Subscribe to Gizbot

ಭಾರತದಲ್ಲಿ ಟ್ರೆಂಡ್ ಸೃಷ್ಟಿಸಲು ಬಂದಿವೆ ಅತ್ಯಂತ ಕಡಿಮೆ ಬೆಲೆಗೆ ನೂತನ 3 ಸ್ಮಾರ್ಟ್‌ಟಿವಿಗಳು!!

Written By:

ಮೊಬೈಲ್ ಜಗತ್ತಿನಷ್ಟೇ ವೇಗವಾಗಿ ಬದಲಾಗುತ್ತಿರುವ 'ಟಿಲಿವಿಷನ್' ಜಗತ್ತು ಇಂದು ಸ್ಮಾರ್ಟ್‌ಟಿವಿಗಳ ಹತ್ತಿರ ಬಂದು ನಿಂತಿದೆ. ಹೈ ಡೈನಾಮಿಕ್ ರೇಂಜ್ ತಂತ್ರಜ್ಞಾನದ 4K ಡಿಜಿಟಲ್ ಟಿವಿಗಳು ಇಂದು ಟಿವಿ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸುತ್ತಿವೆ. ನಗರ, ಹಳ್ಳಿಗಳು ಎನ್ನದೇ ಪ್ರತಿಯೋರ್ವರ ಮನೆಯಲ್ಲಿಯೂ ಒಂದೊಂದು ಸ್ಮಾರ್ಟ್‌ಟಿವಿಗಳು ಆಕ್ರಮಿಸಿಕೊಳ್ಳುತ್ತಿವೆ.

ಎಲ್‌ಜಿ, ಪ್ಯಾನಾಸೊನಿಕ್, ಶಿಯೋಮಿ ಹೀಗೆ ಬಹುತೇಕ ಎಲ್ಲಾ ಕಂಪೆನಿಗಳು ಕೂಡ ಸ್ಮಾರ್ಟ್‌ಟಿವಿ ಮಾರುಕಟ್ಟೆಗೆ ಎಂಟ್ರಿ ನಿಡಿರುವುದರಿಂದ ಟಿವಿ ಮಾರುಕಟ್ಟೆಯಲ್ಲಿಯೂ ಪೈಪೋಟಿ ಮನೆ ಮಾಡಿದೆ. ಒಂದಕ್ಕಿಂತ ಒಂದು ಹೆಚ್ಚು ಫೀಚರ್ಸ್ ಹೊತ್ತಿರುವ ಅತ್ಯುತ್ತಮ ತಂತ್ರಜ್ಞಾನದ ಸ್ಮಾರ್ಟ್‌ಟಿವಿಗಳು ಅತ್ಯಂತ ಕಡಿಮೆ ಬೆಲೆಗೆ ಟಿವಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ.

 ಟ್ರೆಂಡ್ ಸೃಷ್ಟಿಸಲು ಬಂದಿವೆ ಅತ್ಯಂತ ಕಡಿಮೆ ಬೆಲೆಗೆ ನೂತನ 3 ಸ್ಮಾರ್ಟ್‌ಟಿವಿಗಳು!

ಇನ್ನು ಈ ಕಂಪೆನಿಗಳ ಸಾಲಿಗೆ ಮತ್ತೊಂದು ಹೆಸರಾಂತ ಟಿವಿ ಕಂಪೆನಿ ಕಾಲಿಟ್ಟಿದೆ. ಒಂದು ಕಾಲದಲ್ಲಿ ಜಗತ್ತಿನ ಟಿವಿ ಮಾರುಕಟ್ಟೆಯಲ್ಲಿ ರಾಜನಂತೆ ಮೆರೆದಿದ್ದ ಥಾಮ್ಸನ್ ಟಿವಿ ಕಂಪೆನಿ ಇದೀಗ ಮತ್ತೆ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ಅತ್ಯಂತ ಕಡಿಮೆ ಬೆಲೆಗೆ ಆನ್‌ಲೈನ್ ಇ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್ ಮೂಲಕ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿ ಸುದ್ದಿಯಾಗಿದೆ.

