2018ನೇ ವರ್ಷದಲ್ಲಿ ನಿರೀಕ್ಷೆ ಮೂಡಿಸಿರುವ ತಂತ್ರಜ್ಞಾನಗಳ ಲೀಸ್ಟ್ ಇಲ್ಲಿದೆ!!

|

ಅಭಿವೃದ್ದಿಯಾಗುತ್ತಿರುವ ತಂತ್ರಜ್ಞಾನಗಳ ಬಗ್ಗೆ ಪ್ರತಿವರ್ಷವೂ ಕುತೋಹಲ ಏರ್ಪಡುತ್ತಿರುತ್ತದೆ. ಈ ವರ್ಷ ಪ್ರಪಂಚವನ್ನು ಆಕ್ರಮಿಸಿಕೊಳ್ಳಬಹುದಾದ ತಂತ್ರಜ್ಞಾನಗಳು ಯಾವುವು? ಆ ತಂತ್ರಜ್ಞಾನಗಳಿಂದ ಮನುಷ್ಯಕುಲಕ್ಕೆ ಏನೆಲ್ಲಾ ಪ್ರಯೋಜನಗಳಾಗಲಿವೆ ಎಂಬೆಲ್ಲಾ ಪ್ರಶ್ನೆಗಳು ವಿಶ್ವದ ಟೆಕ್ ಪ್ರಪಂಚದಲ್ಲಿ ಮೂಡುತ್ತವೆ.!!

ಇಂತಹ ಟೆಕ್ ಅವಿಷ್ಕಾರಗಳ ಬಗ್ಗೆ 2018 ನೇ ವರ್ಷದಲ್ಲಿಯೂ ಸಹ ಹಲವು ತಂತ್ರಜ್ಞಾನಗಳು ಕುತೋಹಲ ಮೂಡಿಸಿವೆ. ಭವಿಷ್ಯದ ಕಡೆಗೆ ನೋಡಿದರೆ ಕೃತಕ ಬುದ್ಧಿಮತ್ತೆ, 5G ತಂತ್ರಜ್ಞಾನ, ರೋಬೋಟ್ ತಂತ್ರಜ್ಞಾನಗಳೆಲ್ಲವೂ ನಮ್ಮ ಕಣ್ಣ ಮುಂದೆ ಹಾದುಹೋಗುತ್ತಿದ್ದು ಬಗ್ಗೆ ಪಟ್ಟಿಗಳನ್ನು ಹಲವು ಮಾಧ್ಯಮಗಳು ಹೊರಹಾಕಿವೆ.!

 2018ನೇ ವರ್ಷದಲ್ಲಿ ನಿರೀಕ್ಷೆ ಮೂಡಿಸಿರುವ ತಂತ್ರಜ್ಞಾನಗಳ ಲೀಸ್ಟ್ ಇಲ್ಲಿದೆ!!

ಹಾಗಾಗಿ, ಇಂದಿನ ಲೇಖನದಲ್ಲಿ 2018ನೇ ವರ್ಷದಲ್ಲಿ ಅಭಿವೃದ್ದಿಯಾಗುತ್ತಿರುವ ತಂತ್ರಜ್ಞಾನಗಳು ಯಾವುವು? ಮಾನವಕುಲಕ್ಕೆ ಈ ತಂತ್ರಜ್ಞಾನಗಳೆಲ್ಲವೂ ಹೇಗೆ ಸಹಕಾರಿಯಾಗಬಲ್ಲದು? ಈ ತಂತ್ರಜ್ಞಾನಗಳ ಅಭಿವೃದ್ದಿ ಯಾವ ಹಂತದಲ್ಲಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

5G ತಂತ್ರಜ್ಞಾನ!!

5G ತಂತ್ರಜ್ಞಾನ!!

ವಿಶ್ವವೇ ಎದುರು ನೋಡುತ್ತಿರುವ 5G ತಂತ್ರಜ್ಞಾನವು ಈ ವರ್ಷದಲ್ಲಿ ಅಭಿವೃದ್ದಿಯಾಗಬಹುದಾದ ನಂಬರ್ ಒನ್ ತಂತ್ರಜ್ಞಾನವಾಗಿ ಕಾಣುತ್ತಿದೆ. 4G ಗಿಂತಲೂ 100 ಪಟ್ಟು ವೇಗವಾಗಿ ಡೇಟಾವನ್ನು ಕಳುಹಿಸಬಹುದಾದ ಈ 5G ತಂತ್ರಜ್ಞಾನ 2018 ರಲ್ಲಿಯೇ ಬಳಕೆಗೆ ಬರಲಿದೆ ಎನ್ನುತ್ತಿವೆ ವರದಿಗಳು.!!

ಕೃತಕ ಬುದ್ದಿಮತ್ತೆ!!

ಕೃತಕ ಬುದ್ದಿಮತ್ತೆ!!

ಮನುಷ್ಯನ ಬುದ್ದಿಮತ್ತೆಯನ್ನು ಮೀರಿಸುವ ಕೃತಕ ಬುದ್ದಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್ AI) ತಂತ್ರಜ್ಞಾನ ಈ ವರ್ಷ ಮತ್ತಷ್ಟು ಅಭಿವೃದ್ದಿಯಾಗುವ ನಿರೀಕ್ಷೆ ಇದೆ. !! ಇಂಟರ್‌ನೆಟ್‌ ಆಫ್ ಥಿಂಗ್ಸ್‌ (IOT), ಆಟೊಮೇಷನ್ ತಂತ್ರಜ್ಞಾನಗಳು ಎಲ್ಲ ಕ್ಷೇತ್ರಗಳಿಗೂ ಕೃತಕ ಬುದ್ದಿಮತ್ತೆ ಲಗ್ಗೆ ಇಡುವ ದಿನಗಳು ದೂರವಿಲ್ಲ.!!

ಚಂದ್ರನಲ್ಲಿಗೆ ನೌಕೆ!!

ಚಂದ್ರನಲ್ಲಿಗೆ ನೌಕೆ!!

ಗೂಗಲ್ ಸಂಸ್ಥೆ ನಿರ್ವಹಿಸುತ್ತಿರುವ 'ಲೂನಾರ್ ಎಕ್ಸ್‌ಪ್ರೈಜ್' ಸ್ಪರ್ಧೆ ಕಳೆದವರ್ಷದಿಂದಲೂ ಕುತೋಹಲ ಮೂಡಿಸಿದೆ. ಇದೇ ವರ್ಷ ಮಾರ್ಚ್ 31ನೇ ತಾರೀಖು ಸ್ಪರ್ಧೆ ಕೊನೆಗೊಳ್ಳುವುದರಿಂದ ಚಂದ್ರನಲ್ಲಿ ನೌಕೆ ಇಳಿಸುವ ಬಗ್ಗೆ ತಿಳಿಯುತ್ತದೆ. ಬೆಂಗಳೂರಿನ ಟೀಮ್ ಇಂಡಸ್ ಕೂಡ ಈ ಸ್ಪರ್ಧೆಯಲ್ಲಿ ಇರುವುದು ವಿಶೇಷವಾಗಿದೆ.!!

ಚಲನೆ ಆಧರಿಸಿ ಪತ್ತೆ.!!

ಚಲನೆ ಆಧರಿಸಿ ಪತ್ತೆ.!!

ಕ್ಯಾಮೆರಾ ಕಣ್ಗಾವಲು ಇಟ್ಟರೂ ಮುಖಗವಸುಗಳನ್ನು ಧರಿಸಿ ಅಪರಾಧ ಚಟುವಟಿಕೆಗಳನ್ನು ತಡೆಯಲು ಮನುಷ್ಯನ ಚಲನೆ ಆಧರಿಸಿ ಪತ್ತೆ ಹಚ್ಚುವ ಕಂಪ್ಯೂಟರ್ ಪ್ರೊಗ್ರಾಮಿಂಗ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಜಗತ್ತು ಮುಂದಾಗಿದೆ. ಕಿವಿಯಚ್ಚನ್ನು, ಕೈಗಳ ಆಕೃತಿಯನ್ನೂ ಭದ್ರತೆಗಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.!!

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ರೋಬೋಟ್ ಪ್ರಪಂಚ!!

ರೋಬೋಟ್ ಪ್ರಪಂಚ!!

ದುಬೈನಲ್ಲಿ ರೋಬೋಗೆ ನಾಗರೀಕತ್ವ ನೀಡಿದನ್ನು ಕೇಳಿ ಆಶ್ಚರ್ಯವಾದವರಿಗೆ 2018ನೇ ವರ್ಷ ಮತ್ತಷ್ಟು ಆಶ್ಚರ್ಯ ಮೂಡಿಸಲಿದೆ. ಮನುಷ್ಯನ ಎಲ್ಲಾ ಕಾರ್ಯಗಳನ್ನು ಸ್ವತಹಃ ಅರ್ಥೈಸಿಕೊಂಡು ಕೆಲಸ ಮಾಡುವ ರೋಬೋಟ್‌ಗಳ ಕಾಲ ಇದೀಗ ಶುರುವಾಗುತ್ತಿವೆ.!!

ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!

Best Mobiles in India

English summary
Several experts this week wondered if society is structurally and psychologically ready for the next step in technology's evolution. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X