ನಿಮ್ಮ ಗೆಜೆಟ್ಸ್ ಗಳು ಬೇಹುಗಾರಿಕೆ ನಡೆಸುವುದನ್ನು ತಪ್ಪಿಸುವ 5 ವಿಧಾನಗಳು

  By GizBot Bureau
  |

  ನಮ್ಮ ಗೆಜೆಟ್ಸ್ ಗಳು ನಮ್ಮ ಉಪಕಾರಕ್ಕಾಗಿ ಇರಬೇಕೆ ವಿನಃ ಅದರಿಂದ ನಮಗೆ ತೊಂದರೆಯಾಗಬಾರದು. ಕೆಲವು ಅನಗತ್ಯ ತಪ್ಪುಗಳಿಂದಾಗಿ ನಮ್ಮ ಗೆಜೆಟ್ಸ್ ಗಳು ಗುಪ್ತಚರಗಳಂತೆ ವರ್ತಿಸಿ, ನಮ್ಮ ಸೀಕ್ರೆಟ್ಸ್ ಗಳನ್ನು ಬೇರೆಯವರಿಗೆ ತಿಳಿಯುವಂತೆ ಮಾಡಿ ಬಿಡುತ್ತೆ. ಹಾಗಾಗಿ ಯಾರೇ ಆಗಲಿ ನೀವು ಖರೀದಿಸಿದ ಗೆಜೆಟ್ಸ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರುವುದು ಬಹಳ ಒಳ್ಳೆಯದು.

  ನಿಮ್ಮ ಗೆಜೆಟ್ಸ್ ಗಳು ಬೇಹುಗಾರಿಕೆ ನಡೆಸುವುದನ್ನು ತಪ್ಪಿಸುವ 5 ವಿಧಾನಗಳು

  ಆ ಮೂಲಕ ನಿಮ್ಮ ವ್ಯವಹಾರಿಕ ಅಥವಾ ವಯಕ್ತಿಕ ವಿಚಾರಗಳು ಇತರೆಡೆಗೆ ತಲುಪದಿರುವಂತೆ ನೋಡಿಕೊಳ್ಳಲು ಸಾಧ್ಯವಿದೆ. ಹೌದು ನಿಮ್ಮ ಗೆಜೆಟ್ಸ್ ಗಳು ನಿಮ್ಮ ಬೇಹುಗಾರಿಕೆ ನಡೆಸಬಲ್ಲವು. ನಿಮ್ಮೆಲ್ಲ ವಿಚಾರಗಳು ನಿಮಗೆ ಗೊತ್ತಿಲ್ಲದೆ ಮತ್ತೊಬ್ಬರಿದೆ ತಲುಪಿ ಬಿಡಬಹುದು ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತೆ. ಆ ನಿಟ್ಟಿನಲ್ಲಿ ನೀವೇನು ಮಾಡಬಹುದು. ಯಾವ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಗೆಜೆಟ್ಸ್ ಗಳು ನಿಮ್ಮನ್ನೇ ಬೇಹುಗಾರಿಕೆ ನಡೆಸುವುದು ತಪ್ಪುತ್ತದೆ ಎಂಬ ಬಗ್ಗೆ ಇಲ್ಲಿದೆ ನೋಡಿ ಸಿಂಪಲ್ ಸಲಹೆಗಳು

  ಅಮೇಜಾನ್ ಈಕೋ, ಗೂಗಲ್ ಹೋಮ್ ನಂತರ ಡಿವೈಸ್ ಗಳಿಂದಾಗಿ ನೀವು ಜಸ್ಟ್ ವಾಯ್ಸ್ ಕಮಾಂಡ್ ಮಾಡಿದರೆ ಸಾಕಾಗುತ್ತದೆ. ನಿಮಗೆ ಗೊತ್ತಿಲ್ಲದೆ ಸಿಸ್ಟಮ್ ಆನ್ ಆಗಿದ್ದು, ನೀವೇನೋ ಮಾತನಾಡಿ, ಅದನ್ನು ಡಿವೈಸ್ ಗ್ರಹಿಸಿ ಮತ್ತೊಬ್ಬರಿಗೆ ಲೀಕ್ ಮಾಡಿ ಬಿಡಬಹುದು. ಸೋ ಬಿ ಕೇರ್ ಫುಲ್..

  ಕೆಲವೊಂದು ಕಮಾಂಡ್ ಗಳ ತಪ್ಪು ಗ್ರಹಿಕೆ ಇಲ್ಲವೇ, ತಪ್ಪಾದ ಕೋಡ್ ಬಳಕೆಯು ಕೂಡ ಸಂದಿಗ್ಧ ಪರಿಸ್ಥಿತಿಯನ್ನು ತಂದೊಡ್ಡಬಹುದು. ಹಾಗಾಗಿ ನಿಮ್ಮ ಗೆಜೆಟ್ಸ್ ಬೇಹುಗಾರಿಕೆ ನಡೆಸದಂತೆ ಮಾಡುವುದು ಹೇಗೆ .. ಮುಂದೆ ಓದಿ..

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  MIC ಅನ್ನು ನಿಷ್ಕ್ರಿಯಗೊಳಿಸಿರಿ

  ಸ್ಮಾರ್ಟ್ ಸ್ಪೀಕರ್ ಗಳಲ್ಲಿ ಒಂದು ಫಿಸಿಕಲ್ ಬಟನ್ ಇರುತ್ತೆ. ಅದು ಮೈಕ್ರೋಫೋನ್ ಗಳನ್ನು ಡಿಸೇಬಲ್ ಅಥವಾ ನಿಷ್ಕ್ರಿಯಗೊಳಿಸಲು ಇರುವ ಒಂದು ವಿಧಾನ. ಇದು ಮೈಕ್ರೋಫೋನ್ ಗಳನ್ನು ಡಿಆಕ್ಟಿವೇಟ್ ಮಾಡಲು ಇರುವ ಒಂದು ಅವಕಾಶವಾಗಿದ್ದು, ವಯಕ್ತಿಕ ಅಥವಾ ಸೂಕ್ಷ್ಮ ವಿಚಾರಗಳನ್ನು ಇಲ್ಲವೇ ವೃತ್ತಿಪರವಾದ ವಿಚಾರಗಳ ಮಾಹಿತಿಯನ್ನು ಮಾತನಾಡುವಾಗ ಯಾವಗಲೂ ಈ ಬಟನ್ ನ್ನು ಬಳಕೆ ಮಾಡಬೇಕು. ನಿಮ್ಮ ಮಾತುಕತೆ ಮುಗಿದ ನಂತರ ಈ ಸ್ವಿಚ್ಚನ್ನು ಆನ್ ಮಾಡಿ. MIC ನ್ನು ಆಫ್ ಮಾಡಿ ಇಡುವುದು ದೊಡ್ಡ ಕೆಲಸವೇನಲ್ಲ.

