ಈ ಹೊಸ ವೈಯರ್ ಲೆಸ್‌ ಹೆಡ್‌ಫೋನ್‌ಗೆ ನೀವು ಖಂಡಿತಾ ಫೀದಾ ಆಗ್ತೀರಾ.!!

|

ಸ್ಮಾರ್ಟ್‌ಫೋನ್‌ಗಳು ಹೊಸ ತಂತ್ರಜ್ಞಾನದೊಂದಿಗೆ, ಸ್ಮಾರ್ಟ್‌ ಆಗಿ ಕಾರ್ಯನಿರ್ವಹಿಸುವ ಫೀಚರ್ಸ್‌ಗಳನ್ನು ಹೊಂದುತ್ತಿದ್ದು, ಅದೇ ರೀತಿ ಸ್ಮಾರ್ಟ್‌ಫೋನ್ ಉಪಕರಣಗಳು ಸಹ ಸ್ಮಾರ್ಟ್‌ ಆಯ್ಕೆಗಳನ್ನು ಹೊಂದುತ್ತಿವೆ. ಪ್ರಸ್ತುತ ಹೆಡ್‌ಫೋನ್‌, ಚಾರ್ಜರ್ ಎಲ್ಲವೂ ವೈಯರ್‌ಲೆಸ್ ಆಗಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಹೆಡ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಇದೀಗ ದೇಶಿಯ ಮಾರುಕಟ್ಟೆಗೆ ಸ್ಪೆಷಲ್ ವೈಯರ್ ಲೆಸ್‌ ಹೆಡ್‌ಫೋನ್ ಒಂದು ಪ್ರವೇಶ ಪಡೆದಿದೆ.

ಈ ಹೊಸ ವೈಯರ್ ಲೆಸ್‌ ಹೆಡ್‌ಫೋನ್‌ಗೆ ನೀವು ಖಂಡಿತಾ ಫೀದಾ ಆಗ್ತೀರಾ.!!

ಹೌದು, ಹಾಂಗ್‌ ಕಾಂಗ್ ಮೂಲದ ಜನಪ್ರಿಯ ಆಡಿಯೋ ಉಪಕರಣಗಳ ತಯಾರಿಕಾ ಕಂಪನಿ ಸೌಂಡ್ ಒನ್, ಕಂಪನಿಯು 'ಸೌಂಡ ಒನ್ ಎಕ್ಸ್60' ಹೆಸರಿನ ವೈಯರ್‌ಲೆಸ್‌ ಹೆಡ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದು ಸಂಪೂರ್ಣ ಮಾಡರ್ನ ಲುಕ್‌ನಲ್ಲಿದೆ. ಕೇಳುಗರ ಕಿವಿಗೆ ಹಿತಕರ ಅನುಭವ ನೀಡಲಿದ್ದು, ಬ್ಲೂಟೂತ್‌ ಮೂಲಕ ಕಾರ್ಯ ನಿರ್ವಹಿಸಲಿದೆ. ಇದರ ರಚನೆ ಮತ್ತು ಗುಣಮಟ್ಟಕ್ಕೆ ಗ್ರಾಹಕರು ಫೀದಾ ಆಗೋದು ಗ್ಯಾರೆಂಟಿ.

ಈ ಹೊಸ ವೈಯರ್ ಲೆಸ್‌ ಹೆಡ್‌ಫೋನ್‌ಗೆ ನೀವು ಖಂಡಿತಾ ಫೀದಾ ಆಗ್ತೀರಾ.!!

ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆದಿರುವ ಈ ಹೊಸ ಎಕ್ಸ್60 ವೈಯರ್ ಲೆಸ್ ಹೆಡ್‌ಫೋನಿನ ಮಾರುಕಟ್ಟೆಯ ಬೆಲೆಯು 3,490ರೂ.ಗಳು ಆಗಿದ್ದು, ಆದರೆ ಕಂಪನಿಯು ಪರಿಚಯಾತ್ಮಕ ಕೊಡುಗೆಯಾಗಿ ಕೇವಲ 1890ರೂ.ಗಳಿಗೆ ನೀಡುತ್ತಿದ್ದು, ಈ ಕೊಡುಗೆ ಸಿಮೀತ ಅವಧಿವರೆಗೆ ಮಾತ್ರ ಇರಲಿದೆ. ಜನಪ್ರಿಯ ಇ ಕಾಮರ್ಸ್ ಜಾಲತಾಣಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿಯೂ ಲಭ್ಯವಿದ್ದು, ಆಫ್‌ಲೈನ್‌ ಮಾರುಕಟ್ಟೆಯಲ್ಲಿಯೂ ಸಹ ಈ ಹೆಡ್‌ಫೋನ್ ಗ್ರಾಹಕರಿಗೆ ದೊರೆಯಲಿದೆ.

