಸ್ಟ್ರೀಮಿಂಗ್‌ ಸೇವೆಯಾಗಿದ್ದ ಗೂಗಲ್‌ ವಿಡಿಯೋ 2012ರ ಆಗಸ್ಟ್‌ನಲ್ಲಿ ಸ್ಥಗಿತಗೊಂಡಿತು. ಈ ಸೇವೆಯನ್ನು ಯೂಟ್ಯೂಬ್‌ನ್ನು 2006ರಲ್ಲಿ ಖರೀದಿಸುವ ಮುಂಚೆ ಗೂಗಲ್‌ ಸ್ಥಾಪಿಸಿತ್ತು. 2009ರಲ್ಲಿ ಗೂಗಲ್‌ ವಿಡಿಯೋದಲ್ಲಿ ಹೊಸ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುವುದನ್ನು ನಿಲ್ಲಿಸಲಾಯಿತು. 2012ರವರೆಗೂ ಯೂಟ್ಯೂಬ್‌ ಜತೆಗಿದ್ದ ಗೂಗಲ್‌ ವಿಡಿಯೋ 2012ರಲ್ಲಿ ಸಂಪೂರ್ಣವಾಗಿ ಕಣ್ಮರೆಯಾಯಿತು.

ಗೂಗಲ್‌ ವೇವ್‌

ಗೂಗಲ್‌ ವೇವ್‌

ಜನರು ಒಬ್ಬರಿಗೊಬ್ಬರೂ ಮೆಸೇಜ್‌ ಮಾಡಿಕೊಂಡು ಡಾಕ್ಯುಮೆಂಟ್‌ಗಳನ್ನೂ ಆನ್‌ಲೈನ್‌ನಲ್ಲಿ ಸೇರಿಕೊಂಡು ಎಡಿಟ್‌ ಮಾಡುವ ಅವಕಾಶ ನೀಡಿದ್ದ ಗೂಗಲ್ ವೇವ್‌ ಬಳಕೆದಾರರಿಗೆ ಗೊಂದಲ ಸೃಷ್ಟಿಸಿದ್ದರಿಂದ ವೇಗವಾಗಿ ವಿಫಲತೆಯನ್ನು ಕಂಡಿತು. ಆಗಸ್ಟ್‌ 2010ರಲ್ಲಿ ಗೂಗಲ್ ವೇವ್‌ ಸೇವೆ ಸಂಪೂರ್ಣವಾಗಿ ನಿಂತಿತು.

ಗೂಗಲ್‌ ಗ್ಲಾಸ್‌

ಗೂಗಲ್‌ ಗ್ಲಾಸ್‌

2012ರಲ್ಲಿ ಗೂಗಲ್‌ ತನ್ನ ಗೂಗಲ್‌ ಗ್ಲಾಸ್‌ನ್ನು ಬಿಡುಗಡೆಗೊಳಿಸಿತು. ಆದರೆ, ಇದನ್ನು ಜನ ಸಮೂಹಕ್ಕೆ ಗೂಗಲ್‌ ಯಾವತ್ತೂ ತಯಾರಿಸಿದ್ದಿಲ್ಲ, ಈ ಗ್ಲಾಸ್‌ ಹೆಚ್ಚು ಬೆಲೆ, ಸಾಫ್ಟ್‌ವೇರ್ ದೋಷಗಳು, ಭದ್ರತಾ ಕಾರಣಗಳಿಂದ ಗೂಗಲ್ ಜನೇವರಿ 2015ರಿಂದ ಗೂಗಲ್ ಗ್ಲಾಸ್‌ನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದ್ದು, ವಾಣಿಜ್ಯ ವ್ಯವಹಾರಗಳಿಗೆ ಮಾತ್ರ ಹೊಸ ಆವೃತ್ತಿಯ ಡಿವೈಸ್‌ಗಳನ್ನು ಮಾರಾಟ ಮಾಡುತ್ತಿದೆ.

ಗೂಗಲ್ ಆನ್ಸರ್ಸ್‌

ಗೂಗಲ್ ಆನ್ಸರ್ಸ್‌

ಗೂಗಲ್‌ ಸಂಸ್ಥಾಪಕ ಲ್ಯಾರಿ ಪೇಜ್‌ ಚಿಂತನೆಯಿಂದ ಗೂಗಲ್‌ ಆನ್ಸರ್ಸ್‌ ಎಂಬ ಸೇವೆಯನ್ನು ಗೂಗಲ್ ಆರಂಭಿಸಿತ್ತು. ಆದರೆ, 2006ರಲ್ಲಿ ಗೂಗಲ್‌ ಆನ್ಸರ್ಸ್‌ ಸಂಪೂರ್ಣವಾಗಿ ಜನರಿಂದ ದೂರವಾಯಿತು.

Best Mobiles in India

English summary
Google's 16 biggest 'failures', Google Buzz, the company's much-touted social networking platform that almost failed to take off. Google’s “miss” list includes many more.To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X