ಭಾರತೀಯ ವಿದ್ಯಾರ್ಥಿಗಳ ಸಾಧನೆಗೆ ಒಲಿದ 'ಮೈಕ್ರೋಸಾಫ್ಟ್ ಟ್ಯಾಲೆಂಟ್ ಹಂಟ್' ಪ್ರಶಸ್ತಿ

|

ಮೈಕ್ರೊಸಾಫ್ಟ್ ಸಂಸ್ಥೆಯು ನಡೆಸುವ ಏಷ್ಯ ಟ್ಯಾಲೆಂಟ್ ಹಂಟ್ ಸ್ಪರ್ಧೆಯಲ್ಲಿ, ದೇಶದ ಫರೀದಾಬಾದ್ ಮೂಲದ 'ಮಾನವ್ ರಚನ್ ಇನ್ಟ್ಸಿಟ್ಯೂಟ್ ಆಫ್ ರಿಸರ್ಚ್ ಮತ್ತು ಸ್ಟಡೀಸ್' ಸಂಸ್ಥೆಯ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಅಸ್ತಮಾ ಮತ್ತು ಉಸಿರಾಟಕ್ಕೆ ಸಂಬಂಧಿಸದ ರೋಗದಿಂದ ಬಳಲುತ್ತಿರುವವರಿಗಾಗಿ 'ಸಿಯಾಲಿ(ಗಾಳಿ)' ಹೆಸರಿನ ಸ್ಮಾರ್ಟ್‌ ಔಷಧಿ ಭರಿತ ಮಾಸ್ಕ ಅನ್ನು ಸಿದ್ಧಪಡಿಸುವ ಮೂಲಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಭಾರತೀಯ ವಿದ್ಯಾರ್ಥಿಗಳ ಸಾಧನೆಗೆ ಒಲಿದ 'ಮೈಕ್ರೋಸಾಫ್ಟ್ ಟ್ಯಾಲೆಂಟ್ ಹಂಟ್' ಪ್ರಶಸ್ತ

ಇತ್ತೀಚಿಗೆ ನಡೆದ ಸ್ಪರ್ಧೆಯಲ್ಲಿ ಈ ತಂಡವು ಮೈಕ್ರೋಸಾಫ್ಟ್ ಏಷ್ಯನ ಪ್ರಶಸ್ತಿಯನ್ನು ಗೆದ್ದಿದ್ದು, ಈ ಮೂಲಕ ಮೇ ತಿಂಗಳಲ್ಲಿ ಮೈಕ್ರೋಸಾಫ್ಟ್‌ನ ಪ್ರಧಾನ ಕಛೇರಿಯಲ್ಲಿ ನಡೆಯುವ 'ವಿಶ್ವ ಚಾಂಪಿಯನ್ ಸ್ಪರ್ಧೆ'ಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಇನ್ನೂ ಏಷ್ಯನ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ 'ರೈಲ್‌ ನೋವಾ ಚೀನಾ' ತಂಡವು ದ್ವೀತಿಯ ಸ್ಥಾನವನ್ನು ಪಡೆದಿದ್ದು, ಈ ತಂಡವು 'ರೈಲ್ ಕಾಂಪೊನೆಂಡ್ ಇನ್ಸ್ಪೆಕ್ಷನ್ ರೋಬೋ' ಮಾದರಿಯನ್ನು ತಯಾರಿಸಿತ್ತು. ಹಾಗೇ ಫಿಲಿಫೈನ್ಸ್ ನ "USCAid" ತಂಡದವರು 'ಆಕ್ವಾ ಚಕ್ ಆಪ್' ಸಿದ್ಧಪಡೆಸಿ ಸ್ಪರ್ಧೆಯಲ್ಲಿ ಮೂರನೆ ಸ್ಥಾನಕ್ಕೆ ತೃಪ್ತರಾದರು.

