ಟ್ಯಾಬ್ಲೆಟ್ ಬಳಸಿದರೆ ಕತ್ತು ನೋವು ಬರುತ್ತಾ?

Posted By: Varun
ಟ್ಯಾಬ್ಲೆಟ್ ಬಳಸಿದರೆ ಕತ್ತು ನೋವು ಬರುತ್ತಾ?

ಡೆಸ್ಕ್ ಟಾಪ್ ಮುಂದೆ ಕೂತು ಕೆಲಸ ಮಾಡುವವರಿಗೆ ಕೈನೋವು, ಆಸ್ಟಿಯೋಪೋರಾಸಿಸ್ ಬರುತ್ತೆ ಅಂತಾ ಓದಿದ್ದೀವಿ, ಸದಾ ಕಂಪ್ಯೂಟರ್ ಒತ್ತುತ್ತಲೇ ಕೆಲಸ ಮಾಡುವ ಕಾಲ್ ಸೆಂಟರ್ ಹಾಗು ಬಿಪಿಒ ಉದ್ಯೋಗಿಗಳಿಗೆ ಹಾರ್ಮೋನ್ ಪ್ರಾಬ್ಲಂ ಆಗುತ್ತೆ ಅಂತಾ ತಿಳ್ಕೊಂಡಿದೀವಿ, ಲ್ಯಾಪ್ಟಾಪ್ ಅನ್ನು ಗಂಡಸರು ತಮ್ಮ ತೊಡೆ ಮೇಲೆ ಇಟ್ಟುಕೊಂಡು ಕೆಲಸ ಮಾಡಿದರೆ ವೀರ್ಯ ಕಣಗಳು ಕಮ್ಮಿ ಆಗುತ್ತೆ ಅಂತಾನೂ ಓದಿದೀವಿ. ಈಗ ಟ್ಯಾಬ್ಲೆಟ್ ಉಪಯೋಗಿಸಿದರೆ ಏನು ತೊಂದರೆ ಆಗುತ್ತೆ ಅಂತ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವರದಿಯೊಂದನ್ನು ಪ್ರಕಟಿಸಿದೆ.

ಆಪಲ್ ಕಂಪನಿ ಕಂಡುಹಿಡಿದ ಟ್ಯಾಬ್ಲೆಟ್ ಅನ್ನು ಈಗ ಬಹುತೇಕ ಕಂಪನಿಗಳು ಉತ್ಪಾದನೆ ಮಾಡುತ್ತಿದ್ದು ಲ್ಯಾಪ್ಟಾಪ್ ಅಸ್ತಿತ್ವಕ್ಕೇ ಕೊಡಲಿಪೆಟ್ಟು ಕೊಡುವಷ್ಟರ ಮಟ್ಟಿಗೆ ಟ್ಯಾಬ್ಲೆಟ್ಟುಗಳು ಪ್ರಸಿದ್ಧಿ ಪಡೆದಿದೆ. ಹಾಗಾಗಿ ಟ್ಯಾಬ್ಲೆಟ್ ಬಳಸಿದರೆ ಆರೋಗ್ಯದ ಮೇಲೆ ಆಗುವ ಪರಿಣಾಮವೇನೆಂದು ಈ ವರದಿ ತಿಳಿಸುತ್ತದೆ. ಹಾರ್ವರ್ಡ್ ಸ್ಕೂಲ್ ನ ವಿಜ್ಞಾನಿಗಳು ಸುಮಾರು 15 ಮಂದಿ ಟ್ಯಾಬ್ಲೆಟ್ ಬಳಕೆದಾರರನ್ನು ಕರೆಸಿಕೊಂಡು ಯಾವ ಯಾವ ರೀತಿ ಟ್ಯಾಬ್ಲೆಟ್ ಅನ್ನು ಬಳಸುತ್ತಾರೆ ಎಂದು ಅಭ್ಯಸಿಸಿತು.

ಅದರ ಪ್ರಕಾರ ಅವರು ಕಂಡುಕೊಂಡಿದ್ದೇನೆಂದರೆ ತೊಡೆಯ ಮೇಲೆ ಟ್ಯಾಬ್ಲೆಟ್ ಇಟ್ಟುಕೊಂಡು ಉಪಯೋಗಿಸಿದರೆ ಕತ್ತು ಹಾಗು ಭುಜದ ಸ್ನಾಯುಗಳಿಗೆ ಜಾಸ್ತಿ ಒತ್ತಡ ಬೀಳುವುದರಿಂದ ಸ್ನಾಯು ಹಾಗು ಮೂಳೆಗಳಿಗೆ ಸಂಬಂಧಿಸಿದ ತೊಂದರೆ ಬರುತ್ತದಂತೆ.ಅದೂ ಅಲ್ಲದೆ ನಿರಂತರವಾಗಿಟೈಪ್ ಮಾಡಿದರೆ ಬರುವ head and neck flexion ತೊಂದರೆ ಕೂಡಾ ಬರಬಹುದಂತೆ.

ಹಾಗಾಗಿ ಟ್ಯಾಬ್ಲೆಟ್ ಬಳಕೆದಾರರು ಈ ರೀತಿಯ ತೊಂದರೆಯನ್ನು ಕಡಿಮೆ ಮಾಡಿಕೊಳ್ಳಲು ಟೇಬಲ್ ಮೇಲೆ prop case ಮೇಲೆ ಟ್ಯಾಬ್ಲೆಟ್ ಇಟ್ಟುಕೊಂಡು ಉಪಯೋಗಿಸುವುದು ಉತ್ತಮ ಎಂದು ಸಲಹೆ ನೀಡಿದೆ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot