ಬರುತ್ತಿದೆ ಫೇಸ್ ಬುಕ್ ವಿಡಿಯೋ ಚಾಟ್ ಡಿವೈಸ್ ‘ಫೇಸ್ ಬುಕ್ ಫೋರ್ಟಲ್’
ತನ್ನ ಬಳಕೆದಾರರಿಗೆ ದಿನಕ್ಕೊಂದು ಹೊಸ ಆಯ್ಕೆಗಳನ್ನು ನೀಡುವ ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ಈ ಬಾರಿ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ವಾಯ್ಸ್ ಅಸಿಸ್ಟೆಂಟ್ ಗಳ ಸದ್ದು ಜೋರಾಗಿದೆ ಈ ಹಿನ್ನಲೆಯಲ್ಲಿ ಇದೆ ವಿಭಾಗದಲ್ಲಿ ತನ್ನ ಪ್ರಯತ್ನವನ್ನು ಮಾಡಲು ಫೇಸ್ ಬುಕ್ ಮುಂದಾಗಿದ್ದು, ತನ್ನದೇ ಆದ ವಾಯ್ಸ್ ಆಕ್ಟಿವೇಟ್ ವಿಡಿಯೋ ಚಾಟ್ ಡಿವೈಸ್ 'ಫೋರ್ಟಲ್’ ಅನ್ನು ಅಭಿವದ್ಧಿ ಮಾಡುತ್ತಿದೆ.

ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ವಾಯ್ಸ್ ಅಸಿಸ್ಟೆಂಟ್ ಬಳಕೆಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಫೇಸ್ ಬುಕ್ ಸಹ ಇದೇ ಮಾದರಿಯ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಫೇಸ್ ಬುಕ್ ಪೋರ್ಟಲ್ ಡಿವೈಸ್ ಬಗ್ಗೆ ಮಾಹಿತಿಯೂ ಇಲ್ಲಿದೆ.

ಫೋರ್ಟಲ್ ವಿಶೇಷತೆಗಳು:
15 ಇಂಚಿನ ಡಿಸ್ ಪ್ಲೇಯನ್ನು ಫೇಸ್ ಬುಕ್ ಫೋರ್ಟಲ್ ಡಿವೈಸ್ ನಲ್ಲಿ ಕಾಣಬಹುದಾಗಿದ್ದು, ಇದು ವಿಡಿಯೋ ಚಾಟ್ ಡಿವೈಸ್ ಆಗಿದ್ದು, ವೈಡ್ ಆಂಗಲ್ ಮತ್ತು ಫೇಸ್ ರೆಕಗ್ನೇಸ್ ಮಾಡುವ ಕ್ಯಾಮೆರಾವನ್ನು ಇದರೊಂದಿಗೆ ಅಳವಡಿಸಲಾಗಿದೆ. ಇದು ಅಮೆಜಾನ್ ಇಕೋ ಶೋ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.


ಬೆಲೆ:
ಈ ಫೇಸ್ ಬುಕ್ ಫೋರ್ಟಲ್ ಬೆಲೆ ಸರಿ ಸುಮಾರು ರೂ.31,735 ಗಳಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ನೀವು ನೆಟ್ ಪ್ಲಿಕ್ಸ್ ವಿಡಿಯೋಗಳನ್ನು ನೋಡಬಹುದಾಗಿದೆ. ಇದಲ್ಲದೇ ಹಲವು ಆಪ್ ಗಳು ಇದರಲ್ಲೇ ಇರಲಿದೆ. ಇದೇ ಮೇನಲ್ಲಿ ಈ ಫೇಸ್ ಬುಕ್ ಫೋರ್ಟಲ್ ಮಾರುಕಟ್ಟೆಯಲ್ಲ ಕಾಣಿಸಿಕೊಳ್ಳಲಿದೆ.

ಇತಿಹಾಸ:
ಈ ಹಿಂದೆಯೇ ಮಾರುಕಟ್ಟೆಗೆ ಫೇಸ್ ಬುಕ್ ವಿಡಿಯೋ ಡಿವೈಸ್ ವೊಂದನ್ನು ಲಾಂಚ್ ಮಾಡಲದೆ ಎನ್ನುವ ಮಾಹಿತಿಯೂ ಕೇಳಿ ಬಂದಿತ್ತು, ಆದರೂ ಸಹ ಫೇಸ್ ಬುಕ್ ನಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಫೇಸ್ ಬುಕ್ ತನ್ನ ಫೋರ್ಟಲ್ ಡಿವೈಸ್ ಬಗ್ಗೆ ಮಾಹಿತಿಯನ್ನು ನೀಡಿದೆ ಎನ್ನಲಾಗಿದೆ.


Click it and Unblock the Notifications