  MIC ಗೆ ಕೆಲವು ವಿಚಾರಗಳಿಗೆ ಮಾತ್ರ ಆಕ್ಸಿಸ್ ನೀಡುವುದು

  ಈಗಾಗಲೇ ತಿಳಿಸಿದಂತೆ ಮೈಕ್ರೋಫೋನ್ ನ್ನು ಆಫ್ ಮಾಡಿ ಇಡುವುದೊಂದೇ ಎಲ್ಲ ಸಮಸ್ಯೆಗೂ ಪರಿಹಾರವಲ್ಲ., ಕೇವಲ ಸ್ಪೀಕರ್ ಆಗಿ ಮಾತ್ರ ನಿಮ್ಮ ಫೋನನ್ನ ನೀವು ಬಳಕೆ ಮಾಡುವುದಿಲ್ಲ ಅಲ್ವಾ.. ಹಾಗಿರುವಾಗ ಹೀಗೆ ಮಾಡುವುದು ನಿಮಗೆ ಅಷ್ಟು ಸರಿ ಕಾಣುವುದಿಲ್ಲ ಎಂದಾದರೆ., ಖಂಡಿತ ಇದಕ್ಕೊಂದು ಬದಲಿ ಮಾರ್ಗವಿದೆ. ನೀವೇನು ಮಾಡಬಹುದು ಎಂದರೆ ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಮೈಕ್ರೋಫೋನ್ ಗೆ ಯಾವೆಲ್ಲ ಆಪ್ ಗಳ ಆಕ್ಸಿಸ್ ನೀಡಬೇಕು ಎಂಬುದನ್ನು ಆಯ್ಕೆ ಮಾಡಿ. ವೀಡಿಯೋ ಕಾಲ್, ವೀಡಿಯೋ ಕಾನ್ಫರೆನ್ಸಿಂಗ್ ಗಳಿಗೆ ಮಾತ್ರ ಅವಕಾಶ ಕೊಟ್ಟು, ಅಗತ್ಯವಿಲ್ಲದ ಆಪ್ ಗಳಿಗೆ ಮೈಕ್ರೋಫೋನ್ ಆಕ್ಸಿಸ್ ನ್ನು ಕಡಿತಗೊಳಿಸಿ ಬಿಡಿ.

  ಕ್ಯಾಮರಾ ಸ್ವಿಚ್ ಆಫ್ ಮಾಡಿ

  ನಿಮ್ಮ ಹೋಮ್ ಸೆಕ್ಯುರಿಟಿ ಕ್ಯಾಮರಾಗಳೇ ಆಗಿದ್ದರೆ, ಯಾವಾಗಲೂ ರೆಕಾರ್ಡ್ ಆಗುತ್ತಲೇ ಇರುವುದು ಭದ್ರತೆಯ ದೃಷ್ಟಿಯಿಂದ ಅಧ್ಬುತ ಐಡಿಯಾವೇ. ಆದರೆ ನೀವು ಮನೆಯಲ್ಲಿರುವಾಗ ಆ ಕ್ಯಾಮರಾಗಳನ್ನು ಗೋಡೆಯ ಕಡೆಗೆ ತಿರುಗುವಂತೆ ಮಾಡಬಹುದು. ಆ ಮೂಲಕ ಮನೆಯಲ್ಲಿ ನಡೆಯುವ ಕೆಲವು ಗುಪ್ತ ವಿಚಾರಗಳು ಇಲ್ಲವೇ ಪರ್ಸನಲ್ ಲೈಫಿನ ಸಂಗತಿಗಳು ರೆಕಾರ್ಡ್ ಆಗಿ ಇತರರಿಗೆ ಮಾಹಿತಿ ಹೋಗುವುದು ತಪ್ಪುತ್ತದೆ. ನೀವು ಮನೆಯಿಂದ ತೆರಳುತ್ತಿದ್ದಂತೆ ಅವುಗಳನ್ನು ಮತ್ತೆ ಆನ್ ಮಾಡಿ ಮೊದಲಿನ ಪೊಸಿಷನ್ ಗೆ ಬರುವಂತೆ ಮಾಡಬಹುದಾಗಿದೆ.

  ಒಮ್ಮೆ ನೋಡಿದರೆ ಅರ್ಥವಾಗದ 10 ನಂಬಲಾಗದ ಚಿತ್ರಗಳಿವು!!

