ಈ 10 ಹೆಡ್‌ಫೋನ್ಸ್‌ಗಳಲ್ಲಿ ನಿಮಗ್ಯಾವುದು ಇಷ್ಟ?!

|

ಹತ್ತಾರು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿರುವಾಗ ಯಾವ ಸ್ಮಾರ್ಟ್‌ಫೋನ್ ಬೆಸ್ಟ್‌ ಎಂದು ಹತ್ತಾರು ಕಡೆ ವಿಚಾರಿಸಿ ಖರೀದಿಸುವ ಸ್ಮಾರ್ಟ್‌ ಗ್ರಾಹಕರಿದ್ದಾರೆ. ಆದರೆ, ಅದೆಷ್ಟೇ ಉತ್ತಮ ಸ್ಮಾರ್ಟ್‌ಫೋನ್‌ ಖರೀದಿಸಿದರೂ ಸಹ ಅತ್ಯುತ್ತಮ ಉತ್ತಮ ಹೆಡ್‌ಫೋನ್ ಖರೀದಿಸುವುದಕ್ಕೆ ಮಾತ್ರ ಮನಸ್ಸು ಮಾಡುವುದಿಲ್ಲ. ಹಾಗಾಗಿ, ಮ್ಯೂಸಿಕ್ ಕೇಳಲು ಅತ್ಯುತ್ತಮ ಹೆಡ್‌ಫೋನ್‌ ಒಂದಿರಬೇಕು ಎಂದು ಬಯಸುವ ಗ್ರಾಹಕರೇ ಇಲ್ಲಿ ಕೇಳಿ.!

ಈ 10 ಹೆಡ್‌ಫೋನ್ಸ್‌ಗಳಲ್ಲಿ ನಿಮಗ್ಯಾವುದು ಇಷ್ಟ?!

ಹೌದು, ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳ ತರಹೇವಾರಿ ಹೆಡ್‌ಫೋನ್‌ಗಳು ದೊರೆಯುತ್ತವೆ. ಆದರೆ, ಅವುಗಳಲ್ಲಿ ಅತ್ಯುತ್ತಮ ಹೆಡ್‌ಫೋನ್‌ಗಳು ಯಾವುವು?, ಹೆಡ್‌ಫೋನ್ ಖರೀದಿಸುವ ಮುನ್ನ ಅಂಶಗಳನ್ನು ಗಮನಿಸಿ ಹೆಡ್‌ಫೋನ್ ಖರೀದಿಸಿಸಬೇಕು?, ಹೆಡ್‌ಫೋನಿನಲ್ಲಿ ಮೈಕ್ರೋಫೋನ್ ವ್ಯವಸ್ಥೆ ಇರಬೇಕೆ ಎಂಬ ಎಲ್ಲಾ ವಿಷಯಗಳನ್ನು ನಾವು ತಿಳಿಇರುವುದಿಲ್ಲ. ಹಾಗಾಗಿ ಇಂದಿನ ಲೇಖನದಲ್ಲಿ, ಉತ್ತಮ ಕ್ವಾಲಿಟಿಯ ಆಡಿಯೋ ಹೊಂದಿರುವ ಬೆಸ್ಟ್ ಹೆಡ್‌ಫೋನ್ಗಳನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ.

ಬೋಸ್‌ ಕ್ವೆಟ್ ಕಂಫರ್ಟ್ 25

ಬೋಸ್‌ ಕ್ವೆಟ್ ಕಂಫರ್ಟ್ 25

ಬೋಸ್‌ ಕಂಪನಿಯ ಈ ಹೆಡ್‌ಫೋನ್ ನಂ1 ಹೆಡ್‌ಫೋನ್‌ ಆಗಿದೆ. ಈ ಹೆಡ್‌ಫೋನ್‌ ಕಿವಿಗಳಿಗೆ ಹಿತಕರ ಅನುಭವ ನೀಡುತ್ತದೆ ಹೊರಗಿನ ಇತರೆ ಶಬ್ದ ಕೇಳಿಸುವುದಿಲ್ಲ. ಇದರಿಂದ ನಿಮ್ಮ ಕೇಳುವ ಅನುಭವ ಅತ್ಯುತ್ತಮವಾಗಿ ನೀಡಲಾಗಿದೆ. ಈ ಹೆಡ್‌ಫೋನ್ ಬೆಲೆ 25,200 ರೂಪಾಯಿ ಆಗಿದೆ.

ಸೆನ್ಹೆಸರ್ ಮೊಮೆಂಟಮ್ 2.0

ಸೆನ್ಹೆಸರ್ ಮೊಮೆಂಟಮ್ 2.0

ಈ ಸೆನ್ಹೆಸರ್ ಮೊಮೆಂಟಮ್ ಹೆಡ್‌ಫೋನ್‌ ಒಳ್ಳೆಯ ಫ್ಯಾಬ್ರಿಕಿನ ಹೊಂದಿದೆ ಇದರೊಂದಿದೆ ಸಿಗ್ನೇಚರ್ ಕ್ವಾಲಿಟಿ ಆಡಿಯೋ ಕೇಳಬಹುದು. ಇದರಲ್ಲಿ ವೈಯರ್ ಮತ್ತು ವೈಯರ್‌ಲೆಸ್‌ ಎರಡು ಆಯ್ಕೆಗಳಲ್ಲಿ ದೊರೆಯಲಿದೆ. ವಿತ್ ವೈರ್‌ ಹೆಡ್‌ಫೋನ್ ದರ 15,990 ರೂಪಾಯಿಗಲಾದರೆ, ವೈಯರ್‌ಲೆಸ್‌ ಹೆಡ್‌ಫೋನ್ ದರ ಸ್ವಲ್ಪ ಹೆಚ್ಚಿದೆ.

ಬೆಯರ್ ಡೈನಾಮಿಕ್ MMX 102iE

ಬೆಯರ್ ಡೈನಾಮಿಕ್ MMX 102iE

ಬೆಯರ್ ಡೈನಾಮಿಕ್ ಹೆಸರಿನ ಈ ಹೆಡ್‌ಫೋನ್‌ ಸೌಂಡ್‌ನಲ್ಲೂ ಸಖತ್ತಾಗಿದೆ. ಕೇಳುಗರಿಗೆ ಖುಷಿ ನೀಡುವ ಸಾಧನವಾಗಿ ಇದರ ಮೈಕ್ ಸಹ ಅತ್ಯುತ್ತಮ ಆಡಿಯೋ ಔಟ್‌ಪುಟ್ ನೀಡುತ್ತದೆ. ಇದೊಂದು ಉತ್ತಮ ಹೆಡ್‌ಫೋನ್‌ ಎನ್ನಬಹುದು. ಇದರ ಬೆಲೆ 4,899 ರೂಪಾಯಿಗಳು

ಸೋನಿ MDR AS800AP

ಸೋನಿ MDR AS800AP

ಮ್ಯೂಸಿಕ್ ಪ್ರಿಯರಿಗೆ ಸೋನಿ ಕಂಪನಿಯ ಸಾಧನಗಳ ಪರಿಚಯ ಇದ್ದೇ ಇರುತ್ತದೆ. ಸೋನಿ ಈ ಮಾಡೆಲ್ ಹೆಡ್‌ಫೋನ್ ಸ್ವಲ್ಪ ದುಬಾರಿ ಆಗಿದ್ದು, ತನ್ನ ಪವರಫುಲ್ ಮತ್ತು ಕ್ಲಿಯರ್ ಸೌಂಡ್‌ ಫೀವರ್ಸ್‌ಗಳಿಂದ ಒಂದು ಉತ್ತಮ ಹೆಡ್‌ಫೋನ್‌ ಎಂದೆನಿಸಿಕೊಂಡಿದೆ. ಖಂಡಿತ ಕೇಳುಗರಿಗೆ ಅತ್ಯುತ್ತಮ ಅನುಭವ ನೀಡುತ್ತದೆ. ಇದರ ಬೆಲೆ 11,628 ರೂಪಾಯಿಗಳು.

