ರಕ್ಷಾ ಬಂಧನಕ್ಕಾಗಿ ಸಹೋದರಿಗೆ ಕೊಡುಗೆ ನೀಡಲು ಟಾಪ್ ಗ್ಯಾಜೆಟ್ಸ್

By Shwetha
|

ರಕ್ಷಾ ಬಂಧನದ ಈ ವಿಶೇಷ ಸಂದರ್ಭದಲ್ಲಿ ರಾಖಿ ಕಟ್ಟುವ ನಿಮ್ಮ ಪ್ರೀತಿಯ ತಂಗಿಗೆ ಉತ್ತಮ ಕೊಡುಗೆಗಳನ್ನು ನೀಡುವ ಆಸೆ ನಿಮಗಿದೆ ಎಂದಾದಲ್ಲಿ ಇಂದಿನ ಲೇಖನದಲ್ಲಿ ವಿಶೇಷವಾದ ಆಕರ್ಷಕ ಕೊಡುಗೆಗಳು. ಬಜೆಟ್ ಬೆಲೆಯಲ್ಲೇ ಈ ಕೊಡುಗೆಗಳು ನಿಮಗೆ ದೊರೆಯುತ್ತಿದ್ದು, ನಿಮ್ಮ ಮುದ್ದು ತಂಗಿಗೆ ಪ್ರೀತಿಯ ದ್ಯೋತಕವಾಗಿ ಇದನ್ನು ನೀಡಬಹುದಾಗಿದೆ.

ಓದಿರಿ: ಅತಿ ವೇಗದಲ್ಲಿ ಫೋನ್ ಚಾರ್ಜ್ ಮಾಡಲು ಟಿಪ್ಸ್

ಬನ್ನಿ ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಮುದ್ದಿನ ತಂಗಿಗೆ ನೀವು ನೀಡಬಹುದಾದ ಬಜೆಟ್ ಬೆಲೆಯ ಕೊಡುಗೆಗಳ ವಿವರಗಳನ್ನು ನೀಡುತ್ತಿದ್ದು ಇದು ಎಷ್ಟು ವಿಶೇಷವಾದುದು ಎಂಬುದನ್ನು ನೀವೇ ಅರಿತುಕೊಳ್ಳಿ.

ಸ್ಮಾರ್ಟ್‌ವಾಚ್

ಸ್ಮಾರ್ಟ್‌ವಾಚ್

ಫಿಟ್‌ನೆಸ್ ಟ್ರ್ಯಾಕಿಂಗ್ ಮತ್ತು ಸ್ಮಾರ್ಟ್‌ಫೋನ್‌ನೊಂದಿಗೆ ಸಿಂಕ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡು ಬಂದಿರುವ ಸ್ಮಾರ್ಟ್‌ವಾಚ್‌ಗಳು ಅಧಿಸೂಚನೆಯನ್ನು ಸರಳವಾಗಿ ನೀಡುತ್ತವೆ. ಎಲ್ಲಾ ಬಗೆ ಬಗೆಯ ಬೆಲೆಯಲ್ಲೂ ನಿಮಗೆ ಸ್ಮಾರ್ಟ್‌ವಾಚ್ ಲಭ್ಯವಿದೆ.
ಆಪಲ್ ವಾಚ್ ರೂ 33,150 ಕ್ಕೆ ದೊರೆಯುತ್ತಿದ್ದರೆ, ಸ್ಯಾಮ್‌ಸಂಗ್ ಗೇರ್ S2 ಬೆಲೆ ರೂ 29,900 ಆಗಿದೆ. ಮಧ್ಯಮ ಕ್ರಮಾಂಕದ ಸ್ಮಾರ್ಟ್‌ವಾಚ್ ಎಂದಾದಲ್ಲಿ ಮೋಟೋ 360 ಯನ್ನು ರೂ 21,899 ಕ್ಕೆ ನಿಮಗೆ ಖರೀದಿಸಬಹುದಾಗಿದೆ.

ಸ್ಮಾರ್ಟ್‌ಫೋನ್‌ಗಳು

ಸ್ಮಾರ್ಟ್‌ಫೋನ್‌ಗಳು

ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ನೀವು ಖರೀದಿಸಬೇಕು ಎಂದಾದಲ್ಲಿ ರೆಡ್ಮೀ 3S ಪ್ರೈಮ್ ಅನ್ನು ರೂ 8,999 ಕ್ಕೆ ನಿಮಗೆ ಕೊಂಡುಕೊಳ್ಳಬಹುದಾಗಿದೆ. ಇನ್ನೂ ಸ್ವಲ್ಪ ಮುಂದೆ ಹೋದಲ್ಲಿ ಮೆಟಲ್ ಒನ್ ಪ್ಲಸ್ 3 ಯನ್ನು ರೂ 27,999 ಕ್ಕೆ ನಿಮಗೆ ಖರೀದಿ ಮಾಡಬಹುದಾಗಿದೆ.

ಹೆಡ್‌ಫೋನ್‌ಗಳು

ಹೆಡ್‌ಫೋನ್‌ಗಳು

ನಿಮ್ಮ ಸಹೋದರಿಗೆ ಹಾಡುಗಳು ಮತ್ತು ಸಿನಿಮಾ ಹೆಚ್ಚು ಇಷ್ಟ ಎಂದಾದಲ್ಲಿ, ಉತ್ತಮ ಹೆಡ್‌ಫೋನ್‌ಗಳನ್ನು ಕೊಡುಗೆಯಾಗಿ ನೀಡಬಹುದು ಅಲ್ಲವೇ? ಬೋಸ್ ಹೆಡ್‌ಫೋನ್ ರೂ 9,512 ಕ್ಕೆ ಲಭ್ಯವಾಗುತ್ತಿದ್ದು, ಸೆನ್ ಹೈಸರ್ ಮತ್ತು ಕ್ಲಿಪ್ ಸ್ಯಾಚ್ ಹೆಡ್‌ಫೋನ್ ಅನ್ನು ಖರೀದಿಸಿ ಪ್ರೀತಿಯ ತಂಗಿಗೆ ನೀಡಬಹುದಾಗಿದೆ.

ಟ್ಯಾಬ್ಲೆಟ್ಸ್

ಟ್ಯಾಬ್ಲೆಟ್ಸ್

ವೆಬ್ ಬ್ರೌಸ್ ಮಾಡಲು ಸಿನಿಮಾ ವೀಕ್ಷಣೆಗೆ ಟ್ಯಾಬ್ಲೆಟ್ಸ್ ಹೆಚ್ಚು ಉಪಯುಕ್ತವಾದುದಾಗಿದೆ. ಹೊಸದಾಗಿ ಲಾಂಚ್ ಆಗಿರುವ ಐಪ್ಯಾಡ್ ಪ್ರೊ ರೂ 49,900 ಕ್ಕೆ ದೊರೆಯುತ್ತಿದ್ದು ಇದು ಹೆಚ್ಚು ಸೂಕ್ತವಾದುದಾಗಿದೆ. ಲೆನೊವೊದ ಯೋಗಾ ಟ್ಯಾಬ್ 3 ಮತ್ತು ಶ್ಯೋಮಿಯ ಎಮ್ಐ ಪ್ಯಾಡ್ ನಿಮಗೆ ಉತ್ತಮ ಆಯ್ಕೆ ಎಂದೆನಿಸಿದೆ.

ಡಿಜಿಟಲ್ ಕ್ಯಾಮೆರಾಗಳು

ಡಿಜಿಟಲ್ ಕ್ಯಾಮೆರಾಗಳು

ನಿಮ್ಮ ಸಹೋದರಿಗೆ ಫೋಟೋಗ್ರಫಿ ಎಂದರೆ ಹೆಚ್ಚು ಇಷ್ಟ ಎಂದಾದಲ್ಲಿ ಕ್ಯಾಮೆರಾವನ್ನು ಕೊಡುಗೆಯಾಗಿ ನೀಡಬಹುದಾಗಿದೆ. ಬೇಸಿಕ್ ಪಾಯಿಂಟ್‌ನಿಂದ ಹಿಡಿದು ಡಿಎಸ್‌ಎಲ್‌ಆರ್ ವರೆಗೂ ಅವರ ಆಯ್ಕೆಯ ಕ್ಯಾಮೆರಾವನ್ನು ನೀವು ಖರೀದಿಸಿ ನೀಡಬಹುದಾಗಿದೆ.

ಫಿಟ್‌ನೆಸ್ ಬ್ಯಾಂಡ್

ಫಿಟ್‌ನೆಸ್ ಬ್ಯಾಂಡ್

ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಫಿಟ್‌ನೆಸ್ ಬ್ಯಾಂಡ್‌ಗಳು ಹೆಚ್ಚು ಉಪಯುಕ್ತ ಎಂದೆನಿಸಿದ್ದು ನಿಮ್ಮ ಮುದ್ದಿನ ತಂಗಿಯ ಫಿಟ್‌ನೆಸ್ ಕಾಪಾಡಿಕೊಳ್ಳಲು ಇದು ಅಗತ್ಯದ್ದಾಗಿದೆ. ಇದರ ಬೆಲೆ ರೂ 19,990 ರಿಂದ ಆರಂಭವಾಗಲಿದೆ.

ಬ್ಲ್ಯೂಟೂತ್ ಸ್ಪೀಕರ್‌ಗಳು

ಬ್ಲ್ಯೂಟೂತ್ ಸ್ಪೀಕರ್‌ಗಳು

ನಿಮ್ಮ ತಂಗಿಗೆ ಸಂಘಟಿಸಿದ ಪಾರ್ಟಿಗಳು ಹೆಚ್ಚು ಇಷ್ಟ ಎಂದಾದಲ್ಲಿ, ಬ್ಲ್ಯೂಟೂತ್ ಸ್ಪೀಕರ್‌ಗಳು ಹೆಚ್ಚು ಉಪಯುಕ್ತದ್ದಾಗಿದೆ. ಇದನ್ನು ಸುಲಭವಾಗಿ ಸ್ಮಾರ್ಟ್‌ಫೋನ್‌ನೊಂದಿಗೆ ಪೇರ್ ಮಾಡಿದರೆ ಆಯಿತು. ಆರಂಭ ಬೆಲೆ ರೂ 8,495.

ಇ ರೀಡರ್ಸ್

ಇ ರೀಡರ್ಸ್

ನಿಮ್ಮ ತಂಗಿಗೆ ಪುಸ್ತಕಗಳು ಉತ್ತಮ ಸಂಗಾತಿ ಎಂದಾದಲ್ಲಿ, ಇ ರೀಡರ್ ಅನ್ನು ಕೊಡುಗೆಯಾಗಿ ನೀಡಿ ಅವರ ಮುಖದಲ್ಲಿ ಮಂದಹಾಸವನ್ನುಂಟು ಮಾಡಬಹುದಾಗಿದೆ. ದೀರ್ಘ ಬ್ಯಾಟರಿ ಬ್ಯಾಕಪ್, ಗ್ಲೇರ್ ಮುಕ್ತ ಡಿಸ್‌ಪ್ಲೇ ಹಾಗೂ ನೂರಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಇದರಲ್ಲಿ ಇರಿಸಿಕೊಳ್ಳಬಹುದಾಗಿದೆ.

ಪವರ್ ಬ್ಯಾಂಕ್ಸ್

ಪವರ್ ಬ್ಯಾಂಕ್ಸ್

ಪವರ್ ಬ್ಯಾಂಕ್‌ಗಳನ್ನು ನಿಮ್ಮ ಬಳಿ ನೀವು ಇಟ್ಟುಕೊಳ್ಳಲೇಬೇಕು. ನಿಮ್ಮ ತಂಗಿಗೆ ಪವರ್ ಬ್ಯಾಂಕ್ ಅನ್ನು ಕೊಡುಗೆಯಾಗಿ ನೀಡಿ ಅವರಿಂದ ನೀವು ಬೆಸ್ಟ್ ಎಂಬುದಾಗಿ ಕರೆಯಿಸಿಕೊಳ್ಳಬಹುದಾಗಿದೆ. ಸೋನಿ, ಹುವಾವೆ, ಶ್ಯೋಮಿ ಬ್ರ್ಯಾಂಡ್‌ನಲ್ಲಿ ನಿಮಗೆ ಇದನ್ನು ಖರೀದಿಸಬಹುದಾಗಿದೆ.

ಸ್ಮಾರ್ಟ್ ಒಡವೆ

ಸ್ಮಾರ್ಟ್ ಒಡವೆ

ನಿಮ್ಮ ತಂಗಿಯ ಸುಭದ್ರತೆಯನ್ನು ಮಾಡುವ ಈ ಒಡವೆಯಲ್ಲಿ ಆಧುನಿಕ ತಂತ್ರಜ್ಞಾನ ಉಪಕರಣಗಳನ್ನು ಅಳವಡಿಸಲಾಗಿದೆ. ಇಂಟಿಗ್ರೇಟ್ ಮಾಡಲಾದ ಬ್ಲ್ಯೂಟೂತ್ ಸಂಪರ್ಕವನ್ನು ಇದು ಹೊಂದಿರುತ್ತದೆ. ಇದನ್ನು ಸ್ಮಾರ್ಟ್‌ಫೋನ್‌ನೊಂದಿಗೆ ಸಿಂಕ್ ಮಾಡಬಹುದಾಗಿದ್ದು ರೂ 1,500 ಕ್ಕೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Here are 10 cool gadgets that will make perfect gifting items for sisters and make this Raksha Bandhan even more memorable for them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X