ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಗೊತ್ತಿರಬೇಕಾದ ಹತ್ತು ಸರಳ ಟಿಪ್ಸುಗಳು

|

ಚಿತ್ರಗಳನ್ನು, ವೀಡಿಯೋಗಳನ್ನು ಹಂಚಿಕೊಳ್ಳಲು ಪ್ರಪಂಚದ ಖ್ಯಾತ ಸಾಮಾಜಿಕ ಜಾಲತಾಣವೆಂದರೆ ಇನ್ಸ್ಟಾಗ್ರಾಮ್. 2015ರವರೆಗೆ ಇನ್ಸ್ಟಾಗ್ರಾಮ್ ಉಪಯೋಗಿಸುವವರ ಸಂಖೈ ಒಂದು ಬಿಲಿಯನ್ನಿಗಿಂತಲೂ ಹೆಚ್ಚಿತ್ತು. ಕೆವಿನ್ ಸಿಸ್ಟ್ರಾಮ್ 2010ರಲ್ಲಿ ಪ್ರಾರಂಭಿಸಿದ ಇನ್ಸ್ಟಾಗ್ರಾಮನ್ನು 2012ರಲ್ಲಿ ಫೇಸ್ಬುಕ್ ಒಂದು ಬಿಲಿಯನ್ ಡಾಲರನ್ನು ಹಣ ಮತ್ತು ಸ್ಟಾಕಿನ ರೂಪದಲ್ಲಿ ಕೊಟ್ಟು ಖರೀದಿಸಿತು.

ಓದಿರಿ: ಐಪ್ಯಾಡ್‌ನಲ್ಲಿ ಫೋಟೋ ಕ್ಲಿಕ್ಕಿಸೋದು ಡಾಲ್ಫಿನ್‌ಗೂ ಗೊತ್ತು, ವೀಡಿಯೊ ವೈರಲ್

ಪ್ರಪಂಚದಾದ್ಯಂತ ವ್ಯಕ್ತಿಗಳು ಮತ್ತು ಕಂಪನಿಗಳು ತಮ್ಮ ಬ್ರ್ಯಾಂಡನ್ನು ಪ್ರಚುರಪಡಿಸಲು ಇನ್ಸ್ಟಾಗ್ರಾಮನ್ನು ಉಪಯೋಗಿಸುತ್ತಿದ್ದಾರೆ, ನೀವ್ಯಾಕೆ ಹಿಂದುಳಿಯಬೇಕು? ಇನ್ಸ್ಟಾಗ್ರಾಮ್ ನ ಉಪಯುಕ್ತತೆಯನ್ನು ಮತ್ತು ಅಂತರ್ಜಾಲದಲ್ಲಿ ನಿಮ್ಮ ಅಸ್ತಿತ್ವವನ್ನು ಹೆಚ್ಚಿಸಲು ನಾವು ಹತ್ತು ಟಿಪ್ಸುಗಳನ್ನು ಇಲ್ಲಿ ಕೊಟ್ಟಿದ್ದೇವೆ.

ಎಲ್ಲಾ ಪೋಸ್ಟುಗಳಿಗೂ ಹ್ಯಾಷ್ ಟ್ಯಾಗ್ ಹಾಕಿ.

ಎಲ್ಲಾ ಪೋಸ್ಟುಗಳಿಗೂ ಹ್ಯಾಷ್ ಟ್ಯಾಗ್ ಹಾಕಿ.

ಹ್ಯಾಷ್ ಟ್ಯಾಗ್ ಎಂದರೆ ಕ್ಲಿಕ್ ಮಾಡಬಹುದಾದ ಪದ. ಕ್ಲಿಕ್ ಮಾಡುವ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಹುಡುಕಬಹುದು, ಸಂಶೋಧಿಸಬಹುದು. ನಿಮ್ಮ ಚಿತ್ರದ ವಿವರಣೆಯಲ್ಲಿ ಹ್ಯಾಷ್ ಟ್ಯಾಗ್ ಸೇರಿಸುವುದರಿಂದ ಪ್ರಪಂಚದಾದ್ಯಂತ ಇರುವ ಬಳಕೆದಾರರು ನಿಮ್ಮ ಚಿತ್ರವನ್ನು ಸುಲಭವಾಗಿ ನೋಡಬಹುದು, ಜನರು ಸಾಮಾನ್ಯವಾಗಿ ಉಪಯೋಗಿಸುವ ಪದಗಳ ಮೇಲೆ ಕ್ಲಿಕ್ ಮಾಡುವ ಮೂಲಕ.
ಇನ್ಸ್ಟಾಗ್ರಾಮಿನಲ್ಲಿ ಹೆಚ್ಚಾಗಿ ಉಪಯೋಗಿಸುವ ಕೆಲವು ಹ್ಯಾಷ್ ಟ್ಯಾಗುಗಳೆಂದರೆ
#Love, #Instadaily, #Instagood, #Food, #Foodporn

ಪೋಸ್ಟುಗಳು ವಸ್ತುನಿಷ್ಠವಾಗಿರಲಿ

ಪೋಸ್ಟುಗಳು ವಸ್ತುನಿಷ್ಠವಾಗಿರಲಿ

ನಿಮ್ಮದೊಂದು ಬ್ಲಾಗ್, ವ್ಯಾಪಾರಿ ತಾಣ ಅಥವಾ ಯಾವುದಾದರೂ ವಸ್ತುವನ್ನು ನೀವು ಇನ್ಸ್ಟಾಗ್ರಾಮಿನಲ್ಲಿ ಪ್ರಚಾರ ಮಾಡಬೇಕೆಂದರೆ, ನೀವು ಯಾವ ಗುಂಪಿಗೆ ಸೇರುತ್ತೀರಿ ಎನ್ನುವುದನ್ನು ನೆನಪಿಟ್ಟುಕೊಂಡು ಚಿತ್ರ ಮತ್ತು ವೀಡಿಯೋಗಳನ್ನು ಪೋಸ್ಟ್ ಮಾಡಬೇಕು.

ವಿಷಯಾಂತರ ಮಾಡುವಂತಹ ಚಿತ್ರಗಳನ್ನು ಹಾಕುವುದರಿಂದ ಹೆಚ್ಚು ಉಪಯೋಗವಾಗದು, ನಿಮ್ಮ ಫಾಲೋವರ್ ಗಳು ಅದರ ಬಗ್ಗೆ ಅಷ್ಟು ಗಮನ ಹರಿಸುವುದಿಲ್ಲ.

ದಿನಾ ಪೋಸ್ಟ್ ಹಾಕಿ

ದಿನಾ ಪೋಸ್ಟ್ ಹಾಕಿ

ಇನ್ಸ್ಟಾಗ್ರಾಮ್ ರಿಯಲ್ ಟೈಮ್ ಆಧಾರಿತವಾಗಿ ಕಾರ್ಯ ನಿರ್ವಹಿಸುತ್ತದೆ. ಬಳಕೆದಾರರು ಯಾವ ಸಮಯದಲ್ಲಿ ಪೋಸ್ಟ್ ಮಾಡಿದ್ದಾರೋ ಆ ಸಮಯದ ಆಧಾರದ ಮೇಲೆ ಪೋಸ್ಟುಗಳನ್ನು ತೋರಿಸುತ್ತದೆ. ಇದರ ಅರ್ಥವೇನೆಂದರೆ ನೀವು ವಾರಕ್ಕೊಮ್ಮೆ ನಿಮ್ಮ ಟೈಮ್ ಲೈನ್ ಅಪ್ ಡೇಟ್ ಮಾಡಿದರೆ ನಿಮ್ಮ ಫಾಲೋವರ್ ಗಳು ಅದನ್ನು ಗಮನಿಸದೇ ಇರುವ ಸಾಧ್ಯತೆಯೇ ಅಧಿಕ.

ಇದನ್ನು ತಡೆಯಲು, ದಿನಕ್ಕೆ ಕನಿಷ್ಠ ಒಂದು ಚಿತ್ರವನ್ನೋ ಅಥವಾ ಚಿಕ್ಕದೊಂದು ವೀಡಿಯೋವನ್ನೋ ಪೋಸ್ಟ್ ಮಾಡಲು ಪ್ರಯತ್ನಿಸಿ; ಇದರಿಂದ ನಿಮ್ಮ ಪೋಸ್ಟ್ ಹೆಚ್ಚು ಜನರಿಗೆ ಕಾಣಿಸುತ್ತದೆ. ಹೆಚ್ಚು ಪೋಸ್ಟುಗಳೆಂದರೆ ಹೆಚ್ಚು ಕಾಣುವಿಕೆ ಹೆಚ್ಚು ಕಾಣುವಿಕೆ ಎಂದರೆ ಹೆಚ್ಚಿನ ಜನರು ನೋಡುತ್ತಾರೆ ಎಂದರ್ಥ.

ಸೂಕ್ತ ಅಕೌಂಟುಗಳನ್ನು ಫಾಲೋ ಮಾಡಿ

ಸೂಕ್ತ ಅಕೌಂಟುಗಳನ್ನು ಫಾಲೋ ಮಾಡಿ

ಇನ್ಸ್ಟಾಗ್ರಾಮ್ ಟ್ವಿಟರಿನಿಂದ ಎರವಲು ಪಡೆದ ಒಂದು ಗುಣವೆಂದರೆ ಫಾಲೋ ಮಾಡುವುದು ಮತ್ತು ಫಾಲೋವರ್ಸನ್ನು ಹೊಂದುವುದು. ಹೆಚ್ಚಿನ ಸಂಖೈಯ ಫಾಲೋವರ್ಸ್ ಅನ್ನು ಪಡೆಯಲು ನಿಮ್ಮ ವಿಭಾಗದಲ್ಲಿರುವ ಖ್ಯಾತ ಪ್ರಭಾವಶಾಲಿಗಳನ್ನಷ್ಟೇ ಫಾಲೋ ಮಾಡಿ.

ಜೊತೆಗೆ, ಫಾಲೋ ಮಾಡುವ ಖಾತೆಗಳನ್ನು ಹುಡುಕಿ. #TeamFollowBack ಮತ್ತು #FollowBack ನಂತಹ ಪದಗಳನ್ನು ನಿಮ್ಮ ವಿವರಣೆಯಲ್ಲಿ ಸೇರಿಸುವ ಮೂಲಕವೂ ಫಾಲೋವರ್ ಗಳ ಗಮನವನ್ನು ಸೆಳೆಯಬಹುದು, ಅವರ ಉಪಯುಕ್ತತೆಗೆ ನಿಮ್ಮನ್ನು ಫಾಲೋ ಮಾಡುವಂತೆ ಮಾಡಬಹುದು.

ಇತರರ ಕೆಲಸಕ್ಕೆ ಮೆಚ್ಚುಗೆ ನೀಡಿ

ಇತರರ ಕೆಲಸಕ್ಕೆ ಮೆಚ್ಚುಗೆ ನೀಡಿ

ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಜನಪ್ರಿಯವಾದ ಮೇಲೆ ‘ಲೈಕ್' ಬಟನ್ ಖ್ಯಾತವಾಯಿತು. ಜನಪ್ರಿಯ ಬಳಕೆದಾರರ ಪೋಸ್ಟುಗಳನ್ನು ನೀವು ‘ಲೈಕ್' ಮಾಡಿದರೆ, ಅವರೂ ನಿಮ್ಮ ಪೋಸ್ಟುಗಳನ್ನು ಲೈಕ್ ಮಾಡಲಾರಂಭಿಸುತ್ತಾರೆ.

ಮೊದಲಿಗೆ, ಬಳಕೆದಾರರು ನಿಮ್ಮ ಪೋಸ್ಟುಗಳನ್ನು ಲೈಕ್ ಮಾಡುತ್ತಾರೆ ಮತ್ತು ಫಾಲೋ ಕೂಡ ಮಾಡುತ್ತಾರೆ. ಎರಡನೆಯದಾಗಿ, ನಿಮ್ಮ ಲೈಕುಗಳು ಅವರ ಪ್ರೊಫೈಲಿನಲ್ಲಿ ಕಾಣಿಸುತ್ತದೆ, ಅವರ ಫಾಲೋವರ್ ಗಳ ಕಣ್ಣಿಗೂ ಅದು ಕಾಣುತ್ತದೆ, ಅವರೂ ನಿಮ್ಮನ್ನು ಫಾಲೋ ಮಾಡುತ್ತಾರೆ.

