ಸ್ಮಾರ್ಟ್‌ಫೋನ್‌ ವೈರಸ್ ದಾಳಿಗೆ ತುತ್ತಾಗದಂತೆ ನೋಡಿಕೊಳ್ಳುವುದು ಹೇಗೆ?!!

ಕಳೆದ ವರ್ಷ 150 ದೇಶಗಳಲ್ಲಿ ಲಕ್ಷಾಂತರ ಕಂಪ್ಯೂಟರ್‌ಗಳು ಸೈಬರ್‌ ದಾಳಿಗೆ ತುತ್ತಾಗಿದಕ್ಕೆ 2018 ನೇ ವರ್ಷದಲ್ಲಿ ಗ್ಯಾಜೆಟ್ ಬಳಕೆದಾರರು ಕೈಗೊಳ್ಳಬೇಕಾದ ನಿರ್ಣಯಗಳನ್ನು ಕೈಗೊಳ್ಳಲು ಸಲಹೆ ನೀಡಲಾಗಿದೆ.!!

|

ತಂತ್ರಜ್ಞಾನ ಪ್ರಪಂಚದಲ್ಲಿ ಪ್ರತಿವರ್ಷವೂ ಒಂದೊಂದು ನಿರ್ಣಯ ಕೈಗೊಳ್ಳುವುದು ರೂಢಿಯಾಗಿ ಬಂದಿದೆ.! 2016ನೇ ವರ್ಷದಲ್ಲಿ ಇ-ತ್ಯಾಜ್ಯ ನಿರ್ವಹಣೆ ಹಾಗೂ ಗ್ಯಾಜೆಟ್‌ಗಳ ಸಮರ್ಪಕ ಬಳಕೆ ಕುರಿತು ಜಾಗತಿಕವಾಗಿ ನಿರ್ಣಯ ಕೈಗೊಂಡಿದ್ದರೆ, 2017ನೇ ವರ್ಷದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಮಾಹಿತಿ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು.!!

ಅದೇ ರೀತಿಯಲ್ಲಿ ಈ ಬಾರಿಯೂ ತಂತ್ರಜ್ಞಾನ ಪ್ರಪಂಚದ ನಿರ್ಣಯವನ್ನು ಟೆಕ್ ತಜ್ಞರು ತೆಗೆದುಕೊಂಡಿದ್ದಾರೆ.!! ಕಳೆದ ವರ್ಷ 150 ದೇಶಗಳಲ್ಲಿ ಲಕ್ಷಾಂತರ ಕಂಪ್ಯೂಟರ್‌ಗಳು ಸೈಬರ್‌ ದಾಳಿಗೆ ತುತ್ತಾಗಿದಕ್ಕೆ 2018 ನೇ ವರ್ಷದಲ್ಲಿ ಗ್ಯಾಜೆಟ್ ಬಳಕೆದಾರರು ಕೈಗೊಳ್ಳಬೇಕಾದ ನಿರ್ಣಯಗಳನ್ನು ಕೈಗೊಳ್ಳಲು ಸಲಹೆ ನೀಡಲಾಗಿದೆ.!!

ಸ್ಮಾರ್ಟ್‌ಫೋನ್‌ ವೈರಸ್ ದಾಳಿಗೆ ತುತ್ತಾಗದಂತೆ ನೋಡಿಕೊಳ್ಳುವುದು ಹೇಗೆ?!!

ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳುವುದು ಹೇಗೆ? ಗ್ಯಾಜೆಟ್‌ಗಳು ವೈರಸ್ ದಾಳಿಗೆ ತುತ್ತಾಗದಂತೆ ಸಂರಕ್ಷಣೆ ಮಾಡಿಕೊಳ್ಳುವುದು ಹೇಗೆ? ಹೀಗೆ ಹಲವು ಸಲಹೆಗಳನ್ನು ತೆಗೆದುಕೊಳ್ಳಲು ಹೇಳಿದ್ದು, ಹಾಗಾದರೆ, ಗ್ಯಾಜೆಟ್ ಬಳಕೆದಾರರು ವೈರಸ್ ದಾಳಿ ಬಗ್ಗೆ ತೆಗೆದುಕೊಳ್ಳಬೇಕಾದ ನಿರ್ಣಯಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡುವುದು!!

ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡುವುದು!!

ಗ್ಯಾಜೆಟ್‌ಗಳು ವೈರಸ್ ದಾಳಿಗೆ ತುತ್ತಾಗದಂತೆ ಸಂರಕ್ಷಣೆ ಮಾಡಿಕೊಳ್ಳುವುದರಲ್ಲಿ ಕಾಲಕಾಲಕ್ಕೆ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳುವುದು ಒಂದಾಗಿದೆ.!! ಸ್ಮಾರ್ಟ್‌ಪೋನ್ ಮೇಲೆ ಹ್ಯಾಕರ್‌ಗಳ ಕಣ್ಣು ಬೀಳದಂತೆ ಕಾಪಾಡಲು ಈ ಆಯ್ಕೆ ನಿಮ್ಮ ಮೊದಲ ನಿರ್ಣಯವಾಗಿದ್ದರೆ ಒಳ್ಳೆಯದು.!!

How to Sharing a Mobile Data Connection with Your PC (KANNADA)
ಆಪ್‌ಗಳನ್ನು ಡಿಲೀಟ್ ಮಾಡುವುದು!!

ಆಪ್‌ಗಳನ್ನು ಡಿಲೀಟ್ ಮಾಡುವುದು!!

ಉಪಯೋಗವಿಲ್ಲದ ಹಲವು ಆಪ್‌ಗಳನ್ನು ಸ್ಮಾರ್ಟ್‌ಫೋನ್ ಬಳಕೆದಾರರು ಇಟ್ಟಿಕೊಂಡಿರುವುದು ಅವರ ಭಧ್ರತೆಗೆ ಅಪಾಯ ಹಾಗಾಗಿ, ಸ್ಮಾರ್ಟ್‌ಫೋನ್‌ನಲ್ಲಿ ಕಂಡು ಬರುವ ಅನವಶ್ಯಕ ಆಪ್‌ಗಳನ್ನು ಡಿಲೀಟ್ ಮಾಡುವುದು ತಂತ್ರಜ್ಞಾನ ಪ್ರಪಂಚದ ಈ ಬಾರಿಯ ನಿರ್ಣಯಗಳಲ್ಲಿ ಒಂದು.!!

ಗ್ಯಾಜೆಟ್ ಹಾರ್ಡ್‌ವೇರ್‌ ತಪಾಸಣೆ!!

ಗ್ಯಾಜೆಟ್ ಹಾರ್ಡ್‌ವೇರ್‌ ತಪಾಸಣೆ!!

ಒಮ್ಮೆ ಸ್ಮಾರ್ಟ್‌ಫೋನ್ ಖರೀದಿಸಿದರೆ ಮತ್ತೆ ಮೊಬೈಲ್ ಶಾಪ್‌ಗೆ ತೆರಳುವುದು ಹೊಸ ಮೊಬೈಲ್ ಖರೀದಿಸಲು ಮಾತ್ರ ಎನ್ನುವಷ್ಟು ಜನ ಬದಲಾಗಿದ್ದಾರೆ.! ಆದರೆ, ಇರುವ ಗ್ಯಾಜೆಟ್‌ಗಳ ಹಾರ್ಡ್‌ವೇರ್‌ ತಪಾಸಣೆ ಮಾಡುವುದನ್ನು ಮರೆತಿದ್ದಾರೆ.! ಹಾಗಾಗಿ, ಗ್ಯಾಜೆಟ್ ಹಾರ್ಡ್‌ವೇರ್‌ ತಪಾಸಣೆ ಮಾಡಿಸುವುದು ಈ ಬಾರಿಯ ನಿರ್ಣಯಗಳಲ್ಲಿ ಒಂದು.!!

ಗ್ಯಾಜೆಟ್‌ಗಳ ಪಾಲಿಸಿ ಓದಿಕೊಳ್ಳುವುದು!!

ಗ್ಯಾಜೆಟ್‌ಗಳ ಪಾಲಿಸಿ ಓದಿಕೊಳ್ಳುವುದು!!

ಗ್ಯಾಜೆಟ್‌ಗಳನ್ನು ಖರೀದಿಸಿದ ನಂತರ ನೀವು ಎಂದಾದರೂ ಗ್ಯಾಜೆಟ್‌ಗಳ ಪಾಲಿಸಿಗಳನ್ನು ಓದಿದೀರಾ? ಹಾಗಾದರೆ ಇನ್ಮುಂದೆ ತಪ್ಪದೆ ಗ್ಯಾಜೆಟ್‌ಗಳ ಪಾಲಿಸಿ ಓದಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ.! ಏಕೆಂದರೆ ಶೇ 70 ಕ್ಕಿಂತ ಹೆಚ್ಚು ಜನರು ಗ್ಯಾಜೆಟ್ ಪಾಲಿಸಿಗಳನ್ನು ಓದುವುದೇ ಇಲ್ಲವಂತೆ.!!

ವಿಪಿಎನ್ ಬಳಕೆ ಮಾಡುವುದು!!

ವಿಪಿಎನ್ ಬಳಕೆ ಮಾಡುವುದು!!

ವರ್ಚುವಲ್ ಪ್ರೈವೇಟ್ ನೆಟ್ವರ್ಕ್ ಎಂದು ಕರೆಯುವ VPN ಬಳಕೆದಾರರನ್ನು ಸುರಕ್ಷಿತವಾಗಿ ಪ್ರವೇಶಿಸಲು ಮತ್ತು ಸಾರ್ವಜನಿಕ ಜಾಲಗಳ ಮೂಲಕ ದೂರದಿಂದಲೇ ಡೇಟಾವನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡುತ್ತವೆ. ಇಂತಹ ಸುರಕ್ಷಿತ ವಿಧಾನವನ್ನು ಅಳವಡಿಸಿಕೊಳ್ಳುವುದು ಈ ವರ್ಷದ ನಿರ್ಣಯಗಳಲ್ಲೋಂದು.!!

ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ನ 'ಡೇಟಾಲಿ' ಆಪ್ ಇರಲೇಬೇಕು ಎನ್ನಲು 5 ಕಾರಣಗಳು!!ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ನ 'ಡೇಟಾಲಿ' ಆಪ್ ಇರಲೇಬೇಕು ಎನ್ನಲು 5 ಕಾರಣಗಳು!!

Best Mobiles in India

English summary
To have a fighting chance against today's rampant security threats, end users have to be informed and proactive. Here are some practical guidelines they can follow to minimize the risk of infection and attack. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X