ಶೀಘ್ರದಲ್ಲಿಯೆ ಸ್ಯಾಮ್ಸಂಗ್‌ನ ಹೊಸ ಸ್ಮಾರ್ಟ್‌ ಗ್ಯಾಜೆಟ್ ಲಾಂಚ್!..ಏನದು?

|

ಭವಿಷ್ಯದ ಗ್ಯಾಜೆಟ್ಗಳನ್ನು ಮಾರುಕಟ್ಟೆಗೆ ಪರಿಚಯುಸುವುದರ ಮೂಲಕ ಜನಪ್ರಿಯ ಟೆಕ್ ಬ್ಯ್ರಾಂಡ್ ಆಗಿರುವ ಸ್ಯಾಮ್ಸಂಗ್ ಕಂಪನಿಯು ಹೊಸ ಹೊಸ ಉತ್ಪನಗಳನ್ನು ಉತ್ಪಾದಿಸುತ್ತಲೆ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಇದೀಗ ಸ್ಯಾಮ್‌ಸಂಗ್ ಕಂಪನಿಯು ಫಿಟ್ನೆಸ್ ಪ್ರಿಯರಿಗೆ ಉಪಯುಕ್ತವಾಗುವಂತಹ ಸ್ಮಾರ್ಟ್ ಗ್ಯಾಜೆಟ್‌ವೊಂದನ್ನು ನೀಡಲು ಸಿದ್ಧವಾಗಿದ್ದು, ಆ ಗ್ಯಾಜೆಟ್ ಫಿಟ್ನೆಸ್ ಪ್ರಿಯರನ್ನು ಖಂಡಿತವಾಗಿಯೂ ಸೆಳೆಯಲಿದೆ.

ಹೌದು, ಎಲ್ಲರಿಗೂ ಇಷ್ಟವಾಗುವ ಅನೇಕ ಗ್ಯಾಜೆಟ್ಸ್ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿರುವ ಸ್ಯಾಮ್ಸಂಗ್ ಕಂಪನಿ ಫಿಟ್ನೆಸ್ ಬಗ್ಗೆ ಗಮನಕೊಡುವ ಗ್ರಾಹರಿಗೆ ಈಗಾಗಲೇ ಹಲವು ಉತ್ತಮ ಗ್ಯಾಜೆಟ್‌ಗಳನ್ನು ತಯಾರಿಸಿ ಯಶ್ಸಸನ್ನು ಕಂಡಿದೆ. ಇದರ ಮುಂದುವರೆದ ಭಾಗವಾಗಿ, ಈ ಬಾರಿ ಸ್ಯಾಮ್ಸ್ಂಗ್ ಮತ್ತೊಂದು ಅತ್ಯಾಧುನಿಕ 'ಪಲ್ಸ್' ಎಂಬ ಸ್ಮಾರ್ಟ್‌ವಾಚ್ ಅ‌ನ್ನು ತಯಾರಿಸಿದ್ದು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಪರಿಚಯಿಸುವುದಾಗಿ ತಿಳಿಸಿದೆ.

 ಶೀಘ್ರದಲ್ಲಿಯೆ ಸ್ಯಾಮ್ಸಂಗ್‌ನ ಹೊಸ ಸ್ಮಾರ್ಟ್‌ ಗ್ಯಾಜೆಟ್ ಲಾಂಚ್!..ಏನದು?

ಇದೀಗ ಬಿಡುಗಡೆಗೆ ತಯಾರಾಗಿರುವ ಸ್ಯಾಮ್‌ಸಂಗ್ 'ಪಲ್ಸ್' ಸ್ಮಾರ್ಟ್‌ವಾಚ್ 'ಗ್ಯಾಲ್ಯಾಕ್ಸಿ' ಸರಣಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ, ಈ ಸ್ಮಾರ್ಟ್‌ವಾಚ್ ಅತಿ ನೂತನ ತಂತ್ರಾಂಶಗಳನ್ನು ಹೊಂದಿರಲಿದೆ ಎಂಬುದನ್ನು ಕಂಪೆನಿ ಸ್ಪಷ್ಟಪಡಿಸಿದೆ. ಫಿಟ್ನೆಸ್ ಪ್ರಿಯರನ್ನು ಟಾರ್ಗೆಟ್ ಮಾಡಿಕೊಂಡು ಮಾರುಕಟ್ಟೆಗೆ ಬರುತ್ತಿರುವ ಈ ಸ್ಮಾರ್ಟ್‌ವಾಚ್ ಈ ಕೆಳಗಿನ ಎಲ್ಲಾ ಫೀಚರ್ಸ್ ಹೊಂದಿರುವುದು ಇದರ ಪ್ರಮುಖ ವಿಶೇಷತೆಗಳು ಎಂದು ಹೇಳಬಹುದು.

 ಶೀಘ್ರದಲ್ಲಿಯೆ ಸ್ಯಾಮ್ಸಂಗ್‌ನ ಹೊಸ ಸ್ಮಾರ್ಟ್‌ ಗ್ಯಾಜೆಟ್ ಲಾಂಚ್!..ಏನದು?

ಸ್ಯಾಮ್‌ಸಂಗ್‌ನ ಈ 'ಪಲ್ಸ್' ಸ್ಮಾರ್ಟ್‌ವಾಚ್, ಗೊರಿಲ್ಲಾ ಗ್ಲಾಸ್ ರಕ್ಷಣೆಯ 1.2 ಇಂಚಿನ ಡಿಸ್‌ಪ್ಲೇ, 4GB RAM, ಉತ್ತಮ ಬ್ಯಾಟರಿ ಸಾಮರ್ಥ್ಯ, ಕಪ್ಪು, ಹಸಿರು, ಸಿಲ್ವರ್, ಪಿಂಕ್ ಮತ್ತು ಗೋಲ್ಡ್ ಬಣ್ಣಗಳಲ್ಲಿ ಲಭ್ಯವುರು ಬಗ್ಗೆ ಕಂಪೆನಿ ತಿಳಿಸಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಟೈಜನ್ ಎಂಬ ತಂತ್ರಾಂಶ ಬಳಸಲಾಗಿದ್ದು, ಈ ಟೈಜನ್ ಅನ್ನುವುದು ಒಂದು ಮೊಬೈಲ್ ಕುರಿತಾದ ತಂತ್ರಾಂಶವಾಗಿದೆ, ಇದು ಸ್ಮಾರ್ಟ್‌ವಾಚ್‌ನ ಸ್ಮಾರ್ಟ್‌ ಕಾರ್ಯನಿರ್ವಹಣೆಯಲ್ಲಿ ಸಹಾಯ ಮಾಡಲಿದೆ.

Best Mobiles in India

English summary
Samsung is working on a new smartwatch codenamed “Pulse.” to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X