ಕೇವಲ 3,999ಕ್ಕೆ ವಿಶ್ವದ ಅತ್ಯಂತ ಅಗ್ಗದ 'ಎಲ್‌ಸಿಡಿ ಟಿವಿ' ಭಾರತದಲ್ಲಿ ಬಿಡುಗಡೆ!!

|

ಕೇವಲ 3,999 ರೂಪಾಯಿಗೆ ಒಂದು ಸೆಕೆಂಡ್ ಹ್ಯಾಂಡ್ ಟಿವಿ ಕೂಡ ಬರುವುದು ಕಷ್ಟ. ಆದರೆ, ಇದೇ ಬೆಲೆಯಲ್ಲಿ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಎಲ್‌ಸಿಡಿ 'ಟಿವಿ' ಒಂದು ಭಾರತದಲ್ಲಿ ಬಿಡುಗಡೆಯಾಗಿದೆ. ಫೀಚರ್ ಫೋನ್ ತಯಾರಕ ಡಿಟೆಲ್ (detel) ಮೊಬೈಲ್ ಕಂಪನಿ ಮಂಗಳವಾರ ಭಾರತದಲ್ಲಿ ಅತ್ಯಂತ ಅಗ್ಗದ ಎಲ್ಸಿಡಿ ಟಿವಿಯನ್ನು ಬಿಡುಗಡೆ ಮಾಡಿ ಆಶ್ಚರ್ಯಮೂಡಿಸಿದೆ.

ಹೌದು, ಕಳೆದ ವರ್ಷ ಆಗಸ್ಟ್‌ನಲ್ಲಿ 299 ರೂಪಾಯಿಗೆ ಅಗ್ಗದ ಫೋನ್ ಬಿಡುಗಡೆ ಮಾಡಿ ಮಾರುಕಟ್ಟೆಯ ಗಮಸೆಳೆದಿದ್ದ ಡಿಟೆಲ್ (detel) ಕಂಪನಿ ಇದೀಗ ವಿಶ್ವದಲ್ಲೇ ಅತ್ಯಂತ ಅಗ್ಗದ ಟಿವಿಯನ್ನು ಭಾರತದಲ್ಲಿ ಪರಿಚಯಿಸಿ ಮಾರುಕಟ್ಟೆಗೆ ಶಾಕ್ ನೀಡಿದೆ. ನೂತನ ಟಿವಿ ಬೆಲೆ ಕೇವಲ 3,999 ರೂಪಾಯಿಗಳಾಗಿದ್ದು, ಇದು ವಿಶ್ವದ ಅಗ್ಗದ ಎಲ್ಸಿಡಿ ಟಿವಿ ಎಂದು ಡಿಟೆಲ್ ಕಂಪೆನಿ ಹೇಳಿಕೊಂಡಿದೆ.

ಕೇವಲ 3,999ಕ್ಕೆ ವಿಶ್ವದ ಅತ್ಯಂತ ಅಗ್ಗದ 'ಎಲ್‌ಸಿಡಿ ಟಿವಿ' ಭಾರತದಲ್ಲಿ ಬಿಡುಗಡೆ!!

ಆರ್ಥಿಕ ಮುಗ್ಗಟ್ಟಿನಿಂದ ಈವರೆಗೂ ಟಿವಿ ಖರೀದಿ ಮಾಡದವರನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಕಡಿಮೆ ಬೆಲೆಯ ಎಲ್‌ಸಿಡಿ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಡಿಟೆಲ್ ತಿಳಿಸಿದೆ. ಹಾಗಾದರೆ, ಡಿಟೆಲ್ ಬಿಡುಗಡೆ ಮಾಡಿರುವ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಎಲ್‌ಸಿಡಿ 'ಟಿವಿ' ಹೇಗಿದೆ? ಫೀಚರ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ವಿಶ್ವದ ಅಗ್ಗದ ಎಲ್‌ಸಿಡಿ ಟಿವಿ!

ವಿಶ್ವದ ಅಗ್ಗದ ಎಲ್‌ಸಿಡಿ ಟಿವಿ!

ಇದೇ ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಮೊಬೈಲ್ ಕಂಪೆನಿ 'ಡಿಟೆಲ್' ವಿಶ್ವದ ಅಗ್ಗದ ಎಲ್ಸಿಡಿ ಟಿವಿಯನ್ನು ಬಿಡುಗಡೆ ಮಾಡಿದೆ. ಈ ಟಿವಿಗೆ "ಡಿಟೆಲ್ ಡಿ1" ಎಂದು ಕಂಪೆನಿ ಹೆಸರಿಸಿದ್ದು, ಈ ಹೊಸ ಟಿವಿ ವಿಶ್ವದ ಅತ್ಯಂತ ಆರ್ಥಿಕ ಎಲ್ಸಿಡಿ ಟಿವಿ ಎಂದು ಹೆಸರಾಗಿದೆ. ಏಕೆಂದರೆ, ಈ ಟಿವಿಯ ಬೆಲೆ ಕೇವಲ 3,999 ರೂಪಾಯಿಗಳು ಮಾತ್ರ.

ಪ್ರತಿಯೊಂದು ಮನೆಗೂ ಟಿವಿ

ಪ್ರತಿಯೊಂದು ಮನೆಗೂ ಟಿವಿ

ಪ್ರತಿಯೊಂದು ಮನೆಗೂ ಟಿವಿ ಎಂಬ ಯೋಜನೆಯಡಿ "ಡಿಟೆಲ್ ಡಿ1" ಟಿವಿ ಬಿಡುಗಡೆಯಾಗಿದೆ. ದೇಶದಲ್ಲಿ ಶೇಕಡಾ 30-33 ರಷ್ಟು ಮಂದಿ ಮನೆಯಲ್ಲಿ ಟಿವಿಯಿಲ್ಲ. ಹಾಗಾಗಿ, ಆರ್ಥಿಕ ಮುಗ್ಗಟ್ಟಿನಿಂದ ಈವರೆಗೂ ಟಿವಿ ಖರೀದಿ ಮಾಡದವರನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಬೆಲೆಯ ಎಲ್‌ಸಿಡಿ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಡಿಟೆಲ್ ತಿಳಿಸಿದೆ.

ಹೇಗಿದೆ

ಹೇಗಿದೆ "ಡಿಟೆಲ್ ಡಿ1" ಟಿವಿ!

ವಿಶ್ವದ ಅತ್ಯಂತ ಅಗ್ಗದ ಎಲ್‌ಸಿಡಿ ಟಿವಿ ಡಿಟೆಲ್ ಡಿ1 19 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 1366x768 ಪಿಕ್ಸೆಲ್ ರೆಸಲ್ಯೂಶನ್ ಮತ್ತು 300000:1 ಕಾಂಟ್ರಾಸ್ಟ್ ಸಾಮರ್ಥ್ಯದ ಈ ಟಿವಿಯಲ್ಲಿ A + ದರ್ಜೆಯ ಫಲಕವನ್ನು ನೀಡಲಾಗಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು 12W ಸ್ಪೀಕರ್‌ಗಳನ್ನು ಹೊಂದಿರುವ ಟಿವಿಯು ಸ್ಪಷ್ಟ ಆಡಿಯೋ ಔಟ್‌ಪುಟ್‌ ಅನ್ನು ನೀಡಲಿದೆ ಎಂದು ಕಂಪೆನಿ ತಿಳಿಸಿದೆ.

ಹೆಚ್‌ಡಿಎಂಐ ಮತ್ತು ಯುಎಸ್‌ಬಿ ಪೋರ್ಟ್

ಹೆಚ್‌ಡಿಎಂಐ ಮತ್ತು ಯುಎಸ್‌ಬಿ ಪೋರ್ಟ್

ಸಂಪರ್ಕದ ವಿಷಯದಲ್ಲಿ, ಡಿಟೆಲ್ ಡಿ 1 ಟಿವಿಯಲ್ಲಿ ಹೆಚ್‌ಡಿಎಂಐ ಪೋರ್ಟ್ ಮತ್ತು ಹೆಚ್‌ಡಿಎಂಐ ಪೋರ್ಟ್ ಅನ್ನು ನೀಡಲಾಗಿದೆ. ಯುಎಸ್‌ಬಿ ಡ್ರೈವ್‌ನಿಂದ ನೇರವಾಗಿ ಹೊಸ ಡಿಟೆಲ್ ಟಿವಿಯಲ್ಲಿ ಬಳಕೆದಾರರು ಆಡಿಯೋ ಮತ್ತು ವಿಡಿಯೋ ಸ್ವರೂಪಗಳನ್ನು ಬೆಂಬಲಿಸಲು ಯುಎಸ್‌ಬಿ ಮಲ್ಟಿಮೀಡಿಯಾ ಬೆಂಬಲವಿದೆ. ಇದು ಸ್ಮಾಟ್‌ಪ್ರಿಯರನ್ನು ಸೆಳೆಯಲಿದೆ ಎಂದು ಕಂಪೆನಿ ತಿಳಿಸಿದೆ.

ಮಾನಿಟರ್ ಆಗಿಯೂ ಬಳಸಬಹುದು!

ಮಾನಿಟರ್ ಆಗಿಯೂ ಬಳಸಬಹುದು!

ವಿಶ್ವದ ಅತ್ಯಂತ ಅಗ್ಗದ ಎಲ್‌ಸಿಡಿ ಟಿವಿ ಡಿಟೆಲ್ ಡಿ1 ಕಂಪ್ಯೂಟರ್‌ನೊಂದಿಗೆ ಕೆಲಸ ಮಾಡಬಲ್ಲದು. ಏಕೆಂದರೆ, ಇದನ್ನು ಕಂಪ್ಯೂಟರ್ ಮಾನಿಟರ್ ಆಗಿಯೂ ಬಳಸಬಹುದು ಎಂದು ಡಿಟೆಲ್ ಕಂಪೆನಿ ತಿಳಿಸಿದೆ. ಯುಎಸ್‌ಬಿ ಡ್ರೈವ್‌ನಿಂದ ನೇರವಾಗಿ ಬಳಕೆದಾರರು ಆಡಿಯೋ ಮತ್ತು ವಿಡಿಯೋ ಸ್ವರೂಪಗಳನ್ನು ಬೆಂಬಲಿಸಲು ಯುಎಸ್‌ಬಿ ಮಲ್ಟಿಮೀಡಿಯಾ ಬೆಂಬಲವಿದೆ ಎಂದು ಹೇಳಿದೆ.

ಖರೀದಿಸುವುದು ಹೇಗೆ?

ಖರೀದಿಸುವುದು ಹೇಗೆ?

ಡಿಟೆಲ್ ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್‌ ಹಾಗೂ ಡಿಟೆಲ್ ಮೊಬೈಲ್ ಆಪ್ ಮೂಲಕ ಗ್ರಾಹಕರು ವಿಶ್ವದ ಅತ್ಯಂತ ಅಗ್ಗದ ಎಲ್‌ಸಿಡಿ ಟಿವಿ ಡಿಟೆಲ್ ಡಿ1 ಟಿವಿಯನ್ನು ಖರೀದಿ ಮಾಡಬಹುದಾಗಿದೆ. ವಿತರಕರು ಮತ್ತು ಪಾಲುದಾರರು ಡಿಟೆಲ್ ಡಿ 1 ಟಿವಿಯನ್ನು B2BAdda.com ಮೂಲಕ ಖರೀದಿಸಬಹುದು ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

Most Read Articles
Best Mobiles in India

English summary
Detel D1 TV Launched in India at Rs. 3,999, Claims to Be 'World's Most Economical LCD TV'. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X