ಗ್ಯಾಜೆಟ್ ಬಗ್ಗೆ ನೀವು ತಿಳಿದುಕೊಂಡಿರುವ ಸುಳ್ಳು ಮಾಹಿತಿಗಳು,,!

By Precilla Dias

  ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಸೇರಿದಂತೆ ಗ್ಯಾಜೆಟ್ ನೊಂದಿಗೆ ನಮ್ಮ ಜೀವನವು ಸಾಗುತ್ತಿದೆ. ಈ ಹಿನ್ನಲೆಯಲ್ಲಿ ನಾವು ಗ್ಯಾಜೆಟ್ ಗಳ ಬಗ್ಗೆ ಎಷ್ಟು ಮಾಹಿತಿಯನ್ನು ತಿಳಿದುಕೊಂಡರು ಸಹ ಕಡಿಮೆಯೇ ಎನ್ನಬಹುದಾಗಿದೆ. ಅಲ್ಲದೇ ಗ್ಯಾಜೆಟ್ ಬಳಕೆಯ ಬಗ್ಗೆ ಕೆಲವು ಸುಳ್ಳು ಮಾಹಿತಿಗಳನ್ನು ಅನಾರೋಗ್ಯಕರ ಬಳಕೆಯ ವಿಧಾನವನ್ನು ಹೊಂದಿದೆವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೀವು ಹೊಂದಿರುವ ಕೆಲವು ಮಿಥ್ಸ್ ಗಳನ್ನು ತಿಳಿಸುವ ಪ್ರಯತ್ನವು ಇದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ನೆಟ್ ವರ್ಕ್ ಸಿಗ್ನಲ್:

  ನಿಮ್ಮ ಮೊಬೈಲ್ ನಲ್ಲಿ ತೋರಿಸಿರುವ ನೆಟ್ ವರ್ಕ್ ಸಿಂಬಲ್ ಸಿಗ್ನಲ್ ಕ್ವಾಲಿಟಿಯನ್ನು ತೋರಿಸುವುದಿಲ್ಲ. ಬದಲಾಗಿ ಹತ್ತಿರದ ಟವರ್ ನ ಪ್ರಾಕ್ಸಿಮಿಟಿಯನ್ನು ತೋರಿಸಲಿದೆ.

  ಮೆಗಾ ಪಿಕ್ಸಲ್:

  ಪೋಟೋ ಕ್ವಾಲಿಟಿಯನ್ನು ಮೆಗಾ ಪಿಕ್ಸಲ್ ನಿರ್ಧರಿಸುವುದಿಲ್ಲ. ಇದು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಮಾತ್ರವೇ ಸಹಾಯ ಮಾಡಲಿದೆ. ಚಿತ್ರಗಳ ಕ್ವಾಲಿಟಿಯನ್ನು ನಿರ್ಧರಿಸುವುದು ಬೆಳಕು ಮತ್ತು ಸೆನ್ಸಾರ್ ಸೈಜ್.

  ರಾತ್ರಿ ಪೂರಾ ಜಾಜ್ ಮಾಡುವುದು ಕೆಟ್ಟದಲ್ಲ:

  ನಿಮ್ಮ ಸ್ಮಾರ್ಟ್ ಫೋನ್ ಅನ್ನು ರಾತ್ರಿ ಪೂರ್ಣ ಚಾರ್ಜ್ ಮಾಡುವುದು ಯಾವುದೇ ತೊಂದರೆಯನ್ನು ಮಾಡುವುದಿಲ್ಲ. ಬ್ಯಾಟರಿ ಫುಲ್ ಆದರೆ ಚಾಜ್ ಆಗುವುದು ತಾನಾಗಿಯೇ ನಿಲ್ಲಲ್ಲಿದೆ.

  ಇನ್ ಕಾಗ್ನಿಟೋ ಮೋಡ್:

  ಇನ್ ಕಾಗ್ನಿಟೋ ಮೋಡ್ ನಲ್ಲಿ ಬ್ರೌಸ್ ಮಾಡಿದರೆ ಹಿಸ್ಟರಿ ಮಾತ್ರವೇ ಉಳಿಯುವುದಿಲ್ಲ ಆದರೆ ನಿಮ್ಮ ಗುರುತು ಮಾತ್ರ ಹಾಗೆಯೇ ಇರಲಿದೆ. ಅದನ್ನು ಮರೆಮಾಚಲು ಸಾಧ್ಯವಿಲ್ಲ.

