ವಾಯ್ಸ್ ಕೇಳಿ ನಿಮ್ಮ ಆಜ್ಞೆ ಪಾಲಿಸುವ ThinQ ಸ್ಮಾರ್ಟ್‌ TVಗೆ ರಿಮೋಟ್ ಬೇಕಾಗಿಲ್ಲ..!

|

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತು TV ಮಾರುಕಟ್ಟೆಯಲ್ಲಿ LG ಸಾಕಷ್ಟು ಹೆಸರು ಮಾಡಿದ್ದು, ಈ ಬಾರಿ ಮುಂದಿನ ತಲೆಮಾರಿನ ಸ್ಮಾರ್ಟ್‌ TV ಯೊಂದನ್ನು ಲಾಂಚ್ ಮಾಡಲು ಮುಂದಾಗಿದೆ.

ವಾಯ್ಸ್ ಕೇಳಿ ನಿಮ್ಮ ಆಜ್ಞೆ ಪಾಲಿಸುವ ThinQ ಸ್ಮಾರ್ಟ್‌ TVಗೆ ರಿಮೋಟ್ ಬೇಕಾಗಿಲ್ಲ

ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ ಸ್ಪೀಕರ್ ಗಳನ್ನು ಮೀರಿಸುವಂತೆ ತನ್ನ ThinQ ಸ್ಮಾರ್ಟ್‌ TVಯಲ್ಲಿ ಗೂಗಲ್ ಅಸಿಸ್ಟೆಂಟ್ ಅನ್ನು ಅಳವಡಿಸುವ ಮೂಲಕ ವಾಯ್ಸ್ ಕಮೇಂಡಿಗ್‌ನಲ್ಲಿಯೇ ಟಿವಿಯನ್ನು ನಿಯಂತ್ರಿಸುವುದಲ್ಲದೇ, ಟಿವಿಯನ್ನೇ ಅಸಿಸ್ಟೆಂಟ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ.

How to Sharing a Mobile Data Connection with Your PC (KANNADA)

ಓದಿರಿ: ಗೂಗಲ್ ಕನಸು ನನಸು: ಜನವರಿ 26ಕ್ಕೆ ರೂ. 2000ಕ್ಕೆ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಲಾಂಚ್..!

ಇದಲ್ಲದೇ ಈ ThinQ ಸ್ಮಾರ್ಟ್‌ TV OLED ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, ಉತ್ತಮ ಗುಣಮಟ್ಟದ ವಿಡಿಯೋ ಕ್ವಾಲಿಟಿಯನ್ನು ಕಾಣಬಹುದಾಗಿದ್ದು, ಇದೇ ಮಾದರಿಯ ಡಿಸ್‌ಪ್ಲೇಯನ್ನು ಆಪಲ್ ತನ್ನ ಐಫೋನ್ X ನಲ್ಲಿ ಬಳಕೆ ಮಾಡಿಕೊಂಡಿತ್ತು ಎನ್ನಲಾಗಿದೆ. ಅಲ್ಲದೇ ಆಪಲ್ ತನ್ನ ಮುಂದಿನ ಐಫೋನ್‌ಗೆ LG ಯಿಂದಲೇ OLED ಡಿಸ್‌ಪ್ಲೇಯನ್ನು ಖರೀದಿ ಮಾಡುತ್ತಿದೆ ಎನ್ನುವ ಸುದ್ದಿಯೂ ಲೀಕ್ ಆಗಿದೆ.

ThinQ ಸ್ಮಾರ್ಟ್‌ TV ಯಲ್ಲಿ ಕೃತಕ ಬುದ್ದಿಮತ್ತೆ:

ThinQ ಸ್ಮಾರ್ಟ್‌ TV ಯಲ್ಲಿ ಕೃತಕ ಬುದ್ದಿಮತ್ತೆ:

ಸದ್ಯ ಸ್ಮಾರ್ಟ್‌ಫೋನಿನಲ್ಲಿ ಮಾತ್ರವೇ ಕಾಣಸಿಗುತ್ತಿರುವ ಕೃತಕ ಬುದ್ದಿಮತ್ತೆಯನ್ನು LG ತನ್ನ ThinQ ಸ್ಮಾರ್ಟ್‌ TVಯಲ್ಲಿ ಅಳವಡಿಸಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರು ತಮ್ಮ ವಾಯ್ಸ್ ಕಮೆಂಡಿಂಗ್ ಮೂಲಕವೇ ಟಿವಿಯನ್ನು ನಿಯಂತ್ರಿಸುವುದಲ್ಲದೇ ಮಾಹಿಯನ್ನು ಹುಡುಕಲು ಸೇರಿದಂತೆ ಎಲ್ಲಾ ಕಾರ್ಯಗಳಿಗೂ ThinQ ಸ್ಮಾರ್ಟ್‌ TVಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಗೂಗಲ್ ಅಸಿಸ್ಟೆಂಟ್:

ಗೂಗಲ್ ಅಸಿಸ್ಟೆಂಟ್:

ಸದ್ಯದ ಮಾರುಕಟ್ಟೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ಗೂಗಲ್ ಒಡೆತನ್ ಗೂಗಲ್ ಅಸಿಸ್ಟೆಂಟ್ ಅನ್ನು ThinQ ಸ್ಮಾರ್ಟ್‌ TVಯಲ್ಲಿ ಕಾಣಬಹುದಾಗಿದ್ದು, ThinQ ಸ್ಮಾರ್ಟ್‌ TV ಆಂಡ್ರಾಯ್ಡ್ ಟಿವಿಯಾಗಿರುವುದರಿಂದು ಸುಲಭವಾಗಿ ಗೂಗಲ್ ಅಸಿಸ್ಟೆಂಟ್ ಸಪೋರ್ಟ್ ಮಾಡಲಿದೆ.

ಅತ್ಯುತ್ತಮ ಕ್ವಾಲಿಟಿ:

ಅತ್ಯುತ್ತಮ ಕ್ವಾಲಿಟಿ:

LG ಲಾಂಚ್ ಮಾಡಲಿರುವ ThinQ ಸ್ಮಾರ್ಟ್‌ TV ಯಲ್ಲಿ ನೀವು ಅತ್ಯುತ್ತಮ ವಿಡಿಯೋ ಕ್ವಾಲಿಟಿಯನ್ನು ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ ಆಡಿಯೋ ಕ್ವಾಲಿಟಿಸಹ ಉತ್ತಮವಾಗಿದ್ದು, ನಿಮ್ಮ ಟಿವಿ ನೋಡುವ ಹವ್ಯಾಸವನ್ನು ಇದು ಬದಲಾಯಿಸಲಿದೆ ಎನ್ನಲಾಗಿದೆ.

Best Mobiles in India

English summary
LG Unveils ThinQ-Powered 2018 OLED, Super UHD TVs With Google Assistant Integration. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X