ಕಂಪ್ಯೂಟರ್‌ನಲ್ಲಿ ಗೇಮ್‌ಗಳನ್ನು ಆಡುವವರ ಸಂಖ್ಯೆ ಬಹಳ ಹೆಚ್ಚಿದೆ. ಆದರೆ, ಕಂಪ್ಯೂಟರ್‌ನಲ್ಲಿ ಉತ್ತಮ ಗೇಮಿಂಗ್ ಅನುಭವ ಪಡೆಯುವವರ ಸಂಖ್ಯೆ ಮಾತ್ರ ಬಹಳ ಕಡಿಮೆಯಿದೆ ಎನ್ನಬಹುದು.! ಏಕೆಂದರೆ, ಪ್ರತಿದಿನವೂ ನೂರಾರು ಗೇಮ್‌ಗಳು ಬಂದರೂ ಆ ಗೇಮ್ ಆಡಲು ಸರಿಯಾದ ಡಿವೈಸ್‌ಗಳಿಲ್ಲದೆ ಉತ್ತಮ ಗೇಮಿಂಗ್ ಅನುಭವವನ್ನು ಕಳೆದುಕೊಳ್ಳುತ್ತಿದ್ದಾರೆ.!!
ಇನ್ನು ಬಹುತೇಕ ಗೇಮ್ ಪ್ರಿಯರು ಉತ್ತಮ ಗೇಮಿಂಗ್ ಅನುಭವ ಪಡೆಯಲು ಕಂಪ್ಯೂಟರ್ ಸಾಫ್ಟ್‌ವೇರ್‌ಗೆ ಮತ್ತು ಗೇಮ್ ಪ್ರೋಗ್ರಾಂಗೆ ಹೊಂದಿಕೊಳ್ಳುವ ಮೌಸ್, ಕೀಬೋರ್ಡ್‌ನಂತಹ ಉಪಕರಣಗಳನ್ನು ಹೆಚ್ಚು ಬದಲಾಯಿಸುತಿರುತ್ತಾರೆ. ಆದರೆ, ಗೇಮಿಂಗ್‌ಗಾಗಿಯೇ ರೂಪುಗೊಂಡಿರುವ ಮಾನಿಟರ್‌ಗಳನ್ನು ಬದಲಾಯಿಸುವುದನ್ನು ಮರೆತಿರುತ್ತಾರೆ.!!

ಹೌದು, ಮೌಸ್, ಕೀಬೋರ್ಡ್‌ಗಳಂತೆಯೇ ಗೇಮಿಂಗ್‌ಗಾಗಿಯೇ ಹಲವು ಮಾನಿಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.! ಅವುಗಳಲ್ಲಿ ಮೊದಲ ಸ್ಥಾನದಲ್ಲಿ ಎಲ್‌ಜಿ ಕಂಪೆನಿಯ ಅಲ್ಟ್ರಾವೈಡ್ ಮಾನಿಟರ್ರ್ಸ್ ನಿಲ್ಲುತ್ತವೆ.! ಗೇಮ್ ಆಡಲು ಈ ಮಾನಿಟರ್‌ಗಳು ಹೇಳಿ ಮಾಡಿದಿದಂತಿದ್ದು, ಈ ಮಾನಿಟರ್‌ಗಳಲ್ಲಿನ ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!
50Hz ನಿಂದ 144Hz ರಿಫ್ರೆಶ್ ವೇಗ!!
ಎಲ್‌ಜಿ ಕಂಪೆನಿ ಗೇಮಿಂಗ್‌ಗಾಗಿಯೇ ಬಿಡುಗಡೆ ಮಾಡಿರುವ 32 ಇಂಚಿನ್ ಅಲ್ಟ್ರಾವೈಡ್ ಮಾನಿಟರ್ರ್ಸ್ 50Hz ನಿಂದ 144Hz ರಿಫ್ರೆಶ್ ವೇಗವನ್ನು ಹೊಂದಿರುವ ವಿಶ್ವದ ಮೊದಲ ಮಾನಿಟರ್‌ಗಳಾಗಿವೆ.! ಈ ಮಾನಿಟರ್‌ನ ರಿಫ್ರೆಶ್ ವೇಗ 144Hz ಇರುವುದರಿಂದ ಒಂದು ಸೆಕೆಂಡ್‌ನಲ್ಲಿ ಮಾನಿಟರ್ 144 ಬಾರಿ ತಾನೇ ರಿಫ್ರೆಶ್ ಆಗುತ್ತದೆ!! ಇದರಿಂದ ಈ ಮಾನಿಟರ್‌ನಳಿಂದ ಮೂಡುವ ಔಟ್‌ಪುಟ್ ದೃಶ್ಯಗಳು ಅತ್ಯುತ್ತಮವಾಗಿರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ.!!
ಮೋಷನ್ ಬ್ಲರ್ ತಂತ್ರಜ್ಞಾನ!!
