ಮನೆಗೆ 'ಎಲ್‌ಇಡಿ ಟಿವಿ' ಖರೀದಿಸುವ ಆಸೆ ಇದ್ದರೆ ಈಗಲೇ ಖರೀದಿಸಿ!!..ಲೇಟಾದ್ರೆ ಕಷ್ಟ!?

ಮನೆಗೆ ಎಲ್‌ಇಡಿ ಅಥವಾ ಓಎಲ್ಇಡಿ ಟಿವಿಗಳನ್ನು ಖರೀದಿಸುವ ಯೋಜನೆ ನಿಮ್ಮಲ್ಲಿದ್ದರೆ ನಿಮಗೆ ಬೇಕಾದ ಟಿವಿಯನ್ನು ಬಹುಬೇಗ ಖರೀದಿಸಿದರೆ ಒಳ್ಳೆಯದು.!

|

ಮನೆಗೆ ಎಲ್‌ಇಡಿ ಅಥವಾ ಓಎಲ್ಇಡಿ ಟಿವಿಗಳನ್ನು ಖರೀದಿಸುವ ಯೋಜನೆ ನಿಮ್ಮಲ್ಲಿದ್ದರೆ ನಿಮಗೆ ಬೇಕಾದ ಟಿವಿಯನ್ನು ಬಹುಬೇಗ ಖರೀದಿಸಿದರೆ ಒಳ್ಳೆಯದು.! ಏಕೆಂದರೆ ಸೀಮಾಸುಂಕವನ್ನು ಏರಿಸುವುದರ ಪರಿಣಾಮದಿಂದ ಎಲ್ಲಾ ಟಿವಿ ಉತ್ಪಾದಕ ಕಂಪೆನಿಗಳೂ ಎಲ್‌ಇಡಿ/ಓಎಲ್ಇಡಿ ಟಿವಿ ಸೆಟ್‌ಗಳ ದರವನ್ನು ಏರಿಸಲು ಚಿಂತಿಸಿವೆ.!!

ಹೌದು, ಸರ್ಕಾರ ಟಿವಿ ಬಿಡಿಭಾಗ ಗಳ ಮೇಲೆ ಸೀಮಾಸುಂಕವನ್ನು ಶೇ.7.5ರಿಂದ 15ಕ್ಕೆ ಪರ್ಸೆಂಟ್‌ವರೆಗೂ ಏರಿಸುವುದರ ಪರಿಣಾಮ ಟಿವಿ ಉತ್ಪಾದಕ ಕಂಪೆನಿಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಹಾಗಾಗಿ, ಎಲ್ಲಾ ಟಿವಿ ಉತ್ಪಾದಕ ಕಂಪೆನಿಗಳು ಎಲ್‌ಇಡಿ/ಓಎಲ್ಇಡಿ ಟಿವಿ ಸೆಟ್‌ಗಳ ದರವನ್ನು ಏರಿಸಲು ಚಿಂತಿಸಿವೆ ಎಂದು ವರದಿಯಾಗಿದೆ.!!

ಮನೆಗೆ 'ಎಲ್‌ಇಡಿ ಟಿವಿ' ಖರೀದಿಸುವ ಆಸೆ ಇದ್ದರೆ ಈಗಲೇ ಖರೀದಿಸಿ!!..ಲೇಟಾದ್ರೆ ಕಷ್ಟ

ಎಲ್‌ಇಡಿ/ಓಎಲ್ಇಡಿ ಟಿವಿ ಸೆಟ್‌ಗಳ ಬಿಡಿಭಾಗಗಳನ್ನು ಬಹುತೇಕ ವಿದೇಶದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ, ಹಾಗಾದರೆ, ಎಲ್‌ಇಡಿ/ಓಎಲ್ಇಡಿ ಟಿವಿ ಸೆಟ್‌ಗಳ ಬೆಲೆ ಎಷ್ಟು ಏರಿಕೆಯಾಗುತ್ತಿದೆ? ಯಾವ ಕಂಪೆನಿಗಳು ಎಷ್ಟು ಬೆಲೆಯನ್ನು ಏರಿಸುತ್ತಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪ್ಯಾನಾಸೊನಿಕ್ ಕಂಪನಿ!!

ಪ್ಯಾನಾಸೊನಿಕ್ ಕಂಪನಿ!!

ತನ್ನ ನಾನಾ ಮಾಡೆಲ್‌ಗಳ ಟಿವಿಗಳ ದರವನ್ನು ಶೇ.2ರಿಂದ 7ರ ತನಕ ಏರಿಕೆ ಮಾಡಲು ಪ್ಯಾನಾಸೊನಿಕ್ ಕಂಪನಿ ಮುಂದಾಗಿದೆ. ಎಲ್‌ಇಡಿ ಒಎಲ್ಇಡಿ ಟಿವಿಗಳು ತುಸು ದುಬಾರಿಯಾಗಲಿವೆ ಎಂದು ಕಂಪನಿಯ ಕಂಪೆನಿಯ ಭಾರತೀಯ ವಿಭಾಗದ ಬಿಸಿನೆಸ್‌ ಮುಖ್ಯಸ್ಥ ನೀರಜ್ ಬಹಲ್ ತಿಳಿಸಿದ್ದಾರೆ.!!

ಸೋನಿ ಇಂಡಿಯಾ!!

ಸೋನಿ ಇಂಡಿಯಾ!!

ನಾವು ಸದ್ಯದ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಸರ್ಕಾರವು ಸೀಮಾ ಸುಂಕ ಏರಿಸುವುದರಿಂದ ಆಗುವ ಪರಿಣಾಮಗಳನ್ನು ಲೆಕ್ಕಾಚಾರ ಹಾಕುತ್ತಿರುವುದಾಗಿ ತಿಳಿಸಿರುವುದಲ್ಲದೆ, ಮುಂದಿನ ದಿನಗಳಲ್ಲಿ ದರ ಏರಿಕೆಯಾಗುವ ಬಗ್ಗೆ ಸೋನಿ ಇಂಡಿಯಾ ಬ್ರೇವಿಯಾ ಬಿಸಿನೆಸ್‌ ಮುಖ್ಯಸ್ಥ ಸಚಿನ್‌ ರಾಯ್‌ ಅವರು ಹೇಳಿದ್ದಾರೆ.!!

ದುಬಾರಿ ಸ್ಯಾಮ್‌ಸಂಗ್‌!!

ದುಬಾರಿ ಸ್ಯಾಮ್‌ಸಂಗ್‌!!

ಸೀಮಾ ಸುಂಕದ ಪರಿಣಾಮ ಸಂಭವನೀಯ ದರ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಸ್ಯಾಮ್‌ಸಂಗ್ ತನ್ನ ಗ್ಯಾಜೆಟ್ ಬೆಲೆಗಳನ್ನು ಶೇ.5ರಿಂದ 6ರಷ್ಟು ಏರಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ. ಹಾಗಾಗಿ, ಸ್ಯಾಮ್‌ಸಂಗ್ ಇನ್ನು ಬಹಳ ದುಬಾರಿಯಾಗಲಿದೆ.!!

ಎಲ್‌ಜಿ ಎಲೆಕ್ಟ್ರಾನಿಕ್ಸ್‌

ಎಲ್‌ಜಿ ಎಲೆಕ್ಟ್ರಾನಿಕ್ಸ್‌

ಇನ್ನು ಸಂಭವನೀಯ ದರ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕಿ ವಾನ್‌ ಕಿಮ್‌ ತನ್ನ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಹೆಚ್ಚಳ ಹೊರತುಪಡಿಸಿ ಅನ್ಯ ಮಾರ್ಗಗಳೇ ಇಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.!!

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಸೀಮಾಸುಂಕ ಕಡಿತಕ್ಕೆ ಮನವಿ!!

ಸೀಮಾಸುಂಕ ಕಡಿತಕ್ಕೆ ಮನವಿ!!

ಸೀಮಾಸುಂಕ ಹೆಚ್ಚಳದಿಂದ ಟಿ.ವಿ. ಮಾರಾಟದ ಮೇಲೆ ಭಾರೀ ಪರಿಣಾಮ ಬೀರಲಿದೆ. ಹಾಗಾಗಿ, ಸೀಮಾ ಸುಂಕ ಏರಿಕೆಯನ್ನು ವಾಪಸ್‌ ಪಡೆಯುವಂತೆ ಎಲೆಕ್ಟ್ರಾನಿಕ್ಸ್‌ ಆಂಡ್‌ ಅಪ್ಲಿಯನ್ಸರ್ಸ್ ಅಸೋಸಿಯೇಷನ್‌(ಸಿಇಎಎಂಎ) ಸರಕಾರವನ್ನು ಒತ್ತಾಯಿಸಿ ಮಾತುಕತೆಗಳನ್ನು ಆರಂಭಿಸಿದೆ.!!

Best Mobiles in India

English summary
Leading TV manufacturers like Sony, LG, Panasonic and Samsung are set to increase prices of their LED/OLED sets.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X