Subscribe to Gizbot

ಬೆಂಗಳೂರಿಗೆ ಉಚಿತವಾಗಿ ಹೋಮ್‌ ಮಿನಿ ಸ್ಮಾರ್ಟ್ ಸ್ಪೀಕರ್ ನೀಡಲಿದೆ ಗೂಗಲ್: ಪಡೆಯುವುದು ಹೇಗೆ..?

Written By:

ಎರಡು ದಿನಗಳ ಕೆಳಗೆ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಗೂಗಲ್ ಸ್ಮಾರ್ಟ್ ಸ್ಪೀಕರ್ ಗೂಗಲ್ ಹೋಮ್ ಮತ್ತು ಹೋಮ್ ಮಿನಿ, ಆಗಲೇ ಬೇಡಿಕೆಯನ್ನು ಸೃಷ್ಟಿಸಿಕೊಂಡಿವೆ. ಅದರಲ್ಲಿಯೂ ಗೂಗಲ್ ಹೋಮ್ ಮಿನಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಠಿಸುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿ ಬಳಕೆದಾರರು ಗೂಗಲ್ ಹೋಮ್ ಮಿನಿಯನ್ನು ಉಚಿತವಾಗಿ ಪಡೆಯುವ ಕಾರ್ಯಕ್ರಮವೊಂದು ಲಭ್ಯವಿದೆ.

ಬೆಂಗಳೂರಿಗೆ ಉಚಿತವಾಗಿ ಹೋಮ್‌ ಮಿನಿ ಸ್ಮಾರ್ಟ್ ಸ್ಪೀಕರ್ ನೀಡಲಿದೆ ಗೂಗಲ್

ಈಗಾಗಲೇ ಗೂಗಲ್ ಹೋಮ್ ಮಿನಿ ಸ್ಮಾರ್ಟ್ ಸ್ಪೀಕರ್ ಖರೀದಿಸುವವರಿಗೆ ಪ್ಲಾನ್ ಗಳನ್ನು ಘೋಷಣೆ ಮಾಡಿರುವ ACT ಬ್ರಾಂಡ್ ಬ್ಯಾಂಡ್, ಸೇವೆಯೂ ಬಳಕೆದಾರರಿಗೆ ಹೋಮ್ ಮಿನಿಯನ್ನು ಉಚಿತವಾಗಿ ನೀಡುವ ಆಫರ್ ವೊಂದನ್ನು ನೀಡಲು ಮುಂದಾಗಿದೆ. ರೂ.4999ಕ್ಕೆ ಮಾರಾಟವಾಗಲಿರುವ ಗೂಗಲ್ ಹೋಮ್ ಮಿನಿಯನ್ನು ಉಚಿತವಾಗಿ ಖರೀದಿಸುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ACT ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯಲು ಬಯಸುಸವರು 12 ತಿಂಗಳಿಗೆ ಒಮ್ಮೆಗೆ ಪಾವತಿಯನ್ನು ಮಾಡಿದರೆ ಗೂಗಲ್ ಹೋಮ್ ಮಿನಿಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ. ಈ ಆಫರ್ ಲಿಮಿಡೆಡ್ ಆಗಿದ್ದು, ಷರತ್ತುಗಳನ್ನು ಒಳಗೊಂಡಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿರುವ ACT ಬಳಕೆದಾರರು ACT GIGA ಕನೆಷನ್ ನೊಂದಿಗೆ ಇನ್ಕ್ರಿಡಬ್ ಪ್ಲಾನ್ ಅನ್ನು ಪಡೆದುಕೊಂಡು ಒಂದು ವರ್ಷದ ಸೇವಾ ಶುಲ್ಕವನ್ನು ಮುಂಗಡವಾಗಿಯೇ ಪಾವತಿಯನ್ನು ಮಾಡಿದರೆ ಗೂಗಲ್ ಸ್ಮಾರ್ಟ್ ಸ್ಪೀಕರ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರಿಗೆ ಉಚಿತವಾಗಿ ಹೋಮ್‌ ಮಿನಿ ಸ್ಮಾರ್ಟ್ ಸ್ಪೀಕರ್ ನೀಡಲಿದೆ ಗೂಗಲ್

ಒಟ್ಟಿನಲ್ಲಿ ACT ನೀಡಿರುವುದು ಉತ್ತಮ ಆಫರ್ ಆಗಿದ್ದು, ಬ್ರಾಡ್ ಬ್ಯಾಂಡ್ ಸೇವೆಯೊಂದಿಗೆ ಗೂಗಲ್ ಹೋಮ್ ಮಿನಿ ಸಹ ದೊರೆಯುತ್ತಿದ್ದು, ಒಂದೇ ಮೊತ್ತದಲ್ಲಿ ಎರಡು ಲಾಭಗಳನ್ನು ಪಡೆಯಬಹುದಾಗಿದೆ. ಒಟ್ಟಿನಲ್ಲಿ ವರ್ಷಕ್ಕೆ ರೂ.12000ದಿಂದ 15000 ಪಾವತಿ ಮಾಡುವವರಿಗೆ ACT ಉಚಿತವಾಗಿ ಗೂಗಲ್ ಹೋಮ್ ಮಿನಿಯನ್ನು ನೀಡಲಿದೆ.

How To Link Aadhaar With EPF Account Without Login (KANNADA)

ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ಅಮೆಜಾನ್ ಸ್ಮಾರ್ಟ್ ಸ್ಪೀಕರ್ ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ಗೂಗಲ್, ತನ್ನ ಸ್ಮಾರ್ಟ್ ಸ್ಪೀಕರ್ ಗನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲು ಮುಂದಾಗಿದೆ.

English summary
Google Home Mini for free, here is what you will need to do. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot