ಕೇವಲ 4,999 ರೂ.ಗಳಿಗೆ ಈ ಸ್ಮಾರ್ಟ್‌ಟಿವಿ ದೊರೆಯಲಿದೆ.!!

|

ಟಿವಿ ತಯಾರಿಕಾ ಕಂಪನಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಫೀಚರ್ಸ್‌ಗಳನ್ನು ನೂತನ ಸ್ಮಾರ್ಟ್‌ಟಿವಿಯಲ್ಲಿ ಅಳವಡಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇವುಗಳಲ್ಲಿ ಹಲವು ಕಂಪನಿಗಳು ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಧ್ಯಮ ಶ್ರೇಣಿಯ ಗ್ರಾಹಕರನ್ನು ಸೆಳೆಯುತ್ತಿವೆ. ಅವುಗಳ ಸಾಲಿಗೆ 'ಸ್ಯಾಮಿ ಇನ್ಫರ್ಮ್ಯಾಟಿಕ್ಸ್ ಪ್ರೈವೇಟ್ ಲಿಮಿಟೆಡ್' ಈ ಹೊಸ ಕಂಪನಿ ಕೂಡಾ ಸೇರಲಿದೆ.

ಕೇವಲ 4,999 ರೂ.ಗಳಿಗೆ ಈ ಸ್ಮಾರ್ಟ್‌ಟಿವಿ ದೊರೆಯಲಿದೆ.!!

ಹೌದು, ಸ್ವದೇಸಿ ಕಂಪನಿಯಾದ ಸ್ಯಾಮಿ ಇನ್ಫಮ್ಯಾರ್ಟಿಕ್ಸ್ ಪ್ರೈ.ಲಿ ಸಂಸ್ಥೆಯು ತನ್ನ ಮೊದಲ ಸ್ಮಾರ್ಟ್‌ಟಿವಿ ಬಿಡುಗಡೆ ಮಾಡಲಿದೆ. 32 ಇಂಚಿನ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ ಸ್ಮಾರ್ಟ್‌ಟಿವಿಯನ್ನು ಕೇವಲ 4,999ರೂ.ಗಳಿಗೆ ಪರಿಚಯಿಸಲಿದ್ದು, ಕಂಪನಿಯು ಇದೇ ಜನವರಿ 3೦ರಂದು ಬೆಳಿಗ್ಗೆ 11:30ಕ್ಕೆ ನವದೆಹಲಿಯಲ್ಲಿ ಹೊಸ ಸ್ಮಾರ್ಟ್‌ಟಿವಿ ಪರಿಚಯಿಸುವ ಕಾರ್ಯಕ್ರಮವನ್ನು ನಡೆಸುವುದಾಗಿ ಘೋಷಿಸಿದೆ. ಕಡಿಮೆ ಬೆಲೆಯ ಈ ಆಂಡ್ರಾಯ್ಡ್ ಟಿವಿ ದೇಶದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ ಎನ್ನಲಾಗುತ್ತಿದೆ.

ಕೇವಲ 4,999 ರೂ.ಗಳಿಗೆ ಈ ಸ್ಮಾರ್ಟ್‌ಟಿವಿ ದೊರೆಯಲಿದೆ.!!

ಈ ಹೊಸ ಸ್ಮಾರ್ಟ್‌ಟಿವಿಯು ಇನ್‌ಬಿಲ್ಟ್‌ ವೈ-ಫೈ ಸಂಪರ್ಕ ಸೌಲಭ್ಯವನ್ನು ಹೊಂದಿದ್ದು, ಇದರಿಂದ ಯಾವುದೇ ಅಡೆ ತಡೆ ಇಲ್ಲದೇ ಆರಾಮವಾಗಿ ಸ್ಮಾರ್ಟ್‌ಟಿವಿ ವಿಕ್ಷೀಸಬಹುದು. ಇದರೊಂದಿಗೆ ಸ್ಕ್ರೀನ್ ಮಿರರಿಂಗ್ ಆಯ್ಕೆ ಸಹಾಯದಿಂದ ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದೆ. ಸ್ಮಾರ್ಟ್‌ಫೋನಿನಲ್ಲಿರುವ ದೃಶ್ಯಗಳನ್ನು ಸ್ಮಾರ್ಟ್‌ಟಿವಿಯ ದೊಡ್ಡ ಪರದೆ ಮೇಲೆ ವಿಕ್ಷೀಸಬಹುದಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯ ಡಿಸ್‌ಪ್ಲೇಯು ಹೆಚ್‌ಡಿ ರೆಸಲ್ಯೂಶನ್‌ ಹೊಂದಿರಲಿದ್ದು, ದೃಶ್ಯಗಳು ಉತ್ತಮ ಗುಣಮಟ್ಟದಲ್ಲಿರುತ್ತವೆ.

ಸ್ಯಾಮಿ ಇನ್ಫಮ್ಯಾರ್ಟಿಕ್ಸ್ ಪ್ರೈ.ಲಿ ಸಂಸ್ಥೆಯ ಈ ಸ್ಮಾರ್ಟ್‌ಟಿವಿಯ ಬಿಡುಗಡೆ ಕಾರ್ಯಕ್ರಮ ನಾಳೆ ನಡೆಯಲಿದ್ದು, ಖಂಡಿತ ಇದೊಂದು ಕಡಿಮೆ ಬೆಲೆಯ ಸ್ಮಾರ್ಟ್‌ಟಿವಿ ಆಗಿರುತ್ತದೆ. ಈ ಸ್ಮಾರ್ಟ್‌ಟಿವಿ ಲಾಂಚ್‌ ಆದ ಮೇಲೆ ಇತರೆ ಕಂಪನಿಗಳ ಸ್ಮಾರ್ಟ್‌ಟಿವಿಗಳಿಗೆ ಭಾರಿ ಪೈಪೋಟಿ ನೀಡಲಿದೆ ಎನ್ನಲಾಗುತ್ತಿದೆ. ಉಳಿದಂತೆ ಈ ಸ್ಮಾರ್ಟ್‌ಟಿವಿ ಲಾಂಚ್ ಆದ ನಂತರದ ಅಪ್‌ಡೇಟ್‌ ಮಾಹಿತಿಗಳನ್ನು ನಾವು ನಿಮಗೆ ನೀಡುತ್ತೆವೆ.

Best Mobiles in India

English summary
This Android TV will only cost you Rs. 4,999: Coming on January 30.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X