ವಿಂಡೋಸ್ PCಗೆ ಆಂಡ್ರಾಯ್ಡ್ App ಡೌನ್ಲೋಡ್ ಹೇಗೆ

By Varun
|
ವಿಂಡೋಸ್ PCಗೆ ಆಂಡ್ರಾಯ್ಡ್ App ಡೌನ್ಲೋಡ್ ಹೇಗೆ

ಬಹುತೇಕ ನಾವೆಲ್ಲರೂ ನಮ್ಮೆಲ್ಲರ ಮನೆಯಲ್ಲಿ ವಿಂಡೋಸ್ ಆಧಾರಿತ ಡೆಸ್ಕ್ ಟಾಪ್ ಕಂಪ್ಯೂಟರುಗಳು ಇಲ್ಲವೆ ಲ್ಯಾಪ್ಟಾಪುಗಳನ್ನು ಉಪಯೋಗಿಸುತ್ತೇವೆ. ಬಹಳಷ್ಟು ವರ್ಷಗಳಿಂದ ಕಂಪ್ಯೂಟರುಗಳಿಗೆ ಉಪಯೋಗಿಸಲ್ಪಡುತ್ತಿರುವ ವಿಂಡೋಸ್ ತಂತ್ರಾಂಶಕ್ಕೆ ಸವಾಲೊಡ್ಡುವಂತೆ ಬಂದ ಗೂಗಲ್ ನ ಆಂಡ್ರಾಯ್ಡ್ ತಂತ್ರಾಂಶವನ್ನು ಈಗಂತೂ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ಟುಗಳ ಉತ್ಪಾದಕರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಸ್ಮಾರ್ಟ್ ಫೋನ್ ಎಂದರೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಎನ್ನುವಷ್ಟರ ಮಟ್ಟಿಗೆ ಇದು ಬಳಕೆಯಾಗುತ್ತಿದ್ದು, ಆರಂಭದಲ್ಲಿ ಇದನ್ನು ಗಣನೆಗೆ ತೆಗೆದುಕೊಳ್ಳದ ನೋಕಿಯಾ, ಬ್ಲಾಕ್ ಬೆರಿ, ನಂತಹ ಕಂಪನಿಗಳು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತಮ್ಮ ಪಾಲುದಾರಿಕೆಯನ್ನೇ ಕಳೆದುಕೊಳ್ಳುತ್ತಿವೆ.

ಇದರ ವ್ಯಾಪಕ ಬಳಕೆಯಿಂದಾಗಿಯೇ ಮಾರುಕಟ್ಟೆಯಲ್ಲಿ ವಿಧವಿಧವಾದ ಆಂಡ್ರಾಯ್ಡ್ ಆಧಾರಿತ Appಗಳು ಲಭ್ಯವಿದೆ. ಹವಾಮಾನ ತಿಳಿಸುವ App ಇರಬಹುದು,ಮಂತ್ರಾಲಯ ಪಂಚಾಂಗ App, ಭೂಕಂಪದ ಮಾಹಿತಿ ಕೊಡುವ App ಇರಬಹುದು, ನಿಮ್ಮ ವಾರಂಟಿಯನ್ನು ಸ್ಕ್ಯಾನ್ ಮಾಡಿ ಜೋಪಾನವಾಗಿ ಇಟ್ಟುಕೊಳ್ಳುವ App ಇರಬಹುದು,ಬಿಸಿನೆಸ್ ಕಾರ್ಡ್ ಸ್ಕ್ಯಾನ್ ಮಾಡುವ App, ಮಿಮಿಕ್ರಿ ಮಾಡುವ ಮಿಯಾವ್ App ಹೀಗೆ ಹಲವಾರು ಬಹುಪಯೋಗಿ App ಗಳು ಬಂದಿವೆ. ಆದರೆ ಖೇದದ ಸಂಗತಿಯೆಂದರೆ ಈ ಆಂಡ್ರಾಯ್ಡ್ ಆಧಾರಿತ Appಗಳು ನಮ್ಮ ವಿಂಡೋಸ್ ಆಧಾರಿತ ಡೆಸ್ಕ್ ಟಾಪ್ ಕಂಪ್ಯೂಟರುಗಳು, ಲ್ಯಾಪ್ ಟಾಪ್ ಗಳು ಹಾಗು ನೋಟ್ ಬುಕ್ ಗಳಿಗೆ ಲಭ್ಯವಿಲ್ಲ. ಹಾಗಿದ್ದರೆ ಈ ಆಂಡ್ರಾಯ್ಡ್ ಆಧಾರಿತ Appಗಳನ್ನ ಕಂಪ್ಯೂಟರುಗಳಲ್ಲಿ ಉಪಯೋಗಿಸಲು ಏನಾದರೂ ಐಡಿಯಾ ಇದೆಯಾ ಎಂದು ನೀವು ನಮ್ಮನ್ನು ಕೇಳಿದರೆ ನಮ್ಮ ಉತ್ತರBluestacks ಎಂದಾಗಿರುತ್ತದೆ.

Bluestacks ಎಂಬ ತಂತ್ರಾಂಶವನ್ನು ನಿಮ್ಮ ವಿಂಡೋಸ್ ಕಂಪ್ಯೂಟರ್ ಇರಲಿ, ಲ್ಯಾಪ್ಟಾಪ್ ಇರಲಿ ಇಲ್ಲವೆ ವಿಂಡೋಸ್ ಟ್ಯಾಬ್ಲೆಟ್ಟೆ ಇರಲಿ, ಇದನ್ನು ಉಪಯೋಗಿಸಿಕೊಂಡು ನೀವು ಆಂಡ್ರಾಯ್ಡ್ ಆಧಾರಿತ Appಗಳನ್ನ ಕಂಪ್ಯೂಟರುಗಳಲ್ಲಿ ಬಳಸಬಹುದಾಗಿದೆ. Bluestacks ಅನ್ನು ನಿಮ್ಮ ಕಂಪ್ಯೂಟರಿಗೆ ಡೌನ್ಲೋಡ್ ಮಾಡಲು 100MB ಜಾಗ ಹಾಗು 15 ನಿಮಿಷ ಕಾಯುವ ತಾಳ್ಮೆ ಇದ್ದರೆ ಸಾಕು. ಇದು ಡೌನ್ಲೋಡ್ ಆದಮೇಲೆ ಆಂಡ್ರಾಯ್ಡ್Appಗಳನ್ನು, GetJar, Amazon App store ಹಾಗು Google play ಮೂಲಕ ನಿಮ್ಮ ಪಿಸಿಗೆ ಆರಾಮಾಗಿ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಿಕೊಳ್ಳಬಹುದು.

ಇನ್ನುಮೇಲೆ ಆಂಡ್ರಾಯ್ಡ್ ಆನಂದವನ್ನು ಡೆಸ್ಕ್ಟಾಪ್ ನಲ್ಲೆ ಪಡೆಯಿರಿ Bluestacks ಮೂಲಕ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X