ಶಿಯೋಮಿ "MI ಟಿವಿ 4A" ಟಿವಿಯ ಟಾಪ್ 5 ಫೀಚರ್ಸ್!!..ಗೊತ್ತಾದ್ರೆ ಈಗಲೇ ಬುಕ್ ಮಾಡ್ತೀರಾ!!

  ನೆನ್ನೆಯಷ್ಟೆ ಬಿಡುಗಡೆಯಾಗಿ ಭಾರತದ ಟಿವಿ ಮಾರುಕಟ್ಟೆಯನ್ನೇ ಬೆಚ್ಚಿಬೀಳಿಸಿರುವ ಶಿಯೋಮಿಯ ನೂತನ ಟಿವಿಗಳು ಈಗಾಗಲೇ ಜನಪ್ರಿಯವಾಗುತ್ತಿವೆ. ಹೈ ಎಂಡ್ ಟಿವಿಗಳನ್ನು ಬಜೆಟ್ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಶಿಯೋಮಿ ಒಂದೇ ಏಟಿಗೆ ಭಾರತದ ಟಿವಿ ಮಾರುಕಟ್ಟೆಯನ್ನೇ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.!!

  ನೆನ್ನೆಯವರೆಗೂ ಟಿವಿ ಮಾರುಕಟ್ಟೆಯಲ್ಲಿ ಹೆಸರೇ ಇಲ್ಲದ ಶಿಯೋಮಿ "MI ಟಿವಿ 4A" ಟಿವಿಗಳನ್ನು ಬಿಡುಗಡೆ ಮಾಡಿದ ನಂತರ ಟಿವಿ ಮಾರುಕಟ್ಟೆಯಲ್ಲಿಯೂ ದಿಗ್ಗಜನಾಗುವತ್ತ ಹೊರಟಿದೆ.! ಇದೀಗ ಬಿಡುಗಡೆಯಾಗಿರುವ ನೂತನ ಶಿಯೋಮಿ "ಮೈ ಟಿವಿ 4A" ಎರಡು ವೆರಿಯಂಟ್ ಟಿವಿಗಳ ಫೀಚರ್ಸ್ ಸ್ಮಾರ್ಟ್‌ಟಿವಿ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.!!

  ಶಿಯೋಮಿ

  ಶಿಯೋಮಿ MI ಟಿವಿ 4A ಟಿವಿಗಳನ್ನು ಮುಂದಿನವಾರದಿಂದ ಮಾರಾಟ ಮಾಡುವುದಾಗಿ ಶಿಯೋಮಿ ಕಂಪೆನಿ ಈಗಾಗಲೇ ತಿಳಿಸಿದೆ.! ಹಾಗಾಗಿ, ಶಿಯೋಮಿ "MI ಟಿವಿ 4A" ಟಿವಿಗಳು ಹೇಗಿವೆ? ಶಿಯೋಮಿ ಟಿವಿಗಳ ಫೀಚರ್ಸ್ ಯಾವುವು? ಶಿಯೋಮಿ ಟಿವಿಗಳನ್ನು ಖರೀದಿಸಲೇಬೇಕು ಎನ್ನಲು ಇರುವ ಕಾರಣಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  MI ಟಿವಿ 4A ಹಾರ್ಡ್‌ವೇರ್!!

  ಶಿಯೋಮಿ ಮೈ ಟಿವಿ 4A 1GB RAM ಮತ್ತು 8 ಜಿಬಿ ಆಂತರಿಕ ಶೇಖರಣಾ ಜೊತೆಗೆ 64-ಬಿಟ್ ಕ್ವಾಡ್ ಕೋರ್ ಚಿಪ್ಸೆಟ್ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಎರಡೂ ವೆರಿಯಂಟ್ MI ಟಿವಿ 4A ಟಿವಿಗಳು ಮೂರು ಹೆಚ್‌ಡಿಎಂಐ ಪೋರ್ಟ್, ಎರಡಯ ಯುಎಸ್‌ಬಿ ಪೋರ್ಟ್‌, ಎಥೆರ್ನಲ್ ಪೋರ್ಟ್, ವೈಪೈ ಹಾಗೂ ಹೆಡ್‌ಫೋನ್ ಜಾಕ್ ಅನ್ನು ಹೊಂದಿವೆ.!!

  ಭಾರತ ಕೇಂದ್ರಿತ ಲಕ್ಷಣಗಳು!!

  32 ಇಂಚಿನ ಮಿ ಟಿವಿ 4ಎ ಪರದೆಯಲ್ಲಿ ಹೆಡ್‌ಡಿ ರೆಡಿ ಫಲಕವನ್ನು ನೀಡಲಾಗಿದೆ. ಹಾಗೆಯೇ 43 ಇಂಚಿನ ರೂಪಾಂತರ ಟಿವಿಯು ಪೂರ್ಣ ಹೆಚ್‌ಡಿ ರೆಸೊಲ್ಯೂಶನ್ ಹೊಂದಿದೆ.!! ಹೊಸ ಸ್ಮಾರ್ಟ್ ಟಿವಿಯಲ್ಲಿ ನಿರ್ದಿಷ್ಟವಾಗಿ ಭಾರತಕ್ಕಾಗಿ 15 ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಇನ್ನು 20W ಶಕ್ತಿಯ ಡೂಮ್ ಸ್ಪೀಕರ್ ಮತ್ತು ಡಿಟಿಎಸ್ ಫೀಚರ್ ಟಿವಿಗಳಲ್ಲಿದೆ.!!

  ಆರ್ಟಿಫೀಶಿಯಲ್ ಎನೆಬಲ್ ಪ್ಯಾಚ್‌ವಾಲ್!!

  ಶಿಯೋಮಿ ಮೈ ಟಿವಿ 4A ಫ್ಲಾಗ್‌ಶಿಪ್ ಪ್ಯಾಚ್‌ವಾಲ್ ಆಯ್ಕೆಯನ್ನು ಹೊಂದಿದೆ. ಪ್ಯಾಚ್‌ವಾಲ್ ಆರ್ಟಿಫೀಶಿಯಲ್ ಎನೆಬಲ್ ಸಿಸ್ಟಮ್ ಆಗಿದ್ದು, ಇದು ವಿಷಯವನ್ನು ವರ್ಗೀಕರಿಸುತ್ತದೆ ಮತ್ತು ಬಳಕೆದಾರ ಆದ್ಯತೆಗಳ ಆಧಾರದ ಮೇಲೆ ವೈಯಕ್ತೀಕರಿಸಿದ ಶಿಫಾರಸುಗಳನ್ನು ಮಾಡುತ್ತದೆ. ಸುಮಾರು 5,00,000 ಲಕ್ಷ ಗಂಟೆಗಳ ಟಿವಿ ಕಾರ್ಯಕ್ರಮಗಳನ್ನು ಸಹಕರಿಸುವ ಟಿವಿಯಲ್ಲಿ ಶೇ. 80ರಷ್ಟು ಕಾರ್ಯಕ್ರಮಗಳನ್ನು ಉಚಿತವಾಗಿ ನೋಡಬಹುದು!!

  ಯುನಿವರ್ಸೆಲ್ ಸರ್ಚ್!!

  ಆರ್ಟಿಫೀಶಿಯಲ್ ಎನೆಬಲ್ ಸಿಸ್ಟಮ್‌ನ ಒಂದು ಭಾಗವಾದ ಶಿಯೋಮಿ ಮಿ ಟಿವಿ 4 ಎ ಯುನಿವರ್ಸಲ್ ಸರ್ಚ್ ಆಯ್ಕೆ ಬಳಕೆದಾರರಿಗೆ ಆನ್ಲೈನ್ ​​ಮತ್ತು ಆಫ್ಲೈನ್ ​​ಚಾನೆಲ್‌ಗಳಲ್ಲಿ ಒಂದೇ ಸ್ಥಳದಲ್ಲಿ ವಿಷಯವನ್ನು ಹುಡುಕಲು ಅನುಮತಿಸುತ್ತದೆ. ವೀಕ್ಷಕರು ತಮ್ಮ ವೀಕ್ಷಣೆ ಪದ್ಧತಿ ಪ್ರಕಾರ ಯುನಿವರ್ಸಲ್ ಸರ್ಚ್‌ನಲ್ಲಿ ವೈಯಕ್ತೀಕರಿಸಿದ ಶಿಫಾರಸುಗಳನ್ನು ಪಡೆಯುತ್ತಾರೆ. ಮತ್ತು ನೀವು ಆಗಾಗ್ಗೆ ವೀಕ್ಷಿಸುವ ಆಧಾರದ ಮೇಲೆ, ಹುಡುಕಾಟ ಕಾರ್ಯವನ್ನು ಆನ್ಲೈನ್ ​​ಮತ್ತು ಆಫ್ಲೈನ್ ​​ಡೈರೆಕ್ಟರಿಗಳಿಂದ ವಿಷಯವನ್ನು ಸೂಚಿಸುತ್ತದೆ.

  Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
  ಶಿಯೋಮಿ ಮಿ ಟಿವಿ 4ಎ ಬೆಲೆ ನಿಗದಿ!!

  ಶಿಯೋಮಿ ಮಿ ಟಿವಿ 4ಎ ಬೆಲೆ ನಿಗದಿ!!

  3 ಎಂಜಿನ್ ಎಂವಿ ಟಿವಿ 4ಎ ರೂ 22,999 ದರದಲ್ಲಿ ಲಭ್ಯವಾಗಲಿದೆ. ಹಾಗೆಯೇ, 32 ಇಂಚಿನ ರೂಪಾಂತರದ ಎಂವಿ ಟಿವಿ 4ಎ 13,999 ರೂ. ಬೆಲೆಯನ್ನು ಹೊಂದಿದ್ದು, ಅತ್ಯಂತ ಕಡಿಮೆ ಬೆಲೆಗೆ ಹೆಚ್ಚಿ ಫೀಚರ್ಸ್ ಹೊಂದಿರುವ ಟಿವಿ ಇದಾಗಿದೆ ಎನ್ನಬಹುದು.! ಪ್ರತಿ ವಾರದಲ್ಲಿಯೂ ಮಂಗಳವಾರ ಮತ್ತು ಶುಕ್ರವಾರದಂದು ಫ್ಲಾಶ್ ಮಾರಾಟ ಮಾರ್ಚ್13 ರಿಂದ ಶುರುವಾಗಲಿದೆ.!!

  ಓದಿರಿ:ಟಿವಿ ಮಾರುಕಟ್ಟೆಗೆ ಶಾಕ್! ಕೇವಲ 13,999ಕ್ಕೆ ಬಿಡುಗಡೆಯಾಯ್ತು 32 ಇಂಚಿನ 'ಶಿಯೋಮಿ' ಸ್ಮಾರ್ಟ್‌ಟಿವಿ!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Xiaomi Mi TV 4A India launch! Top five features of the new smart TV series. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more