ಭಾರತೀಯ ವಿದ್ಯಾರ್ಥಿಗಳ ಸಾಧನೆಗೆ ಒಲಿದ 'ಮೈಕ್ರೋಸಾಫ್ಟ್ ಟ್ಯಾಲೆಂಟ್ ಹಂಟ್' ಪ್ರಶಸ್ತ

ಪ್ರಸ್ತುತ ವಿಶ್ವದಲ್ಲಿ ವಾಯುಮಾಲಿನ್ಯ ಒಂದು ದೊಡ್ಡ ಸಮಸ್ಯೆಯಾಗಿದ್ದು, ಭಾರತದಲ್ಲಿಯೂ ಸಹ ವಾಯುಮಾಲಿನ್ಯವು ಅಧಿಕವಾಗಿದೆ. ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ವಾಯುಮಾಲಿನ್ಯ ವಿಪರೀತವಾಗಿದ್ದು, ಜನರು ಕಲುಷಿತ ಗಾಳಿಯನ್ನು ಉಸಿರಾಡುವ ಮೂಲಕ ದೀರ್ಘಕಾಲದ ಶ್ವಾಸಕೋಶ ಸಂಬಂಧಿತ ರೋಗಗಳಿಗೆ ತೂತ್ತಾಗುತ್ತಿದ್ದಾರೆ. ಉಸಿರಾಟ ಮತ್ತು ಅಸ್ತಮಾ ಸಮಸ್ಯೆದಿಂದ ಬಳಲುತ್ತಿರುವ ರೋಗಿಗಳಿಗಾಗಿ 'ಸಿಯಾಲಿ' ಸ್ಮಾರ್ಟ್‌ ಔಷಧಿ ಸಿಂಪಡಿಸುವ ಮಾಸ್ಕ ಅನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯ ವಿದ್ಯಾರ್ಥಿಗಳ ಸಾಧನೆಗೆ ಒಲಿದ 'ಮೈಕ್ರೋಸಾಫ್ಟ್ ಟ್ಯಾಲೆಂಟ್ ಹಂಟ್' ಪ್ರಶಸ್ತ

ಮೈಕ್ರೋಸಾಫ್ಟ್ ಕಂಪನಿಯವರು ಕಳೆದ 10 ವರ್ಷಗಳಿಂದ 'ಓಲಂಪಿಕ್ಸ್ ಆಫ್ ಟೆಕ್ನೊಲಜಿ' ಇಮ್ಯಾಜಿನ್ ಕಪ್' ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಸ್ಪರ್ಧೆಯಲ್ಲಿ 190 ದೇಶಗಳಿಂದ 1.65 ಮಿಲಿಯನ್ ವಿದ್ಯಾರ್ಥಿಗಳು ಭಾಗವಹಿಸಿದ್ದಾಗಿ ತಿಳಿದು ಬಂದಿದೆ. ಅವುಗಳಲ್ಲಿ 3 ನಮ್ಮ ದೇಶದ ತಂಡಗಳೇ ಇದ್ದವು. ಮಾನವ ರಚನ್ ಇನ್ಟ್ಸಿಟ್ಯೂಟ್ ಆಫ್ ರಿಸರ್ಚ್ ಮತ್ತು ಸ್ಟಡೀಸ್, ತಮಿಳನಾಡಿನ ವೆಲ್ಲೂರ್ ಟೆಕ್ನೊಲಜಿ ಮತ್ತು ಬೆಂಗಳೂರಿನ ಆರ್‌.ವಿ. ಕಾಲೇಜ್ ಆಫ್ ಇಂಜನಿಯರಿಂಗ' ನ ತಂಡಗಳು ಫೈನಲ್ ತಲುಪಿದ್ದವು.

Most Read Articles
Best Mobiles in India

English summary
The team developed "Caeli" (meaning air) which is a smart automated anti-pollution and drug delivery mask specifically designed for asthmatic and chronic respiratory patients.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more