ಟಿವಿ ಮಾರುಕಟ್ಟೆಗೆ ಶಾಕ್! ಕೇವಲ 13,999ಕ್ಕೆ ಬಿಡುಗಡೆಯಾಯ್ತು 32 ಇಂಚಿನ 'ಶಿಯೋಮಿ' ಸ್ಮಾರ್ಟ್‌ಟಿವಿ!!

ಭಾರತದ ನಂಬರ್ ಒನ್ ಮೊಬೈಲ್ ಕಂಪೆನಿ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಶಿಯೋಮಿ ಕಂಪೆನಿ ಭಾರತದಲ್ಲಿ ಮತ್ತೆರಡು ಬಜೆಟ್ ಸ್ಮಾರ್ಟ್‌ಟಿವಿಗಳನ್ನು ಇಂದು ಲಾಂಚ್ ಮಾಡಿದೆ.!

|

ಭಾರತದ ನಂಬರ್ ಒನ್ ಮೊಬೈಲ್ ಕಂಪೆನಿ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಶಿಯೋಮಿ ಕಂಪೆನಿ ಭಾರತದಲ್ಲಿ ಮತ್ತೆರಡು ಬಜೆಟ್ ಸ್ಮಾರ್ಟ್‌ಟಿವಿಗಳನ್ನು ಇಂದು ಲಾಂಚ್ ಮಾಡಿದೆ.! ಕಳೆದ ಒಂದು ವಾರದಿಂದಲೂ ಟಿವಿ ಮಾರುಕಟ್ಟೆಯಲ್ಲಿ ಕುತೋಹಲ ಮೂಡಿಸಿದ್ದ ಶಿಯೋಮಿ ನಿರೀಕ್ಷೆಯಂತೆಯೇ ತನ್ನ 'Mi TV 4A' ವೆರಿಯಂಟ್ ಟಿವಿಗಳನ್ನು ಬಿಡುಗಡೆಗೊಳಿಸಿದೆ.!!

ಭಾರತದಲ್ಲಿ ಇಂದು ಮೂರು ಗಂಟೆಗೆ ಎರಡು ವೆರಿಯಂಟ್‌ನಲ್ಲಿ ಶಿಯೋಮಿ ಮೈ 'Mi TV 4A' ಟಿವಿಗಳು ಬಿಡುಗಡೆಯಾಗಿದ್ದು, ಬಿಡುಗಡೆಯಾದ ನಂತರ ಭಾರತದ ಟಿವಿ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿವೆ.! ಅತ್ಯಂತ ಕಡಿಮೆ ಬೆಲೆಯಲ್ಲಿ ನೂತನ ವೆರಿಯಂಟ್‌ನ 'Mi TV 4A'ಟಿವಿಗಳು ಮಾರುಕಟ್ಟೆಗೆ ಕಾಲಿಟ್ಟು ವಿಶೇಷತೆಗಳಿಂದಲೇ ಗಮನಸೆಳೆಯುತ್ತಿದೆ.!!

ಕೇವಲ 13,999ಕ್ಕೆ ಬಿಡುಗಡೆಯಾಯ್ತು 32 ಇಂಚಿನ 'ಶಿಯೋಮಿ' ಸ್ಮಾರ್ಟ್‌ಟಿವಿ!!

ಎರಡು ವೆರಿಯಂಟ್ 'Mi TV 4A' ಗಳ ಮೇಲೆ ಜಿಯೋ ಆಫರ್ ಅನ್ನು ಕೂಡ ನೀಡಲಾಗಿದ್ದು, 2200 ರೂ. ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದಾಗಿದೆ. ಹಾಗಾದರೆ, ಶಿಯೋಮಿ ಇಂದು ಲಾಂಚ್ ಮಾಡಿರುವ ನೂತನ ವೆರಿಯಂಟ್ ಶಿಯೋಮಿ 'Mi TV 4A' ಟಿವಿಗಳು ಹೇಗಿವೆ? ಟಿವಿಗಳ ವಿಶೇಷತೆಗಳೇನು? ಎರಡೂ ಟಿವಿಗಳ ಬೆಲೆ ಎಷ್ಟು?ಎಂಬುದನ್ನು ಮುಂದೆ ತಿಳಿಯಿರಿ.!!

43 ಮತ್ತು 32 ಇಂಚಿನ ಶಿಯೋಮಿ ಟಿವಿ!!

43 ಮತ್ತು 32 ಇಂಚಿನ ಶಿಯೋಮಿ ಟಿವಿ!!

4K ಹೆಚ್‌ಡಿಆರ್ ಫುಲ್ ಸ್ಕ್ರೀನ್ ಡಿಸ್‌ಪ್ಲೇ ಹೊಂದಿರುವ 43 ಇಂಚು ಮತ್ತು 32 ಇಂಚಿನ ಎರಡು ಮಾದರಿಯ 'Mi TV 4A' ಟಿವಿಗಳು ಇಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ.!! ಶಿಯೋಮಿ ಈ ಮೊದಲು 55 ಇಂಚಿ 'Mi TV 4A' ಅನ್ನು ಬಿಡುಗಡೆ ಮಾಡಿತ್ತು. ಇದೀಗ 43 ಇಂಚು ಹಾಗೂ 32 ಇಂಚಿನ ಗಾತ್ರಗಳಲ್ಲಿ ಶಿಯೋಮಿ ಟಿವಿಗಳು ಸೇರಿಕೊಂಡಿವೆ.!!

ಶಿಯೋಮಿ ಟಿವಿಗಳ ಫೀಚರ್ಸ್ ?

ಶಿಯೋಮಿ ಟಿವಿಗಳ ಫೀಚರ್ಸ್ ?

1GB RAM + 8GB ಇಂಟರ್ನಲ್ ಮೆಮೊರಿಯನ್ನು 32 ಇಂಚಿನ 'Mi TV 4A' ಟಿವಿಯಲ್ಲಿ ನೀಡಲಾಗಿದೆ. ಬ್ಲೂಟೂತ್ ಕನೆಕ್ಟ್ ಮತ್ತು Wi Fi ಕನೆಕ್ಟ್ ಮಾಡಬಹುದಾಗಿದ್ದು, ಎರಡು USB ಪೋರ್ಟ್ ಗಳನ್ನು ಟಿವಿ ಸೆಟ್‌ನಲ್ಲಿಯೇ ನೀಡಲಾಗಿದೆ. ಹಾಗೆಯೇ, 43 ಇಂಚಿನ 'Mi TV 4A' ಟಿವಿಯಲ್ಲಿ 1GB RAM + 8GB ಮೂರು USB ಪೋರ್ಟ್ ಅನ್ನು ನೀಡಲಾಗಿದೆ.!!

ಕೃತಕ ಬುದ್ದಿಮತ್ತೆ!!

ಕೃತಕ ಬುದ್ದಿಮತ್ತೆ!!

ಶಿಯೋಮಿ Mi TV 4A ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಿಸುವುದರ ಜೊತೆಗೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ.!! ಟಿವಿಯಲ್ಲಿ ಪ್ಲೇ ಆಗುವ ವಿಡಿಯೋಗಳ ಬಣ್ಣಗಳ ಹೊಂದಾಣಿಕೆಯಲ್ಲಿ ಮತ್ತು ವಿಡಿಯೋ ಗೇಮ್ ಕಾರ್ಯದಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಕೆಯಾಗಲಿದೆ.!!

ಇತರೆ ವಿಶೇಷತೆಗಳೇನು?

ಇತರೆ ವಿಶೇಷತೆಗಳೇನು?

ಶಿಯೋಮಿ ಭಾರತೀಯ ಮಾರುಕಟ್ಟೆಗೆ ಇಂದು ಬಿಡುಗಡೆ ಮಾಡಿರುವ 'Mi TV 4A' ಟಿವಿಗಳಲ್ಲಿ 10*2 ವ್ಯಾಟ್ ಪವರ್‌ಫುಲ್ ಸ್ಪೀಕರ್‌ಗಳನ್ನು ನೀಡಲಾಗಿದೆ. ವಿಶೇಷವಾಗಿ ಕೇವಲ 11 ಬಟನ್‌ಗಳಿರುವ ರಿಮೋಟ್ ಅನ್ನು ನೀಡಲಾಗಿರುವ ಈ ಟಿವಿ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಿಸಲಿದೆ.!

ಡಿಜಿಟಲ್ ಪಾಲುದಾರರು!!

ಡಿಜಿಟಲ್ ಪಾಲುದಾರರು!!

ಇದಲ್ಲದೇ ದೇಶದಲ್ಲಿ ಲಭ್ಯವಿರುವ ಎಲ್ಲಾ ಡಿಜಿಟಪ್ ಕಂಟೆಟ್ ಗಳನ್ನು ಕಾಣಹುದಾಗಿದ್ದು, ಹಾಟ್ ಸ್ಟಾರ್, ಸೋನಿ, ವೂಟ್, ಸನ್, ಹಂಗಾಮ ಸೇರಿದಂತೆ ಎಲ್ಲಾ ಕಂಟೆಂಟ್‌ಗಳು ಉಚಿತವಾಗಿ ದೊರೆಯಲಿವೆ. ಈ 5,00,000 ಗಂಟೆಗಳ ಕಂಟೆಂಟ್ ಅನ್ನು ಉಚಿತವಾಗಿ ವೀಕ್ಷಿಸಬಹುದು ಎಂದು ಶಿಯೋಮಿ ಹೇಳಿಕೊಂಡಿದೆ.!!

ಶಿಯೋಮಿ Mi TV 4 ಟಿವಿ ಬೆಲೆ ಎಷ್ಟು?

ಶಿಯೋಮಿ Mi TV 4 ಟಿವಿ ಬೆಲೆ ಎಷ್ಟು?

ಶಿಯೋಮಿಯ ಎಲ್ಲಾ ಪ್ರಾಡೆಕ್ಟ್‌ಗಳಂತೆ 43 ಇಂಚು ಹಾಗೂ 32 ಇಂಚಿನ ಗಾತ್ರದ ಶಿಯೋಮಿ 'Mi TV 4A' ಟಿವಿಗಳು ಭಾರತದಲ್ಲಿ ಕಡಿಮೆ ಬೆಲೆಗೆ ಬಿಡುಗಡೆಯಾಗಿವೆ. 43 ಇಂಚಿನ 'Mi TV 4A' ಟಿವಿ ಬೆಲೆ ಕೇವಲ 22,999 ರತೂಪಾಯಿಗಳಾಗಿದ್ದರೆ, 32 ಇಂಚಿನ ಶಿಯೋಮಿ 'Mi TV 4A' ಟಿವಿ ಬೆಲೆ ಕೇವಲ 13,999ರೂಪಾಯಿಗಳಾಗಿವೆ.!!

Bike-Car ಜಾತಕ ಹೇಳುವ ಆಪ್..!
ಮಾರಾಟ ಯಾವಾಗ ಶುರು?

ಮಾರಾಟ ಯಾವಾಗ ಶುರು?

ಇಂದು ಬಿಡುಗಡೆಯಾಗಿರುವ 43 ಇಂಚು ಹಾಗೂ 32 ಇಂಚಿನ ಗಾತ್ರದ ಶಿಯೋಮಿ 'Mi TV 4A' ಟಿವಿಗಳು ಇದೇ 14 ನೇದ ತಾರೀಖಿನಿಂದ ಮಾರಾಟಕ್ಕೆ ಬರಲಿವೆ. ಶಿಯೋಮಿಯ ಅಫಿಶಿಯಲ್ ವೆಬ್‌ಸೈಟ್ ಸೇರಿದಂತೆ ಫ್ಲಿಪ್‌ಕಾರ್ಟ್‌ನಲ್ಲಿ ಶಿಯೋಮಿ ಟಿವಿಗಳನ್ನು ಖರೀದಿಸಬಹುದಾಗಿದೆ.!!

Best Mobiles in India

English summary
Xiaomi Launches Mi TV 4A Series in India With 32-Inch and 43-Inch Models: Price, Specifications . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X