ಹೊಸ ಲೀ-ಐಯಾನ್ ಬ್ಯಾಟರಿ ಬಂದರೆ 5 ದಿನ ಸ್ಮಾರ್ಟ್‌ಫೋನ್‌ ಬ್ಯಾಟರಿ ಖಾಲಿಯಾಗಲ್ಲ!!

ಈ ತಂತ್ರಜ್ಞಾನವೇನಾದರೂ ಬಳಕೆಗೆ ಬಂದರೆ ಸ್ಮಾರ್ಟ್‌ಫೋನ್ ಪ್ರಪಂಚ ಮತ್ತಷ್ಟು ಬದಲಾವಣೆ ಕಾಣಲಿದೆ.!!

|

ತಂತ್ರಜ್ಞಾನದ ಅಭಿವೃದ್ದಿಗೆ ಕೊನೆ ಎಂಬುದು ಎಂಬುದಿಲ್ಲ. ಪ್ರತಿದಿನ ಒಂದೊಂದು ಹೊಸ ಹೊಸ ತಂತ್ರಜ್ಞಾನಗಳು ಹುಟ್ಟಿಕೊಳ್ಳುತ್ತವೆ. ಹಾಗೆಯೇ, ಇವುಗಳು ಮತ್ತಷ್ಟು ಅಭಿವೃದ್ದಿಯಾಗುತ್ತಲೇ ಇರುತ್ತವೆ.! ಇಂತಹ ತಂತ್ರಜ್ಞಾನಕ್ಕೆ ಸೇರ್ಪಡೆಯಾಗಿರುವುದು ಜಾಗತಿಕವಾಗಿ ಹೆಚ್ಚು ಬಳಕೆಯಲ್ಲಿರುವ ಹಾಗೂ ಪ್ರಸ್ತುತ ಉತ್ತಮ ಬ್ಯಾಟರಿಗಳು ಎಂದು ಹೆಸರು ಮಾಡಿರುವ ಲೀ-ಐಯಾನ್ ಬ್ಯಾಟರಿಗಳ ಅಭಿವೃದ್ದಿ.!!

ಹೌದು, ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆಯಲ್ಲಿಯವ ಲಿ-ಅಯಾನ್ ಬ್ಯಾಟರಿ ತಂತ್ರಜ್ಞಾನ ಇದೀಗ ಮತ್ತೊಂದು ಹಂತಕ್ಕೆ ತಲುಪಿಪಲಿದ್ದು, ಲಿ-ಅಯಾನ್ ಬ್ಯಾಟರಿ ಶಕ್ತಿ ಹಲವು ಪಟ್ಟು ಹೆಚ್ಚಾಗುವ ತಂತ್ರಜ್ಞಾನ ಅಭಿವೃದ್ದಿಯಾಗುತ್ತಿದೆ.! ಈ ತಂತ್ರಜ್ಞಾನವೇನಾದರೂ ಬಳಕೆಗೆ ಬಂದರೆ ಸ್ಮಾರ್ಟ್‌ಫೋನ್ ಪ್ರಪಂಚ ಮತ್ತಷ್ಟು ಬದಲಾವಣೆ ಕಾಣಲಿದೆ.!! ಹಾಗಾದರೆ, ಏನಿದು ತಂತ್ರಜ್ಞಾನ? ತಂತ್ರಜ್ಞಾನದ ನಂತರ ಸ್ಮಾರ್ಟ್‌ಫೋನ್ ಪ್ರಪಂಚ ಹೇಗೆ ಬದಲಾಗಲಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬ್ಯಾಟರಿ ಶಕ್ತಿ ಬೇಕಿದೆ.!!

ಬ್ಯಾಟರಿ ಶಕ್ತಿ ಬೇಕಿದೆ.!!

ಒಂದು ಮೊಬೈಲ್‌ನಿಂದ ಹಿಡಿದು ಯಾವುದೇ ಗ್ಯಾಜೆಟ್‌ಗಳು ಕೆಲಸ ನಿರ್ವಹಿಸಲು ಬ್ಯಾಟರಿ ಶಕ್ತಿ ಬಹುಮುಖ್ಯ. ಹಾಗಾಗಿ, ಬ್ಯಾಟರಿಗಳ ಮೇಲೆ ದಿನದಿಂದ ದಿನಕ್ಕೆ ಅವಿಷ್ಕಾರಗಳು ನಡೆಯುತ್ತಲೇ ಇದೆ. ಇದು ಪ್ರಸ್ತುತ ಲೀ-ಐಯಾನ್ ಬ್ಯಾಟರಿಗಳವರೆಗೆ ಬಂದು ನಿಂತಿದ್ದು, ಭವಿಷ್ಯದ ಬ್ಯಾಟರಿ ತಂತ್ರಜ್ಞಾನ ಬೆಳವಣಿಗೆ ನಡೆಯುತ್ತಿದೆ..!!

 ಶಕ್ತಿಶಾಲಿಯಾಗಲಿದೆ ಲೀ-ಐಯಾನ್ ಬ್ಯಾಟರಿ!!

ಶಕ್ತಿಶಾಲಿಯಾಗಲಿದೆ ಲೀ-ಐಯಾನ್ ಬ್ಯಾಟರಿ!!

ಪ್ರಸ್ತುತ ಹೆಚ್ಚು ಬಳಕೆಯಲ್ಲಿರುವ ಲೀಥಿಯಂ ಅಯನ್ ಬ್ಯಾಟರಿಗಳು ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿವೆ. ಆದರೆ, ಲೀಥಿಯಂ ಅಯನ್ ಬ್ಯಾಟರಿಗಳಲ್ಲಿ ಲಿಕ್ವಿಡ್ ಸ್ಟೇಟ್‌ ಇಲೆಕ್ಟ್ರೋಲೈಟ್ ತೊಂದರೆಯಿಂದ ಚಾರ್ಜ್‌ ಫ್ಲೋ ಆಗುತ್ತಿದ್ದು, ಇದನ್ನು ತಡೆಗಟ್ಟುವ ತಂತ್ರಜ್ಞಾನ ಅಭಿವೃದ್ದಿಯಾಗುತ್ತಿದೆ.!!

ಹೊಸ ಲೀ-ಐಯಾನ್ ತಂತ್ರಜ್ಞಾನ!!

ಹೊಸ ಲೀ-ಐಯಾನ್ ತಂತ್ರಜ್ಞಾನ!!

ಲಿ-ಐಯಾನ್ ಬ್ಯಾಟರಿಗಳನ್ನು ಮತ್ತಷ್ಟು ಶಕ್ತಿಶಾಲಿಯಾಗಿಸಲು ಕಾಲೇಜ್‌ ಆಫ್‌ ಹ್ಯುಮಾನಿಟಿ ಆಫ್‌ ಸೈನ್ಸ್‌ನ ರಿಸರ್ಚರ್‌ಗಳು ತಯಾರಿ ನಡೆಸಿದ್ದಾರೆ.! ಸಿಂಗಲ್‌ ನೆಗೆಟಿವ್‌ ಆಯನ್ ರಿಮೂವ್ ಮಾಡಿ ಪಾಸಿಟಿವ್ ಆಯನ್‌ನಲ್ಲಿ ಅಧಿಕ ಇಲೆಕ್ಟ್ರಾನ್ ಅಳವಡಿಸಿ ಬ್ಯಾಟರಿ ಚಾರ್ಜ್‌ ಫ್ಲೋ ಆಗದಂತೆ ತಡೆಯುವ ಯತ್ನದಲ್ಲಿದ್ದಾರೆ.!!

ಶಕ್ತಿಶಾಲಿ ಬ್ಯಾಟರಿಗಳು.!!

ಶಕ್ತಿಶಾಲಿ ಬ್ಯಾಟರಿಗಳು.!!

ಒಮ್ಮೆ ಈ ತಂತ್ರಜ್ಞಾನವನ್ನು ಅಭಿವೃದ್ದಿ ಮಾಡಿದರೆ ಲೀಥಿಯಂ ಅಯನ್ ಬ್ಯಾಟರಿಗಳ ಶಕ್ತಿ ಹಲವುಪಟ್ಟು ಹೆಚ್ಚುತ್ತದೆ. ಅಂದರೆ ಒಂದು 4000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಸುಮಾರು 5 ರಿಂದ 6 ದಿನಗಳ ಪೂರ್ಣ ಚಾರ್ಜ್ ನೀಡಬಹುದು ಎಂಬ ಲೆಕ್ಕಾಚಾರವಿದೆ.!!

ಬದಲಾಗಲಿದೆ ಸ್ಮಾರ್ಟ್‌ಫೋನ್ ಪ್ರಪಂಚ!!

ಬದಲಾಗಲಿದೆ ಸ್ಮಾರ್ಟ್‌ಫೋನ್ ಪ್ರಪಂಚ!!

ಈಗಾಗಲೇ ಕಂಪ್ಯೂಟರ್, ಲ್ಯಾಪ್‌ಟಾಪ್, ಟಿವಿ ಎಲ್ಲವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಸ್ಮಾರ್ಟ್‌ಫೋನ್ ಪ್ರಪಂಚ ಲೀಥಿಯಂ ಅಯನ್ ಬ್ಯಾಟರಿಗಳ ಅಭಿವೃದ್ದಿಯಿಂದ ಮತ್ತಷ್ಟು ಬದಲಾವಣೆ ಕಾಣಲಿದೆ. ಒಂದೇ ದಿನಕ್ಕೆ ಖಾಲಿಯಾಗುವ ಮೊಬೈಲ್ ಬ್ಯಾಟರಿ ಹಲವು ದಿವಸಗಳವರೆಗೆ ಇದ್ದರೆ ಎಷ್ಟು ಚೆಂದ ಅಲ್ವಾ?

</a></strong><a class=6,499 ರೂ.ಗೆ ಲಾಂಚ್ ಆದ 'ಎಲುಗಾ ಐ5'!..ರೆಡ್ಮಿ 4, ಮೊಟೊ ಸಿ ಪ್ಲಸ್‌ ಫೋನ್‌ಗಳಿಗೆ ಸ್ಪರ್ಧಿ!!" title="6,499 ರೂ.ಗೆ ಲಾಂಚ್ ಆದ 'ಎಲುಗಾ ಐ5'!..ರೆಡ್ಮಿ 4, ಮೊಟೊ ಸಿ ಪ್ಲಸ್‌ ಫೋನ್‌ಗಳಿಗೆ ಸ್ಪರ್ಧಿ!!" loading="lazy" width="100" height="56" />6,499 ರೂ.ಗೆ ಲಾಂಚ್ ಆದ 'ಎಲುಗಾ ಐ5'!..ರೆಡ್ಮಿ 4, ಮೊಟೊ ಸಿ ಪ್ಲಸ್‌ ಫೋನ್‌ಗಳಿಗೆ ಸ್ಪರ್ಧಿ!!

Best Mobiles in India

English summary
A new wave of lithium-ion batteries that are more powerful, and ultimately safer, may be on the way.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X