ಇನ್ಸ್ಟಾಗ್ರಾಮನ್ನು ಎಡಿಟ್ ಮಾಡಲು ಮಾತ್ರ ಬಳಸಿ

ಇನ್ಸ್ಟಾಗ್ರಾಮನ್ನು ಎಡಿಟ್ ಮಾಡಲು ಮಾತ್ರ ಬಳಸಿ

ಇನ್ಸ್ಟಾಗ್ರಾಮಿನ ಅದ್ಭುತ ಫಿಲ್ಟರುಗಳು ನಿಮಗಿಷ್ಟ, ಆದರೆ ಚಿತ್ರವನ್ನು ಆ್ಯಪ್ ಗೆ ಪೋಸ್ಟ್ ಮಾಡಲು ನಿಮಗೆ ಮನಸ್ಸಿಲ್ಲ. ಫಿಲ್ಟರನ್ನು ಉಪಯೋಗಿಸಿ ಚಿತ್ರವನ್ನು ಪೋಸ್ಟ್ ಮಾಡದೇ ಇರಲು ಒಂದು ದಾರಿಯುಂಟು!

ನಿಮ್ಮ ಮೊಬೈಲಿನಲ್ಲಿ ಏರ್ ಪ್ಲೇನ್ ಮೋಡನ್ನು ಆನ್ ಮಾಡಿ, ನಂತರ ಇನ್ಸ್ಟಾಗ್ರಾಮ್ ತೆರೆಯಿರಿ. ಚಿತ್ರವನ್ನು ಎಡಿಟ್ ಮಾಡಿ ಮುಗಿಸಿದ ನಂತರ ಪೋಸ್ಟ್ ಮಾಡಿ. ನೆಟ್ ವರ್ಕ್ ಇಲ್ಲವೆಂದು ತೋರಿಸುತ್ತದೆ ಮತ್ತೀಗ ನೀವು ಸುಲಭವಾಗಿ ಎಡಿಟ್ ಮಾಡಿದ ಚಿತ್ರವನ್ನು ನಿಮ್ಮ ಗ್ಯಾಲರಿಯಲ್ಲಿ ಸೇವ್ ಮಾಡಿಕೊಳ್ಳಬಹುದು.

ನಿಮ್ಮ ಕಂಪ್ಯೂಟರಿನಲ್ಲಿ ಹಲವಾರು ಇನ್ಸ್ಟಾಗ್ರಾಮ್ ಖಾತೆಗಳನ್ನು ಉಪಯೋಗಿಸಿ

ನಿಮ್ಮ ಕಂಪ್ಯೂಟರಿನಲ್ಲಿ ಹಲವಾರು ಇನ್ಸ್ಟಾಗ್ರಾಮ್ ಖಾತೆಗಳನ್ನು ಉಪಯೋಗಿಸಿ

ಆ್ಯಂಡ್ರಾಯ್ಡ್ ಎಮುಲೇಟರ್ ಗಳ ಸಹಾಯದಿಂದ ನಿಮ್ಮ ಕಂಪ್ಯೂಟರಿನಲ್ಲಿ ಹಲವಾರು ಇನ್ಸ್ಟಾಗ್ರಾಮ್ ಖಾತೆಗಳನ್ನು ಸುಲಭವಾಗಿ ಉಪಯೋಗಿಸಬಹುದು. ಇದು ಖಾಸಗಿ ವಿಷಯಗಳಿಗೆ ಮತ್ತು ಕೆಲಸದ ಉದ್ದೇಶಗಳಿಗೆ ಹಲವು ಇನ್ಸ್ಟಾಗ್ರಾಮ್ ಖಾತೆಗಳನ್ನು ಉಪಯೋಗಿಸುವವರಿಗೆ ಉಪಯುಕ್ತ.

ನಿಮ್ಮ ಪರಿಚಯವನ್ನು ವೈಯಕ್ತೀಕರಿಸಿ

ನಿಮ್ಮ ಪರಿಚಯವನ್ನು ವೈಯಕ್ತೀಕರಿಸಿ

ಬಹಳಷ್ಟು ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಪರಿಚಯ ಪುಟದಲ್ಲಿ ಆಕರ್ಷಕ ಫಾಂಟುಗಳನ್ನು ಉಪಯೋಗಿಸಿರುತ್ತಾರೆ. ನಿಮಗೂ ಆ ರೀತಿಯ ಫಾಂಟುಗಳನ್ನು ಉಪಯೋಗಿಸಬೇಕೆ? ಆ ರಹಸ್ಯ ತುಂಬಾ ಸರಳವಾಗಿದೆ. ನಿಮಗೆ ಇಷ್ಟವಾದ ಫಾಂಟಿನಲ್ಲಿ, ಮೆಚ್ಚುಗೆಯಾದ ಶೈಲಿಯಲ್ಲಿ ಎಂ.ಎಸ್ ವರ್ಡ್ ಅಥವಾ ಇನ್ಯಾವುದೇ ಟೆಕ್ಸ್ಟ್ ಎಡಿಟರ್ ಮೂಲಕ ಟೈಪಿಸಿಕೊಳ್ಳಿ, ಅದನ್ನು ಕಾಪಿ ಮಾಡಿ ಇನ್ಸ್ಟಾಗ್ರಾಮಿನಲ್ಲಿ ಪೇಸ್ಟ್ ಮಾಡಿ.

ಜಿಯೋಟ್ಯಾಗುಗಳನ್ನು ಪೋಸ್ಟುಗಳಿಂದ ತೆಗೆಯಿರಿ

ಜಿಯೋಟ್ಯಾಗುಗಳನ್ನು ಪೋಸ್ಟುಗಳಿಂದ ತೆಗೆಯಿರಿ

ನಿಮ್ಮ ಇನ್ಸ್ಟಾಗ್ರಾಮಿನ ಚಿತ್ರಗಳು, ಡಿಫಾಲ್ಟ್ ಸೆಟ್ಟಿಂಗ್ಸಿನಲ್ಲಿ ಚಿತ್ರ ತೆಗೆದ ಜಾಗವನ್ನು ಜಿಯೋಟ್ಯಾಗ್ ಮಾಡಿಬಿಟ್ಟಿರುತ್ತದೆ. ಈ ಸೆಟ್ಟಿಂಗ್ಸನ್ನು ಬದಲಿಸಬಹುದು ಆದರೆ ಬಹಳಷ್ಟು ಜನ ಅದನ್ನು ಗಮನಿಸುವುದೇ ಇಲ್ಲ. ಬದಲಿಸದಿದ್ದರೆ ನಿಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎನ್ನುವುದು ನೆನಪಿರಲಿ. ನೀವು ಬದಲಿಸದೇ ಇರುವವರಲ್ಲಿ ಒಬ್ಬರಾಗಿದ್ದಲ್ಲಿ, ನಿಮ್ಮ ಫೋಟೋ ಮ್ಯಾಪಿಗೆ ಹೋಗಿ, ಫೋಟೋಗಳನ್ನು ಎಡಿಟ್ ಮಾಡುವ ಮೂಲಕ ಜಿಯೋಟ್ಯಾಗನ್ನು ತೆಗೆದುಹಾಕಿ.

ಅನವಶ್ಯಕ ಚಿತ್ರಗಳಿಂದ ಅನ್ ಟ್ಯಾಗ್ ಮಾಡಿ

ಅನವಶ್ಯಕ ಚಿತ್ರಗಳಿಂದ ಅನ್ ಟ್ಯಾಗ್ ಮಾಡಿ

ನಿಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲಿಗೆ ಹೋಗಿ, ಬಲಬದಿಗೆ ಇರುವ ‘ಪರ್ಸನ್' ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮನ್ನು ಟ್ಯಾಗ್ ಮಾಡಲಾಗಿರುವ ಎಲ್ಲಾ ಚಿತ್ರಗಳನ್ನೂ ಅಲ್ಲಿ ಕಾಣಬಹುದು. ನಂತರ ಅಲ್ಲಿರುವ ಆಯ್ಕೆಯನ್ನು ಕ್ಲಿಕ್ ಮಾಡಿ ಟ್ಯಾಗ್ ತೆಗೆಯಬಹುದು, ಹಾಗೆಯೇ ಉಳಿಸಬಹುದು ಅಥವಾ ಇಡೀ ಚಿತ್ರವನ್ನೇ ನಿಮ್ಮ ಪ್ರೊಫೈಲಿನಿಂದ ತೆಗೆದುಬಿಡಬಹುದು.

Best Mobiles in India

English summary
Instagram is the most popular image-sharing, video-sharing and social networking service in the world, with more than one billion active users as of 2015. Founded in 2010 by entrepreneur Kevin Systrom, Instagram was taken over by Facebook in 2012 for around $1 Billion in cash and stock.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X