Subscribe to Gizbot

ಏಪ್ರಿಲ್ 10 ರಂದು ಭಾರತೀಯ ಮಾರುಕಟ್ಟೆಗೆ ಗೂಗಲ್ ಹೋಮ್ ಸ್ಮಾರ್ಟ್‌ ಸ್ಪೀಕರ್..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಸ್ಪೀಕರ್‌ ಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲಿಯೂ ಅಮೆಜಾನ್ ಇಕೋ ಕಾಲಿಟ್ಟ ಮೇಲೆ ಮಾರುಕಟ್ಟೆಯೂ ಅಭಿವೃದ್ಧಿ ಹೊಂದುತ್ತಿದೆ. ಇದೇ ಹಿನ್ನಲೆಯಲ್ಲಿ ಟೆಕ್ ದೈತ್ಯ ಗೂಗಲ್ ಸಹ ಮಾರುಕಟ್ಟೆಗೆ ತನ್ನ ಸ್ಮಾರ್ಟ್‌ ಸ್ಪೀಕರ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಗೂಗಲ್ ಹೋಮ್ ಮತ್ತು ಗೂಗಲ್ ಹೋಮ್ ಮಿನಿ ಏಪ್ರಿಲ್ 10 ರಂದು ಮಾರುಕಟ್ಟೆಗೆ ಲಾಂಚ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ 10 ರಂದು ಭಾರತೀಯ ಮಾರುಕಟ್ಟೆಗೆ ಗೂಗಲ್ ಹೋಮ್ ಸ್ಮಾರ್ಟ್‌ ಸ್ಪೀಕರ್..!

ಈ ಕುರಿತು ಗೂಗಲ್ ಆಹ್ವಾನವನ್ನು ಕಳುಹಿಸಿದ್ದು, ಗೂಗಲ್ ಹೋಮ್ ಮತ್ತು ಗೂಗಲ್ ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್ ಗಳನ್ನು ಏಪ್ರಿಲ್ 10 ರಂದು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈ ಹಿಂದೆಯೇ ಮಾರುಕಟ್ಟೆಗೆ ಗೂಗಲ್ ಹೋಮ್ ಮತ್ತು ಗೂಗಲ್ ಹೋಮ್ ಮಿನಿ ಬರಬೇಕಾಗಿತ್ತು. ಆದರೆ ಕಾರಣಾಂತಗಳಿಂದ ನಿಧಾನವಾಗಿ ಕಾಲಿಡುತ್ತಿವೆ. ಅಮೆಜಾನ್ ಇಕೋ ಯಶಸ್ಸಿನ ನಂತರದಲ್ಲಿ ಗೂಗಲ್ ಮಾರುಕಟ್ಟೆಯಲ್ಲಿ ಅದೃಷ್ಠ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ.

ಗೂಗಲ್ ಹೋಮ್ ಮತ್ತು ಗೂಗಲ್ ಹೋಮ್ ಮಿನಿ ಸ್ಮಾರ್ಟ್ ಸ್ಪೀಕರ್‌ಗಳಲ್ಲಿ ವಾಯ್ಸ್ ಗೂಗಲ್ ಅಸಿಸ್ಟೆಂಟ್ ಅನ್ನು ಕಾಣಬಹುದಾಗಿದೆ. ಈ ಸ್ಮಾರ್ಟ್ ಸ್ಪೀಕರ್ ಗಳು ನಿಮ್ಮ ದನಿಯನ್ನು ಕಂಡುಹಿಡಿದು ನಿಮ್ಮ ಆಜ್ಞೆಗಳನ್ನು ಪಾಲಿಸಲಿದೆ ಎನ್ನಲಾಗಿದೆ. ಇದಲ್ಲದೇ ಗೂಗಲ್ ಅಸಿಸ್ಟೆಂಟ್ ಹಿಂದಿಯಲ್ಲಿಯೂ ಕಾರ್ಯನಿರ್ವಹಿಸುವ ಸಾಧ್ಯತೆಯೂ ಇದೆ.

ಏಪ್ರಿಲ್ 10 ರಂದು ಭಾರತೀಯ ಮಾರುಕಟ್ಟೆಗೆ ಗೂಗಲ್ ಹೋಮ್ ಸ್ಮಾರ್ಟ್‌ ಸ್ಪೀಕರ್..!

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆಜಾನ್ ಇಕೋ ಸ್ಮಾರ್ಟ್‌ ಸ್ಪೀಕರ್‌ಗೆ ಗೂಗಲ್ ಹೋಮ್ ಸ್ಪೀಕರ್ ಗಳು ಸ್ಪರ್ಧೆಯನ್ನು ನೀಡಲಿದ್ದು, ಗೂಗಲ್ ಹೋಮ್ ರೂ.8500 ಅಸುಪಾಸಿನಲ್ಲಿ ಮತ್ತು ಗೂಗಲ್ ಹೋಮ್ ಮಿನಿ ರೂ.3500ರ ಆಸುಪಾಸಿನಲ್ಲಿ ದೊರೆಯುವ ಸಾಧ್ಯತೆ ಇದೆ. ಈ ಬೆಲೆಯಲ್ಲಿ ಇನ್ನು ಇಳಿಕೆಯನ್ನು ಕಾಣಲು ಬಹುದಾಗಿದೆ.

ಇದಲ್ಲದೇ ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಸ್ಮಾರ್ಟ್ ಸ್ಪೀಕರ್ ಸಹ ಕಾಣಿಸಿಕೊಳ್ಳಲಿದ್ದು, ಸಿರಿ ವಾಯ್ಸ್ ಅಸಿಸ್ಟೆಂಟ್ ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೇ ಮೈಕ್ರೊ ಸಾಫ್ಟ್ ಕರೊಟಾನಾದೊಂದಿಗೆ ಕಾರ್ಯನಿರ್ವಹಿಸುವ ಶಿಯೋಮಿ ಸ್ಮಾರ್ಟ್‌ ಸ್ಪೀಕರ್ ಸಹ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

English summary
Google Home, Home Mini India Launch Set for April 10. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot