TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಹಾನರ್‌ನ ಈ ಸ್ಮಾರ್ಟ್‌ವಾಚ್‌ಗಳು.!
ಈಗಾಗಲೇ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿ ಹಾನರ್ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿ ತನ್ನ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಇದೀಗ ಸಂಸ್ಥೆಯು ಮತ್ತೊಂದು ನೂತನ ಪ್ರಯತ್ನಕ್ಕೆ ಮುಂದಾಗಿದ್ದು, ಫಿಟ್‌ನೆಸ್ ಬಗ್ಗೆ ಗಮನ ಕೊಡುವ ಗ್ರಾಹಕರಿಗಾಗಿ ಮತ್ತು ದೈನಂದಿನ ಆಕ್ಟಿವಿಟ್ ಟ್ರಾಕ್ ಮಾಡುವ ಹೊಸದೆರಡು ಗ್ಯಾಜೆಟ್‌ಗಳನ್ನು ಪರಿಚಯಿಸಿದೆ.
ಹೌದು, ಹಾನರ್ ಕಂಪನಿಯು 'ಹಾನರ್ ವಾಚ್ ಮ್ಯಾಜಿಕ್' ಮತ್ತು 'ಹಾನರ್ ಬ್ಯಾಂಡ್ ಫಾರ್ ರನ್ನಿಂಗ್' ಹೆಸರಿನ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಸ್ಮಾರ್ಟ್‌ಫೋನ್‌ಗಳು ಫಿಟ್ನೆಸ್ ಪ್ರಿಯರಿಗೆ ಮತ್ತು ದೈನಂದಿನ ಆಕ್ಟಿವಿಟಿಗಳನ್ನು ಟ್ರಾಕ್ ಮಾಡಲು ಇಷ್ಟ ಪಡುವ ಗ್ರಾಹಕರಿಗೆ ತುಂಬಾ ಸಹಾಯಕವಾಗಲಿವೆ ಎಂದು ಕಂಪನಿ ತಿಳಿಸಿದೆ. ಗ್ರಾಹಕರಲ್ಲಿ ಕ್ರೇಜ್ ಮೂಡಿಸಿಲಿದೆ.
'ಹಾನರ್ ವಾಚ್ ಮ್ಯಾಜಿಕ್' ಮತ್ತು 'ಬ್ಯಾಂಡ್ ಫಾರ್ ರನ್ನಿಂಗ್' ಸ್ಮಾರ್ಟ್‌ವಾಚ್‌ಗಳು ಭಿನ್ನ ಭಿನ್ನ ಫೀಚರ್ಸ್‌ಗಳನ್ನು ಹೊಂದಿದ್ದು, ಈ ಸ್ಮಾರ್ಟ್‌ವಾಚ್‌ಗಳು ಬೇರೆ ಬೇರೆ ಟಾರ್ಗೆಟ್ ಆಡಿಯನ್ಸ್ ಹೊಂದಿವೆ. ಹಾಗಾದರೇ 'ಹಾನರ್ ವಾಚ್ ಮ್ಯಾಜಿಕ್' ಮತ್ತು 'ಹಾನರ್ ಬ್ಯಾಂಡ್ ಫಾರ್ ರನ್ನಿಂಗ್' ಸ್ಮಾರ್ಟ್‌ವಾಚ್‌ಗಳ ಫೀಚರ್ಸ್‌ಗಳೇನು? ಮತ್ತು ಬೆಲೆ ಎಷ್ಷು ಎಂದು ತಿಳಿಯಲು ಸ್ಕ್ರೋಲ್ ಮಾಡಿ ಓಡಿರಿ.
ಹಾನರ್ ವಾಚ್ ಮ್ಯಾಜಿಕ್
ಹಾನರ್ ಸಂಸ್ಥೆ ಈ ಸ್ಮಾರ್ಟ್‌ವಾಚ್‌ನ ರಚನೆ ಆಕರ್ಷಕವಾಗಿದ್ದು ಮತ್ತು ತೆಳುವಾಗಿದೆ. AMOLED ಕ್ವಾಲಿಟಿ ಡಿಸ್‌ಪ್ಲೇಯನ್ನು ಹೊಂದಿದ್ದು, ಎರಡು ಪ್ರೊಸೆಸರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನೂ ಇದರಲ್ಲಿ ಸ್ಪೋರ್ಟ್‌ಮೋಡ್ ಆಯ್ಕೆ ಇದ್ದು, ಈ ಆಯ್ಕೆ ಮೂಲಕ ನಿಖರ ಸ್ಥಾನ ತಿಳಿಯಲು ನೆರವಾಗುವುದು. ಮತ್ತು ದೈನಂದಿನ ಚಟುವಟಿಕೆಗಳನ್ನು ಟ್ರಾಕ್ ಮಾಡುತ್ತದೆ. ನಿಮ್ಮ ನಿದ್ರೆ ಅವಧಿ ಮತ್ತು ಹೃದಯ ಬಡಿತದ ಬಗ್ಗೆ ಗಮನಿಸುತ್ತದೆ.
ಹಾನರ್ ವಾಚ್ ಮ್ಯಾಜಿಕ್ ಬೆಲೆ?
'ಹಾನರ್‌ನ ವಾಚ್‌ಮ್ಯಾಜಕ್' ಸ್ಮಾರ್ಟ್‌ವಾಚ್ ಲಾವಾ ಬ್ಲಾಕ್ ಮತ್ತು ಮೂನ್‌ಲೈಟ್ ಸಿಲ್ವರ್ ಬಣ್ಣಗಳಲ್ಲಿ ದೊರೆಯಲಿದೆ. ಭಾರತದಲ್ಲಿಯೂ ಈ ಸ್ಮಾರ್ಟ್‌ವಾಚ್‌ಗಳು ಲಭ್ಯವಿದ್ದು, ಹಾನರ್ ವೆಬ್‌ಸೈಟ್‌ನಲ್ಲಿ ಅಥವಾ ಅಮೆಜಾನ್ ಮೂಲಕ ಗ್ರಾಹಕರು ಖರೀದಿಸಬಹುದು. ಇದರ ಬೆಲೆ 13,999ರೂ.ಗಳಿಂದ 14,999ರೂ.ಗಳ ವರೆಗೂ ಇದೆ.
ಹಾನರ್ ಬ್ಯಾಂಡ್ ಫಾರ್ ರನ್ನಿಂಗ್
ಹಾನರ್ ಬ್ಯಾಂಡ್ ಫಾರ್ ರನ್ನಿಂಗ್ ಸ್ಮಾರ್ಟ್‌ವಾಚ್ 0.5 ಇಂಚಿನ PMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಈ ವಾಚ್‌ನ್ನು ಕೈ ಮತ್ತು ಕಾಲಿಗೆ ಧರಿಸಬಹುದಾದ ಎರಡು ಮಾದರಿಯಲ್ಲಿ ಬಳಸಬಹುದಾಗಿದೆ. ಇದರಲ್ಲಿ ಆರು axis ಸೆನ್ಸಾರ್ ಗಳಿದ್ದು, ಇವು ಓಟದ ಭಂಗಿಗಳನ್ನು ಗ್ರಹಿಸುತ್ತವೆ ಮತ್ತು ನಿಯಂತ್ರಿಸುತ್ತವೆ. ಮತ್ತು ಏಳು ತರಹದ ವ್ಯಾಯಾಮಗಳ ಡೇಟಾ ಕಲೆಹಾಕುತ್ತದೆ. ವಾಟರ್ ರೆಸಿಸ್ಟನ್ಸ್ ಆಗಿದ್ದು, ಇದನ್ನು ಧರಿಸಿ ಈಜಬಹುದಾಗಿದೆ.
ಹಾನರ್ ಬ್ಯಾಂಡ್ ಫಾರ್ ರನ್ನಿಂಗ್ ಬೆಲೆ?
ಹಾನರ್ ಬ್ಯಾಂಡ್ ಫಾರ್ ರನ್ನಿಂಗ್ ಸ್ಮಾರ್ಟ್‌ವಾಚ್ ಅನ್ನು ಭಾರತೀಯ ಗ್ರಾಹಕರು ಅಮೆಜಾನ್ ಅಥವಾ ಹಾನರ್ ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ. ಬ್ಲಾಕ್, ನೀಲಿ ಮತ್ತು ಪಿಂಕ್ ಬಣ್ಣಗಳಲ್ಲಿ ದೊರೆಯಲಿದ್ದು, ಇದರ ಬೆಲೆಯು 1599ರೂ.ಗಳು.