ಶಿಯೋಮಿ ಸ್ಮಾಟ್‌ಟಿವಿಗಳಿಗಿಂತಲೂ ಹೆಚ್ಚು ಗಮನಸೆಳೆಯುತ್ತಿರುವ 32ಇಂಚು, 40ಇಂಚು ಮತ್ತು 43ಇಂಚುಗಳ ಗಾತ್ರದಲ್ಲಿ ಥಾಮ್ಸನ್ ಸ್ಮಾರ್ಟ್‌ಟಿವಿಗಳು ಬಿಡುಗಡೆಯಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟಕ್ಕಿವೆ. ಹಾಗಾದರೆ, ಬಿಡುಗಡೆಯಾಗಿರುವ ನೂತನ ಥಾಮ್ಸನ್ ಸ್ಮಾರ್ಟ್‌ಟಿವಿಗಳು ಹೇಗಿವೆ?, ಬೆಲೆ ಎಷ್ಟು? ಎಂಬುದನ್ನು ಮುಂದೆ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಥಾಮ್ಸನ್ ಟಿವಿಗಳು!!

ಥಾಮ್ಸನ್ ಟಿವಿಗಳು!!

ಒಂದು ಕಾಲದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದ 120ವರ್ಷಗಳಿಮದ ಹೆಸರಾಗಿರುವ ಜರ್ಮನ್ ಬ್ರ್ಯಾಂಡ್ ಥಾಮ್ಸನ್ ಕಂಪೆನಿ ನಂತರ ಭಾರತದ ಮಾರುಕಟ್ಟೆಯಿಂದ ಹಿಂದೆ ಸರಿದ್ದಿತ್ತು. ಆದರೆ, ಇದೀಗ ತನ್ನದೇ ಸ್ಮಾರ್ಟ್‌ಟಿವಿಗಳ ಮೂಲಕ ಮತ್ತೆ ಭಾರತಿಯ ಟಿವಿ ಮಾರುಕಟ್ಟೆಯನ್ನು ಪ್ರವೆಶಿಸಿರುವ ಥಾಮ್ಸನ್ ಕಂಪೆನಿ, ಅತ್ಯಂತ ಕಡಿಮೆ ಬೆಲೆಗೆ ಮೂರು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ.

ಕೇವಲ 13 ಸಾವಿರಕ್ಕೆ 32ಇಂಚ್ ಟಿವಿ!!

ಕೇವಲ 13 ಸಾವಿರಕ್ಕೆ 32ಇಂಚ್ ಟಿವಿ!!

ಫ್ಲಿಪ್‌ಕಾರ್ಟ್ ಸಹಯೋಗದಲ್ಲಿ ಬಾರತೀಯ ಟಿವಿ ಮಾರುಕಟ್ಟೆಗೆ ಕಾಲಿಟ್ಟಿರುವ ಥಾಮ್ಸನ್ ಸ್ಮಾರ್ಟ್‌ಟಿವಿಗಳ ಬೆಲೆ ಕೇವಲ 13,499 ರೂಪಾಯಿಗಳಿಂದ ಶುರುವಾಗಿದೆ. ಕೇವಲ 13 ಸಾವಿರಕ್ಕೆ 32ಇಂಚ್ ಥಾಮ್ಸನ್ ಸ್ಮಾರ್ಟ್ ಟಿವಿಗಳನ್ನು ಗ್ರಾಹಕರು ಖರಿದಿಸಬಹುದಾಗಿದೆ. ಇನ್ನುಳಿದ 40 ಇಂಚು ಮತ್ತು 43 ಇಂಚುಗಳ ಥಾಮ್ಸನ್ ಟಿವಿಗಳ ಬೆಲೆ ಕೂಡ ಅತ್ಯಂತ ಕಡಿಮೆ ಇದೆ.!!

43ಇಂಚುಗಳ ಥಾಮ್ಸನ್ ಸ್ಮಾರ್ಟ್ ಟಿವಿ ಹೇಗಿದೆ?

43ಇಂಚುಗಳ ಥಾಮ್ಸನ್ ಸ್ಮಾರ್ಟ್ ಟಿವಿ ಹೇಗಿದೆ?

ಥಾಮ್ಸನ್ ಕಂಪೆನಿ ಬಿಡುಗಡೆ ಮಾಡಿರುವ ಮೂರು ಸ್ಮಾರ್ಟ್‌ಟಿವಿಗಳಲ್ಲಿ 43ಇಂಚುಗಳ ಥಾಮ್ಸನ್ ಸ್ಮಾರ್ಟ್‌ಟಿವಿ ಅತ್ಯಂತ ಹಗುರವಾಗಿ ವಿನ್ಯಾಸವಾಗಿದೆ. 3840 x 2160 ಅಲ್ಟ್ರಾ ಹೈ ಡೆಫಿನಿಷನ್ ಎಲ್ಇಡಿ-ಬ್ಯಾಕ್ಲಿಟ್ ಐಪಿಎಸ್ ಎಲ್ಸಿಡಿ ಡಿಸ್‌ಪ್ಲೇಯನ್ನು ಟಿವಿಗೆ ನೀಡಲಾಗಿದೆ. ಮನೆಯ ಗೋಡೆಗೆ ಸುಂರವಾಗಿ ಕಾಣುವಂತೆ ಫಿಟ್ ಆಗುವ ರಿತಿಯಲ್ಲಿ ಟಿವಿಯನ್ನು ತಯಾರಿಸಲಾಗಿದ್ದು, ಸ್ಮಾರ್ಟ್‌ಟಿವಿ ಆಗಿರುವುದರಿಂದ ಕೇವಲ ಒಂದು ಪವರ್ ಬಟನ್ ಅನ್ನು ಟಿವಿಯಲ್ಲಿ ನಿಡಲಾಗಿದೆ.

ಆಂಡ್ರಾಯ್ಡ್ 4.4 ಸ್ಮಾರ್ಟ್‌ಟಿವಿ!!

ಆಂಡ್ರಾಯ್ಡ್ 4.4 ಸ್ಮಾರ್ಟ್‌ಟಿವಿ!!

ಥಾಮ್ಸನ್ 43-ಇಂಚ್ ಸ್ಮಾರ್ಟ್ ಟಿವಿಗೆ ಎರಡು 10 ವಾಟ್ ಡೌನ್-ಫೈರಿಂಗ್ ಸ್ಪೀಕರ್ಗಳನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ 4.4 ದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್, ಯುಟ್ಯೂಬ್, ಸೌಂಡ್ ಕ್ಲೌಡ್ ಸೇರಿದಂತೆ NY ಟೈಮ್ಸ್, ಸಿಎನ್ಎನ್, ಬಿಬಿಸಿ, ವಿಕಿಪೀಡಿಯ, ಜಿಮೇಲ್‌ನಂತಹ ನಿಮಗೆ ಅಗತ್ಯವಿರುವ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಪಡೆಯುವ ಆಪ್ಟಿಯೋಡ್ ಅಪ್ಲಿಕೇಶನ್ ಸ್ಟೋರ್ ಅನ್ನು ಹೊಂದಿದೆ.!

43-ಇಂಚ್ ಸ್ಮಾರ್ಟ್ ಟಿವಿ ಬೆಲೆ?

43-ಇಂಚ್ ಸ್ಮಾರ್ಟ್ ಟಿವಿ ಬೆಲೆ?

ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಎಸ್‌ಕ್ಲೂಸಿವ್ ಆಗಿ ಮಾರಕ್ಕಿರುವ ಥಾಮ್ಸನ್ 43-ಇಂಚ್ ಸ್ಮಾರ್ಟ್ ಟಿವಿ ಬೆಲೆ ಕೇವಲ 27,999 ರುಪಾಯಿಗಳಾಗಿವೆ. ಇನ್ನು 40 ಇಂಚಿನ ಸ್ಮಾರ್ಟ್‌ಟಿವಿ 19,999 ರೂಪಾಯಿಗಳಿಗೆ ಬಿಡುಗಡೆಯಾಗಿದ್ದರೆ, 32 ಇಂಚಿನ ಸ್ಮಾರ್ಟ್‌ಟಿವಿ ಬೆಲೆ ಕೇವಲ 13,499 ರೂ.ಗಳಾಗಿವೆ. ಯೂರೋಪ್‌ನ ರಾಷ್ಟ್ರಗಳಲ್ಲಿ ಜನಪ್ರಿಯ ಬ್ರ್ಯಾಂಡ್ ಆಗಿ ಹೆಸರು ಗಳಿಸಿರುವ ಥಾಮ್ಸನ್ ಕಂಪೆನಿ ಇದೀಗ ಭಾರತದಲ್ಲಿ ಮತ್ತೆ ತನ್ನ ಖಾತೆ ತೆರೆಯಲು ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The 4K-screen market has escalated massively, aided and abetted by growing high dynamic range (HDR) technology that now partners with most 4K TVs. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot