ಕಳ್ಳರಿಂದ ನಿಮ್ಮ ಫೋನ್ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

Written By:

ಇಂದಿನ ಅತ್ಯಾಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚು ಸಾಮಾನ್ಯವಾದ ವಿಷಯವಾಗಿದೆ. ನೀವು ನಿಮ್ಮ ಡಿವೈಸ್ ಅನ್ನು ಎಷ್ಟು ಬಳಸುತ್ತೀರಿ ಎಂಬುದಕ್ಕಿಂತ ಅದರ ಸಂರಕ್ಷಣೆ ಹೇಗೆ ಮಾಡಬೇಕು ಎಂಬ ಅಂಶಗಳಿಗೆ ನಾವಿಲ್ಲಿ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಇಂದಿನ ಲೇಖನದಲ್ಲಿ ತಿಳಿಸುತ್ತಿರುವ ಟ್ರಿಕ್ಸ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನ ರಕ್ಷಣೆಯನ್ನು ಮಾಡಲು ನಾವು ತಿಳಿಸಿರುವ ಕೀಲಿಕೈಗಳಾಗಿವೆ.

ಓದಿರಿ: ನಿಮ್ಮ ಕುಟುಂಬದವರು ಎಲ್ಲೆಲ್ಲಿ ಇದ್ದಾರೆ ಎಂದು ಟ್ರ್ಯಾಕ್ ಮಾಡುವುದು ಹೇಗೆ?

ಒಂದು ಅಂದಾಜಿನ ಪ್ರಕಾರ ಮಹಾನಗರಗಳಲ್ಲಿ ಮೊಬೈಲ್ ಕಳ್ಳತನಗಳು ಹೆಚ್ಚು ನಡೆಯುತ್ತಿದ್ದು, ಕಳ್ಳತನ ಮಾಡುವುದರ ಜೊತೆಗೆ ಇದರಲ್ಲಿರುವ ಮಾಹಿತಿಗಳನ್ನು ಮೋಸಗಾರರು ತಮ್ಮ ತಂತ್ರಗಾರಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ನಿಮ್ಮ ಫೋನ್ ಹೋದರೂ ಇನ್ನೊಂದು ಕೊಳ್ಳಬಹುದು ಆದರೆ ನಿಮ್ಮ ವೈಯಕ್ತಿಕ ಡೇಟಾ ಮತ್ತೊಬ್ಬರ ವಶವಾದರೆ ಆ ನಷ್ಟವನ್ನು ತುಂಬಿಸುವುದು ಬಹುಕಷ್ಟ. ಹಾಗಿದ್ದರೆ ನಿಮ್ಮ ಡಿವೈಸ್ ಅನ್ನು ಸಂರಕ್ಷಿಸುವ ಸಮಯ ಬಂದಾಯಿತು ಎಂಬುದನ್ನು ಅರಿತುಕೊಂಡು ಈಗಲೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎನ್‌ಕ್ರಿಪ್ಶನ್ ಅವಶ್ಯಕವಾಗಿರಬೇಕು

ಎನ್‌ಕ್ರಿಪ್ಶನ್ ಅವಶ್ಯಕವಾಗಿರಬೇಕು

ನಿಮ್ಮ ಡಿವೈಸ್‌ನಲ್ಲಿ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲು ಆಂಡ್ರಾಯ್ಡ್ ಅನುಮತಿಸುತ್ತದೆ. ಈ ಡೇಟಾಗಾಗಿ ಪಿನ್ ಅಥವಾ ಪಾಸ್‌ವರ್ಡ್ ಅನ್ನು ನಮೂದಿಸಿ.

ಸ್ಕ್ರೀನ್ ಲಾಕ್ ಮಾಡಿ

ಸ್ಕ್ರೀನ್ ಲಾಕ್ ಮಾಡಿ

ನಿಮ್ಮ ಫೋನ್ ಸ್ಕ್ರೀನ್ ಲಾಕ್ ಮಾಡುವುದನ್ನು ಅಗತ್ಯವಾಗಿ ನೀವು ಮಾಡಲೇಬೇಕು. ಇದಕ್ಕಾಗಿ ನಿಮ್ಮ ಡಿವೈಸ್‌ನಲ್ಲಿರುವ ಪಿನ್, ಪ್ಯಾಟ್ರನ್ ಅಥವಾ ಪಾಸ್‌ವರ್ಡ್ ಬಳಸಿಕೊಳ್ಳಿ. ಡಿವೈಸ್‌ನ ಸೆಕ್ಯುರಿಟಿ ಸೆಟ್ಟಿಂಗ್‌ಗಳ ಮೂಲಕ ಇದನ್ನು ನಡೆಸಿಕೊಳ್ಳಬಹುದಾಗಿದೆ. ಪವರ್ ಕೀಯನ್ನು ಪ್ರೆಸ್ ಮಾಡಿದ ನಂತರ ಇದು ಸ್ವಯಂಚಾಲಿತವಾಗಿ ನಿಮ್ಮ ಡಿವೈಸ್ ಅನ್ನು ಲಾಕ್ ಮಾಡುತ್ತದೆ.

ಅಜ್ಞಾತ ವೈಫೈ ಬಳಕೆ ಮಾಡದಿರಿ

ಅಜ್ಞಾತ ವೈಫೈ ಬಳಕೆ ಮಾಡದಿರಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಜ್ಞಾತ ವೈಫೈಯನ್ನು ಬಳಸದಿರಿ. ಇದಕ್ಕೆ ಬದಲಾಗಿ ಉತ್ತಮ ಡೇಟಾ ಪ್ಯಾಕ್ ಅನ್ನು ಡಿವೈಸ್‌ಗೆ ಹಾಕಿಕೊಳ್ಳಿ. ಡೇಟಾ ದರ ಹೆಚ್ಚಾಗಿದ್ದರೂ ನಿಮ್ಮ ಫೋನ್ ಸುರಕ್ಷಿತವಾಗಿರುತ್ತದೆ.

ಅಜ್ಞಾತ ಅಪ್ಲಿಕೇಶನ್ ಮೂಲಗಳನ್ನು ಬಳಸದಿರಿ

ಅಜ್ಞಾತ ಅಪ್ಲಿಕೇಶನ್ ಮೂಲಗಳನ್ನು ಬಳಸದಿರಿ

ಗೂಗಲ್ ಪ್ಲೇ ಮತ್ತು ಆಪಲ್ ಸ್ಟೋರ್‌ಗಳನ್ನು ಹೊರತುಪಡಿಸಿ ಇತರ ಅಪ್ಲಿಕೇಶನ್ ಮೂಲಗಳಿಂದ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಡಿ. ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಹೊಸ ಅಪ್ಲಿಕೇಶನ್ ಅನ್ನು ನಮೂದು ಮಾಡಿಲ್ಲ ಎಂದಾದಲ್ಲಿ ಅದನ್ನು ಡೌನ್‌ಲೋಡ್ ಮಾಡಬೇಡಿ.

ಆಂಟಿ ವೈರಸ್ ಇನ್‌ಸ್ಟಾಲ್ ಮಾಡಿಕೊಳ್ಳಿ

ಆಂಟಿ ವೈರಸ್ ಇನ್‌ಸ್ಟಾಲ್ ಮಾಡಿಕೊಳ್ಳಿ

ಯಾವುದೇ ವೆಬ್‌ಸೈಟ್‌ನಿಂದ ನೆಟ್‌ನಿಂದ ನಿಮ್ಮ ಫೋನ್‌ಗೆ ಡೌನ್‌ಲೋಡ್ ಮಾಡುವ ಸಂದರ್ಭದಲ್ಲಿ ಆಂಟಿ ವೈರಸ್ ಅಪ್ಲಿಕೇಶನ್ ಅನ್ನು ಹಾಕಿಕೊಳ್ಳಿ. ಎವಿಜಿ ಫ್ರಿ ಮತ್ತು ಅವಾಸ್ತ್‌ನಂತಹ ಉಚಿತ ಅಪ್ಲಿಕೇಶನ್‌ಗಳು ಲಭ್ಯವಿದ್ದು, ನಿಮ್ಮ ಫೋನ್‌ನ ಸಂರಕ್ಷಣೆಯನ್ನು ಮಾಡುತ್ತವೆ.

ನವೀಕರಿಸಿ

ನವೀಕರಿಸಿ

ನಿಮ್ಮ ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳನ್ನು ಅಪ್‌ ಟು ಡೇಟ್ ಮಾಡಿ. ನಿಮ್ಮ ಫೋನ್ ಓಎಸ್ ಮತ್ತು ಅಪ್ಲಿಕೇಶನ್‌ಗಳನ್ನು ಅಪ್‌ಡೇಟ್ ಮಾಡುತ್ತಿರಿ. ಸುರಕ್ಷಿತ ವೈಫೈಗೆ ಸಂಪರ್ಕವನ್ನು ಪಡೆದುಕೊಂಡು ಅವುಗಳನ್ನು ಅಪ್‌ಡೇಟ್ ಮಾಡುತ್ತಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
In this article we are giving you tips on 6 tips to protect your Smartphone from hackers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot