ಜನಪ್ರಿಯ ಫ್ಯುಜಿ ಮೊಬೈಲ್ ಪ್ರಿಂಟರ್ ಬೆಲೆ ಈಗ ಕೇವಲ 10,000!!

|

ಸ್ಮಾರ್ಟ್​ಫೋನ್​ ಫೋಟೋಗಳನ್ನು ಪ್ರಿಂಟ್​ ತೆಗೆಯಲು ಲಭ್ಯವಿರುವ ಅಂಗೈ ಅಗಲದ ಇನ್ಸ್​ಸ್ಟಾಕ್ಸ್​ ಶೇರ್​ ಎಸ್​ಪಿ-2 ಎಂಬ ಸ್ಮಾರ್ಟ್​ ಪ್ರಿಂಟರ್ ಬೆಲೆಯನ್ನು ಕಡಿತಗೊಳಿಸಿರುವುದಾಗಿ ಜನಪ್ರಿಯ ಕಂಪೆನಿ ಫ್ಯುಜಿ ತಿಳಿಸಿದೆ. ಕಳೆದ ಜನವರಿಯಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದ ಫ್ಯುಜಿ ಕಂಪೆನಿಯ ಫಿಲ್ಮ್ ಮೊಬೈಲ್ ಪ್ರಿಂಟರ್ ಬೆಲೆ ಇದೀಗ ಕೇವಲ 10,000 ರೂಪಾಯಿಗಳಾಗಿವೆ.

ಹೌದು, ಮೊಬೈಲ್​ನಲ್ಲಿ ಕ್ಯಾಮೆರಾ ಬಂದ ಬಳಿಕ ಹಳೆಯ ಕಾಲದ ರೀಲ್ ಕ್ಯಾಮೆರಾ ಅಥವಾ ಮುದ್ರಿತ ಫೋಟೊಗಳು ಕಾಣುವುದು ಅಪರೂಪ. ಆದರೂ ಈ ಫೋಟೊಗಳ ಪ್ರಿಂಟ್​ ಪಡೆಯಲು ದೊಡ್ಡ ಪ್ರಿಂಟರ್ಗಳನ್ನು ಆಶ್ರಯಿಸಬೇಕಾಗಿತ್ತು. ಆದರೆ, ಫ್ಯುಜಿ ಫಿಲ್ಮ್​ ಕಂಪೆನಿ ಅತ್ಯಂತ ಚಿಕ್ಕದಾದ ಅತ್ಯುತ್ತಮ ಮೊಬೈಲ್ ಪ್ರಿಂಟರ್ ಅನ್ನು ಈ ವರ್ಷದ ಮೊದಲು ಬಿಡುಗಡೆ ಮಾಡಿತ್ತು.

ಜನಪ್ರಿಯ ಫ್ಯುಜಿ ಮೊಬೈಲ್ ಪ್ರಿಂಟರ್ ಬೆಲೆ ಈಗ ಕೇವಲ 10,000!!

ಫ್ಯುಜಿ ಕಂಪೆನಿಯ ಈ ಇನ್ಸ್​ಸ್ಟಾಕ್ಸ್​ ಶೇರ್​ ಎಸ್​ಪಿ-2 ಮೊಬೈಲ್ ಪ್ರಿಂಟರ್ ಬಿಡುಗಡೆಯಾದಾಗ ಇದರ ಬೆಲೆ 13,499 ರೂ.ಗಳಾಗಿದ್ದರೆ, ಇದೀಗ ಅಮೆಜಾನಿನಲ್ಲಿ 10000 ರೂಪಾಯಿಗಳಿಗೆ ಪ್ರಿಂಟರ್ ಅನ್ನು ಖರೀದಿಸಬಹುದಾಗಿದೆ. ಹಾಗಾದರೆ, ಫ್ಯುಜಿ ಕಂಪೆನಿಯ ಜನಪ್ರಿಯ ಇನ್ಸ್​ಸ್ಟಾಕ್ಸ್​ ಶೇರ್​ ಎಸ್​ಪಿ-2 ಫಿಲ್ಮ್ ಮೊಬೈಲ್ ಪ್ರಿಂಟರ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

ಮೊಬೈಲ್ ಪ್ರಿಂಟರ್ ವಿಶೇಷತೆಗಳೇನು?