ಪ್ಯ್ಲಾಂಟ್ರೊನಿಕ್ ಬ್ಯಾಕ್‌ಬೀಟ್‌ ಸೆನ್ಸ್‌

ಪ್ಯ್ಲಾಂಟ್ರೊನಿಕ್ ಬ್ಯಾಕ್‌ಬೀಟ್‌ ಸೆನ್ಸ್‌

ಪ್ಯ್ಲಾಂಟ್ರೊನಿಕ್ ಹೆಸರಿನ ಈ ಹೆಡ್‌ಫೋನ್ ಅತೀ ಹಗುರವಾಗಿದೆ ಕಿವಿಗಳಿಗೆ ಹಿತಕರ ಅನುಭವ ನೀಡುವುದು ಅಲ್ಲದೇ ಇದರ ಆಡಿಯೋ ಕಂಟ್ರೋಲ್ ಆಯ್ಕೆಗಳನ್ನು ಇಯರ್‌ಪ್ಯಾಡ್‌ನಲ್ಲಿಯೇ ನೀಡಿದ್ದಾರೆ, ಈ ಹೆಡ್‌ಫೋನಿನ ಬಳಕೆ ಸುಲಭವಾಗಿದೆ. ಇದರ ಬೆಲೆ 7,550 ರೂಪಾಯಿಗಳು.

RHA S500i

RHA S500i

ಈ ಹೆಡ್‌ಫೋನ್ ಒಂದು ಉತ್ತಮ ಆಡಿಯೋ ಬ್ಯಾಲೆನ್ಸ್‌ಹೊಂದಿದ್ದು, ಇದರ ಸಹಾಯದಿಂದ ಕೇಳುಗರ ಎರಡು ಕಿವಿಗಳಲ್ಲಿ ಸೌಂಡ್ ಉತ್ತಮವಾಗಿ ಕೇಳುತ್ತದೆ. ಇದರೊಂದಿಗೆ ಅಲ್ಟ್ರಾ ಕಾಂಪ್ಯ್ಟಾಂಟ್ ಪವರಫುಲ್ ಆಡಿಯೋ ಇರುತ್ತದೆ. ಸಿಲ್ವರ್ ಬಣ್ಣದಲ್ಲಿ ಲಭ್ಯ. ಇದರ ಬೆಲೆ 3,999 ರೂಪಾಯಿಗಳು.

ಜಬ್ರಾ UC VOICE 550

ಜಬ್ರಾ UC VOICE 550

ಜಬ್ರಾ ಹೆಡ್‌ಫೋನ್‌ನಲ್ಲಿ ಅತ್ಯುತ್ತಮ ಸೌಂಡ್ ಕ್ಲಿಯರಿ ಕ್ವಾಲಿಟಿ ಇದ್ದು, ಸರಳವಾಗಿ ಮ್ಯೂಟ್ ಆಯ್ಕೆ ಬಳಸಬಹುದಾಗಿದೆ. ಈ ಹೆಡ್‌ಫೋನಿಗೆ ಯುಎಸ್‌ಬಿ ಕನೆಕ್ಟಿವಿಟಿ ಮಾಡಲು ಅವಕಾಶವಿದೆ. ವೈಯರ್‌ಲೈಸ್‌ ಮಾದರಿಯಲ್ಲಿಯೂ ಈ ಸಾಧನ ಗ್ರಾಹಕರಿಗೆ ದೊರೆಯಲಿದೆ. ಇದರ ಬೆಲೆ 6,000ರೂಪಾಯಿಗಳು ಮಾತ್ರ.

ಸೌಂಡ್‌ಮ್ಯಾಜಿಕ್‌ E10s

ಸೌಂಡ್‌ಮ್ಯಾಜಿಕ್‌ E10s

ಈ ಹೆಡ್‌ಫೋನ್ ಅತ್ಯುತ್ತಮ ಇಯರ್‌ಹೆಡ್‌ ಲುಕ್‌ ಚೆನ್ನಾಗಿದ್ದು, ಇದು ಹೆಡ್‌ಫೋನಿಗೆ ಬ್ಯೂಟಿ ತಂದು ಕೊಟ್ಟಿದೆ. ಎರಡು ಕಿವಿಗಳಗೆ ಉತ್ತಮ ಆಡಿಯೋ ಬ್ಯಾಲೆನ್ಸ್ ಇರುವುದು ಕೇಳುಗರಿಗೆ ಮ್ಯೂಸಿಕ್‌ನ ಪ್ರತಿಯೊಂದು ಶಬ್ದಗಳು ಸ್ಪಷ್ಟವಾಗಿ ಕೇಳುತ್ತವೆ. ಈ ಸಾಧನದ ಬೆಲೆ 2,999 ರೂಪಾಯಿಗಳು.

ಬ್ರೈನ್‌ವೇಜ್ ಓಮೆಗಾ

ಬ್ರೈನ್‌ವೇಜ್ ಓಮೆಗಾ

ಈ ಬ್ರೈನ್‌ವೇಜ್ ಓಮೆಗಾ ಹೆಡ್‌ಫೋನ್‌ಗಳು ಸ್ಟೈನ್‌ಲೆಸ್ ಸ್ಟೀಲ್ ಔಟ್ ಲುಕ್‌ ಹೊಂದಿದ್ದು, ಇದು ಹೆಡ್‌ಫೋನ್‌ ಗುಣಮಟ್ಟಕ್ಕೆ ಉದಾಹರಣೆಯಾಗಿದೆ. ಇದರ ಆಡಿಯೋ ಅತ್ಯುತ್ತಮವಾಗಿದೆ. ಹೆಡ್‌ಫೋನ್ ಬಳಸಿವಾಗ ಕೇಳುಗರಿಗೆ ಹೊರಗಿನ ಇತರೆ ಶಬ್ದ ಕೇಳಿಸುವುದಿಲ್ಲ. ಒಳ್ಳೆಯ ಸೌಂಡ್ ಅನುಭವ ನೀಡುವ ಈ ಹೆಡ್‌ಫೋನ್ ದರ ದುಬಾರಿ ಎನಿಸುವುದಿಲ್ಲ. ಇದರ ಬೆಲೆ 999.ರೂಪಾಯಿಗಳು.

ಪ್ಯಾನಾಸೋನಿಕ್ RP-HXD3W

ಪ್ಯಾನಾಸೋನಿಕ್ RP-HXD3W

ಅಗಲವಾದ ಇಯರ್ ಹೆಡ್ಸ್‌ಹೊಂದಿರುವ ಪ್ಯಾನಾಸೋನಿಕ್‌ನ ಈ ಹೆಡ್‌ಫೋನ್ ಆಡಿಯೋ ಔಟ್‌ಪುಟ್ ಉನ್ನತ ಮಟ್ಟದಲ್ಲಿದೆ. ವೈಯರ್‌ಲೆಸ್‌ ಆಯ್ಕೆ ಈ ಹೆಡ್‌ಫೋನ್ ಮಾದರಿಯಲ್ಲಿ ಲಭ್ಯವಿಲ್ಲ. ಇದರ ಸೌಂಡ್‌ನ ಗುಣಮಟ್ಟವು ಅತ್ಯುನ್ನತವಾಗಿದ್ದು, ನೋಡಲು ಅಂದವಾಗಿ ಕಾಣುತ್ತದೆ. ಇದರ ದರ 1820 ರೂಪಾಯಿಗಳು.

Best Mobiles in India

English summary
Best Headphones in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X