  ಫ್ಯಾರಡೇ ಬ್ಯಾಗ್ ಗಳನ್ನು ಬಳಸಿ

  ಇದು ಸಾಮಾನ್ಯದ ಬ್ಯಾಗ್ ಅಲ್ಲ. ನಿಮ್ಮ ಮೊಬೈಲ್ ಇಡುವ ಅಥವಾ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಟ್ಟುಕೊಳ್ಳುವ ಪೌಚ್. ಇದರ ವಿಶೇಷತೆ ಏನೆಂದರೆ ಈ ಬ್ಯಾಗ್ ನಲ್ಲಿ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಟ್ಟರೆ, ಅದರಿಂದ ಯಾವುದೇ ಎಲೆಕ್ಟ್ರೋಮ್ಯಾಗ್ನಟಿಕ್ ತರಂಗಗಳು ಹೊರಹೋಗುವುದಕ್ಕೆ ಈ ಬ್ಯಾಗ್ ಅವಕಾಶ ನೀಡುವುದಿಲ್ಲ. ಇದರಿಂದಾಗಿ ಯಾರಿಗೂ, ಯಾವುದೇ ಕಾರಣಕ್ಕೂ ನೀವಿರುವ ಸ್ಥಳದ ಮಾಹಿತಿಯಾಗಲಿ, ಇನ್ನಿತರೆ ಯಾವುದೇ ಮಾಹಿತಿಯಾಗಲಿ ಸೋರಿಕೆಯಾಗಲು ಬಿಡುವುದಿಲ್ಲ. ಆದರೆ ಈ ಬ್ಯಾಗಿನ ವೈಫಲ್ಯವೇನೆಂದರೆ ಇದರಲ್ಲಿ ಮೊಬೈಲ್ ಇಟ್ಟುಕೊಂಡರೆ ನಿಮಗೆ ಯಾವ ಫೋನ್ ಕಾಲ್ ಕೂಡ ಬರುವುದಿಲ್ಲ, ಮೆಸೇಜ್ ಕೂಡ ಬರುವುದಿಲ್ಲ. ನಿಮ್ಮ ಮೊಬೈಲ್ ಡೆಡ್ ಆಗಿರುವ ಸ್ಥಿತಿಯಲ್ಲಿದ್ದಂತೆ ಅಷ್ಟೇ.,.

  ಓದುವುದು

  ಬಹಳಷ್ಟು ಟೆಕ್ ಕಂಪೆನಿಗಳು ತಮ್ಮ ಬಳಕೆದಾರರಿಗೆ ಯಾವುದೇ ರೀತಿಯ ತೊಂದರೆ ಎದುರಾಗಬಾರದು ಮತ್ತು ಹೆಚ್ಚು ಕಷ್ಟಪಡುವಂತೆ ಆಗಬಾರದು ಎಂಬ ನಿಟ್ಟಿನಲ್ಲಿ ಹಲವಾರು ತಮ್ಮ ಡಿವೈಸ್ ಗಳ ಬಗೆಗಿನ ಮ್ಯಾನುವಲ್ ಮತ್ತು ಹೇಗೆ ಅದನ್ನು ಬಳಸಬೇಕು ಎಂಬ ಬಗೆಗಿನ ಆಪರೇಟಿಂಗ್ ಇನ್ಸ್ ಟ್ರಕ್ಷನ್ ಗಳನ್ನು ನೀಡಿರುತ್ತಾರೆ. ಅವುಗಳನ್ನು ಜಾಗರೂಕತೆಯಿಂದ ಓದಿ ಮತ್ತು ನೀವು ಖರೀದಿಸಿದ ಡಿವೈಸ್ ಗಳ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಂಡಿರಿ. ಅಷ್ಟೇ ಅಲ್ಲ,ಡಿವೈಸ್ ಗಳ ಬಗೆಗಿನ ಮಾಹಿತಿಯ ವೀಡಿಯೋಗಳು, ಪುಸ್ತಕಗಳು ಮತ್ತು ಲೇಖನಗಳನ್ನು ಅಧ್ಯಯನ ಮಾಡಿ. ಆಗ ಮಾತ್ರ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ಟೆಕ್ನಾಲಜಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ..

  ಎನಿ ವೇ , ಈ ಲೇಖನ ಓದಿದಕ್ಕೆ ಧನ್ಯವಾದಗಳು ಮತ್ತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸುವುದನ್ನು ಮರೆಯಬೇಡಿ...

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  With devices like Amazon Echo and Google Home available out there, many actions are just a voice command away. But like with all new technology, there are a lot of kinks that still need to be worked out.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more