ಈ ಹೊಸ ವೈಯರ್ ಲೆಸ್‌ ಹೆಡ್‌ಫೋನ್‌ಗೆ ನೀವು ಖಂಡಿತಾ ಫೀದಾ ಆಗ್ತೀರಾ.!!

ಸೌಂಡ್‌ ಒನ್ ಎಕ್ಸ್‌60 ವೈಯರ್‌ಲೆಸ್‌ ಹೆಡ್‌ಫೋನ್‌ ನೆಕ್‌ಬ್ಯಾಂಡ್ ಡಿಸೈನ್ ಮಾದರಿಯಲ್ಲಿದ್ದು, ಹಗುರವಾಗಿಯೂ ಮತ್ತು ತಿಳುವಾಗಿಯೂ ಇದೆ. ಈ ಆಡಿಯೋ ಉಪಕರಣವು ಧೂಳು ಪ್ರತಿರೋಧಕವಾಗಿರುವ ಜೊತೆಗೆ ವಾಟರ್ ರೆಸಿಸ್ಟೆನ್ಸ್ ಸಹ ಆಗಿದೆ. ಎಲ್ಲ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ, ಕಂಪ್ಯೂಟರ್‌ಗಳಗೆ ಮತ್ತು ಆಡಿಯೋ ಪ್ಲೇಯರ್‌ಗಳಿಗೆ ಈ ಸಾಧನಗಳೊಂದಿಗೆ ಸಂಪರ್ಕದ ಬೆಂಬಲವಿದ್ದು, ಈ ಸಾಧನದ ಬಳಕೆಯು ಸರಳವಾಗಿದೆ.

ಈ ಹೊಸ ವೈಯರ್ ಲೆಸ್‌ ಹೆಡ್‌ಫೋನ್‌ಗೆ ನೀವು ಖಂಡಿತಾ ಫೀದಾ ಆಗ್ತೀರಾ.!!

ಬ್ಲೂಟೂತ್ 4.2 ಸಾಮರ್ಥ್ಯವನ್ನು ಹೊಂದಿರುವ ಈ ಹೆಡ್‌ಫೋನ್‌ 10 ಮೀಟರ್ ವ್ಯಾಪ್ತಿಯವರೆಗೂ ವಿಸ್ತರಿಸಿಕೊಂಡಿದೆ. ಈ ಸಾಧನವು 20-20,000Hz ತರಂಗಾಂತರಗಳ ವ್ಯಾಪ್ತಿನ್ನು ಬಳೆಸಿಕೊಳ್ಳುತ್ತದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೇ ಸುಮಾರು 8-10 ಗಂಟೆಯವರೆಗೂ ಸಿರಂತರವಾಗಿ ಬಾಳಿಕೆ ಬರಲಿದೆ. ಇದರೊಂದಿಗೆ ಇಯರ್ ಬಡ್ಸ್ ಮ್ಯಾಗ್ನೆಟಿಕ್ ಕ್ಯಾಂಪ್‌ ಹೊಂದಿದ್ದು, ಹೆಡ್‌ಪೋನ್ ಬಳಕೆ ಇಲ್ಲದಾಗ ಒಂದಕ್ಕೊಂದು ಅಂಟಿಕೊಳ್ಳುತ್ತವೆ.

ಹಾಂಗ್‌ ಕಾಂಗ್‌ ಮೂಲದ ಸೌಂಡ್‌ ಒನ್ ಕಂಪನಿಯ ಆಡಿಯೋ ಪರಿಕರಗಳನ್ನು ಉತ್ಪಾದಿಸುವ ಸಂಸ್ಥೆಯಾಗಿದ್ದು, ಕಂಪನಿಯ ಸಾಧನಗಳಾದ ಪವರ್‌ಬ್ಯಾಂಕ್, ಕೇಬಲ್, ಕಾರ ಚಾರ್ಜರ್, ಸ್ಮಾರ್ಟ್‌ಫೋನ್‌ ಚಾರ್ಜರ್ ಮತ್ತು ವೈಯರ್ ಲೆಸ್‌ ಸ್ಪೀಕರ್ಸ್ ಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿವೆ. ಕಂಪನಿಯ ಹೊಸ ಎಕ್ಸ್ 60 ವೈಯರ್ ಲೆಸ್‌ ಹೆಡ್‌ಫೋನ್‌ ಉತ್ತಮ ಪ್ರತಿಕ್ರಿಯೇ ಪಡೆಯುವ ಸಾಧ್ಯತೆಗಳಿವೆ.

Best Mobiles in India

English summary
Hong Kong-based Sound One, a manufacturer of audio products and smartphone accessories, has launched its latest product in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X