  ಆಕ್ಟಾ ಕೋರ್:

  ಆಕ್ಟಾಕೋರ್ ಪ್ರೊಸೆಸರ್ ಎಂದ ತಕ್ಷಣ ಅದು ಅತೀ ವೇಗದ ಪ್ರೊಸೆಸರ್ ಎಂದು ಅರ್ಥವಲ್ಲ. ಇದು ಮಾಡುವ ಕಾರ್ಯವನ್ನು ವಿಭಾಗಿಸುತ್ತದೆ. ಆಪ್ ಗಳು ಇದಕ್ಕೆ ಸಪೋರ್ಟ್ ಮಾಡಿದರೆ ಮಾತ್ರವೇ ವೇಗವಾಗಿ ಕಾರ್ಯನಿರ್ವಹಿಸಲಿದೆ.

  ಟೆಲಿಕಾಂ ಬೆಸ್ಟ್ ಆಫರ್‌ಗಳನ್ನು ತಿಳಿಯಲು ಟ್ರಾಯ್ ನೀಡಿರುವ ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು!!

  Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?
  ಇಂಟರ್ನೆಟ್ ಅಂದ್ರೆ www ಅಲ್ಲ:

  ಇಂಟರ್ನೆಟ್ ಅಂದ್ರೆ www ಅಲ್ಲ:

  ಇಂಟರ್ನೆಟ್ ಎಂದರೆ ನೆಟ್ವರ್ಕ್ ಆಫ್ ನೆಟ್ವರ್ಕ್. ಅದನ್ನು ಆಕ್ಸಸ್ ಪಡೆಯುವ ಸಲುವಾಗಿ ಮಾತ್ರವೇ www ಅನ್ನು ಪಡೆದುಕೊಳ್ಳಲಿದ್ದೇವೆ ಎನ್ನಲಾಗಿದೆ.

  ಮ್ಯಾಕ್ ಗೆ ವೈರಸ್ ಬರಲ್ಲ:

  ಸುಳ್ಳು, ಪ್ರತಿ ಗ್ಯಾಜೆಟ್ ಗಳು ವೈರಸ್ ನಿಂದ ಮುಕ್ತವಾಗಿಲ್ಲ. ಪ್ರತಿಯೊಂದಕ್ಕೂ ವೈರಸ್ ದಾಳಿ ಮಾಡಲಿವೆ. ಆದರೆ ಮ್ಯಾಕ್ ಗೆ ಕಡಿಮೆ ಪ್ರಮಾಣದಲ್ಲಿ ಲಗ್ಗೆ ಹಾಕುತ್ತವೆ,

  FHD ಗುಣಮಟ್ಟವು QHD ಗಿಂತ ಹೆಚ್ಚಲ್ಲ:

  FHD ಡಿಸ್ ಪ್ಲೇ 1920x1080 ಗುಣಮಟ್ಟವನ್ನು ಹೊಂದಿದ್ದರೆ QHD ಡಿಸ್ ಪ್ಲೇ 2560 x 1440 ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. QHD ಡಿಸ್ ಪ್ಲೇ ಯಾವಾಗಲು ಉತ್ತಮ ಗುಣಮಟ್ಟದ್ದು.

  ಬಿಸಿ-ಕೋಲ್ಡ್ ಆಗಬಾರದು:

  ನಿಮ್ಮ ಗ್ಯಾಜೆಟ್ ಗಳನ್ನು ತೀರಾ ಬಿಸಿಲಿನಲ್ಲಿ ಮತ್ತು ತೀರಾ ತಣ್ಣಗಿನ ಪ್ರದೇಶದಲ್ಲಿ ಇಡಬಾರದು ಎನ್ನಲಾಗಿದೆ. ಇದರಿಂದ ನಿಮ್ಮ ಗ್ಯಾಜೆಟ್ ಗೆ ಡ್ಯಾಮೆಜ್ ಆಗಲಿದೆ.

  ಚಾರ್ಜರ್ ಮ್ಯಾಟರ್ ಅಲ್ಲ:

  ಓರ್ಜಿನಲ್ ಚಾರ್ಜರ್ ನಲ್ಲಿ ಚಾರ್ಜ್ ಮಾಡುವುದು ಉತ್ತಮ. ಹಾಗೇಯೇ ಬೇರೆ ಚಾರ್ಜರ್ ಗಳನ್ನು ಬಳಕೆ ಮಾಡಿಕೊಂಡರು ಸಹ ಯಾವುದೇ ತಪ್ಪಿಲ್ಲ. ಆದರೆ ಲೋಕಲ್ ಬಳಕೆ ಮಾಡಬೇಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  With the increase in the use of gadgets, we start believing every common myth about gadgets such as not charging the battery overnight or more bars of network indicates a better connection. Here we have come up with ten such tech myths that you should not believe.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more