ಗೂಗಲ್ ಡ್ರೈವ್ ಬಗ್ಗೆ ತಿಳಿದಿರಬೇಕಾದ 7 ಅಂಶಗಳು

By Varun
|

ಗೂಗಲ್ ಡ್ರೈವ್ ಬಗ್ಗೆ ತಿಳಿದಿರಬೇಕಾದ 7 ಅಂಶಗಳು
ಗೂಗಲ್ ನೆನ್ನೆ ತಾನೇ ಕ್ಲೌಡ್ಸ್ಟೋರೇಜ್ ಎಂದು ಕರೆಯಲ್ಪಡುವಗೂಗಲ್ ಡ್ರೈವ್ ಸ್ಪೇಸ್ ಶೇರಿಂಗ್ ಅನ್ನು ಚಾಲನೆ ಮಾಡಿತು. ಗೂಗಲ್ ಡ್ರೈವ್ ಖಾತೆ ಹೊಂದಿದ್ದವರಿಗೆ ಉಚಿತ 5 GB ಡೇಟಾ ಸ್ಪೇಸ್ ಕೊಡಲಾಗುವುದೆಂಬ ಸುದ್ದಿ, ನಮ್ಮ ಕನ್ನಡ ಗಿಜ್ಬಾಟ್ ನಲ್ಲಿ ಓದಿದ್ದೀರಿ.

ಈಗ ಗೂಗಲ್ ಡ್ರೈವ್ ನ ಬಗ್ಗೆ ಹಾಗು ಅದನ್ನು ಹೇಗೆ ಬಳಸಿಕೊಳ್ಳಬಹುದೆಂದು ತಿಳಿದು ಕೊಳ್ಳೋಣ ಬನ್ನಿ:

  • ಗೂಗಲ್ ಡ್ರೈವ್ ನಿಂದ ನೀವು ಡೇಟಾ ಅಪ್ಲೋಡ್ ಮಾಡಿದ ಮೇಲೆ ಅವುಗಳು ಗೂಗಲ್ ನ ಸರ್ವರ್ಗಳಲ್ಲಿ ಶೇಖರಣೆಯಾಗುವುದರಿಂದ, ನಿಮ್ಮ ಡೇಟಾವನ್ನು ಎಲ್ಲಿಂದ ಬೇಕಾದರೂ ಉಪಯೋಗಿಸಬಹುದು.

  • ಗೂಗಲ್ ಡ್ರೈವ್ ನ ಆಪ್ ನಿಂದ ಕೆಲಸ ಮಾಡುವ ಈ ಕ್ಲೌಡ್ ಶೇರಿಂಗ್, ಇದನ್ನು ಉಪಯೋಗಿಸುವಾಗ, ನಿಮ್ಮ ಕಂಪ್ಯೂಟರ್ ನಲ್ಲಿ ವಿಂಡೋಸ್ ನ ಫೊಲ್ಡರ್ ಒಂದನ್ನು ಕ್ರಿಯೇಟ್ ಮಾಡುತ್ತದೆ. ಆ ಫೊಲ್ಡರ್ ನಲ್ಲಿ ಶೇಖರಿಸಿದ ಯಾವುದೇ ಮಾಹಿತಿ ನಿಮ್ಮ ಹಾರ್ಡ್ ಡಿಸ್ಕ್ ಹಾಗು ಗೂಗಲ್ ಡ್ರೈವ್ ನಲ್ಲೂ ಸ್ಟೋರ್ ಆಗುತ್ತದೆ. ಹೀಗಾಗಿ ನೀವು ಈ ಮಾಹಿತಿಯನ್ನು ಬೇರೆ ಕಂಪ್ಯೂಟರ್ ಹಾಗು ಮೊಬೈಲಿನಿಂದಲೂ ಪಡೆಯಬಹುದು.

  • ಸದ್ಯಕ್ಕೆ 5GB ಡೇಟಾ ಸ್ಟೋರೇಜ್ ಫ್ರೀ ಆಗಿ ಕೊಡುತ್ತಿರುವ ಗೂಗಲ್, 100 GB ಡೇಟಾ ಸ್ಟೋರೇಜ್ ಬೇಕಿದ್ದರೆ ಪ್ರತಿ ತಿಂಗಳು 5 ಡಾಲರ್ ಬಾಡಿಗೆ ಕೊಟ್ಟರೆ ಸಾಕು.

  • ಗೂಗಲ್ ಡ್ರೈವ್ ನಿಮ್ಮ ಮ್ಯಾಕ್, ಪಿಸಿ, ಆಂಡ್ರಾಯ್ಡ್ ಟ್ಯಾಬ್ಲೆಟ್ ಹಾಗು ಮೊಬೈಲುಗಳಿಗೂ ಡೌನ್ಲೋಡ್ ಮಾಡಬಹುದು.

  • ಹಾರ್ಡ್ ಡಿಸ್ಕ್ ನಲ್ಲಿ ಯಾವ ಯಾವ ಡೇಟಾ ಸ್ಟೋರ್ ಮಾಡಿಕೊಳ್ಳಬಹುದೋ ಆ ಎಲ್ಲ ರೀತಿಯ ಡೇಟಾವನ್ನೂ ಗೂಗಲ್ ಡ್ರೈವ್ ನಲ್ಲಿ ಶೇಖರಿಸಬಹುದು.

  • ಗೂಗಲ್ ಡಾಕ್ಸ್ ಕೂಡಾ ಗೂಗಲ್ ಡ್ರೈವ್ ನಲ್ಲಿ ಇರುವುದರಿಂದ ನೀವು ಡಾಕ್ಯುಮೆಂಟ್ಸ್, ಸ್ಪ್ರೆಡ್ ಶೀಟ್ಸ್, ಹಾಗು ಪ್ರೆಸೆನ್ಟೇಶನ್ಗಳನ್ನೂ ಮಾಡಬಹುದಾಗಿದೆ.

  • ಗೂಗಲ್ ಡ್ರೈವ್ ನಿಂದ ಗೂಗಲ್ ಪ್ಲಸ್ ನಲ್ಲಿ ಫೋಟೋಗಳನ್ನ ಅಟಾಚ್ ಮಾಡಬಹುದಾಗಿದೆ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X