11,999 ರೂ. ದರದಲ್ಲಿ ಸ್ವೈಪ್‌ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ ಬಿಡುಗಡೆ

Posted By: Vijeth

11,999 ರೂ. ದರದಲ್ಲಿ ಸ್ವೈಪ್‌ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ ಬಿಡುಗಡೆ

ಸ್ವೈಪ್‌ ಟೆಲಿಕಾಂ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ನೂತನ ಟ್ಯಾಬ್ಲೆಟ್‌ ಬಿಡುಗಡೆ ಮಾಡುವುದಾಗಿ ಅಕ್ಟೋಬರ್‌ 13 ರಂದು ವರದಿಯಾಗಿದ್ದ ವದಂತಿ ನಿಜವಾಗಿದ್ದು ನಿನ್ನೆಯಷ್ಟೇ ಸಂಸ್ಥೆಯು ತನ್ನಯ ನೂತನ ಆಂಡ್ರಾಯ್ಡ್‌ ಐಸಿಎಸ್‌ ಆಲ್‌ ಇನ್‌ ವನ್‌ ಟ್ಯಾಬ್ಲೆಟ್‌ ರೂ.11,999 ಬೆಲೆಯಲ್ಲಿ ಬಿಡುಗಡೆ ಮಾಡಿದೆ.

ಅಂದಹಾಗೆ ಈ ನೂತನ ಟ್ಯಾಬ್ಲೆಟ್‌ನ ವಿಶೇಷತೆ ಏನೆಂದರೆ ಡ್ಯುಯೆಲ್‌ ಸಿಮ್‌ ಜೊತೆಗೆ 3ಜಿ ಹೊಂದಿದ್ದು ಬಳಕೆದಾರರಿಗೆ ಸ್ಮಾರ್ಟ್‌ಫೋನ್‌ ಬಳಕೆಯ ಅನುಭವ ನೀಡುತ್ತದೆ. ಅಂದಹಾಗೆ ಸ್ವೈಪ್‌ ನ ನೂತನ ಆಂಡ್ರಾಯ್ಡ್‌ ಟ್ಯಾಬ್ಲೆಟ್‌ನಲ್ಲಿ ಏನೆಲ್ಲಾ ಫೀಚರ್ಸ್‌ ಅಡಕವಾಗಿದೆ ಎಂಬುದನ್ನು ಗಿಜ್ಬಾಟ್‌ ಓದುಗರಿಗಾಗಿ ತರಲಾಗಿದೆ ಒಮ್ಮೆ ಓದಿ ನೋಡಿ.

ದರ್ಶಕ: ಚಾಕಲೆಟ್‌ ಕಲರ್‌ ಹಾಗೂ ವೆಲ್ವೆಟ್‌ ಫಿನಿಷ್‌ ಹೊಂದಿದೆ, ಹಾಗೂ 7 ಇಂಚಿನ HD ಸಾಮರ್ತ್ಯದ ಟಚ್‌ಸ್ಕ್ರೀನ್‌ ದರ್ಶಕ ಸೇರಿದಂತೆ 1028 x 768 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಆಂಡ್ರಾಯ್ಡ್‌ 4.0.3 ICS ಆಪರೇಟಿಂಗ್ ಸಿಸ್ಟಂ ನಿಂದ ಕೂಡಿದೆ.

ಪ್ರೊಸೆಸರ್‌ ಹಾಗೂ RAM: ನೂತನ ಟ್ಯಾಬ್ಲೆಟ್‌ನಲ್ಲಿ 1.5GHz ಪ್ರೊಸೆಸರ್‌ ಹಾಗೂ 1GB RAM ಹೊಂದಿದೆ.

ಸ್ಟೋರೇಜ್‌: 8GB ಆಂತರಿಕ ಸ್ಟೋರೇಜ್‌ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕ್ಯಾಮೆರಾ: 2MP ನ ಹಿಂಬದಿಯ ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ 1.3MPನ ಮುಂಬದಿಯ ಕ್ಯಾಮೆರಾ ಹೊಂದಿದೆ.

ಕನೆಕ್ಟಿವಿಟಿ: ಈ ವಿಚಾರದಲ್ಲಿ ನೂತನ ಟ್ಯಾಬ್ಲೆಟ್‌ Wi-Fi 802.11 b/g/n, ಬ್ಲೂಟೂತ್‌ 3 ಹಾಗೂ ಇನ್‌-ಬಿಲ್ಟ್‌ GPS ಹೊಂದಿದೆ.

ಬ್ಯಾಟರಿ: 4,000 mAh ಹಚ್ಚಿನ ಸಾಮರ್ತ್ಯ ಹೊಂದಿರುವ ಬ್ಯಾಟರಿ ಹೊಂದಿದ್ದು ದೀರ್ಘಕಾಲ ಬ್ಯಾಟರೀ ಬ್ಯಾಕಪ್‌ ನೀಡಬಲ್ಲದು.

ಹೆಚ್ಚುವರಿ ಫೀಚರ್ಸ

ಸ್ವೈಪ್‌ ಟ್ಯಾಬ್ಲೆಟ್‌ನಲ್ಲಿ FM ರಿಸೀವರ್‌ ಹಾಗೂ ಟ್ರಾಸ್ಮೀಟರ್‌, G-ಸೆನ್ಸಾರ್‌, ಜಿಪಿಎಸ್‌, ಆಕ್ಸೆಲರೋಮೀಟರ್‌, 11.1 ಫ್ಲಾಷ್‌ ಸಪ್ಪೋರ್ಟ್‌, ಆಲೀವ್‌ ಆಫೀಸ್‌ ಪ್ರೀಮಿಯಂ, ಈಬುಕ್‌ ರೀಡರ್‌, ಆಡಿಯೋ ರೆಕಾರ್ಡಿಂಗ್‌, HD ಹಾಗೂ 3D ಗೇಮ್ಸ್‌ಗಳನ್ನು ಹೊಂದಿದೆ.

Read In English...

ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಟಾಪ್‌ 10 ಆಂಡ್ರಾಯ್ಡ್‌ ಟ್ಯಾಬ್ಸ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot