ಭಾರತೀಯ ಬಳಕೆದಾರರಿಗೆ ಇಲ್ಲಿದೆ 10 ಅಮೇಜಾನ್ ಸ್ಕಿಲ್ ಗಳು

By Tejaswini P G

  ಕಳೆದ ವರ್ಷ ಏಶಿಯಾ ದ ಮಾರುಕಟ್ಟೆ ಪ್ರವೇಶಿಸಿದ ಅಮೇಜಾನ್ ಇಖೋ ಅದಕ್ಕೂ ಮೊದಲು ಸಾಕಷ್ಟು ಸಮಯ ಸೂಕ್ತ ಬದಲಾವಣೆಗಳನ್ನು ಮಾಡುವುರಲ್ಲಿ ಕಳೆದಿತ್ತು. ಅಲೆಕ್ಸಾ ಎನ್ನುವ ವರ್ಚ್ಯುವಲ್ ಅಸಿಸ್ಟೆಂಟ್ 3 ವರ್ಷಗಳ ಹಿಂದೆಯೇ ಲಾಂಚ್ ಆಗಿತ್ತು ಮತ್ತು ಇಷ್ಟು ವರ್ಷಗಳಲ್ಲಿ ಅಮೇಜಾನ್ ಅದಕ್ಕೆ ಸಾಕಷ್ಟು ಫೀಚರ್ಗಳನ್ನು ಸ್ಕಿಲ್ಸ್ ಎಂಬ ಹೆಸರಿನಲ್ಲಿ ನೀಡಿದೆ. ಅಲೆಕ್ಸಾ ದ ಸಾಕಷ್ಟು ಫೀಚರ್ಗಳಿಗೆ ಭಾರತೀಯ ಮಾರುಕಟ್ಟೆಗೆ ಹೊಂದುವಂತೆ ಬದಲಾವಣೆಗಳನ್ನು ಮಾಡಬೇಕಾಯಿತು.

  ಭಾರತೀಯ ಬಳಕೆದಾರರಿಗೆ ಇಲ್ಲಿದೆ 10 ಅಮೇಜಾನ್ ಸ್ಕಿಲ್ ಗಳು

  ಇವುಗಳ ಪೈಕಿ ಸ್ಥಳೀಯ ಸೇವೆಗಳಾದ ಓಲಾ ಮತ್ತು ಊಬರ್ ಮೊದಲಾದವುಗಳನ್ನು ಬಳಸುವ ಫೀಚರ್ಗಳೂ ಇದ್ದವು. ಅಲೆಕ್ಸಾ ದ ಗಮನಾರ್ಹ ಫೀಚರ್ಗಳು ಈ ಕೆಳಗಿನಂತಿವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಊಬರ್ ಅಥವಾ ಓಲಾ ಬುಕ್ ಮಾಡಿ

  ಅಲೆಕ್ಸಾ ಬಳಕೆದಾರರು ತಮ್ಮ ಓಲಾ ಅಥವಾ ಊಬರ್ ಖಾತೆಯನ್ನು ಆಪ್ ನೊಂದಿಗೆ ಲಿಂಕ್ ಮಾಡುವ ಮೂಲಕ ಓಲಾ/ಊಬರ್ ನಲ್ಲಿ ಕ್ಯಾಬ್ ಬುಕ್ ಮಾಡಬಹುದು. ಓಲಾ ಅಥವಾ ಊಬರ್ ಖಾತೆಯನ್ನು ಅಲೆಕ್ಸಾ ಜೊತೆ ಜೋಡಿಸಿದ ನಂತರ ಅಲೆಕ್ಸಾ ನಿಮಗಾಗಿ ಕ್ಯಾಬ್ ಬುಕ್ ಮಾಡಬಲ್ಲದು.

  ಸ್ಮಾರ್ಟ್ ಹೋಮ್ ಉತ್ಪನ್ನಗಳನ್ನು ನಿಯಂತ್ರಿಸಿ

  ಭಾರತದಲ್ಲಿ ಗೂಗಲ್ ಹೋಮ್ ಇನ್ನೂ ಲಭ್ಯವಾಗಿರದ ಕಾರಣ , ಭಾರತದಲ್ಲಿ ಯಾರಾದರೂ ಸ್ಮಾರ್ಟ್ ಹೋಮ್ ಸೆಟ್ ಮಾಡಲು ಬಯಸಿದರೆ ಅವರು ಅಲೆಕ್ಸಾ ದ ಮೊರೆಹೋಗಬಹುದು.

