Subscribe to Gizbot

ಉಚಿತ 5 GB ಸ್ಪೇಸ್ ಕೊಡಲಿರುವ ಗೂಗಲ್ ಡ್ರೈವ್

Posted By: Varun
ಉಚಿತ 5 GB ಸ್ಪೇಸ್ ಕೊಡಲಿರುವ ಗೂಗಲ್ ಡ್ರೈವ್

ಸಾಮಾನ್ಯವಾಗಿ ನಾವು ಕಂಪ್ಯೂಟರ್ ಹಾಗು ಲ್ಯಾಪ್ಟಾಪ್ ಅನ್ನು ಕೊಳ್ಳುವ ಮೊದಲು ಅವುಗಳ ಶೇಖರಣಾ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡು ನಂತರ ಖರೀದಿಸುತ್ತೇವೆ.

ತಂತ್ರಾಂಶಗಳು, ಫಿಲಂ, ಹಾಡು, ಗೇಮ್ಸ್ ಇರಬಹುದು, ಎಲ್ಲದ್ದಕ್ಕೂ ಸ್ಪೇಸ್ ಅಗತ್ಯತೆ ಇರುತ್ತದೆ. ನಮ್ಮ ಡೆಸ್ಕ್ ಟಾಪ್ ಇಲ್ಲವೆ ಲ್ಯಾಪ್ಟಾಪ್ ನಲ್ಲಿ ಜಾಗ ಇಲ್ಲದಿದ್ದರೆ ಬಾಹ್ಯವಾಗಿ ಕನೆಕ್ಟ್ ಮಾಡಬಹುದಾದ ಹಾರ್ಡ್ ಡಿಸ್ಕ್ ಕೊಳ್ಳುತ್ತೇವೆ.

ಈಗ ತಂತ್ರಜ್ಞಾನ ಇನ್ನೂ ಮುಂದುವರೆದಿದ್ದು, ಕ್ಲೌಡ್ ಕಂಪ್ಯೂಟಿಂಗ್ ಮೂಲಕ ನೀವು ಆನ್ಲೈನ್ ನಲ್ಲೇ, ಹೇಗೆ ವಿದ್ಯುತ್ ಅನ್ನು ಗ್ರಿಡ್ ಮೂಲಕ ಶೇಖರಿಸಿ ಇಡುತ್ತಾರೂ ಹಾಗೇ ನಿಮ್ಮ ಡೇಟಾವನ್ನು ಸಂಗ್ರಹಿಸಿ, ಬೇಕಾದಾಗ ಬಳಸಿಕೊಳ್ಳಬಹುದು. ಈ ರೀತಿಯ ಉಚಿತ ಡೇಟಾ ಸೇವೆ ಒದಗಿಸುವ ಡ್ರಾಪ್ ಬಾಕ್ಸ್ ಬಗ್ಗೆ ಓದಿದ್ದೀರಿ. ಈಗ ಗೂಗಲ್ ಕೂಡ ಈ ರೀತಿಯ ಉಚಿತ ಸೇವೆ ಒದಗಿಸಲು ಮುಂದಾಗಿದ್ದು 5 GB ಡೇಟಾ ಬಳಸಿಕೊಳ್ಳಬಹುದು. ಇಂಟರ್ನೆಟ್ ಸಂಪರ್ಕ ಇದ್ದರೆಸಾಕು, ನೀವು ಅಪ್ಲೋಡ್ ಮಾಡಿದ ಡೇಟಾವನ್ನು ಎಲ್ಲಿ ಬೇಕಾದರೂ ಉಪಯೋಗಿಸಬಹುದು.

ವಿಂಡೋಸ್, ಆಪಲ್ ನ ಐಒಎಸ್, ಮ್ಯಾಕ್ ತಂತ್ರಾಂಶಗಳಿಗೆ ಮುಂದಿನ ವಾರದಿಂದಇದು ಲಭ್ಯವಿದ್ದು, ಒಂದು ಬಾರಿ ಖಾತೆ ತೆರೆದು http://drive.google.com ಮೂಲಕ ನಿಮ್ಮ ಲ್ಯಾಪ್ಟಾಪ್, ಟ್ಯಾಬ್ಲೆಟ್, ಡೆಸ್ಕ್ಟಾಪ್ ಹಾಗು ಸ್ಮಾರ್ಟ್ ಫೋನ್ಗಳ ಮೂಲಕ ಬಳಸಿಕೊಳ್ಳಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot