2020 ಕ್ಕೆ ಭಾರತಕ್ಕೆ ಬರಲಿದೆ ಒನ್ ಪ್ಲಸ್ ಟಿವಿ!!

|

ಈ ವರ್ಷದ ಆರಂಭದಲ್ಲಿ ಒನ್ ಪ್ಲಸ್ ಸಂಸ್ಥೆ ಹೊಸ ಗ್ರಾಹಕ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ಲಾನ್ ಮಾಡುತ್ತಿರುವುದಾಗಿ ಪ್ರಕಟಿಸಿತ್ತು. ಕಂಪೆನಿಯು ಒನ್ ಪ್ಲಸ್ ಟಿವಿಯನ್ನು ಮಾರುಕಟ್ಟೆಗೆ ತರುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿತ್ತು. ಇದು ಸ್ಮಾರ್ಟ್ ಟಿವಿಯಾಗಿರಲಿದ್ದು ಫ್ಲ್ಯಾಗ್ ಶಿಪ್ ಕಿಲ್ಲರ್ ಕೂಡ ಆಗಿರುತ್ತದೆ ಎಂದು ತಿಳಿಸಲಾಗಿತ್ತು. ಸ್ಯಾಮ್ ಸಂಗ್, ಸೋನಿ, ಎಲ್ ಜಿ ಮತ್ತು ಶಿಯೋಮಿ ಸಂಸ್ಥೆಯ ಟಿವಿಗಳ ಜೊತೆಗೆ ಇದು ಸ್ಪರ್ಧೆಗಿಳಿಯಲಿದ್ದು ಕೈಗೆಟುಕುವ ಬೆಲೆಯಲ್ಲಿ ಬೆಸ್ಟ್ ಫೀಚರ್ ಗಳನ್ನೊಳಗೊಂಡ ಟಿವಿಯನ್ನು ಮಾರುಕಟ್ಟೆಗೆ ಬಿಡುವ ಬಗ್ಗೆ ವರದಿಗಳು ಬಂದಿದ್ದವು.

2020 ಕ್ಕೆ ಭಾರತಕ್ಕೆ ಬರಲಿದೆ ಒನ್ ಪ್ಲಸ್ ಟಿವಿ!!

ಸೆಪ್ಟೆಂಬರ್ ತಿಂಗಳಿನಿಂದಲೇ ಒನ್ ಪ್ಲಸ್ ಟಿವಿ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ ಕೂಡ ಇದುವರೆಗೂ ಕಂಪೆನಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಇದೀಗ ಕೆಲವು ಮಾಹಿತಿಗಳು ಲಭ್ಯವಾಗಿದ್ದು ಒನ್ ಪ್ಲಸ್ ಸಿಇಓ ಪಿಟೆ ಲೌ ಅವರು ಕೆಲವು ಮಾಹಿತಿಗಳನ್ನು ಹೊರಹಾಕಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಒನ್ ಪ್ಲಸ್ ಟಿವಿಯ ಬಗ್ಗೆ ಸ್ವಲ್ಪ ಮಾಹಿತಿಗಳನ್ನು ನೀಡಿದ್ದಾರೆ.

2020 ಕ್ಕೆ ಭಾರತಕ್ಕೆ ಬರಲಿದೆ ಒನ್ ಪ್ಲಸ್ ಟಿವಿ:

2020 ಕ್ಕೆ ಭಾರತಕ್ಕೆ ಬರಲಿದೆ ಒನ್ ಪ್ಲಸ್ ಟಿವಿ:

ವರದಿಗಳ ಪ್ರಕಾರ 2019 ಕ್ಕೆ ಒನ್ ಪ್ಲಸ್ ಟಿವಿ ಭಾರತಕ್ಕೆ ಬರುತ್ತದೆ ಎಂದು ಹೇಳಲಾಗಿತ್ತು.ಆದರೆ ಇದೀಗ ಈ ಮಾಹಿತಿ ಸುಳ್ಳಾಗಲಿದೆ ಎಂದು ತಿಳಿದುಬಂದಿದೆ.2019 ಕ್ಕೆ ಅಲ್ಲ ಬದಲಾಗಿ 2020 ಕ್ಕೆ ಭಾರತದಲ್ಲಿ ಒನ್ ಪ್ಲಸ್ ಟಿವಿ ಬಿಡುಗಡೆಗೊಳ್ಳುತ್ತದೆ ಎಂದು ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಒನ್ ಪ್ಲಸ್ ಸಂಸ್ಥೆಯ ಸಿಇಓ ಪಿಟೆ ಲೌ ಅವರು ತಿಳಿಸಿದ್ದು, ಖಂಡಿತವಾಗಲೂ ಒನ್ ಪ್ಲಸ್ ಟಿವಿಯ ಮೊದಲ ಮಾರುಕಟ್ಟೆ ಭಾರತವೇ ಆಗಿರಲಿದೆ ಎಂದು ಹೇಳಿದ್ದಾರೆ.

ಇದನ್ನು ಅಮೇಜಾನ್ ಇಂಡಿಯಾದಲ್ಲಿ ಎಕ್ಸ್ ಕ್ಲೂಸೀವ್ ಆಗಿ ಮಾರಾಟ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಕೂಡ ಅವರು ನೀಡಿದ್ದಾರೆ. ಇತ್ತೀಚೆಗಷ್ಟೇ ಒನ್ ಪ್ಲಸ್ ಮತ್ತು ಅಮೇಜಾನ್ ಇಂಡಿಯಾ ಎರಡೂ ಕೂಡ 4 ವರ್ಷಗಳ ಸತತ ಪಾಲುದಾರಿಕೆಯ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಕೂಡ ನಡೆಸಿದ್ದವು.

ಡೆಡ್ ಲೈನ್ ಇಟ್ಟುಕೊಂಡಿಲ್ಲ:

ಡೆಡ್ ಲೈನ್ ಇಟ್ಟುಕೊಂಡಿಲ್ಲ:

ಪಿಟೆ ಲೌ ಹೇಳುವ ಪ್ರಕಾರ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸುವುದಕ್ಕಾಗಿ ಒನ್ ಪ್ಲಸ್ ಸಂಸ್ಥೆ ಯಾವುದೇ ಡೆಡ್ ಲೈನ್ ನ್ನೂ ಕೂಡ ಇಟ್ಟುಕೊಂಡಿಲ್ಲವಂತೆ. ಯಾಕೆಂದರೆ ಬೆಸ್ಟ್ ಸ್ಮಾರ್ಟ್ ಟಿವಿಯನ್ನು ಬಿಡುಗಡೆಗೊಳಿಸಬೇಕು ಎಂಬ ಉದ್ದೇಶವನ್ನು ಮಾತ್ರ ಸಂಸ್ಥೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಈಗ ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಟಿವಿಗಳಿಗಿಂತ ಅತ್ಯುತ್ತಮ ಟಿವಿಯನ್ನು ಹೊರ ತಂದು ಅದನ್ನು ಕೈಗೆಟುಕುವ ಬೆಲೆಗೆ ಮಾರುಕಟ್ಟೆಗೆ ಸಂಸ್ಥೆ ಹೊಸ ಶಕೆಯನ್ನು ಆರಂಭಿಸುವ ಪ್ರಯತ್ನವನ್ನು ಒನ್ ಪ್ಲಸ್ ಮಾಡಲಿದೆ ಎಂಬುದನ್ನು ಮಾತ್ರ ಅವರು ಖಾತ್ರಿಗೊಳಿಸಿದ್ದಾರೆ. ಅಂದರೆ ಫ್ಲ್ಯಾಗ್ ಶಿಪ್ ಟಿವಿಯನ್ನು ತರಬೇಕು ಎಂಬುದು ಅವರ ಉದ್ದೇಶವಾಗಿದೆ.

ಟಿವಿಯ ಬೆಲೆ ಎಷ್ಟಿರಬಹುದು?

ಟಿವಿಯ ಬೆಲೆ ಎಷ್ಟಿರಬಹುದು?

ಒನ್ ಪ್ಲಸ್ ಟಿವಿಯ ಮೂಲಕ ಗ್ರಾಹಕರಿಗೆ ವಿಭಿನ್ನ ಅನುಭವ ಸಿಗಬೇಕು ಎಂಬುದು ಒನ್ ಪ್ಲಸ್ ನ ಉದ್ದೇಶ. ಟಿವಿಯ ಬೆಲೆಯ ಬಗ್ಗೆ ಲೌ ಅವರು ಪ್ರಶ್ನಿಸಿದಾಗ ಬೆಲೆಯು ಖಂಡಿತ ಸ್ಪರ್ಧಾತ್ಮಕವಾಗಿರಲಿದ್ದು ಸ್ಮಾರ್ಟ್ ಫೋನ್ ಗಳಂತೆಯೇ ಟಿವಿ ಮಾರುಕಟ್ಟೆಯಲ್ಲೂ ಕೂಡ ನೇರ ಸ್ಪರ್ಧೆಯೊಡ್ಡಲಿದೆ ಎಂದು ಉತ್ತರಿಸಿದ್ದಾರೆ.

ಅಮೇಜಾನ್ ನಲ್ಲಿ ಮಾರಾಟ:

ಅಮೇಜಾನ್ ನಲ್ಲಿ ಮಾರಾಟ:

ಎಲ್ಲರಿಗೂ ತಿಳಿದಿರುವಂತೆ ಒನ್ ಪ್ಲಸ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಹವಾ ಸೃಷ್ಟಿ ಮಾಡಿದೆ. ಅದರಲ್ಲೂ ಭಾರತೀಯ ಮಾರುಕಟ್ಟೆ ಒನ್ ಪ್ಲಸ್ ಗೆ ಹೊಸ ಮೈಲಿಗಲ್ಲನ್ನೇ ನೀಡಿದೆ.ಹೆಚ್ಚು ಫೀಚರ್ ಕಡಿಮೆ ಬೆಲೆಯ ಫೋನ್ ನಲ್ಲೇ ನೀಡಿ ಒನ್ ಪ್ಲಸ್ ಸಂಸ್ಥೆ ಇತರೆ ದೊಡ್ಡ ದೊಡ್ಡ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳಿಗೆ ಸವಾಲು ಹಾಕಿದೆ. ಕೈಗೆಟುಕುವ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ ಫೋನ್ ನೀಡಿದ ಕಾರಣಕ್ಕೆ ಒನ್ ಪ್ಲಸ್ ಸಂಸ್ಥೆ ಪ್ರಸಿದ್ಧಿಯಾಗಿದೆ. ಇದೇ ರೀತಿಯ ಮಾರುಕಟ್ಟೆಯ ಟ್ರಿಕ್ಸ್ ನ್ನು ಟಿವಿ ಬಿಡುಗಡೆಗೊಂಡಾಗಲೂ ಕೂಡ ಒನ್ ಪ್ಲಸ್ ಸಂಸ್ಥೆ ನಡೆಸಲಿದೆ ಎಂದು ತಿಳಿದು ಬಂದಿದೆ

ಜಯಗಳಿಸಿದವರ ಹೆಸರು ಇಂದು ಪ್ರಕಟ:

ಜಯಗಳಿಸಿದವರ ಹೆಸರು ಇಂದು ಪ್ರಕಟ:

ಒನ್ ಪ್ಲಸ್ ಸ್ಮಾರ್ಟ್ ಟಿವಿಗೆ ಇದುವರೆಗೂ ಯಾವುದೇ ಹೆಸರನ್ನೂ ಇಡಲಾಗಿಲ್ಲ ಆದರೆ ಕೆಲವೇ ದಿನಗಳಲ್ಲಿ ಅದಕ್ಕೆ ಖಂಡಿತ ನಾಮಕರಣ ನಡೆಯಲಿದೆ.ತಮ್ಮ ಮೊದಲ ಟಿವಿಗೆ ಏನೆಂದು ಹೆಸರಿಡಬಹುದು ಎಂಬುದಾಗಿ ಸಂಸ್ಥೆ ಗ್ರಾಹಕರನ್ನೇ ಕೇಳುತ್ತಿದೆ. ಈ ನಿಟ್ಟಿನಲ್ಲಿ ತಮ್ಮ ಫೋರಂನಲ್ಲಿ ಕಾಂಟೆಸ್ಟ್ ನ್ನು ಕೂಡ ನಡೆಸಲಾಗಿತ್ತು. ಮೊದಲ ಒನ್ ಪ್ಲಸ್ ಟಿವಿಯನ್ನು ಜಯಗಳಿಸಿದ ವ್ಯಕ್ತಿಯು ಪಡೆಯಲಿದ್ದಾರೆ ಮತ್ತು 10 ಫೈನಲಿಸ್ಟ್ ಗಳಿಗೆ ಉಚಿತವಾಗಿ ಒನ್ ಪ್ಲಸ್ ನ ಬುಲೆಟ್ ವಯರ್ ಲೆಸ್ ಇಯರ್ ಫೋನ್ ನೀಡಲಾಗುತ್ತದೆ.ಡಿಸೆಂಬರ್ 17 ಕ್ಕೆ ಜಯಗಳಿಸಿದರ ಪಟ್ಟಿಯನ್ನು ನೀಡಲಾಗುತ್ತದೆ.

ಜನರ ಬೇಡಿಕೆ ತಿಳಿಯುವ ಪ್ರಯತ್ನ:

ಜನರ ಬೇಡಿಕೆ ತಿಳಿಯುವ ಪ್ರಯತ್ನ:

ಸದ್ಯದ ಸ್ಮಾರ್ಟ್ ಟಿವಿಯನ್ನು ಹೇಗೆ ಇನ್ನೂ ಅಭಿವೃದ್ಧಿಗೊಳಿಸಬಹುದು ಎಂಬುದಾಗಿ ಸಂಸ್ಥೆ ಸುಮಾರು 5 ಮಿಲಿಯನ್ ಬಲಿಷ್ಟ ಕಮ್ಯುನಿಟಿ ಸದಸ್ಯರನ್ನು ಪ್ರಶ್ನಿಸಿತ್ತು ಮತ್ತು ಎಲ್ಲರಿಂದಲೂ ಸಹಾಯ ಕೇಳಿತ್ತು, ಕಂಪೆನಿಯು ಉತ್ತಮ ಟಿವಿಯನ್ನು ನಿರ್ಮಿಸುವ ಕಾರಣದಿಂದಾಗಿ ಬಳಕೆದಾರರಿಗೆ ಯಾವ ರೀತಿಯ ಸೌಲಭ್ಯಗಳ ಅಗತ್ಯತೆ ಟಿವಿಯಲ್ಲಿ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ನಡೆಸಿದೆ.

ಟಿವಿ ಬರುವುದಕ್ಕೆ ಇನ್ನೂ ಎರಡು ವರ್ಷ ತಡ ಇದೆ. ಹಾಗಾಗಿ ನಿಮ್ಮ ಟಿವಿಯಲ್ಲಿ ಏನೇನು ಬೇಕು ಎಂಬ ಬೇಡಿಕೆ ನಿಮಗಿದೆ. ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.

Best Mobiles in India

Read more about:
English summary
OnePlus TVs will be Launched in India in 2020, Available Through Amazon: Company CEO

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X