  ಅಮೇಜಾನ್ ನಲ್ಲಿ ಉತ್ಪನ್ನಗಳನ್ನು ಖರೀದಿಸಿ

  ಅಮೇಜಾನ್ ನಲ್ಲಿ ನೀವು ಏನನ್ನಾದರೂ ಖರೀದಿಸಲು ಬಯಸಿದರೆ ಈ ರೀತಿಯಾಗಿ ಹೇಳಿ "ಅಲೆಕ್ಸಾ , ಆರ್ಡರ್ ಲೈಟ್ಬಲ್ಬ್". ಈ ರೀತಿಯ ಹೇಳಿಕೆಗಳ ಮೂಲಕ ಅಲೆಕ್ಸಾ ನಿಮ್ಮ ಆರ್ಡರ್ ಹಿಸ್ಟರಿಯನ್ನೊಮ್ಮೆ ಪರಿಶೀಲಿಸಿ, ಈ ಮೊದಲು ನೀವು ಅದೇ ಮಾದರಿಯ ವಸ್ತುವನ್ನು ಖರೀದಿಸಿದ್ದರೆ , ಮತ್ತೊಮ್ಮೆ ಅದೇ ವಸ್ತುವಿಗೆ ಆರ್ಡರ್ ನೀಡಬೇಕೇ ಎಂದು ನಿಮ್ಮನ್ನು ಕೇಳುತ್ತದೆ.

  ಝೊಮ್ಯಾಟೋ ದಿಂದ ಆಹಾರ ತರಿಸಿ

  ಅಲೆಕ್ಸಾ ದ ಝೊಮ್ಯಾಟೋ ಸ್ಕಿಲ್ಗಳನ್ನು ಸಕ್ರಿಯಗೊಳಿಸುವ ಮೂಲಕ ಅಲೆಕ್ಸಾ ನಿಮಗಾಗಿ ಝೊಮ್ಯಾಟೋ ದಿಂದ ಮನೆಗೇ ಆಹಾರ ಆರ್ಡರ್ ಮಾಡಬಲ್ಲದು ಅಥವಾ ನಿಮಗೆ ರೆಸ್ಟೋರೆಂಟ್ಗಳ ಕುರಿತು ಸಲಹೆಗಳನ್ನು ನೀಡಬಲ್ಲದು. ನಿಮ್ಮ ಆಯ್ಕೆಯ ತಿನಿಸುಗಳಿಗೆ ಸೂಕ್ತವಾದ ನಿಮ್ಮ ಸಮೀಪದ ರೆಸ್ಟೋರೆಂಟ್ಗಳ ಪಟ್ಟಿಯನ್ನು ಅಲೆಕ್ಸಾ ನಿಮಗಾಗಿ ತಯಾರಿಸಬಲ್ಲದು!

  ಸ್ಕೋರ್ ಅಪ್ಡೇಟ್ಗಳನ್ನು ಪಡೆಯಿರಿ

  ಅಲೆಕ್ಸಾ ವನ್ನು ಸ್ಕೋರ್ ಕುರಿತು ಮಾಹಿತಿ ಕೇಳಿದರೆ ಸಾಕು ಅದು ನಿಮಗೆ ಇತ್ತೀಚಿನ ಎಲ್ಲಾ ಮ್ಯಾಚ್ಗಳ ಸಂಕ್ಷಿಪ್ತ ಸ್ಕೋರ್ ವಿವರಣೆಯನ್ನು ನೀಡುತ್ತದೆ. ಯಾವುದಾದರೂ ನಿರ್ದಿಷ್ಟ ಮ್ಯಾಚ್ ನ ಸ್ಕೋರ್ ತಿಳಿಯ ಬಯಸಿದರೆ ಆ ಮ್ಯಾಚ್ ನ ಹೆಸರನ್ನು ನಿಮ್ಮ ಕ್ವೆರಿ ಯಲ್ಲಿ ಸೇರಿಸಿ. ಅಲೆಕ್ಸಾ ಆ ಮ್ಯಾಚ್ ನ ಎಲ್ಲಾ ವಿವರಗಳನ್ನು ನಿಮಗೆ ನೀಡುತ್ತದೆ.

  ಶಿಯೋಮಿಯನ್ನು ಮನೆಗೆ ಕಳುಹಿಸಲು ಬರುತ್ತಿದೆ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ'!!