ಮೊಬೈಲ್ ಪ್ರಿಂಟರ್ ವಿಶೇಷತೆಗಳೇನು?

ಸ್ಮಾರ್ಟ್ ಇನ್​ಸ್ಟಾಕ್ಸ್​ ಶೇರ್​ ಎಸ್​ಪಿ-2 ಎಂಬುದು ಜೇಬಿನಲ್ಲಿಟ್ಟುಕೊಳ್ಳಬಹುದಾದ ಸಣ್ಣ ಪ್ರಿಂಟರ್ ಆಗಿದ್ದು, ಇದನ್ನು ಸ್ಮಾರ್ಟ್​ಫೋನ್​ಗೆ ಕನೆಕ್ಟ್​ ಮಾಡುವ ಮೂಲಕ ಮೊಬೈಲ್​ನಲ್ಲಿರುವ ಫೋಟೋಗಳನ್ನು ಕ್ಷಣಾರ್ದದಲ್ಲಿ ಪ್ರಿಂಟ್ ಮಾಡಿಕೊಳ್ಳಬಹದು. ಈ ಮೊಬೈಲ್ ಪ್ರಿಂಟರ್ ಒಂದು ಮೊಬೈಲ್ ಫೋಟೊ ಮುದ್ರಿಸಲು ಕೇವಲ 10 ಸೆಕೆಂಡ್​ಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ.

ಫೋಟೋ ಸೈಜ್ ಮತ್ತು ಆಪ್ ಲಭ್ಯತೆ​

ಫೋಟೋ ಸೈಜ್ ಮತ್ತು ಆಪ್ ಲಭ್ಯತೆ​

ಫ್ಯುಜಿ ಫಿಲ್ಮ್ ಮೊಬೈಲ್ ಪ್ರಿಂಟರ್ ಮುದ್ರಿಸುವ ಚಿತ್ರವು 800X600 ಸೈಜ್​ನಲ್ಲಿರಲಿದೆ. ಇದಕ್ಕಾಗಿ ಇನ್​ಸ್ಟಾಕ್ಸ್​ ಆಪ್​ ಅನ್ನು ಕೂಡ ನೀಡಲಾಗಿದೆ.ಈ ಆಪ್ ಮೂಲಕ ಫೋಟೋಗಳನ್ನು ನಿಮಗೆ ಬೇಕಾದಂತೆ ಎಡಿಟ್ ಮಾಡಿಕೊಂಡು ಪ್ರಿಂಟ್ ತೆಗೆಯಬಹುದು. ಅಲ್ಲದೆ ಈ ಆಪ್​ ಮೂಲಕವೇ ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ನಲ್ಲಿ ನೀವು ಎಡಿಟ್ ಫೋಟೋಗಳನ್ನು ಹಂಚಿಕೊಳ್ಳಬಹುದು.

ಝಿಂಕ್ ಪೇಪರ್ ಬೆಲೆ ಕೂಡ ಕಡಿಮೆ!

ಝಿಂಕ್ ಪೇಪರ್ ಬೆಲೆ ಕೂಡ ಕಡಿಮೆ!

ಫ್ಯುಜಿ ಫಿಲ್ಮ್ ಮೊಬೈಲ್ ಪ್ರಿಂಟರ್ ಮುದ್ರಿಸುವ ಚಿತ್ರಗಳಿಗೆ ಪ್ರಿಂಟಿಂಗ್ಗಾಗಿ ಝಿಂಕ್ ಪೇಪರ್​ಗಳನ್ನು ಬಳಸಲಾಗುತ್ತದೆ. ಕ್ರೆಡಿಟ್ ಕಾರ್ಡ್​ನ ಅಳತೆಯಲ್ಲಿರುವ ಈ ಪ್ರಿಂಟಿಂಗ್ ಪೇಪರ್​ ಬೆಲೆ 1017 ರೂ.ಗಳಾಗಿವೆ. ಇದರಲ್ಲಿ ಒಟ್ಟು 20 ಪೇಪರ್​ಗಳಿರಲಿದ್ದು, ಇವು ಹೆಚ್ಚು ಗುಣಮಟ್ಟದಲ್ಲಿವೆ. ಇನ್ನು ಹೆಚ್ಚಿನ ಝಿಂಕ್​ ಪೇಪರ್ ಬಂಡಲ್ ಅನ್ನು ಕೂಡ ಫ್ಯುಜಿ ಪರಿಚಯಿಸುವುದಾಗಿ ತಿಳಿಸಿದೆ.

ಮೊಬೈಲ್ ಪ್ರಿಂಟರ್ ಸಾಮರ್ಥ್ಯ?

ಮೊಬೈಲ್ ಪ್ರಿಂಟರ್ ಸಾಮರ್ಥ್ಯ?

ಫ್ಯುಜಿ ಫಿಲ್ಮ್ ಮೊಬೈಲ್ ಪ್ರಿಂಟರ್ ಸ್ಮಾರ್ಟ್ ಇನ್​ಸ್ಟಾಕ್ಸ್​ ಶೇರ್​ ಎಸ್​ಪಿ-2 ಡಿವೈಸ್ ಮೊಬೈಲ್​ನಂತೆಯೇ ಬ್ಯಾಟರಿಯಿಂದ ಕಾರ್ಯ ನಿರ್ವಹಿಸುತ್ತದೆ. ಒಂದು ಬಾರಿ ಚಾರ್ಜ್ ಮಾಡಿಕೊಂಡರೆ ಕನಿಷ್ಠ 100 ಫೋಟೋಗಳನ್ನು ಪ್ರಿಂಟ್ ತೆಗೆದುಕೊಳ್ಳಬಹುದು. ಇದರಿಂದ ಫೋಟೊ ಪ್ರಿಯರಿಗೆ ಯಾವುದೇ ಕಾರಣಕ್ಕೂ ಬ್ಯಾಟರಿ ಸಮಸ್ಯೆ ಬರುವುದಿಲ್ಲ ಎಂದು ಎಂದು ಫ್ಯುಜಿ ಹೇಳಿಕೊಂಡಿದೆ.

ಇತರೆ ಏನೆಲ್ಲಾ ವೈಶಿಷ್ಟ್ಯಗಳಿವೆ?

ಇತರೆ ಏನೆಲ್ಲಾ ವೈಶಿಷ್ಟ್ಯಗಳಿವೆ?

ಮೈಕ್ರೋ ಯುಎಸ್‌ಬಿ ಮೂಲಕ ಚಾರ್ಜ್ ಮಾಡಬಹುದಾದ ಬ್ಯಾಟರಿ, ಹೊಸ ಲೇಸರ್ ಮಾನ್ಯತೆ ವ್ಯವಸ್ಥೆಯು ಮುದ್ರಣ ದತ್ತಾಂಶ ವರ್ಗಾವಣೆ, 320 dpi ನ ಮುದ್ರಣ ರೆಸಲ್ಯೂಶನ್ ಮತ್ತು ಡಿಎಸ್ಎಲ್ಆರ್ ಕ್ಯಾಮೆರಾಗಳಿಂದ ಚಿತ್ರಿಸಿದ ಚಿತ್ರಗಳನ್ನು ಸಹ ಈ ಮೊಬೈಲ್ ಪ್ರಿಂಟರ್ ಪ್ರಿಂಟ್ ತೆಗೆಯುತ್ತದೆ. ಹಾಗಾಗಿ, ಇದು ಹೆಚ್ಚು ಪೋಟೊ ಪ್ರಿಯರನ್ನು ಸೆಳೆಯುತ್ತಿದೆ ಎನ್ನಬಹುದು.

Best Mobiles in India

English summary
Select your best shots from your smartphone and get instax prints by just transferring the shots from the app to SP-2 via Wi-Fi connection. You can also print. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X