ಯಾವುದೇ ಒಂದು ಕಂಪ್ಯೂಟರ್ ಗೇಮ್ ಆಡಲು ಅದಕ್ಕೆ ಸಂಪೂರ್ಣ ಸಪೋರ್ಟ್ ಮಾಡುವ ಡಿವೈಸ್‌ಗಳು ಕೂಡ ಅಷ್ಟೆ ಮುಖ್ಯ ಅಲ್ಲವೇ!? ಈ ಮಾನಿಟರ್‌ಗಳು ಗ್ರಾಫಿಕ್ಸ್ ಕಾರ್ಡ್ ಚೌಕಟ್ಟಿನ ಪ್ರಮಾಣ ಮತ್ತು ಮಾನಿಟರ್‌ನ ರಿಫ್ರೆಶ್ ರೇಟ್‌ನ ವ್ಯತ್ಯಾಸದಿಂದ ಸಂಭವಿಸುವ ಯಾವುದೇ ತೊದಲುವಿಕೆಯ ಪರಿಣಾಮವಿಲ್ಲದೆಯೇ ಗೇಮಿಂಗ್ ಅನುಭವ ನೀಡುತ್ತವೆ. ಮೋಷನ್ ಬ್ಲರ್‌ನಿಂದ ಕಪ್ಪು ಚಿತ್ರ ಅಳವಡಿಕೆ ಪರಿಣಾಮವನ್ನು ಉಂಟುಮಾಡಿ ಉತ್ತಮ ದೃಶ್ಯದ ವೀಕ್ಷಣೆಗೆ ಸಹಾಯ ಮಾಡುತ್ತದೆ.!!
21:9 ಅನುಪಾತದಲ್ಲಿ ಗೇಮಿಂಗ್ ಅನುಭವ!!
ಎಲ್‌ಜಿ ಅಲ್ಟ್ರಾವೈಡ್ ಗೇಮಿಂಗ್ ಮಾನಿಟರ್‌ಗಳು 21:9 ಅನುಪಾತದಲ್ಲಿ ವಿಶಾಲ ಆಕಾರವನ್ನು ಹೊಂದಿವೆ.! 16:9 ಅನುಪಾತ ಹೊಂದಿರುವ ಸಾಮಾನ್ಯ ಮಾನಿಟರ್‌ಗಳಲ್ಲಿ ಗೇಮ್ ಆಡುವವರಿಗೆ ಥಿಯೇಟರ್‌ನಲ್ಲಿ ಕುಳಿತು ಗೇಮ್ ಆಡುವ ಅನುಭವವನ್ನು 2560 x 1080 ಪಿಕ್ಸೆಲ್ ರೆಸೆಲ್ಯೂಷನ್ ಮತ್ತು 144Hz ರಿಮೆಶ್ ರೇಟ್ ಹೊಂದಿರುವ ಈ ಎಲ್‌ಜಿ ಅಲ್ಟ್ರಾವೈಡ್ ಗೇಮಿಂಗ್ ಮಾನಿಟರ್‌ಗಳು ನೀಡಲಿವೆ.!!
ಡೈನಮಿಕ್ ಆಕ್ಷನ್ ಸಿಂಕ್!!
ಎಲ್‌ಜಿ ಅಲ್ಟ್ರಾವೈಡ್ ಗೇಮಿಂಗ್ ಮಾನಿಟರ್‌ಗಳು ಡೈನಾಮಿಕ್ ಆಕ್ಷನ್ ಸಿಂಕ್‌ನಂತಹ ಗೇಮಿಂಗ್ ಕೇಂದ್ರಿತ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಶೂಟರ್ ಆಟಗಳ ನಿಖರತೆಯನ್ನು ಹೆಚ್ಚಿಸಲು ಕ್ರಾಶೈರ್ ತಂತ್ರಜ್ಞಾನ ಸಹಾಯಕವಾಗಿದೆ.!ಈ ತಂತ್ರಜ್ಞಾನ ಆಕ್ಷನ್ ಗೇಮ್‌ನಲ್ಲಿನ ಎದುರಾಳಿಗಳನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ದಾಳಿ ಮಾಡಲು ಅನುಮತಿಸುತ್ತದೆ ಮತ್ತು ವೇಗದ ಗತಿಯ ಆಟಗಳಲ್ಲಿ ದೃಶ್ಯಗಳೊಂದಿಗೆ ಬಳಕೆದಾರರ ಇಂದ್ರಿಯಗಳನ್ನು ಸಿಂಕ್ರೊನೈಸ್ ಮಾಡಬಹುದು.!!
ಮಾನಿಟರ್ ಅನ್ನು ಹೊಂದಿಸಬಹುದು!!
144Hz ರಿಫ್ರೆಶ್ ರೇಟ್, 1 ಎಂಎಸ್ ಮೋಷನ್ ಬ್ಲರ್ ರಿಡಕ್ಷನ್ ಟೆಕ್ನಾಲಜಿ ಮತ್ತು ಆಕ್ಷನ್ ಸಿಂಕ್ ತಂತ್ರಜ್ಞಾನಗಳ ಆಟದ ಮೋಡ್ ವೈಶಿಷ್ಟ್ಯವುಗಳನ್ನು ಮಾನಿಟರ್‌ಗಳಿಂದಲೇ ಪಡೆಯಬಹುದು.! ಏಕೆಂದರೆ ಗೇಮ್ ಪ್ರಿಯರಿಗಾಗಿ ಮಾನಿಟರ್ ಅನ್ನು ವ್ಯಕ್ತಿ ಶೂಟರ್ಗಳಿಗೆ ಮತ್ತು ಆರ್ಟಿಎಸ್ ಆಟಗಳಿಗೆ ಹೊಂದಿಸಿಕೊಳ್ಳಬಹುದು.!!
ಓದಿರಿ:ನೂತನ ಐಫೋನ್ ಖರೀದಿಗೆ ಪ್ರೇರೇಪಿಸಲು ಆಪಲ್‌ನಿಂದ ಮೋಸ!!..ಆಪಲ್ ಹೇಳಿದ್ದು ಹೀಗೆ!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.