  ಫ್ಲ್ಯಾಶ್ ನ್ಯೂಸ್ ಪಡೆಯಿರಿ

  ಇತ್ತೀಚಿನ ವಾರ್ತೆಗಳನ್ನು ನೀವು ತಿಳಿಯಬಯಸಿದರೆ ಅಲೆಕ್ಸಾ ವನ್ನು ಕೇಳಿ. ಅದು ಬೇರೆ ಬೇರೆ ಸುದ್ದಿ ಮೂಲಗಳನ್ನು ಅರಸಿ ಜಗತ್ತಿನ ಆಗುಹೋಗುಗಳ ಸಂಕ್ಷಿಪ್ತ ವಿವರಗಳನ್ನು ನಿಮಗೆ ನೀಡಬಲ್ಲದು.

  ಪ್ರೈಮ್ ಮ್ಯೂಸಿಕ್ ನಿಂದ ಹಾಡು ಕೇಳಿ

  ಪ್ರೈಮ್ ಮ್ಯೂಸಿಕ್ ಭಾರತದಲ್ಲಿ ಸಧ್ಯಕ್ಕೆ ಲಭ್ಯವಿಲ್ಲವಾದರೂ ಅದರ ಪ್ರಿವ್ಯೂ ಪಡೆಯಬಹುದಾಗಿದೆ. ಪ್ರೈಮ್ ಮ್ಯೂಸಿಕ್ ನಲ್ಲಿ ಕ್ಲಾಸಿಕಲ್ ರಾಕ್, ಹೆವಿ ಮೆಟಲ್, ರೆಗೇ, ಎಲೆಕ್ಟ್ರಾನಿಕಾ ಮೊದಲಾದ ಶೈಲಿಯ ಹಾಡುಗಳ ದೊಡ್ಡ ಸಂಗ್ರಹವೇ ಇದೆಯಲ್ಲದೆ ಸ್ಥಳೀಯ ಹಾಡುಗಳ ಸಂಗ್ರಹವೂ ಇದೆ.

  ನಗೆಹನಿಗಳನ್ನು ಕೇಳಿ

  ಅಲೆಕ್ಸಾವನ್ನು ಸ್ಥಳೀಯ ಮಾರುಕಟ್ಟೆಗೆ ಹೊಂದುವಂತೆ ಬದಲಾಯಿಸಲಾಗಿದೆ. ನಿಮಗೆ ಬೇಜಾರಾದಾಗ ಹೊತ್ತು ಕಳೆಯಲು ನಗೆಹನಿಯೊಂದನ್ನು ಹೇಳುವಂತೆ ಅಲೆಕ್ಸಾ ಗೆ ತಿಳಿಸಿ. ಅಲೆಕ್ಸಾ ನಿಮಗಾಗಿ ನಗೆಹನಿಯನ್ನೂ ಹೇಳಬಲ್ಲದು.

  ಗೇಮ್ಸ್ ಆಡಿ

  ಅಲೆಕ್ಸಾ ನಲ್ಲಿ ವಿವಿಧ ರೀತಿಯ ಸಾವಿರಾರು ಗೇಮ್ ಗಳ ಭಂಡಾರವೇ ಇದೆ. ಹಲವು ಘಂಟೆಗಳ ಕಾಲ ನಿಮ್ಮ ಗಮನವನ್ನು ಸೆರೆಹಿಡಿಯುವ ಶಕ್ತಿ ಈ ಗೇಮ್ ಗಳಿಗಿದೆ. "ಅಲೆಕ್ಸಾ, ಲೆಟ್ಸ್ ಪ್ಲೇ ಅ ಗೇಮ್" ಎನ್ನಿ, ಆಟವಾಡುತ್ತಾ ಸಮಯ ಕಳೆಯಿರಿ.

  ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
  ನಿಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ಕರೆ ಮಾಡಿ

  ನಿಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ಕರೆ ಮಾಡಿ

  ನಿಮ್ಮ ಕುಟುಂಬಸ್ಥರು ಅಥವಾ ಸ್ನೇಹಿತರು ಇಖೋ ಸಾಧನವನ್ನು ಹೊಂದಿದ್ದಲ್ಲಿ ನೀವು ಅವರಿಗೆ ಉಚಿತವಾಗಿ ಕಾಲ್ ಅಥವಾ ಮೆಸೇಜ್ ಮಾಡಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Amazon has announced the expansion of Alexa Skills Kit (ASK) and Alexa Voice Service (AVS) to India so that developers can build new skills and capabilities for Indian consumers. These India-centric skills are pretty useful and some of them include the ability to use services such booking an Ola or Uber.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more