ಬರೀ ರೂ.700ಕ್ಕೆ ಶಿಯೋಮಿ ವೈರ್‌ಲೈಸ್ ಚಾರ್ಜರ್: ಮಾರುಕಟ್ಟೆಯಲ್ಲಿಯೇ ಬೆಸ್ಟ್..!

|

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ವಸ್ತುಗಳನ್ನು ಲಾಂಚ್ ಮಾಡುತ್ತಿರುವ ಶಿಯೋಮಿ, ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುವ ಸಲುವಾಗಿ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌ ವಸ್ತುಗಳನ್ನು ನೀಡುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ವೈರ್‌ಲೈಸ್ ಚಾರ್ಜರ್ ಅನ್ನು ಅತೀ ಕಡಿಮೆ ಬೆಲೆಗೆ ಲಾಂಚ್ ಮಾಡಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ.

ಬರೀ ರೂ.700ಕ್ಕೆ ಶಿಯೋಮಿ ವೈರ್‌ಲೈಸ್ ಚಾರ್ಜರ್: ಮಾರುಕಟ್ಟೆಯಲ್ಲಿಯೇ ಬೆಸ್ಟ್..!

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಸೃಷ್ಠಿಸಿಕೊಂಡಿರುವ ವೈರ್‌ಲೈಸ್ ಚಾರ್ಜರ್‌ಗಳು ಅತೀ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯನ್ನು ಬದಲಾಯಿಸಲು ಅತೀ ಕಡಿಮೆ ಬೆಲೆಗೆ ವೈರ್‌ಲೈಸ್ ಚಾರ್ಜರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಮೊದಲಿಗೆ ಇದು ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇದಾದ ನಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ಮಾರಾಟವಾಗಲಿದೆ.

ಗುಣಮಟ್ಟದ ಚಾರ್ಜರ್:

ಗುಣಮಟ್ಟದ ಚಾರ್ಜರ್:

ಶಿಯೋಮಿ ಲಾಂಚ್ ಮಾಡಿರುವ ಶಿಯೋಮಿ ವೈರ್‌ಲೈಸ್ ಚಾರ್ಜರ್ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ ಎನ್ನುವ ಕಾರಣಕ್ಕೆ ಗುಣಮಟ್ಟ ಇಲ್ಲ ಎನ್ನುವಂತಿಲ್ಲ. ಇದರಲ್ಲಿ ಹೊಸ ಗುಣಮಟ್ಟದ ತಂತ್ರಜ್ಞಾನವನ್ನು ಅಳವಡಿಸಾಗಿದೆ. ಇದು ಟೆಂಪರೇಚರ್ ಪ್ರೋಫ್ ಅನ್ನು ಹೊಂದಿದೆ. ಚಾರ್ಜರ್ ಎಷ್ಟು ಬಳಕೆ ಮಾಡಿದರೂ ಬಿಸಿಯಾಗುವುದಿಲ್ಲ ಎನ್ನಲಾಗಿದೆ.

ಹೈವೋಲ್ಟ್ ತಡೆಯಲಿದೆ:

ಹೈವೋಲ್ಟ್ ತಡೆಯಲಿದೆ:

ಇದಲ್ಲದೇ ಶಿಯೋಮಿ ಲಾಂಚ್ ಮಾಡಿರುವ ಫಾಸ್ಟ್ ಚಾರ್ಜರ್ ಯೂನಿವರ್ಸಲ್ ಆಗಿ ಬಳಕೆ ಮಾಡಬಹುದಾಗಿದೆ. ಇದಲ್ಲದೇ ಇದು ಹೈವೋಲ್ಟ್ ವಿದ್ಯುತ್ ಹರಿವನ್ನು ತಡೆಯಲಿದೆ. ಅಲ್ಲದೇ ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರಕ್ಷಿಸಲಿದೆ. ಹಾಗಾಗಿ ಯಾವುದೇ ಯೋಚನೆ ಇಲ್ಲದೇ ಇದನ್ನು ಬಳಕೆ ಮಾಡಬಹುದಾಗಿದೆ.

ಎಲ್ಲಾ ಬ್ರಾಂಡ್:

ಎಲ್ಲಾ ಬ್ರಾಂಡ್:

ಸದ್ಯ ಮಾರುಕಟ್ಟೆಯಲ್ಲಿ ವೈರ್‌ಲೈಸ್ ಚಾರ್ಜರ್ ಸಪೋರ್ಟ್ ಮಾಡುವ ಎಲ್ಲಾ ಮೊಬೈಲ್‌ಗಳನ್ನು ಶಿಯೋಮಿ ಲಾಂಚ್ ಮಾಡಿರುವ ವೈರ್‌ಲೈನ್ಸ್ ಚಾರ್ಜರ್ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ಸ್ಯಾಮ್‌ಸಂಗ್-ಆಪಲ್-ಶಿಯೋಮಿ ಫೋನ್‌ಗಳನ್ನು ಚಾರ್ಜ್ ಮಾಡಬಹುದಾಗಿದೆ.

ಅಲ್ಯೂಮಿನಿಯಮ್ ಬಾಡಿ:

ಅಲ್ಯೂಮಿನಿಯಮ್ ಬಾಡಿ:

ಶಿಯೋಮಿ ಲಾಂಚ್ ಮಾಡಿರುವ ವೈರ್‌ಲೈಸ್ ಚಾರ್ಜರ್ ಅಲ್ಯೂಮಿನಿಯಮ್ ಬಾಡಿಯನ್ನು ಹೊಂದಿದೆ. ಫಾಸ್ಟ್ ಚಾರ್ಜಿಂಗ್ ಅನ್ನು ಇದು ಸಪೋರ್ಟ್ ಮಾಡಲಿದೆ. ಅಲ್ಲದೇ Qi ಸ್ಟಾಂಡರ್ಡ್ ಅನ್ನು ಹೊಂದಿದೆ. ಅಲ್ಲದೇ ಇದರೊಂದಿಗೆ LED ಇಂಡಿಕೇಟರ್ ಅನ್ನು ಇದರಲ್ಲಿ ಕಾಣಬಹುದಾಗಿದೆ.

ಕ್ವಾಕ್ ಚಾರ್ಜರ್ 3.0 ಸಫೋರ್ಟ್:

ಕ್ವಾಕ್ ಚಾರ್ಜರ್ 3.0 ಸಫೋರ್ಟ್:

ಇದಲ್ಲದೇ ಶಿಯೋಮಿ ವೈರ್‌ಲೈಸ್ ಚಾರ್ಜರ್ ಕ್ವಿಕ್ ಚಾರ್ಜರ್ 3.0 ಆಡ್ಪಟರ್ ಅನ್ನು ಸಫೋರ್ಟ್ ಮಾಡಲಿದೆ. ಇದರಿಂದಾಗಿ ಫಾಸ್ಟ್ ಚಾರ್ಜ್ ಮಾಡಬಹುದಾಗಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್ ಗಳನ್ನು ವೇಗವಾಗಿ ವೈರ್ ಕನೆಕ್ಟ್ ಮಾಡದೇ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Xiaomi Mi Wireless Charger (Universal Fast Charge Edition) With Temperature Protection Launched. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X