Subscribe to Gizbot

ಸೂಪರ್ ಸೌಂಡ್ ಸಿಸ್ಟಂ: ಮನೆಯಲ್ಲಿ ಪಾರ್ಟಿ ಮಾಡುವವರಿಗೆ..!

Written By:

ಐಟಿ ಬಿಡಿಭಾಗಗಳು, ಸೌಂಡ್ಸ್, ಮೊಬೈಲ್/ಲೈಫ್ ಸ್ಟೈಲ್ ಆಕ್ಸೆಸರೀಸ್ ಉತ್ಪನ್ನಗಳ ತಯಾರಿಕೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಜೆಬ್ರಾನಿಕ್ಸ್, ಹೊಸದಾಗಿ ಸೌಂಡ್ ಸಿಸ್ಟಂ ವೊಂದನ್ನು ಲಾಂಚ್ ಮಾಡಿದ್ದು. ಅತ್ಯಾಧುನಿಕ 2.0 ವೈರ್ ಲೆಸ್ ಬುಕ್ ಶೆಲ್ಫ್ ಸ್ಪೀಕರ್ 'ಜೈವ್' ಸದ್ಯ ಬಿಡುಗಡೆಯಾಗಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.

ಸೂಪರ್ ಸೌಂಡ್ ಸಿಸ್ಟಂ: ಮನೆಯಲ್ಲಿ ಪಾರ್ಟಿ ಮಾಡುವವರಿಗೆ..!

ಉತ್ತಮ ಚಲನಚಿತ್ರದ ಸೌಂಡ್ ಅನ್ನು ಕೇಳಲು ಎರಡು ಪ್ರತ್ಯೇಕ ವೈರ್ ಲೆಸ್ ಪೋರ್ಟಬಲ್ ಸ್ಪೀಕರ್ ಗಳಿದ್ದು, ಸ್ಪೀಕರ್ ಗಳೆರಡೂ ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಅವು ಸಂಪೂರ್ಣ ವೈರ್ ಲೆಸ್ ಆಗಿದೆ. ಇದರಿಂದಾಗಿ ನೀವು ಎಲ್ಲಿಬೇಕಾದರು ಮ್ಯೂಸಿಕ್ ಅನ್ನು ಆನಂದಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಟ್ಟಾಗಿ-ಇಲ್ಲವೇ ಬಿಡಿಯಾಗಿ:

ಒಟ್ಟಾಗಿ-ಇಲ್ಲವೇ ಬಿಡಿಯಾಗಿ:

ಜೈವ್ 2.0 ಸ್ಪೀಕರ್ ಎಡ ಮತ್ತು ಬಲಭಾಗದ ಎರಡು ಸ್ಪೀಕರ್ ಗಳೊಡನೆ ದೊರೆಯಲಿದ್ದು, ವೈರ್ ಲೆಸ್ ಸಂಪರ್ಕ ಹೊಂದಿರುವುದರಿಂದ ಇದನ್ನು ಬಳಕೆದಾರರು ಜೊತೆ ಅಥವಾ ಎರಡು ಪ್ರತ್ಯೇಕ ಸ್ಪೀಕರ್ ಗಳಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಎಯುಎಕ್ಸ್ ಕೇಬಲ್ ನೊಂದಿಗೆ ಲಭ್ಯವಿದ್ದು, ಇದನ್ನು ನೀವು ಕಂಪ್ಯೂಟರ್, ಟಿವಿ, ಗೇಮಿಂಗ್ ಕನ್ಸೋಲ್ ಇತ್ಯಾದಿಗಳಿಗೆ ಸಂಪರ್ಕಿಸಿದಾಗ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಸೂಪರ್ ಬೇಸ್:

ಸೂಪರ್ ಬೇಸ್:

ಇದು 5ಡಬ್ಲ್ಯು +5 ಡಬ್ಲ್ಯು ಆರ್ ಎಂ ಎಸ್ ಹೊಂದಿದ್ದು, ಸೂಪರ್ ಬಾಸ್ ನೊಂದಿಗೆ ದೊರೆಯಲಿದೆ. ನಿಜಕ್ಕೂ ಗಟ್ಟಿಯಾದ ಶಬ್ದವನ್ನು ನೀಡಲಿದೆ. ನಿಮಗೆ ಮ್ಯೂಸಿಕ್ ಕೇಳುವಾಗ ಅಥವಾ ಚಲನಚಿತ್ರ ವೀಕ್ಷಿಸುವಾಗ ಹೆಚ್ಚುವರಿ ಬೇಸ್ ಅಂಶವನ್ನು ನೀಡುತ್ತದೆ.

ಉತ್ತಮ ವಿನ್ಯಾಸ:

ಉತ್ತಮ ವಿನ್ಯಾಸ:

ಸ್ಪೀಕರ್ ಅತ್ಯುತ್ತಮ ವಿನ್ಯಾಸದಲ್ಲಿ ಲಭ್ಯವಿದ್ದು, ಸ್ಟೈಲ್ ಹಾಗೂ ಆಧುನಿಕತೆಯಿಂದ ಕೂಡಿದೆ. ಇದು ಸುಂದರವಾದ ಅತ್ಯಾಕರ್ಷಕ ಬ್ಲ್ಯಾಕ್ ಮ್ಯಾಟ್ ಫಿನಿಶ್ ಹೊಂದಿದ್ದು ಹಿಂಭಾಗದಲ್ಲಿ ಪ್ಲೇ ಬ್ಯಾಕ್ ಬಟನ್ ನೊಂದಿಗೆ ವಾಲ್ಯೂಂ ಕಂಟ್ರೋಲ್ ಬಟನ್ ಹೊಂದಿದೆ.

8 ಗಂಟೆಗಳ ಪ್ಲೇಬ್ಯಾಕ್:

8 ಗಂಟೆಗಳ ಪ್ಲೇಬ್ಯಾಕ್:

ನೀವು ಎರಡೂ ಸ್ಪೀಕರ್ ಗಳನ್ನು ಪ್ರತ್ಯೇಕ ವೈರ್ ಲೆಸ್ ಸೀಕರ್ ಆಗಿ ಬಳಸಬಹುದು. ಇದು 8 ಗಂಟೆಗಳ ಪ್ಲೇಬ್ಯಾಕ್ ಸಮಯದೊಂದಿಗೆ ಲಭ್ಯವಿರುವುದರಿಂದ ನೀವು ಹೆಚ್ಚಿನ ಅವಧಿಯವರೆಗೆ ಮ್ಯೂಸಿಕ್ ಆನಂದಿಸಬಹುದು.

Nokia 7 Plus now up for sale in India - GIZBOT KANNADA
ಸ್ಮಾರ್ಟ್ ಪೋನ್ ಜೊತೆಗೆ:

ಸ್ಮಾರ್ಟ್ ಪೋನ್ ಜೊತೆಗೆ:

ಸ್ಮಾರ್ಟ್ ಪೋನ್ ನೊಂದಿಗೆ ಇದನ್ನು ಮೂಲ ಬಳಸಬಹುದು, ಹಗುರವಾಗಿದ್ದು, ನಿಮ್ಮ ಸಾಧನಕ್ಕೆ ಸುಲಭವಾಗಿ ಸಂಪರ್ಕಿಸಿ ತಡೆರಹಿತ ಮ್ಯೂಸಿಕ್ ಆನಂದಿಸಬಹುದಾಗಿದೆ. ಕಪ್ಪು ಬಣ್ಣದಲ್ಲಿ ಲಭ್ಯವಿರುವ, ಈ ಉತ್ಪನ್ನ ಭಾರತದಾದ್ಯಂತ ಎಲ್ಲಾ ಪ್ರಮುಖ ರೀಟೇಲ್ ಸ್ಟೋರ್ ಗಳಲ್ಲಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Zebronics Launches its Revolutionary 2.0 Bookshelf Wireless Speaker. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot