7,999 ರೂ.ಗೆ 10ನೇ ಆವೃತ್ತಿ ಅಮೆಜಾನ್ ಕಿಂಡಲ್ ಬಿಡುಗಡೆ!

|

ಡಿಜಿಟಲ್ ಬುಕ್ ರೀಡರ್‌ಗಳಿಗಾಗಿ ಮತ್ತೊಂದು ವಿಶೇಷ ಮಾದರಿಯ ಇ-ಬುಕ್‌ ರೀಡರ್ ಅನ್ನು ಅಮೆಜಾನ್ ಬಿಡುಗಡೆಗೊಳಿಸಿದೆ. 167 ಪಿಪಿಐ ಪ್ರದರ್ಶನದೊಂದಿಗೆ 6 ಇಂಚಿನ ಗ್ಲೇರ್-ಮುಕ್ತ ಸ್ಕ್ರೀನ್ ಮತ್ತು ನವೀಕರಿಸಿದ ಎಲೆಕ್ಟ್ರಾನಿಕ್ ಇಂಕ್ ತಂತ್ರಜ್ಞಾನವನ್ನು ಹೊತ್ತು ದೇಶದಲ್ಲಿ ನೂತನ ಮಾದರಿಯ ಅಮೆಜಾನ್ ಕಿಂಡಲ್ 10ನೇ ಆವೃತ್ತಿ ಇ ಬುಕ್‌ ರೀಡರ್ ಮಾರುಕಟ್ಟೆಗೆ ಬಂದಿದೆ.

ನೂತನ ಅಮೆಜಾನ್ ಕಿಂಡಲ್ 10ನೇ ಆವೃತ್ತಿ ಇ ಬುಕ್‌ ರೀಡರ್‌ನಲ್ಲಿ ಈ ಕಿಂಡಲ್ ಪರದೆಯು ವಿಶೇಷವಾದ ಕೆಪ್ಯಾಸಿಟಿವ್ ಟಚ್ ಅನ್ನು ಬಳಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಡಿಸ್‌ಪ್ಲೇ ಪ್ರಕಾಶವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು ಮತ್ತು ಸೂರ್ಯನ ಬೆಳಕಿನಲ್ಲಿಯೂ ಮತ್ತು ಮನೆಯೊಳಗೂ ಸುಲಲಿತವಾಗಿ ಓದಲು ಸಾಧ್ಯವಾಗುವಂತಹ ತಂತ್ರಜ್ಞಾನವನ್ನು ತರಲಾಗಿದೆ.

7,999 ರೂ.ಗೆ 10ನೇ ಆವೃತ್ತಿ ಅಮೆಜಾನ್ ಕಿಂಡಲ್ ಬಿಡುಗಡೆ!

ಲೈಟ್ ಹೊಂದಾಣಿಕೆ ಆಯ್ಕೆಯು ಇ ಬುಕ್ ಪ್ರಿಯರಿಗೆ ಹೆಚ್ಚು ಅನುಕೂಲವಾಗಿದೆ. ಗೀರು ಬೀಳದ ಡಿಸ್‌ಪ್ಲೇ ಹೊಂದಿರುವ ಅಮೆಜಾನ್ ಕಿಂಡಲ್, ಸುಧಾರಿತ ಎಲೆಕ್ಟ್ರಾನಿಕ್ ಇಂಕ್ ತಂತ್ರಜ್ಞಾನ ಹೊಂದಿದೆ. ಇನ್ನು ಅಧಿಕ ಕಾಂಟ್ರಾಸ್ಟ್ ಮತ್ತು ಲೇಸರ್ ಕ್ವಾಲಿಟಿ ಟೆಕ್ಸ್ಟ್ ಬಳಕೆದಾರರಿಗೆ ಅಮೆಜಾನ್ ಕಿಂಡಲ್ 10ನೇ ಆವೃತ್ತಿ ಹೆಚ್ಚು ಅನುಕೂಲ ಒದಗಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

4GB ಆಂತರಿಕ ಸಂಗ್ರಹದೊಂದಿಗೆ ಮತ್ತು Wi-Fi ಸಂಪರ್ಕ ಹೊಂದಿರುವ ಈ ಅಮೆಜಾನ್ ಕಿಂಡಲ್ 10ನೇ ಆವೃತ್ತಿ ಬೆಲೆ ದೇಶದಲ್ಲಿ 7,999 ರೂ.ಗಳಾಗಿವೆ. ಅಮೆಜಾನ್‌.ಇನ್ ಮೂಲಕ ಅಮೆಜಾನ್ ಕಿಂಡಲ್ 10ನೇ ಆವೃತ್ತಿ ಲಭ್ಯವಿದ್ದು, ಗ್ರಾಹಕರು ಅಮೆಜಾನ್ ಕಿಂಡಲ್ ಅನ್ನು ಏ. 9 ರವರೆಗೆ ಪ್ರಿ ಬುಕ್ ಮಾಡಲು ಅವಕಾಶವಿದೆ. ಏ. 10ರಿಂದ ಖರೀದಿಗೆ ಲಭ್ಯವಾಗಲಿದೆ.

7,999 ರೂ.ಗೆ 10ನೇ ಆವೃತ್ತಿ ಅಮೆಜಾನ್ ಕಿಂಡಲ್ ಬಿಡುಗಡೆ!

ಅಮೆಜಾನ್ ಕಿಂಡಲ್ 10ನೇ ಆವೃತ್ತಿ ಇ ಬುಕ್‌ ರೀಡರ್ ಅನ್ನು ಪ್ರಿಬುಕ್ ಮಾಡುವ ಗ್ರಾಹಕರಿಗೆ ಮೊದಲ ಇಬುಕ್ ಉಚಿತದ ಜತೆಗೆ 1,199 ರೂ. ಮೌಲ್ಯದ ಎರಡು ವರ್ಷಗಳ ಟೋಟಲ್ ಪ್ರೊಟೆಕ್ಷನ್ ಪ್ಲ್ಯಾನ್ ಕೂಡ ಉಚಿತವಾಗಿ ದೊರೆಯುತ್ತದೆ. ಹಗುರ ಮತ್ತು ತೆಳುವಾದ ವಿನ್ಯಾಸ ಹೊಂದಿರುವ ಅಮೆಜಾನ್ ಕಿಂಡಲ್ 10ನೇ ಆವೃತ್ತಿ ಹೆಚ್ಚು ಗ್ರಾಹಕರಿಗೆ ಪ್ರಿಯವಾಗಲಿದೆ.

Best Mobiles in India

English summary
Amazon launches new Kindle with adjustable front light for Rs 7,999. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X