OLED ಡಿಸ್‌ಪ್ಲೇ ಶಿಯೋಮಿ ಸ್ಮಾರ್ಟ್‌ಬ್ಯಾಂಡ್: ಬೇಡ ಎನ್ನಲು ಕಾರಣವೇ ಇಲ್ಲ..!

|

ಮಾರುಕಟ್ಟೆಯಲ್ಲಿ ಶಿಯೋಮಿ ಉತ್ಪನ್ನಗಳು ಗ್ರಾಹಕರ ನಂಬಿಕೆಯನ್ನುಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಹೊಸ ಮಾದರಿಯ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಶಿಯೋಮಿ ಮುಂದಾಗಿದೆ. ಇದೆ ಮಾದರಿಯಲ್ಲಿ ಶಿಯೋಮಿ Hey+ ಸ್ಮಾರ್ಟ್‌ ಬ್ಯಾಂಡ್ ಲಾಂಚ್ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಶಿಯೋಮಿ ಹಲವು ಸ್ಮಾರ್ಟ್‌ ಬ್ಯಾಂಡ್ ಅನ್ನು ಮಾರಾಟ ಮಾಡುತ್ತಿದ್ದು, ಅದಕ್ಕಿಂತಲೂ ಇದು ಭಿನ್ನವಾಗಿ ಕಾಣಿಸಿಕೊಂಡಿದೆ.

OLED ಡಿಸ್‌ಪ್ಲೇ ಶಿಯೋಮಿ ಸ್ಮಾರ್ಟ್‌ಬ್ಯಾಂಡ್: ಬೇಡ ಎನ್ನಲು ಕಾರಣವೇ ಇಲ್ಲ..!

ಶಿಯೋಮಿ Hey+ ಸ್ಮಾರ್ಟ್‌ ಬ್ಯಾಂಡ್ ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿಯೂ ಕಾಣಿಸಿಕೊಳ್ಳಲಿದೆ. ಬೆಲೆಯ ವಿಷಯದಲ್ಲಿಯೂ ಬಳಕೆದಾರರಿಗೆ ಮೆಚ್ಚುಗೆಯಾಗಲಿದೆ. ಇದರೊಂದಿಗೆ ಇದರಲ್ಲಿರುವ ಆಯ್ಕೆಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಶಿಯೋಮಿ Hey+ ಸ್ಮಾರ್ಟ್‌ ಬ್ಯಾಂಡ್ ಕುರಿತ ಮಾಹಿತಿಯೂ ಮುಂದಿದೆ.

ಶಿಯೋಮಿ Hey+ ಸ್ಮಾರ್ಟ್‌ ಬ್ಯಾಂಡ್  ವಿಶೇಷತೆ:

ಶಿಯೋಮಿ Hey+ ಸ್ಮಾರ್ಟ್‌ ಬ್ಯಾಂಡ್ ವಿಶೇಷತೆ:

ಶಿಯೋಮಿ Hey+ ಸ್ಮಾರ್ಟ್‌ ಬ್ಯಾಂಡ್ ಭಾರತದಲ್ಲಿ ಶಿಯೋಮಿ MI ಬ್ಯಾಂಡ್ 3 ಹೆಸರಿನಲ್ಲಿ ಲಾಂಚ್ ಆಗಲಿದೆ. ಇದರಲ್ಲಿ 0.95 ಇಂಚಿನ OLED ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು ಟೆಚ್ ಸ್ಕ್ರಿನ್ ಆಯ್ಕೆಯನ್ನು ಹೊಂದಿದೆ ಎನ್ನಲಾಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.

NFC ಕನೆಕ್ಟಿವಿಟಿ:

NFC ಕನೆಕ್ಟಿವಿಟಿ:

ಇದಲ್ಲದೇ ಶಿಯೋಮಿ Hey+ ಸ್ಮಾರ್ಟ್‌ ಬ್ಯಾಂಡ್ NFC ಕನೆಕ್ಟಿವಿಯನ್ನು ಹೊಂದಿದ್ದು, ಇದರ ಸಹಾಯದಿಂದಾಗಿ ನೀವು ಡಿಜಿಟಲ್ ಪೇಮೆಂಟ್ ಮಾಡಬಹುದಾಗಿದೆ. ಸ್ಯಾಮ್‌ಸಂಗ್ ಪೇ ಮಾದರಿಯಲ್ಲಿ ಚೀನಾದಲ್ಲಿ MI ಪೇಮೆಂಟ್ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿ ಈ ಆಯ್ಕೆಯನ್ನು ನೀಡಲಾಗಿದೆ. ಶೀಘ್ರವೇ ಭಾರತದಲ್ಲಿಯೂ MI ಪೇಮೆಂಟ್ ಸೇವೆಯೂ ಆರಂಭವಾದರೆ ಆಶ್ಚರ್ಯಪಡಬೇಕಾಗಿಲ್ಲ.

ಸ್ಮಾರ್ಟ್‌ಫೋನಿನೊಂದಿಗೆ ಕನೆಕ್ಟ್:

ಸ್ಮಾರ್ಟ್‌ಫೋನಿನೊಂದಿಗೆ ಕನೆಕ್ಟ್:

ಇದಲ್ಲದೇ ಶಿಯೋಮಿ Hey+ ಸ್ಮಾರ್ಟ್‌ ಬ್ಯಾಂಡ್ ಸ್ಮಾರ್ಟ್‌ಫೋನಿನೊಂದಿಗೆ ಕನೆಕ್ಟ್ ಆಗಲಿದ್ದು, ನಿಮ್ಮ ಕರೆಗಳು ಮತ್ತು SMSಗಳ ಕುರಿತು ಮಾಹಿತಿಯನ್ನು ನೀಡಲಿದೆ. ಅಲ್ಲದೇ ನೀವು ಎಷ್ಟು ದೂರ ನಡೆದಿರಿ, ಬ್ಯಾಟರಿ ಪ್ರಮಾಣವನ್ನು ತಿಳಿಸಲಿದೆ ಎನ್ನಲಾಗಿದೆ.

8 ದಿನಗಳ ಬಾಳಿಕೆ:

8 ದಿನಗಳ ಬಾಳಿಕೆ:

ಒಮ್ಮೆ ನೀವು ಈ ಶಿಯೋಮಿ Hey+ ಸ್ಮಾರ್ಟ್‌ ಬ್ಯಾಂಡ್ ಅನ್ನು ಚಾರ್ಜ್ ಮಾಡಿದರೆ 8 ದಿನಗಳ ಬ್ಯಾಟರಿ ಬಾಳಿಕೆಯನ್ನು ಪಡೆಯಬಹುದಾಗಿದೆ. ಅಲ್ಲದೇ ಕೇವಲ ಎರಡು ಗಂಟೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲಿದೆ ಎಂದು ಕಂಪನಿಯೂ ತಿಳಿಸಿದೆ. ಇದಲ್ಲದೇ ಆಂಡ್ರಾಯ್ಡ್ ಮತ್ತು iOS ಗಳೊಂದಿಗೆ ಸಂಪರ್ಕವನ್ನು ಸಾಧಿಸಲಿದೆ. ಬ್ಲೂಟೂತ್ 4.2ನಲ್ಲಿ ಕಾರ್ಯನಿರ್ವಹಿಸಲಿದೆ.

ಬೆಲೆ:

ಬೆಲೆ:

ಶಿಯೋಮಿ Hey+ ಸ್ಮಾರ್ಟ್‌ ಬ್ಯಾಂಡ್ ಚೀನಾದಲ್ಲಿ ರೂ.2300ಕ್ಕೆ ಮಾರಾಟವಾಗುತ್ತಿದೆ. ಇದೇ ಭಾರತದಲ್ಲಿ ಇನ್ನು ಕಡಿಮೆ ಬೆಲೆಗೆ ದೊರೆತರು ಆಶ್ಚರ್ಯಪಡಬೇಕಾಗಿಲ್ಲ. ಬಳಕೆದಾರರಿಗೆ ಹಚ್ಚಿನ ಲಾಭವನ್ನು ಮಾಡಿಕೊಡಲು ಶಿಯೋಮಿ ಶೀಘ್ರವೇ ಇದನ್ನು ಲಾಂಚ್ ಮಾಡಲಿದೆ.

Best Mobiles in India

English summary
Xiaomi Hey+ smart band with a color OLED display officially launched for Rs 2300, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X